Just In
- 8 min ago
ಈ 5 ಪ್ರಮುಖ ಪ್ರಯೋಜನ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಮಾತ್ರ ಸಿಗುವುದು
- 2 hrs ago
ವೈರಲ್: ಮುನಿಸಕೊಂಡ ತಮ್ಮನಿಗಾಗಿ 432ಮೀ ಉದ್ದ, 5ಕೆಜಿ ತೂಕದ ಪತ್ರ ಬರೆದ ಅಕ್ಕ, ಕೇರಳದ ನಡೆದ ಸುಂದರ ಘಟನೆ
- 4 hrs ago
ಜ್ಯೋತಿಷ್ಯ: ಜುಲೈ 2022 ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ..!
- 7 hrs ago
ಇಂಥಾ ಸಿಲ್ಲಿ ಕಾರಣಗಳಿಂದಲೇ ಮದುವೆಯಾಗಿ ವರ್ಷದಲ್ಲೇ ವಿವಾಹ ವಿಚ್ಛೇದನ ಆಗುವುದು
Don't Miss
- News
ನಿಮ್ಮಿಂದಲೇ ಈ ದ್ವೇಷ, ಕೋಪ: ಬಿಜೆಪಿಯನ್ನು ಕುಟುಕಿದ ರಾಹುಲ್ ಗಾಂಧಿ
- Movies
ಸಹನಾ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರಾ ಪುಟ್ಟಕ್ಕ?
- Sports
Ind vs Eng 5th Test: ಮೊದಲ ದಿನದಾಟದಲ್ಲಿ ವರುಣನ ಕಾಟ, ಟೀಂ ಇಂಡಿಯಾ 53/2
- Automobiles
ಬೆಂಗಳೂರಿನಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್
- Technology
ವಿದ್ಯುತ್ ಬಿಲ್ ಪಾವತಿಸುವ ಮುನ್ನ ಎಚ್ಚರ? ವಂಚಕರಿದ್ದಾರೆ?
- Finance
ವಿ APP ಬಳಸಿ ನೆಚ್ಚಿನ ಹಾಡು ಕಾಲರ್ ಟ್ಯೂನ್ ಮಾಡ್ಕೊಳ್ಳೋದು ಹೇಗೆ?
- Education
Essay On Eid Al Adha 2022 : ಈದ್-ಅಲ್-ಅಧಾ ಹಬ್ಬದ ಕುರಿತು ಪ್ರಬಂಧ ಬರೆಯಲು ಮಾಹಿತಿ
- Travel
ಶಿವಗಂಗೆಯ ಸೌಂದರ್ಯತೆಯ ಒಂದು ಅನಾವರಣ - ಬೆಂಗಳೂರಿನಿಂದ ಶಿವಗಂಗೆಗೆ ಒಂದು ಪ್ರಯಾಣ
ಡೆಂಗ್ಯೂ ಹಾಗೂ ಕೋವಿಡ್ 19 ಜೊತೆಗೇ ಬಂದರೆ ಅಪಾಯವೇನು?
ಮಳೆಗಾಲ ಶುರುವಾಗಿದೆ, ಜೊತೆಗೆ ಕಾಯಿಲೆಗಳು ಹೆಚ್ಚಾಗಿದೆ. ಎಲ್ಲಿ ನೋಡಿದರೂ ಜ್ವರ. ಜ್ವರ ಬಂದರೆ ನಿರ್ಲಕ್ಷ್ಯ ಮಾಡುವಂತೇ ಇಲ್ಲ. ಏಕೆಂದರೆ ಕೋವಿಡ್ 19 ಹಾಗೂ ಡೆಂಗ್ಯೂ ಸಮಸ್ಯೆ ಹೆಚ್ಚಾಗುತ್ತಿದೆ. ಕೋವಿಡ್ 19 ಹಾಗೂ ಡೆಂಗ್ಯೂ ಎರಡೂ ಒಟ್ಟಿಗೆ ಬರುವ ಸಾಧ್ಯತೆಯೂ ಇದೆ. ಆದ್ದರಿಂದ ಈ ಸಮಯದಲ್ಲಿ ನೀವು ಆರೋಗ್ಯದ ಬಗ್ಗೆ ತುಂಬಾನೇ ಹುಷಾರಾಗಿರಬೇಕು.
ಕೋವಿಡ್ 19, ಡೆಂಗ್ಯೂ ಎರಡೂ ಒಟ್ಟಿಗೆ ಬರುವುದೇ? ಎರಡೂ ಒಟ್ಟಿಗೆ ಬಂದರೆ ಕಂಡು ಬರುವ ಲಕ್ಷಣಗಳೇನು?

ಕೋವಿಡ್ 19, ಡೆಂಗ್ಯೂ ಎರಡೂ ಒಟ್ಟಿಗೆ ಬರುವುದೇ? ಎರಡೂ ಒಟ್ಟಿಗೆ ಬಂದರೆ ಕಂಡು ಬರುವ ಲಕ್ಷಣಗಳೇನು?
ಕೋವಿಡ್ 19 ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದು ಶ್ವಾಸಕೋಶಕ್ಕೆ ಮೊದಲು ಹಾನಿಯುಂಟು ಮಾಡುತ್ತದೆ, ನಂತರ ದೇಹದ ಉಳಿದ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ.
ಡೆಂಗ್ಯೂ ಅನಾಫಿಲಿಸ್ ಎಂಬ ಸೊಳ್ಳೆಯಿಂದ ಹರಡುವುದು. ಡೆಂಗ್ಯೂ ಬಂದರೆ ಬಿಳಿ ರಕ್ತಕಣಗಳು ತುಂಬಾ ಕಡಿಮೆಯಾಗುವುದು. ಡೆಂಗ್ಯೂ ಹಾಗೂ ಕೋವಿಡ್ 19 ಎರಡೂ ಜೊತೆಗೆ ಬಂದರೆ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಡೆಂಗ್ಯೂ ಹಾಗೂ ಕೋವಿಡ್ 19 ನಡುವವಿನ ವ್ಯತ್ಯಾಸವೇನು, ಈ ಕಾಯಿಲೆಗಳ ಲಕ್ಷಣಗಳೇನು? ಎರಡು ಜೊತೆಗೆ ಬಂದಾಗ ಚಿಕಿತ್ಸೆ ಎಷ್ಟು ಕಷ್ಟ ಎಂದು ನೋಡೋಣ ಬನ್ನಿ:

ಡೆಂಗ್ಯೂ ಹಾಗೂ ಕೋವಿಡ್ 19 ಹೇಗೆ ಭಿನ್ನವಾಗಿದೆ?
* ಡೆಂಗ್ಯೂ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ, ಸೊಳ್ಳೆ ಕಚ್ಚಿದಾಗ ಮಾತ್ರ ಹರಡುತ್ತದೆ.
* ಆದರೆ ಕೋವಿಡ್ 19ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವುದು.
*ಡೆಂಗ್ಯೂ ಕೇಸ್ನಲ್ಲಿ ಇನ್ಕ್ಯೂಬೇಷನ್ ಅವಧಿ 3-10 ದಿನಗಳು, ಇನ್ಫೆಕ್ಷನ್ ದೇಹದಲ್ಲಿ 5-7 ದಿನಗಳವರೆಗೆ ಇರುತ್ತದೆ. ಕೋವಿಡ್ 19 ವೈರಸ್ ತಗುಲಿದಾಗ ಇನ್ಕ್ಯೂಬೇಷನ್ ಅವಧಿ 14ದಿನಗಳು. 4 ರಿಂದ 5 ದಿನಗಳಲ್ಲಿ ಲಕ್ಷಣಗಳು ಕಂಡು ಬರಬಹುದು.

ಡೆಂಗ್ಯೂ ಕಾಯಿಲೆಯ ಲಕ್ಷಣಗಳು
* ಜ್ವರ
* ವಿಪರೀತ ತಲೆನೋವು, ಕಣ್ಣುಗಳಲ್ಲಿ ನೋವು
* ವಾಂತೊ
* ಬೇಧಿ
* ತ್ವಚೆಯಲ್ಲಿ ಗುಳ್ಳೆಗಳು ಏಳುವುದು
* ಬಿಳಿ ರಕ್ತಕಣಗಳು ಕಡಿಮೆಯಾಗುವುದು

ಕೋವಿಡ್ 19 ಲಕ್ಷಣಗಳು
* ಚಳಿ-ಜ್ವರ
* ಬೇಧಿ
* ವಾಸನೆ ಮತ್ತು ರುಚಿ ಇಲ್ಲವಾಗುವುದು
* ತಲೆಸುತ್ತು
* ಉಸಿರಾಟದಲ್ಲಿ ತೊಂದರೆ
* ತಲೆನೋವು
* ಗಂಟಲಿನಲ್ಲಿ ಕೆರೆತ

ಡೆಂಗ್ಯೂ ಮತ್ತು ಕೋವಿಡ್ 19 ಜೊತೆಗೇ ಬಂದರೆ
ಡೆಂಗ್ಯೂ, ಕೋವಿಡ್ 19 ಪ್ರತ್ಯೇಕವಾಗಿ ಬಂದರೇ ತಡೆಯೋಕೆ ಆಗಲ್ಲ, ತುಂಬಾ ಸುಸ್ತು, ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯುತ್ತೆ. ಡೆಂಗ್ಯೂ ಆಗಲಿ, ಕೋವಿಡ್ 19 ಆಗಿರಲಿ ಬಂದರೆ ಕಾಯಿಲೆ ಗುಣಮುಖವಾದರೂ ಚೇತರಿಸಿಕೊಳ್ಳಲು ತಿಂಗಳುಗಟ್ಟಲೆ ಬೇಕಾಗುವುದು.
ಕೋವಿಡ್ 19 ಹಾಗೂ ಡೆಂಗ್ಯೂ ಜೊತೆಗೇ ಬಂದರೆ ತುಂಬಾನೇ ಕಷ್ಟ. ಬೇಗನೆ ಚಿಕಿತ್ಸೆ ಪ್ರಾರಂಭಿಸಬೇಕು ಇಲ್ಲದಿದ್ದರೆ ಪ್ರಾಣಕ್ಕೇ ಅಪಾಯ ಉಂಟಾಗಬಹುದು.

ಜ್ವರ ಬಂದರೆ ನಿರ್ಲಕ್ಷ್ಯ ಬೇಡ
ಕೆಲವರು ಜ್ವರ ಬಂದರೆ ಎರಡು-ಮೂರು ದಿನ ಪ್ಯಾರಾಸಿಟಮೋಲ್ ತೆಗೆದುಕೊಂಡು ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಇರುತ್ತಾರೆ. ಆದರೆ ಹಾಗೇ ಮಾಡಬೇಡಿ. ಸ್ವಲ್ಪ ನಿರ್ಲಕ್ಷ್ಯದಿಂದ ಪ್ರಾಣಕ್ಕೇ ಅಪಾಯ ಉಂಟಾಗಬಹುದು. ಡೆಂಗ್ಯೂ ಅಧಿಕ ಇರುವ ಪ್ರದೇಶದಲ್ಲಿದ್ದರೆ ಜ್ವರ ಬಂದಾಗ ಡೆಂಗ್ಯೂ ಪರೀಕ್ಷೆ ಮಾಡಿಸಿ ಜೊತೆಗೆ ಕೋವಿಡ್ ಲಕ್ಷಣಗಳಿದ್ದರೆ RT-PCR ಪರೀಕ್ಷೆ ಮಾಡಿಸಿ.