For Quick Alerts
ALLOW NOTIFICATIONS  
For Daily Alerts

ನೀವು ಪ್ರತಿದಿನ ನಿದ್ದೆ ಕಡಿಮೆ ಮಾಡ್ತಾ ಇದ್ದೀರಾ? ಈ ಕಾಯಿಲೆಗಳಿಗೆ ಆಹ್ವಾನ

|

ನಿದ್ದೆ ಎಂಬುದು ಜೀವನದ ಅತ್ಯಂತ ಪ್ರಮುಖ ದಿನಚರಿ. ಸರಿಯಾದ ಸಮಯಕ್ಕೆ ಮಲಗುವುದು, ಸರಿಯಾದ ಸಮಯಕ್ಕೆ ಏಳುವುದು ಎಲ್ಲವೂ ಆರೋಗ್ಯಕರ ಜೀವನಶೈಲಿಯ ಪ್ರತೀಕ. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಿಮ್ಮಲ್ಲಿ ಅನಾರೋಗ್ಯ ಕಾಣಿಸುತ್ತದೆ. ಈಗೆಲ್ಲಾ ನಿದ್ದೆ ಕಡಿಮೆ ಮಾಡುವವರೇ ಹೆಚ್ಚು. ತಮ್ಮ ಮೊಬೈಲ್ ಹಿಡಿದು ತಡರಾತ್ರಿಯವರೆಗೂ ಚಾಟಿಂಗ್‌ನಲ್ಲೇ ತೊಡಗಿಕೊಂಡಿರುತ್ತಾರೆ. ಮತ್ತೆ ಕೆಲವರು ಕೆಲಸ ಎಂದೂ ನಿದ್ದೆಯ ಅವಧಿಯನ್ನು ಕಡಿತಗೊಳಿಸಿರುತ್ತಾರೆ.

ಯಾವ್ಯಾವುದೋ ಸಮಯಕ್ಕೆ ಏಳುವುದು, ಇನ್ಯಾವುದೋ ಸಮಯಕ್ಕೆ ಮಲಗುವಂತಹ ರೂಢಿಯನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದು ತಪ್ಪು. ಈ ತಪ್ಪು ನಿಮ್ಮನ್ನು ಮುಂದೆ ಅನಾರೋಗ್ಯ ಕಾಡುವಂತೆ ಮಾಡುತ್ತದೆ. ಉತ್ತಮ ನಿದ್ರೆ, ವ್ಯಾಯಾಮದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಆದರೆ ಜನರು ಈ ಪ್ರಮುಖ ಅಂಶವನ್ನು ಕಡೆಗಣಿಸುತ್ತಾರೆ. ನಿದ್ರಾಹೀನತೆ ಮತ್ತು ಇತರ ನಿದ್ರೆಯ ಕಾಯಿಲೆಗಳು ಎಂದಿಗಿಂತಲೂ ಹೆಚ್ಚು ಸಾಮಾನ್ಯವಾಗಿದೆ. ನಿದ್ದೆಯ ಕಡೆಗಣನೆ ನಿಮ್ಮ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುನದನ್ನು ಅರಿಯಲು ನೀವು ಈ ಲೇಖನವನ್ನು ಓದಬೇಕು.

ಅಸಮರ್ಪಕ ನಿದ್ದೆಯಿಂದ ಉಂಟಾಗುವ ಸಮಸ್ಯೆಗಳು ಈ ಕೆಳಗಿನಂತಿವೆ.

ಹೃದಯ ಸಂಬಂಧಿ ಸಮಸ್ಯೆಗಳು:

ಹೃದಯ ಸಂಬಂಧಿ ಸಮಸ್ಯೆಗಳು:

ಅಸಮರ್ಪಕ ನಿದ್ರೆ ನಿಮ್ಮ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ. ಇದು ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅಪಾಯವನ್ನು ಉಂಟುಮಾಡುವ ಸಂಭವವನ್ನು ಹೆಚ್ಚಿಸುತ್ತದೆ. ಹಾಗಂತ ಇಡೀ ಹೊತ್ತು ನಿದ್ರೆ ಮಾಡಿದರೂ ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದೇ. ಅತೀ ಹೆಚ್ಚು ನಿದ್ರೆ ಮಾಡುವುದು ನಿಮಗೆ ಹಾನಿಕಾರಕವಾಗಿದೆ. ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನೀವು ನಿದ್ರೆಗಾಗಿ ಉತ್ತಮ ವೇಳಾಪಟ್ಟಿಯನ್ನು ಪಾಲಿಸುವುದು ಅತ್ಯಗತ್ಯ.

ಮುಟ್ಟಿನ ಸೆಳೆತ:

ಮುಟ್ಟಿನ ಸೆಳೆತ:

ಹಾರ್ಮೋನುಗಳ ಅಸಮತೋಲನವು ಅಸಮರ್ಪಕ ನಿದ್ದೆಯೊಂದಿಗೆ ಸಂಬAಧ ಹೊಂದಿದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಇದು ಚಯಾಪಚಯ ಕ್ರಿಯೆ ಮತ್ತು ಅಂತಃಸ್ರಾವಕ ಬದಲಾವಣೆಗಳಿಗೆ ಕಾರಣವಾಗಬಹುದು. ಇದು ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ತಿಂಗಳ ಸಮಯದಲ್ಲಿ ಸಾಕಷ್ಟು ನೋವು ಹಾಗೂ ಸೆಳೆತಗಳಿಗೆ ಕಾರಣವಾಗುತ್ತದೆ. ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ.

ಆಯಾಸ:

ಆಯಾಸ:

ನೀವು ಸಾಕಷ್ಟು ನಿದ್ರೆ ಮಾಡದಿದ್ದಾಗ ನಿಮ್ಮಲ್ಲಿ ಆಲಸ್ಯವು ಶುರುವಾಗುತ್ತದೆ. ಇದರಿಂದ ನೀವು ಎಲ್ಲಾ ಸಮಯದಲ್ಲೂ ದಣಿದಿರುವ ಭಾವನೆ ಮೂಡುತ್ತದೆ. ಈ ಭಾವನೆ ಮೂಡಿದರೆ ನಿಮ್ಮ ದೇಹದ ಕಾರ್ಯಗಳು ಸರಿಯಾಗಿ ಕಾರ್ಯನಿರ್ವಹಿಸದೇ ಹೋಗಬಹುದು. ನೀವು ಸರಿಯಾಗಿ ನಿದ್ದೆ ಮಾಡಿದರೆ ಮರುದಿನ ಬೆಳಿಗ್ಗೆ ನೀವು ಫ್ರೆಶ್ ಮತ್ತು ಶಕ್ತಿಯುತ ಭಾವನೆಯನ್ನು ಅನುಭವಿಸುತ್ತೀರಿ.

ತೂಕ ಇಳಿಕೆ:

ತೂಕ ಇಳಿಕೆ:

ತೂಕ ಇಳಿಸುವ ನಿಮ್ಮ ಕಾರ್ಯದಲ್ಲಿ ಬೇರೆಲ್ಲಾ ಕಾರ್ಯಗಳನ್ನು ಸರಿಯಾಗಿ ಮಾಡಿ, ಅಗತ್ಯ ನಿದ್ರೆ ಪಡೆಯದೇ ಇದ್ದರೆ, ನಿಮ್ಮ ಎಲ್ಲಾ ಕಾರ್ಯಗಳು ವ್ಯರ್ಥವಾಗುತ್ತವೆ. ಇದರಿಂದ ಯಾವುದೇ ಫಲಿತಾಂಶಗಳು ದೊರೆಯುವುದಿಲ್ಲ. ನಿದ್ರೆಯ ಕೊರತೆಯಿಂದಾಗಿ ನೀವು ಸಾಮಾನ್ಯವಾಗಿ ಹೆಚ್ಚು ತಿನ್ನಬಹುದು ಇದರಿಂದ ತೂಕ ಹೆಚ್ಚಾಗಬಹುದು.

ಮಧುಮೇಹ:

ಮಧುಮೇಹ:

ನಿಮಗೆ ಸಾಕಷ್ಟು ನಿದ್ರೆ ಬರದಿದ್ದರೆ ಮಧುಮೇಹ ಬರುವ ಅಪಾಯವೂ ಹೆಚ್ಚಬಹುದು. ನಿದ್ರೆಯ ಕೊರತೆಯಿಂದ ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಿದೆ ಎಂಬುದು ಹಲವಾರು ಸಂಶೋಧನಾ ಅಧ್ಯಯನಗಳು ತೋರಿಸಿವೆ.

English summary

What happens when you don't get enough sleep every night

Here we told about What happens when you don't get enough sleep every night, Read on.
Story first published: Monday, December 21, 2020, 9:26 [IST]
X
Desktop Bottom Promotion