For Quick Alerts
ALLOW NOTIFICATIONS  
For Daily Alerts

ಡೀಪ್‌ ಫ್ರೈ ಬದಲಿಗೆ ವ್ಯಾಕ್ಯೂಮ್‌ ಫ್ರೈ ಟೆಕ್ನಿಕ್ ಹೆಚ್ಚು ಆರೋಗ್ಯಕರ, ಹೇಗೆ?

|

ಮಳೆಗಾಲದಲ್ಲಿ ಪಕೋಡ, ಬಜ್ಜಿ, ಚಿಪ್ಸ್ ಈ ರೀತಿಯ ಕುರುಕಲು ತಿಂಡಿಗಳನ್ನೇ ತಿನ್ನಬೇಕೆನಿಸುವುದು, ಹೊರಗಡೆ ಜಿಟಿ ಜಿಟಿ ಅಂತ ಮಳೆ ಸುರಿಯುತ್ತಿದ್ದರೆ ಬಿಸಿ-ಬಿಸಿ ಟೀ ಹೀರುತ್ತಾ ಇಂಥ ಕುರುಕಲು ತಿಂಡಿಗಳನ್ನು ತಿನ್ನಲು ಮಜ ಅನಿಸುವುದು. ಆದರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರ ಬದಲಿಗೆ ನೀವು ವ್ಯಾಕ್ಯೂಮ್ ಫ್ರೈ ಮಾಡಿ ತಿನ್ನುವುದು ಒಳ್ಳೆಯ ಆಯ್ಕೆ.

ವ್ಯಾಕ್ಯೂಮ್‌ ಫ್ರೈ ವಿಧಾನದಲ್ಲಿ ಎಣ್ಣೆ ಹೆಚ್ಚು ಬೇಕಾಗಿಲ್ಲ, ಪೋಷಕಾಂಶಗಳು ಹಾಳಾಗುವುದಿಲ್ಲ, ಏನಿದು ವ್ಯಾಕ್ಯೂಮ್‌ ಫ್ರೈ ವಿಧಾನ? ಈ ವಿಧಾನದಲ್ಲಿ ಮಾಡುವ ತಿಂಡಿಗಳು ಏಕೆ ಹೆಚ್ಚು ಆರೋಗ್ಯಕರ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

ವ್ಯಾಕ್ಯೂಮ್‌ ಫ್ರೈ ಟೆಕ್ನಿಕ್ ಎಂದರೇನು?

ವ್ಯಾಕ್ಯೂಮ್‌ ಫ್ರೈ ಟೆಕ್ನಿಕ್ ಎಂದರೇನು?

ಇದು ಆಹಾರವನ್ನು ಬೇಯಿಸುವ ಒಂದು ವಿಧಾನವಾಗಿದೆ. ಇದರಲ್ಲಿ ಕಡಿಮೆ ಎಣ್ಣೆ ಹಾಗೂ ಕಡಿಮೆ ಉಷ್ಣತೆ ಬಳಸಿ ಅಡುಗೆ ಬೇಯಿಸಲಾಗುವುದು. ಇದರಲ್ಲಿ ಕಡಿಮೆ ಉಷ್ಣತೆಯಲ್ಲಿ ಆಹಾರ ಬೇಯುವುದರಿಂದ ಅದರಲ್ಲಿರುವ ಪೋಷಕಾಂಶ ಕೂಡ ಹಾಳಾಗುವುದಿಲ್ಲ. ನಿಧಾನಕ್ಕೆ ಫ್ರೈಯಾಗುವುದರಿಂದ ಕ್ಯಾನ್ಸರ್‌ಕಾರಕವಾಗುವುದಿಲ್ಲ ಆದ್ದರಿಂದ ಸ ಇಂಥ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು.

ವ್ಯಾಕ್ಯೂಮ್ ಫ್ರೈ VS ಎಣ್ಣೆಯಲ್ಲಿ ಕರಿಯುವ ವಿಧಾನ

ವ್ಯಾಕ್ಯೂಮ್ ಫ್ರೈ VS ಎಣ್ಣೆಯಲ್ಲಿ ಕರಿಯುವ ವಿಧಾನ

ವ್ಯಾಕ್ಯೂಮ್‌ ಫ್ರೈನಲ್ಲಿ ಎಣ್ಣೆಯಂಶ ಕಡಿಮೆ ಬಳಸಿ ಆಹಾರ ಬೇಯುವುದು, ಆದರೆ ಎಣ್ಣೆಯಲ್ಲಿ ಕರಿಯುವ ವಿಧಾನದಲ್ಲಿ ತುಂಬಾ ಎಣ್ಣೆ ಬೇಕು. ತುಂಬಾ ಉಷ್ಣತೆಯಲ್ಲಿ ಎಣ್ಣೆಯಲ್ಲಿ ಕರಿದಾಗ ಅದರ ಪೋಷಕಾಂಶ ಹಾಳಾಗುವುದು ಆದರೆ ವ್ಯಾಕ್ಯೂಮ್‌ ಫ್ರೈನಲ್ಲಿ ನಿಧಾನಕ್ಕೆ ಬೇಯುವುದರಿಂದ ಅದರಲ್ಲಿರುವ ಪೋಷಕಾಂಶ ಹಾಳಾಗುವುದಿಲ್ಲ.

ಎಣ್ಣೆ ಖರ್ಚು ತುಂಬಾ ಕಡಿಮೆ

ಎಣ್ಣೆ ಖರ್ಚು ತುಂಬಾ ಕಡಿಮೆ

ವ್ಯಾಕ್ಯೂಮ್‌ ಫ್ರೈ ವಿಧಾನದಲ್ಲಿ ಸ್ವಲ್ಪ ಎಣ್ಣೆ ಸಾಕು, ಇದರಿಂದ ಎಣ್ಣೆ ಉಳಿತಾಯವಾಗುವುದು ಅಲ್ಲದೆ ಎಣ್ಣೆ ಕಡಿಮೆ ಬೇಕಾಗಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ರುಚಿಯೂ ಚೆನ್ನಾಗಿರುತ್ತದೆ

ರುಚಿಯೂ ಚೆನ್ನಾಗಿರುತ್ತದೆ

ವ್ಯಾಕ್ಯೂಮ್‌ ಫ್ರೈನಲ್ಲಿ ಫ್ರೈ ಮಾಡಿದ ಆಹಾರ ಕೂಡ ಎಣ್ಣೆಯಲ್ಲಿ ಕರಿದಷ್ಟೇ ರುಚಿಯಾಗಿರುತ್ತೆ. ಆದ್ದರಿಂದ ಈ ವಿಧಾನ ಅನುಸರಿದರೆ ರುಚಿಕರವಾದ ಹಾಗೂ ಆರೋಗ್ಯಕರವಾದ ಆಹಾರ ಸವಿಯಬಹುದು.

English summary

What is Vacuum Frying technique and why is it healthy in Kannada

What is Vacuum Frying technique and why is it healthy in Kannada read on...
Story first published: Monday, June 14, 2021, 10:31 [IST]
X
Desktop Bottom Promotion