For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳನ್ನು ಕಾಡುವ ಡಯಾಬಿಟಿಕ್‌ ಪೂಟ್‌ ಸಮಸ್ಯೆ: ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

|

ಮಧುಮೇಹಿಗಳಲ್ಲಿ ಹೆಚ್ಚಿನವರಿಗೆ ಕಾಲಿಗೆ ಸಂಬಂಧಿಸಿದ ಸಮಸ್ಯೆ ಕಂಡು ಬರುವುದು, ಇದರಿಂದಾಗಿ ಕೆಲವರು ಆಸ್ಪತ್ರೆಗೆ ದಾಖಲಾಗಬೇಆಗುತ್ತದೆ. ಕಾಲುಗಳಲ್ಲಿ ಹುಣ್ಣು, ಸೋಂಕು, ಗ್ಯಾಂಗ್ರೀನ್‌ ಮುಂತಾದ ಸಮಸ್ಯೆ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡು ಬರುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಡಯಾಬಿಟಿಕ್‌ ಫೂಟ್‌ ಎಂದು ಕರೆಯಲಾಗುವುದು.

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಪಾದಗಳಲ್ಲಿ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ, ಅಲ್ಲದೆ ಒಂದು ಚಿಕ್ಕ ಗಾಯವಾದರೂ ಹುಣ್ಣಾಗುವುದು. ಡಯಾಬಿಟಿಕ್‌ ಫೂಟ್‌ ಸಮಸ್ಯೆ ಧೂಮಪಾನಿಗಳಲ್ಲಿ ಅಧಿಕವಾಗಿ ಕಂಡು ಬರುವುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಧೂಮಪಾನಿಗಳಲ್ಲಿ ಪಾದಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುವುದು. ಇದರಿಂದಾಗಿ ಒಂದು ಚಿಕ್ಕ ಗಾಯವಾದರೂ ಅದು ಒಣಗದೆ ಹುಣ್ಣಾಗಿ, ಗ್ಯಾಂಗ್ರೀನ್ ಆಗುವ ಸಾಧ್ಯತೆ ಇದೆ. ಆದರೆ ಕಾಲುಗಳ ಗಾಯಕ್ಕೆ ಬೇಗನೆ ಚಿಕಿತ್ಸೆ ಸಿಕ್ಕರೆ ದೊಡ್ಡ ಸಮಸ್ಯೆಯಾಗುವುದನ್ನು ತಡೆಗಟ್ಟಬಹುದು.

ಮಧುಮೇಹಿಗಳಲ್ಲಿ ಕಾಲಿನಲ್ಲಿ ಹುಣ್ಣಿನ ಸಮಸ್ಯೆ ಈ ಎರಡಲ್ಲಿ ಒಂದು ಕಾರಣದಿಂದಾಗಿ ಉಂಟಾಗುವುದು:

ಮಧುಮೇಹಿಗಳಲ್ಲಿ ಕಾಲಿನಲ್ಲಿ ಹುಣ್ಣಿನ ಸಮಸ್ಯೆ ಈ ಎರಡಲ್ಲಿ ಒಂದು ಕಾರಣದಿಂದಾಗಿ ಉಂಟಾಗುವುದು:

* ಕಾಲುಗಳಿಗೆ ಸರಿಯಾಗಿ ರಕ್ತ ಸಂಚಾರವಾಗದೇ ಇರುವುದು ಇದನ್ನು ischemic ಫೂಟ್ ಎಂದು ಕೂಡ ಕರೆಯಲಾಗುವುದು.

* ಪಾದಗಳಲ್ಲಿ ಸ್ಪರ್ಶಜ್ಞಾನ ಕಡಿಮೆಯಾಗುವುದು, ಇದರಿಂದಾಗಿ ವ್ಯಕ್ತಿಗೆ ಕಾಲಿಗೆ ಗಾಯವಾದರೆ ಮೊದಲಿಗೆ ತಿಳಿಯುವುದೇ ಇಲ್ಲ, ಇದನ್ನು neuropathic ಫೂಟ್ ಎಂದು ಕರೆಯಲಾಗುವುದು.

ಡಯಾಬಿಟಿಕ್ ಫೂಟ್‌ನ ಲಕ್ಷಣಗಳೇನು?

ಡಯಾಬಿಟಿಕ್ ಫೂಟ್‌ನ ಲಕ್ಷಣಗಳೇನು?

ಡಯಾಬಿಟಿಕ್‌ ಫೂಟ್ ಅನ್ನು ಪ್ರಾರಂಭಿದಲ್ಲಿಯೇ ಗುರುತಿಸಿದರೆ ಗುಣ ಪಡಿಸುವುದು ಸುಲಭವಾಗುವುದು, ಇಲ್ಲದೇ ಹೋದರೆ ಕಾಲು ಬೆರಳುಗಳನ್ನು ಕತ್ತರಿಸುವುದು ಅಥವಾ ಕಾಲನ್ನೇ ಕತ್ತರಿಸಬೇಕಾದ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಮಧುಮೇಹಿಗಳು ಕಾಲಿನ ಬಗ್ಗೆ ತುಂಬಾನೇ ಎಚ್ಚರವಹಿಸಬೇಕು.

ಈ ರೀತಿಯ ಲಕ್ಷಣಗಳು ಕಂಡು ಬರುವವರಲ್ಲಿ ಡಯಾಬಿಟಿಕ್ ಫೂಟ್ ಕಂಡು ಬರುವುದು

* ಕಾಲುಗಳು ಮರಗಟ್ಟುವುದು, ನೋವು

* ಕಾಲುಗಳ ಸಮತೋಲನ ತಪ್ಪುವುದು

* ಪಾದಗಳ ತ್ವಚೆಯಲ್ಲಿ ಬದಲಾವಣೆ

* ಕಾಲುಗಳಲ್ಲಿ ಗುಳ್ಳೆ ಅಥವಾ ಇತರ ಗಾಯಗಳಿರುವುದು

* ಪಾದಗಳು ಅಥವಾ ಹುಣ್ಣುಗಳಿಂದ ದುರ್ವಾಸನೆ ಬೀರುವುದು.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬಾರದು, ಪ್ರಾರಂಭದಲ್ಲಿ ಚಿಕಿತ್ಸೆ ಪಡೆದರೆ ಸಮಸ್ಯೆ ದೊಡ್ಡದಾಗುವುದನ್ನು ತಡೆಗಟ್ಟಬಹುದು.

ಯಾರಿಗೆ ಡಯಾಬಿಟಿಕ್ ಫೂಟ್‌ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು?

ಯಾರಿಗೆ ಡಯಾಬಿಟಿಕ್ ಫೂಟ್‌ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು?

ಹಲವಾರು ಕಾರಣಗಳಿಂದ ಡಯಾಬಿಟಿಕ್ ಫೂಟ್‌ ಸಮಸ್ಯೆ ಉಂಟಾಗುತ್ತದೆ.

* ರಕ್ತನಾಳಗಳಲ್ಲಿ ಅಧಿಕ ಕೊಬ್ಬಿನಂಶವಿರುವ ಜನರಿಗೆ ಪಾದಗಳಲ್ಲಿ ಸರಿಯಾಗಿ ರಕ್ತ ಸಂಚಾರವಾಗದೆ ಡಯಾಬಿಟಿಕ್ ಫೂಟ್ ಸಮಸ್ಯೆ ಉಂಟಾಗುವುದು.

* ಧೂಮಪಾನಿಗಳಲ್ಲಿ ಈ ಸಮಸ್ಯೆ ಕಂಡು ಬರುವುದು.

* ನಿಯಂತ್ರಿಕ್ಕೆ ಬಾರದ ಮಧುಮೇಹಿಗಳಲ್ಲಿ

* ತುಂಬಾ ಸಮಯದಿಂದ ಟೈಪ್‌ 1 ಮಧುಮೇಹದಿಂದ ಬಳಲುತ್ತಿರುವವರಲ್ಲಿ

* ಅನಾರೋಗ್ಯ ಜೀವನಶೈಲಿ ಪಾಲಿಸುತ್ತಿರುವವರಲ್ಲಿ

ಡಯಾಬಿಟಿಕ್ ಫೂಟ್ ಸಮಸ್ಯೆ ತಡೆಗಟ್ಟುವುದು ಹೇಗೆ?

ಡಯಾಬಿಟಿಕ್ ಫೂಟ್ ಸಮಸ್ಯೆ ತಡೆಗಟ್ಟುವುದು ಹೇಗೆ?

ಮಧುಮೇಹಿಗಳಲ್ಲಿ ಶೇ.15ರಷ್ಟು ಜನರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು. ಆದ್ದರಿಂದ ಮುನ್ನೆಚ್ಚರಿಕೆವಹಿಸುವ ಮೂಲಕ ಈ ಅಪಾಯ ತಡೆಗಟ್ಟಬಹುದಾಗಿದೆ. ಮಧುಮೇಹ ಇರುವವರು ಡಯಾಬಿಟಿಕ್ ಫೂಟ್ ತಡೆಗಟ್ಟಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ:

* ಏನಾದರೂ ಗಾಯವಾದರೆ ಆ ಗಾಯಕ್ಕೆ ಮದ್ದು ಮಾಡಿ, ಅಲ್ಲದೆ ಒಣಗುತ್ತಿದೆಯೇ ಅಥವಾ ಹುಣ್ಣು ಅಧಿಕವಾಗುತ್ತದೆಯೇ ಎಂದು ಗಮನಿಸಿ.

* ಪಾದಗಳ ತ್ವಚೆಯಲ್ಲಿ ಏನಾದರೂ ಬಣ್ಣ ವ್ಯತ್ಯಾಸವಾದರೆ ಕೂಡಲೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯಿರಿ.

* ಪಾದಗಳನ್ನು ದಿನಾ ಸ್ವಚ್ಛವಾಗಿಡಿ

* ಗಾಯವಾದರೆ ಮನೆಯಲ್ಲೇ ಚಿಕಿತ್ಸೆ ಮಾಡಬೇಡಿ, ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ.

ಒಳ್ಳೆಯ ರೀತಿಯಲ್ಲಿ ಆರೈಕೆ ಮಾಡಿದರೆ ಬೇಗನೆ ಗುಣಮುಖರಾಗಬಹುದು ಅಲ್ಲದೆ ಕಾಲುಗಳಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.

English summary

What is diabetic foot, Symptoms, Who are at Risk and how it can be prevented in Kannada

What is diabetic foot, Symptoms, Who are at Risk and how it can be prevented. Here’s all you need to know abut diabetic foot in kannada. Read on.
Story first published: Wednesday, August 18, 2021, 11:51 [IST]
X
Desktop Bottom Promotion