For Quick Alerts
ALLOW NOTIFICATIONS  
For Daily Alerts

COVID-19 Vaccine Booster: ಕೋವಿಡ್ 19 ಎರಡು ಡೋಸ್ ಲಸಿಕೆ ಬಳಿಕ ಬೂಸ್ಟರ್ ಅಗ್ಯತವಿದೆಯೇ?

|

ಇದೀಗ ಸಾಕಷ್ಟು ಜನರಿಗೆ ಕೊರೊನಾ ಲಸಿಕೆ ಸಿಕ್ಕಾಗಿದೆ, 18 ವರ್ಷ ಮೇಲ್ಪಟ್ಟವರಲ್ಲಿ ಅನೇಕರು ಎರಡು ಡೋಸ್‌ ಪಡೆದಾಗಿದೆ, ಲಸಿಕೆ ಪಡೆದ ಮೇಲೆ ಕೊರೊನಾ ಆತಂಕ ಕಡಿಮೆಯಾಗುವುದು, ಎರಡು ವರ್ಷಗಳ ಹಿಂದಿನ ಪರಿಸ್ಥಿತಿಗೆ ಮರಳಬಹುದು ಎಂದು ಎಲ್ಲರೂ ಆಶಿಸಿದ್ದರು. ಆದರೆ ಲಸಿಕೆ ಬಂದರೂ ಕೊರೊನಾ ಆತಂಕ ಮಾತ್ರ ಕಡಿಮೆಯಾಗಿಲ್ಲ. ರೂಪಾಂತರ ವೈರಸ್‌ ಕೊರೊನಾ ಎರಡು ಡೋಸ್‌ ಪಡೆದವರಲ್ಲಿಯೂ ಕಂಡು ಬರುತ್ತಿದೆ. ಆದ್ದರಿಂದ ಕೊರೊನಾ ಲಸಿಕೆಎಷ್ಟು ಪರಿಣಾಮಕಾರಿ ಎಂಬ ಸಂಶಯ ಜನರನ್ನು ಕಾಡಲಾರಂಭಿಸಿದೆ.

ಸಂಶೋಧನೆಗಳ ಪ್ರಕಾರ ಕೋವಿಡ್‌ 19 ಲಸಿಕೆ ಕೊರೊನಾ ರೂಪಾಂತರ ವೈರಸ್‌ ವಿರುದ್ಧ ಅಷ್ಟೇನು ಪರಿಣಾಮಕಾರಿಯಲ್ಲ ಎಂದು ಸಾಬೀತಾಗಿದೆ. ಆದ್ದರಿಂದ ಲಸಿಕೆ ಪಡೆದವರಿಗೆ ಬೂಸ್ಟರ್‌ ಅಗ್ಯತವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇಸ್ರೇಲ್‌ನಲ್ಲಿ ಬೂಸ್ಟರ್‌ ನೀಡಲಾಗುತ್ತಿದೆ, ಅಮೆರಿಕ ಕೂಡ ಫೈಝರ್ ನೀಡುವುದರ ಕುರಿತು ಚಿಂತನೆ ನಡೆಸುತ್ತಿದೆ. ಕೋವಿಡ್ 19 ಲಸಿಕೆ ಪಡೆದವರಿಗೆ ಬೂಸ್ಟರ್ ಅಗ್ಯತವಿದೆಯೇ, ಇಲ್ಲವೇ ಎಂಬುವುದ ಕುರಿತು ತಜ್ಞರಲ್ಲಿಯೇ ಭಿನ್ನಾಭಿಪ್ರಾಯಗಳಿವೆ, ಕೆಲವರು ಬೂಸ್ಟರ್ ಅಗ್ಯತವಿದೆ ಎಂದು ಹೇಳಿದರೆ ಇನ್ನು ಕೆಲವರು ಕೋವಿಡ್‌ 19 ಲಸಿಕೆ 2 ಡೊಸ್‌ ಪಡೆದರಷ್ಟೇ ಸಾಕು ಎಂಬುವುದಾಗಿ ಹೇಳುತ್ತಿದ್ದಾರೆ.

ಬೂಸ್ಟರ್‌ ಹೇಗೆ ಕೋವಿಡ್‌ 19 ತಡೆಯುವಲ್ಲಿ ಸಹಕಾರಿಯಾಗುತ್ತದೆ? ಕೊರೊನಾ ಲಸಿಕೆ ಪಡೆದವರೆಲ್ಲರೂ ಬೂಸ್ಟರ್‌ ಪಡೆಯಬೇಕೆ? ಎಂಬೆಲ್ಲಾ ಗೊಂದಲ ಜನರಲ್ಲಿದೆ, ಇದರ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ವ್ಯಾಕ್ಸಿನ್ ಬೂಸ್ಟರ್ ಎಂದರೇನು?

ವ್ಯಾಕ್ಸಿನ್ ಬೂಸ್ಟರ್ ಎಂದರೇನು?

ಬೂಸ್ಟರ್‌ ಶಾಟ್‌ ಎಂದರೆ ಕೊರೊನಾ 2 ಡೋಸ್‌ ಲಸಿಕೆ ಪಡೆದವರಿಗೆ ನೀಡುವುದಾಗಿದೆ, ಇದರಿಂದ ರೋಗ ನಿರೋಧಕ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುವುದರಿಂದ ಕೋವಿಡ್‌ 19 ತಡೆಗಟ್ಟುವಲ್ಲಿ ಸಹಕಾರಿ ಎಂದು ಹೇಳಲಾಗುತ್ತಿದೆ. ಸಮಯ-ಸಮಯಕ್ಕೆ ಬೂಸ್ಟರ್ ತೆಗೆದುಕೊಳ್ಳುವುದರಿಂದ ರೋಗದ ಅಪಾಯ ತಡೆಗಟ್ಟಬಹುದಾಗಿದೆ. ವ್ಯಾಕ್ಸಿನ್‌ ಬೂಸ್ಟರ್‌ ಮೊದಲು ತೆಗೆದ ಲಸಿಕೆಗಳಿಗೆ ಸಮವಾಗಿದೆ, ಕೆಲವೊಮ್ಮೆ ಇನ್ನೂ ಹೆಚ್ಚಿನ ರೋಗ ನಿರೋಧಕ ಸಾಮರ್ಥ್ಯ ದೊರೆಯುವಂತಾಗುವುದು. ಈ ಬೂಸ್ಟರ್‌ ಕೋವಿಡ್‌ 19 ತಡೆಗಟ್ಟುವುದರ ಜೊತೆಗೆ ಇತರ ಸೋಂಕುಗಳಾದ ಫ್ಲೂ, ಟೆಟನಸ್, ಡಿಫ್ತಿರಿಯಾ ಮತ್ತು ಪೆರ್ಟುಸಿಸ್ (DTaP) ಮುಂತಾದ ಕಾಯಿಲೆ ತಡೆಗಟ್ಟಬಹುದು.

ಯಾರು ಮತ್ತು ಏಕೆ ಬೂಸ್ಟರ್‌ ಶಾಟ್‌ ತೆಗೆಯಬೇಕು?

ಯಾರು ಮತ್ತು ಏಕೆ ಬೂಸ್ಟರ್‌ ಶಾಟ್‌ ತೆಗೆಯಬೇಕು?

ಮುಖ್ಯವಾಗಿ ಎರಡು ಕಾರಣಗಳಿಗೆ ಬೂಸ್ಟರ್ ತೆಗೆದುಕೊಳ್ಳಬೇಕು.

1.ಮೊದಲಿಗೆ ಲಸಿಕೆಯಿಂದ ಪಡೆದ ರೋಗ ನಿರೋಧಕ ಶಕ್ತಿ ಸ್ವಲ್ಪ ಸಮಯ ಕಳೆದ ಮೇಲೆ ಕುಗ್ಗುವ ಸಾಧ್ಯತೆ ಇದೆ, ಬೂಸ್ಟರ್‌ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಕುಗ್ಗದಂತೆ ತಡೆಗಟ್ಟಬಹುದಾಗಿದೆ.

2. ಬೂಸ್ಟರ್‌ ಪಡೆಯಲು ಮತ್ತೊಂದು ಕಾರಣವೆಂದರೆ ಕೊರೊನಾ ಲಸಿಕೆ ರೂಪಾಂತರ ವೈರಸ್‌ ತಡೆಗಟ್ಟುವಲ್ಲಿ ಅಷ್ಟು ಸಮರ್ಥವಾಗಿಲ್ಲ. ಎರಡು ಡೋಸ್‌ ಲಸಿಕೆ ಪಡೆದ ಬಳಿಕ ಬೂಸ್ಟರ್‌ ಪಡೆದರೆ ರೋಗ ನಿರೋಧಕ ಶಕ್ತಿ ತುಂಬಾನೇ ಚೆನ್ನಾಗಿರುತ್ತದೆ, ಇದರಿಂದ ರೂಪಾಂತರ ವೈರಸ್‌ ಸಮರ್ಥವಾಗಿ ತಡೆಗಟ್ಟಬಹುದು ಎಂದು ಅಂದಾಜಿಸಲಾಗಿದೆ.

ಸಂಶೋಧಕರ ಪ್ರಕಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ, ವಯಸ್ಕರಿಗೆ ಬೂಸ್ಟರ್ ಅಗ್ಯತವಿದೆ. ಆದರೆ ಎಷ್ಟು ಸಮಯದೊಳಗಾಗಿ ಬೂಸ್ಟರ್‌ ಪಡೆಯಬೇಕು, ಒಮ್ಮೆ ಪಡೆದರೆ ಸಾಕೇ ಅಥವಾ ಮತ್ತೆ-ಮತ್ತೆ ಪಡೆಯಬೇಕೆ? ಎಂಬೆಲ್ಲಾ ಮಾಹಿತಗಳು ಸ್ಪಷ್ಟವಾಗಿಲ್ಲ.

ಭಾರತದಲ್ಲಿ ಬೂಸ್ಟರ್‌ ನೀಡಲಾಗುವುದೇ?

ಭಾರತದಲ್ಲಿ ಬೂಸ್ಟರ್‌ ನೀಡಲಾಗುವುದೇ?

ಸೆರಮ್ ಇನ್ಸಿಟ್ಯೂಟ್ ಆಫ್‌ ಇಂಡಿಯಾದ ಮುಖ್ಯಸ್ಥ ಸೈರಸ್ ಪೂನವಾಲ ಅವರು ಕೋವಿಶೀಲ್ಡ್ ಬೂಸ್ಟರ್‌ ಲಸಿಕೆ ಎರಡನೇ ಡೋಸ್ ಪಡೆದ 6 ತಿಂಗಳ ಬಳಿಕ ಪಡೆದುಕೊಳ್ಳಬೇಕು ಎಂದಿದ್ದಾರೆ.

ಏಪ್ರಿಲ್‌ನಲ್ಲಿ ಭಾರತ್‌ ಬಯೋಟೆಕ್‌ಗೆ ಡ್ರಗ್ ಕಂಟ್ರೋಲ್‌ ಜನರಲ್ ಆಫ್‌ ಇಂಡಿಯಾದಿಂದ 3ನೇ ಕೊವಾಕ್ಸಿನ್‌ ಶಾಟ್‌ ಟ್ರಯಲ್‌ಗೆ ಅನುಮತಿ ಸಿಕ್ಕಿದೆ. ಮೊದಲ ಫಲಿತಾಂಶ ಆಗಸ್ಟ್‌-ನವೆಂಬರ್‌ 2021ರ ಒಳಗೆ ತಿಳಿಯಲಿದೆ.

ನ್ಯಾಷನಲ್ ಇನ್ಸಿಟ್ಯೂಟ್ ಆಫ್ ವೈರಾಲಜಿ ನಿರ್ದೇಶಕರಾಗಿರುವ ಡಾ. ಪ್ರಿಯಾ ಅಬ್ರಾಹಂ ಅವರು ದೇಶಕ್ಕೆ ಬೂಸ್ಟರ್ ಅಗ್ಯತವಿದೆ ಎಂದು ಹೇಳಿದ್ದಾರೆ.

 ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತಕ್ಕೆ ಬೂಸ್ಟರ್ ಅಗ್ಯತವಿಲ್ಲ. ಎಲ್ಲಾ ಕಡೆ ಎರಡು ಡೋಸ್‌ ಬಳಿಕ ಬೂಸ್ಟರ್‌ ಬೇಕು ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಹಿನ್ನೆಲೆ WHO ಈ ಹೇಳಿಕೆ ನೀಡಿದೆ.

English summary

What is COVID-19 Vaccine Booster? is it really effective? All You Need to Know in Kannada

What is COVID-19 Vaccine Booster in Kannada : covid-19 booster shot really effective against different variants of Coronavirus, why and who should take covid vaccine booster shot. Know more.
X
Desktop Bottom Promotion