For Quick Alerts
ALLOW NOTIFICATIONS  
For Daily Alerts

Nipah Virus : ಕೇರಳದಲ್ಲಿ ಮರುಕಳಿಸಿದ ನಿಪಾ ವೈರಸ್: ಲಕ್ಷಣಗಳೇನು? ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?

|

ಕೇರಳದಲ್ಲಿ ನಿಪಾ ವೈರಸ್‌ಗೆ 12 ವರ್ಷದ ಬಾಲಕ ಮೃತಪಟ್ಟಿದ್ದು ಇದೀಗ ಮತ್ತೆ ನಿಫಾ ವೈರಸ್‌ ಆತಂಕ ಶುರುವಾಗಿದೆ. ಮೂರು ವರ್ಷದ ಹಿಂದೆ ಈ ನಿಫಾ ಸೋಂಕು 17 ಜನರನ್ನು ಬಲಿ ತೆಗೆದುಕೊಂಡಿತ್ತು.

ನಿಪಾ ವೈರಸ್‌ ವೇಗವಾಗಿ ಹರಡುವ ಸೋಂಕು ಆಗಿರುವುದರಿಂದ ಇದೀಗ ಮತ್ತೆ ಮರುಕಳಿಸಿರುವುದರಿಂದ ಕೇರಳ ಸರ್ಕಾರ ಇದರ ಬಗ್ಗೆ ಕಟ್ಟು ನಿಟ್ಟಿನ ಮುನ್ನೆಚ್ಚರಿಕೆ ಕ್ರಮವಹಿಸಿದೆ, ಇತರ ರಾಜ್ಯಗಳೂ ಈ ಕುರಿತು ಎಚ್ಚರವಹಿಸಬೇಕಾಗಿದೆ.

ನಾವಿಲ್ಲಿ ನಿಪಾ ವೈರಸ್‌ ಲಕ್ಷಣಗಳೇನು, ಹರಡುವುದು ಹೇಗೆ, ತಡೆಗಟ್ಟುವುದು ಹೇಗೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

ನಿಪಾ ವೈರಸ್ ಲಕ್ಷಣಗಳು

ನಿಪಾ ವೈರಸ್ ಲಕ್ಷಣಗಳು

* ಮೆದುಳಿನಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು.

* ನಿಪಾ ವೈರಸ್‌ ತಗುಲಿದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು 4-14 ದಿನಗಳಲ್ಲಿ ಕಂಡು ಬರುವುದು. ಕಾಯಿಲೆಯ ಲಕ್ಷಣಗಳು 3-14 ದಿನಗಳವರೆಗೆ ಇರುತ್ತದೆ.

* ಜ್ವರ, ತಲೆನೋವು, ಸುಸ್ತು, ತಲೆ ಸುತ್ತು, ಗೊಂದಲ ಕಂಡು ಬರುವುದು.

* ಈ ಲಕ್ಷಣಗಳು ಕಂಡು ಬಂದರೆ 24-48 ಗಂಟೆಗಳಲ್ಲಿಯೇ ವ್ಯಕ್ತಿ ಕೋಮಾಕ್ಕೆ ಜಾರಬಹುದು.

* ಕೆಲ ಸೋಂಕಿತರಲ್ಲಿ ರೋಗ ಲಕ್ಷಣಗಳು ಕಂಡು ಬಂದಾಗಲೇ ಉಸಿರಾಟದ ತೊಂದರೆ ಕೂಡ ಕಾಣಿಸುವುದು.

* ತುಂಬಾ ರೋಗಿಗಳಲ್ಲಿ ನರದ ಸಮಸ್ಯೆ ಹಾಗೂ ಶ್ವಾಸಕೋಶದ ಸಮಸ್ಯೆ ಕಂಡು ಬರುವುದು.

ನಿಪಾ ವೈರಸ್‌ ಹರಡುವುದು ಹೇಗೆ?

ನಿಪಾ ವೈರಸ್‌ ಹರಡುವುದು ಹೇಗೆ?

* ನಿಪಾ ವೈರಸ್‌ ಜೂನೋಟಿಕ್ ಕಾಯಿಲೆಯಾಗಿದೆ ಅಂದ್ರೆ ಈ ವೈರಸ್‌ ಪ್ರಾಣಿ ಹಾಗೂ ಮನುಷ್ಯರಿಂದ ಹರಡುತ್ತದೆ.

* ವೈರಸ್‌ ಸೋಂಕಿದ ಬಾವಿಲಿಗಳು ಕಚ್ಚಿದ ಹಣ್ಣುಗಳನ್ನು ತಿಂದರೆ ಬರುವುದು.

* ಸೋಂಕು ತಗುಲಿದ ಹಂದಿಗಳಿಂದ, ನಾಯಿಗಳಿಂದ, ಕುದುರೆಗಳಿಂದಹರಡುವುದು.

* ಸೋಂಕು ತಗುಲಿರುವ ಪ್ರಾಣಿ ಹಾಗೂ ಮನುಷ್ಯರ ಎಂಜಲುಗಳ ಮೂಲಕ ಸಾಮಾನ್ಯವಾಗಿ ಹರಡುವುದು.

* ಆದರೆ ಮನುಷ್ಯರಿಂದ ಮನುಷ್ಯರಿಗೆ ಹರಡಿದರೆ ತುಂಬಾ ಮಾರಕ.

* ಸೋಂಕಿತರನ್ನು ಆರೈಕೆ ಮಾಡುವವರಿಗೆ, ಆರೋಗ್ಯ ಸಿಬ್ಬಂದಿಗಳಿಗೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ನಿಪಾ ವೈರಸ್‌ ತಡೆಗಟ್ಟುವುದು ಹೇಗೆ?

ನಿಪಾ ವೈರಸ್‌ ತಡೆಗಟ್ಟುವುದು ಹೇಗೆ?

* ಕೈಗಳನ್ನು ಆಗಾಗ ಸೋಪ್‌ ಹಚ್ಚಿ ತೊಳೆಯುತ್ತಾ ಇರಿ.

* ಹಸಿ ಖರ್ಜೂರ ಹಾಗೂ ಬಾವಲಿ ಕಚ್ಚಿರುವ ಹಣ್ಣುಗಳನ್ನು ತಿನ್ನಬೇಡಿ.

* ಸೋಂಕು ತಗುಲಿದ ವ್ಯಕ್ತಿಗಳ ಆರೈಕೆಯನ್ನು ಮಾಡುವಾಗ ಎಲ್ಲಾ ರೀತಿ ಮುನ್ನೆಚ್ಚರಿಕೆವಹಿಸಬೇಕು.

* ಹೊರಗಿನಿಂದ ತಂದ ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು.

* ಸಾಕು ಪ್ರಾಣಿಗಳಿಗೆ ಅನಾರೋಗ್ಯವಾಗಿದ್ದರೆ ಅವುಗಳನ್ನು ಆಯ್ಕೆ ಮಾಡುವಾಗ ಮುಖಕ್ಕೆ ಮಾಸ್ಕ್ ಕೈಗಳಿಗೆ ಗ್ಲೌಸ್ ಬಳಸಿ.

* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯುತ್ತಾ ಇರಿ.

ನಿಪಾ ವೈರಸ್ ಪತ್ತೆ ಹೇಗೆ?

ನಿಪಾ ವೈರಸ್ ಪತ್ತೆ ಹೇಗೆ?

ನಿಪಾ ವೈರಸ್ ಪತ್ತೆ ಹಚ್ಚಲು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ಪ್ಲಾಸ್ಮಾ, ಸಿಎಸ್ಎಫ್(Cerebrospinal Fluid), ಸೆರಮ್ ಸಂಗ್ರಹಿಸಿ ಪರೀಕ್ಷೆ ಮಾಡಲಾಗುವುದು.

ನಿಪಾ ವೈರಸ್‌ಗೆ ಚಿಕಿತ್ಸೆ

ನಿಪಾ ವೈರಸ್‌ಗೆ ಚಿಕಿತ್ಸೆ

* ನಿಪಾ ವೈರಸ್‌ಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ.

* ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುವುದು, ಏಕೆಂದರೆ ಈ ರೋಗ ಮನುಷ್ಯರಿಂದ ಮನುಷ್ಯರಿಗೆ ಹರಡಿದರೆ ಅಪಾಯ ಹೆಚ್ಚು.

* ಸೋಂಕು ತಗುಲಿದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ತಿಂಗಳ ಬಳಿಕ ಸೋಂಕಿನ ಲಕ್ಷಣಗಳು ಕಂಡು ಬರುವ ಸಾಧ್ಯತೆ ಇರುವುದರಿಂದ ಐಸೋಲೇಷನ್‌ನಲ್ಲಿರಬೇಕಾಗುತ್ತದೆ, ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಬೇಕಾಗಿದೆ.

FAQ's
  • ನಿಪಾ ವೈರಸ್‌ಗೆ ಚಿಕಿತ್ಸೆಯ ವಿಧಾನವೇನು?

    ನಿಪಾ ವೈರಸ್‌ಗೆ ನಿರ್ದಿಷ್ಟವಾದ ಮಾತ್ರೆ ಅಥವಾ ಲಸಿಕೆಯಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು. ಉಸಿರಾಟದ ಸಮಸ್ಯೆ ಇದ್ದರೆ ವೆಂಟಿಲೇಟರ್‌ನಲ್ಲಿ ಹಾಕಲಾಗುವುದು. ಕೇರಳ ಸರ್ಕಾರ ಸೋಂಕು ತಡೆಗಟ್ಟಲು Ribavarin ವಿತರಣೆ ಮಾಡುತ್ತಿದೆ.

  • ಭಾರತದಲ್ಲಿ ಈ ಮೊದಲು ನಿಪಾ ವೈರಸ್‌ ಕಂಡು ಬಂದಿತ್ತೇ?

    ಭಾರತದಲ್ಲಿ 2001 ಹಾಗೂ 2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿತ್ತು. 20218ರ ಮೇ ತಿಂಗಳಿನಲ್ಲಿ ಕೇರಳದ ಕೋಝಿಕೂಡ್‌ನಲ್ಲಿ ಕಂಡು ಬಂದಿತ್ತು ಆಗ 17 ಜನ ಈ ವೈರಸ್‌ಗೆ ಬಲಿಯಾಗಿದ್ದರು. 2019 ಜೂನ್‌ನಲ್ಲಿ ಕೇರಳದ ಕೊಚ್ಚಿಯಲ್ಲಿ ಮೊದಲಿಗೆ ಒಬ್ಬ ವಿದ್ಯಾರ್ಥಿಯಲ್ಲಿ ಕಂಡು ಬಂದಿತ್ತು. ಕೇರಳದಲ್ಲಿ ನಿಪಾ ಕಂಡು ಬರುತ್ತಿರುವುದು ಇದು ಮೂರನೇ ಬಾರಿಯಾಗಿದೆ.

  • ನಿಪಾ ವೈರಸ್‌ ಮಾರಾಣಾಂತಿಕವೇ?

    ಭಾರತದಲ್ಲಿ ಪಶ್ಚಿಮ ಬಂಗಾಳದಲ್ಲಿ ಮೊದಲಿಗೆ ನಿಒಆ ವೈರಸ್‌ ಕಂಡು ಬಂತು. 66 ಜನರಿಗೆ ಸೋಂಕು ತಗುಲಿತ್ತು. ಪ್ರತೀ 4 ಜನರಲ್ಲಿ ಮೂವರು ಸಾವನ್ನಪ್ಪಿದ್ದರು. 2018ರಲ್ಲಿ ಕೇರಳದಲ್ಲಿ ಪತ್ತೆಯಾದ 18 ಕೇಸ್‌ಗಳಲ್ಲಿ 17 ಜನ ಸಾವನ್ನಪ್ಪಿದ್ದರು. ಆದ್ದರಿಂದ ನಿಪಾ ವೈರಸ್‌ ತುಂಬಾ ಮಾರಾಣಾಂತಿಕವಾಗಿದ್ದು, ಇದರಲ್ಲಿ ಸಾವಿನ ಪ್ರಮಾಣ ಅಧಿಕ.

English summary

What is Nipah Virus Infection - Causes, Symptoms, Treatments and Preventions in Kannada

Here we talking about the What is Nipah Virus Infection; Know Causes, Symptoms, Treatments and Preventions in Kannada. Read on.
X
Desktop Bottom Promotion