For Quick Alerts
ALLOW NOTIFICATIONS  
For Daily Alerts

ಕೇರಳ ಯುವತಿಯ ಪ್ರಾಣಕ್ಕೆ ಕುತ್ತಾದ ಶವರ್ಮಾದಲ್ಲಿದ್ದ ಶಿಗೆಲ್ಲಾ, ಇದು ವೆಜ್‌ ಆಹಾರಗಳಲ್ಲಿಯೂ ಇರುತ್ತದೆಯೇ?

|

ಮೂರು ದಿನದ ಹಿಂದೆ ಕೇರಳದಲ್ಲಿ ನಡೆದಿರುವ ಘಟನೆ ಶವರ್ಮಾ ಪ್ರಿಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. 16 ವರ್ಷದ ಯುವತಿ ಸಾವನ್ನಪ್ಪಿದರೆ 40 ಜನ ಆಸ್ಪತ್ರೆಗೆ ದಾಖಲಾಗಿದ್ದರು. ಯುವತಿಯ ಸಾವಿಗೆ ಶಿಗೆಲ್ಲಾ ಬ್ಯಾಕ್ಟಿರಿಯಾ ಕಾರಣವೆಂಬುವುದಾಗಿ ಆರೋಗ್ಯ ಇಲಾಖೆ ಗುರುತಿಸಿದೆ.

ಶವರ್ಮಾ ತಿಂದವರ ರಕ್ತ ಹಾಗೂ ಮಲ ಪರೀಕ್ಷೆ ಮಾಡಿದಾಗ ಈ ಬ್ಯಾಕ್ಟಿರಿಯಾ ಕಂಡು ಬಂದಿದೆ. ಈ ರೀತಿಯ ಪ್ರಕರಣ ಈ ಹಿಂದೆ ಸಂಭವಿಸಿತ್ತೇ? ಶಿಗೆಲ್ಲಾ ಬ್ಯಾಕ್ಟಿರಿಯಾ ಶವರ್ಮಾದಲ್ಲಿ ಮಾತ್ರ ಕಂಡು ಬರುವುದೇ? ಇತರ ನಾನ್‌ವೆಜ್‌ ಆಹಾರಗಳಲ್ಲಿಯೂ ಕಂಡು ಬರುವುದೇ, ಇದು ಹರಡುವುದು ಹೇಗೆ? ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ಈ ಹಿಂದೆಯೂ ಶವರ್ಮಾ ತಿಂದು ವ್ಯಕ್ತಿ ಸಾವನ್ನಪ್ಪಿದ್ದರು

ಈ ಹಿಂದೆಯೂ ಶವರ್ಮಾ ತಿಂದು ವ್ಯಕ್ತಿ ಸಾವನ್ನಪ್ಪಿದ್ದರು

2012ರಲ್ಲಿ ಸಚಿನ್‌ ರಾಯ್‌ ಮ್ಯಾಥ್ಯೂ ಎಂಬ 21 ವರ್ಷದ ವ್ಯಕ್ತಿ ಶವರ್ಮಾ, ತಿರುವಂತಪುರದಲ್ಲಿ ತಿಂದ ಬಳಿಕ ಸಾವನ್ನಪ್ಪಿರುವ ಘಟನೆ ಈ ಹಿಂದೆಯೂ ಸಂಭವಿಸಿದೆ. ಆದರೆ ಆ ಸಮಯದಲ್ಲಿ ಆತನ ದೇಹದಲ್ಲಿ ಯಾವುದೇ ಫುಡ್‌ ಪಾಯಿಸನ್‌ ಕಂಡು ಬಂದಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆ ಬಳಿಕ ವರದಿ ಬಂದಿತ್ತು. ಆದರೆ ಈ ಬಾರಿ ಶವರ್ಮಾ ತಿಂದವರಲ್ಲಿ ಸಾಮಾನ್ಯ ಫುಡ್‌ ಪಾಯಿಸನ್‌ಗಿಂತಲೂ ವಿಷಕಾರಿಯಾದ ಶಿಗೆಲ್ಲಾ ಬ್ಯಾಕ್ಟಿರಿಯಾ ಪತ್ತೆಯಾಗಿದೆ.

ಶಿಗೆಲ್ಲಾ ಬ್ಯಾಕ್ಟಿರಿಯಾ ಎಂದರೇನು?

ಶಿಗೆಲ್ಲಾ ಬ್ಯಾಕ್ಟಿರಿಯಾ ಎಂದರೇನು?

* ಶಿಗೆಲ್ಲಾ ಎಂಬುವುದು ಅತಿಸಾರಕ್ಕೆ ಕಾರಣವಾಗುವ ಅಪಾಯಕಾರಿಯಾದ ಬ್ಯಾಕ್ಟಿರಿಯಾಗಿದೆ. ಇದು ಎಂಟರ್‌ಬ್ಯಾಕ್ಟರ್‌ ಎಂಬ ವರ್ಗಕ್ಕೆ ಸೇರಿದ ಬ್ಯಾಕ್ಟಿರಿಯಾ ಆಗಿದ್ದು ಎಲ್ಲಾ ಎಂಟರ್‌ಬ್ಯಾಕ್ಟರ್‌ ಬ್ಯಾಕ್ಟಿರಿಯಾಗಳು ಅಪಾಯಕಾರಿಯಲ್ಲ, ಆದರೆ ಶಿಗೆಲ್ಲಾ ಅಪಾಯಕಾರಿಯಾಗಿದೆ.

* ಶಿಗೆಲ್ಲಾ ಕರುಳಿನ ಮೇಲೆ ದಾಳಿ ಮಾಡುತ್ತದೆ ಇದರಿಂದ ಅತಿಸಾರ, ಹೊಟ್ಟೆನೋವು, ಜ್ವರ ಉಂಟಾಗುವುದು,

* ಇದು ಕಲುಷಿತ ಆಹಾರ ಹಾಗೂ ಕಲುಷಿತ ನೀರಿನಲ್ಲಿ ಕಂಡು ಬರುವುದು.

* ಈ ಚಿಕ್ಕ ಬ್ಯಾಕ್ಟಿರಿಯಾ ವ್ಯಕ್ತಿಯನ್ನು ಕೊಲ್ಲುವಷ್ಟು ಅಪಾಯಕಾರಿಯಾಗಿದೆ.

* ಈ ಕಾಯಿಲೆ ತಗುಲಿರುವ ವ್ಯಕ್ತಿಯಿಂದ ಅಥವಾ ಕಲುಷಿತ ನೀರಿನಲ್ಲಿ ಈಜಿದರೆ ಬರಬಹುದು.

ಶಿಗೆಲ್ಲಾ ಯಾರಿಗೆ ಅಪಾಯಕಾರಿ?

ಶಿಗೆಲ್ಲಾ ಯಾರಿಗೆ ಅಪಾಯಕಾರಿ?

* ಶಿಗೆಲ್ಲಾ ಗರ್ಣಿಣಿಯರಿಗೆ, ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ತುಂಬಾನೇ ಅಪಾಯಕಾರಿಯಾಗಿದೆ.

* 4 ಬಗೆಯ ಶಿಗೆಲ್ಲಾ ಬ್ಯಾಕ್ಟಿರಿಯಾ ಮನುಷ್ಯನ ದೇಹದ ಮೇಲೆ ದಾಳಿ ಮಾಡುತ್ತದೆ ಎಂದು ಸಿಡಿಸಿ ಹೇಳಿದೆ. ಶಿಗೆಲ್ಲಾ ಸೊನ್ನೈ, ಶಿಗೆಲ್ಲಾ ಫ್ಲೆಕ್ಸೆನೆರಿ ಶಿಗೆಲ್ಲಾ ಬಾಯ್ಡಿ, ಶಿಗೆಲ್ಲ ಡಿಸೆಂಟೆರಿಯಾ ಇದರಲ್ಲಿ ಕೊನೆಯದು ತುಂಬಾ ಅಪಾಯಕಾರಿಯಾಗಿದೆ.

* ಶಿಗೆಲ್ಲಾ ಬ್ಯಾಕ್ಟಿರಿಯಾ ಸಾಮಾನ್ಯವಾಗಿ ಕಂಡು ಬರುವ ಬ್ಯಾಕ್ಟಿರಿಯಾವಲ್ಲ. 100 ಜನ ಅತಿಸಾರ ಅಥವಾ ಫುಡ್‌ ಪಾಯಿಸನ್‌ ಅಂತ ಬಂದವರಲ್ಲಿ ಒಬ್ಬರಿಗೆ ಈ ಬ್ಯಾಕ್ಟಿರಿಯಾ ಕಾರಣವಾಗಿರಬಹುದು.

ಯಾವಾಗ ವೈದ್ಯರನ್ನು ಕಾಣಬೇಕು?

ಯಾವಾಗ ವೈದ್ಯರನ್ನು ಕಾಣಬೇಕು?

* ಅತಿಸಾರ ತುಂಬಾ ಉಂಟಾದಾಗ ಅಂದರೆ ದಿನದಲ್ಲಿ 20 ಬಾರಿಗಿಂತ ಅಧಿಕ ಬಾರಿ ಹೋದರೆ ತಕ್ಷಣವೇ ಒಳ್ಳೆಯ ಸೌಕರ್ಯ ಇರುವ ಆಸ್ಪತ್ರೆಗೆ ದಾಖಲಿಸಿ. ಆಸ್ಪತ್ರೆ ದೂರವಿದ್ದರೆ ಸಮೀಪದ ಆಸ್ಪತ್ರೆಯಿಂ ಪ್ರಾಥಮಿಕ ಚಿಕಿತ್ಸೆ ಪಡೆಉ ನಂತರ ಬೇಗನೆ ಅಡ್ಮಿಟ್ ಮಾಡಿ.

* ಮಗುವಿನಲ್ಲಿ ಅತಿಸಾರ, ಕೆಮ್ಮು, ರಕ್ತಬೇಧಿ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಿರಿ.

* ಅತಿಸಾರ ಜೊತೆಗೆ ತುಂಬಾ ಜ್ವರವಿದ್ದರೆ ಕೂಡಲೇ ವೈದ್ಯರಿಗೆ ತೋರಿಸಿ.

ಶಿಗೆಲ್ಲಾ ವೆಜ್‌ ಆಹಾರಗಳಲ್ಲಿಯೂ ಕಂಡು ಬರುವುದೇ?

ತೊಳೆಯದೇ ಹಣ್ಣು ಹಾಗೂ ತರಕಾರಿ ತಿಂದರೆ ಅದರಲ್ಲಿ ಶಿಗೆಲ್ಲಾ ಬ್ಯಾಕ್ಟಿರಿಯಾ ಹರಡುವುದು.

ಶಿಗೆಲ್ಲಾ ತಡೆಗಟ್ಟುವುದು ಹೇಗೆ?

ಶಿಗೆಲ್ಲಾ ತಡೆಗಟ್ಟುವುದು ಹೇಗೆ?

* ಶಿಗೆಲ್ಲಾ ಕಲುಷಿತ ನೀರು ಹಾಗೂ ಕಲುಷಿತ ಆಹಾರದ ಮೂಲಕ ಹರಡುವುದು.ಆದ್ದರಿಂದ ಕಲುಷಿತ ನೀರು ಬಳಸಬೇಡಿ, ತರಕಾರಿ, ಹಣ್ಣುಗಳನ್ನು ತೊಳೆಯಿರಿ. ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ.

* ಆಹಾರ ತಿನ್ನುವ ಮುನ್ನ, ತಿಂದ ನಂತರ ಕೈಗಳನ್ನು ಚೆನ್ನಾಗಿ ಸೋಪು ಹಾಕಿ ತೊಳೆಯಿರಿ.

* ಮಲವಿಸರ್ಜನೆಗೆ ಹೋದ ಬಳಿಕ ಕೈಗಳಿಗೆ ಸೋಪು ಹಚ್ಚಿ ತೊಳೆಯಿರಿ.

* ಹಾಲು, ಚಿಕನ್, ಮೀನು ಇವುಗಳನ್ನು ಸರಿಯಾದ ಉಷ್ಣತೆಯಲ್ಲಿ ಸಂರಕ್ಷಿಸಿ ಇಡದಿದ್ದರೆ ಬ್ಯಾಕ್ಟಿರಿಯಾ ಹರಡಬಹುದು. ಮಾಂಸಾಹಾರ ಚೆನ್ನಾಗಿ ಬೇಯಿಸಿ ಸೇವಿಸಿ.

ಶಿಗೆಲ್ಲಾ ಬ್ಯಾಕ್ಟಿರಿಯಾ ತಗುಲಿದರೆ ಸಾವು ಸಂಭವಿಸುವುದೇ?

ಶಿಗೆಲ್ಲಾ ಬ್ಯಾಕ್ಟಿರಿಯಾ ತಗುಲಿದ ತಕ್ಷಣ ಸಾವು ಸಂಭವಿಸಲ್ಲ, ತಕ್ಷಣ ಸಾವು ಸಂಭವಿಸುವುದು ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇದ್ದರೆ ಮಾತ್ರ ತೊಂದರೆಯಾಗುತ್ತೆ, ಇನ್ನು ಅತಿಸಾರ ಕಂಡು ಬಂದಾಗ ಕೂಡಲೇ ಚಿಕಿತ್ಸೆ ಕೊಡಿಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

English summary

What is Shigella, the bacteria that killed Kerala girl after eating shawarma? Explained in Kannada

What is Shigella, the bacteria that killed Kerala girl after eating shawarma? Explained in Kannada...
X
Desktop Bottom Promotion