For Quick Alerts
ALLOW NOTIFICATIONS  
For Daily Alerts

ದಿನಾ ಮಾಸ್ಕ್‌ ಹಾಕಿದರೆ ಶ್ವಾಸಕೋಶಕ್ಕೆ ಹಾನಿಯಾಗುವುದೇ?

|

ಕಳೆದ ಒಂದೂವರೆ ವರ್ಷದಿಂದ ಮಾಸ್ಕ್‌ ಎಂಬುವುದು ನಮ್ಮೆಲ್ಲರ ಬದುಕಿನಲ್ಲಿ ಅತ್ಯಂತ ಅವಶ್ಯಕವಾದ ಒಂದು ವಸ್ತುವಾಗಿದೆ. ಹೊರಗಡೆ ಹೋಗುವಾಗ ಪರ್ಸ್ ಮರೆತರೂ ಮಾಸ್ಕ್‌ ಮರೆಯುವಂತಿಲ್ಲ.

ಕೊರೊನಾ ಬರುವ ಬದಲು ವೈದ್ಯರು , ನರ್ಸ್‌ಗಳು ಆಪರೇಷನ್ ಥಿಯೇಟರ್‌ನಲ್ಲಿ ಬಳಸುವುದನ್ನು ನೋಡಿರುತ್ತೇವೆ. ಆದರೆ ಕೊರೊನಾ ಬಂದ ಮೇಲೆ ಅವರಿಗೆ ಪಿಪಿಇ ಕಿಟ್ ಧರಿಸುವ ಅನಿವಾರ್ಯತೆ ಎದುರಾದರೆ ಜನಸಾಮಾನ್ಯರಿಗೆ ಮಾಸ್ಕ್‌ ಧರಿಸಿ ಓಡಾಡಬೇಕಾದ ಅನಿವಾರ್ಯ.

ಚಳಿಗಾಲದಲ್ಲಿ ಮಾಸ್ಕ್‌ ಧರಿಸಿದಾಗ ಅಷ್ಟೇನು ತೊಂದರೆಯಾಗಲ್ಲ, ಆದರೆ ಸೆಕೆ ಇರುವಾಗ ಧರಿಸಿದಾಗ ತುಂಬಾನೇ ಹಿಂಸೆ ಅನಿಸುವುದು, ಆದರೆ ಕೊರೊನಾ ತಡೆಗಟ್ಟಬೇಕಾದರೆ ಮಾಸ್ಕ್ ಧರಿಸಲೇಬೇಕಾಗಿದೆ.

ಇನ್ನು ಕೆಲವರಿಗೆ ದಿನಪೂರ್ತಿ ಮಾಸ್ಕ್ ಧರಿಸಬೇಕಾಗಿರುತ್ತದೆ. ಮಾಸ್ಕ್ ತುಂಬಾ ಬಳಕೆ ಮಾಡುವುದರಿಂದ ಏನಾಗುತ್ತೆ ನೋಡೋಣ:

 ದೊಡ್ಡ ಸಮಸ್ಯೆ ತಡೆಗಟ್ಟಲು ಒಂದು ಚಿಕ್ಕ ಮುನ್ನಚ್ಚರಿಕೆ

ದೊಡ್ಡ ಸಮಸ್ಯೆ ತಡೆಗಟ್ಟಲು ಒಂದು ಚಿಕ್ಕ ಮುನ್ನಚ್ಚರಿಕೆ

ಬೇಸಿಗೆಯಲ್ಲಿ ಮಾಸ್‌ ಧರಿಸಿದಾಗ ಮತ್ತಷ್ಟು ಮುಖ ಬೆವರುವುದರಿಂದ ತುಂಬಾ ಕಿರಿಕಿರಿಯಾಗುತ್ತದೆ. ಇದರಿಂದ ಮೊಡವೆ ಸಮಸ್ಯೆ ಉಂಟಾಗುತ್ತಿದೆ, ಮುಖದ ತ್ವಚೆ ತುಂಬಾ ಸೆನ್ಸಿಟಿವ್ ಆಗಿದೆ ಎಂದೆಲ್ಲಾ ಜನರು ಕಂಪ್ಲೇಂಟ್ ಮಾಡುತ್ತಾರೆ.

ಇನ್ನು ಮಾಸ್ಕ್ ಧರಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನಿಮ್ಮಲ್ಲೂ ಆ ರೀತಿಯ ಕಲ್ಪನೆ ಇದ್ದರೆ ಅದೊಂದು ತಪ್ಪು ಕಲ್ಪನೆ ಎಂಬುವುದನ್ನು ಅರಿತು ಕೊಂಡರೆ ಒಳ್ಳೆಯದು.

ಮಾಸ್ಕ್‌ ಧರಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯುಂಟಾಗುವುದಿಲ್ಲ

ಮಾಸ್ಕ್‌ ಧರಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯುಂಟಾಗುವುದಿಲ್ಲ

ಮಾಸ್ಕ್‌ ಧರಿಸಿ ಉಸಿರಾಡಿದಾಗ ನಾವು ಹೊರಬಿಡುವ ಇಂಗಾಲದ ಡೈಯಾಕ್ಸೈಡ್ ವಿಷವಾಗುವುದಿಲ್ಲ, ಇದು ನಾವು ತೆಗೆದುಕೊಳ್ಳುವ ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುವುದೂ ಇಲ್ಲ. ನಿಮಗೆ ಈ ಕುರಿತು ಇನ್ನೂ ಸಂಶಯವಿದ್ದರೆ ನೀವೊಮ್ಮೆ snopes.com ಪರಿಶೀಲಿಸಿ. ಇದೊಂದು ಫ್ಯಾಕ್ಟ್‌ ಚೆಕಿಂಗ್‌ ಸೈಟ್ ಆಗಿದೆ.

ಇಂಗಾಲದ ಡೈಯಾಕ್ಸೈಡ್ ತುಂಬಾ ಚಿಕ್ಕ ಕಣವಾಗಿದ್ದು ಅದು ನಾವು ಉಸಿರು ಬಿಟ್ಟಾಗ ಮಾಸ್ಕ್‌ ಮೂಲಕ ಹೊರ ಹೋಗುತ್ತದೆ ಹಾಗೂ ಆಮ್ಲಜನಕವನ್ನು ತೆಗೆದುಕೊಳ್ಳುವುದರಲ್ಲಿ ಯಾವುದ್ಯರು ದೇ ತೊಂದರೆಯುಂಟಾಗುವುದಿಲ್ಲ.

ಅಸ್ತಮಾ ಮುಂತಾದ ರೋಗವಿರುವವರಿಗೆ ಮಾಸ್ಕ್‌ ಧರಿಸುವುದರಿಂದ ತೊಂದರೆ ಉಂಟಾಗುವುದೇ?

ಅಸ್ತಮಾ ಮುಂತಾದ ರೋಗವಿರುವವರಿಗೆ ಮಾಸ್ಕ್‌ ಧರಿಸುವುದರಿಂದ ತೊಂದರೆ ಉಂಟಾಗುವುದೇ?

ಅಸ್ತಮಾ, ಉಸಿತರಾಟದ ಸಮಸ್ಯೆ ಇರುವವರಿಗೆ ಮಾಸ್ಕ್‌ ಧರಿಸುವುದರಿಂದ ಮತ್ತಷ್ಟು ಉಸಿರು ಕಟ್ಟಿದ ಅನುಭವವಾಗುತ್ತದೆ ಎಂದು ಕೆಲವರು ಹೇಳುತ್ತಾರೆ, ಆದರೆ ಮಾಸ್ಕ್‌ ಧರಿಸುವುದರಿಂದ ಹೈಪರ್‌ಕ್ಯಾಪ್ನಿಯಾ ಅಥವಾ ಇಂಗಾಲದ ಡೈಯಾಕ್ಸೈಡ್ ವಿಷಾನಿಲವಾಗುವುದಿಲ್ಲ.

ಅಲ್ಲದೆ ವೈದ್ಯರು ಕೂಡ ಅಸ್ತಮಾ ರೋಗಿಗಳಿಗೆ ದೂಳು ಅಥವಾ ಹಿಗೆ ಇರುವ ಕಡೆ ಹೋಗುವಾಗ ಮಾಸ್ಕ್‌ ಧರಿಸುವಂತೆ ಸಲಹೆ ನೀಡುತ್ತಾರೆ. ಏಕೆಂದರೆ ಅಸ್ತಮಾ ರೋಗಿಗಳ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ, ಇವರ ಆರೋಗ್ಯ ದೂಳು, ವಾಯು ಮಾಲಿನ್ಯ ಇರುವ ಕಡೆ ಹೋದಾಗ ಬೇಗನೆ ಹದಗೆಡುವುದರಿಂದ ಮಾಸ್ಕ್‌ ಧರಿಸುವಂತೆ ಸಲಹೆ ನೀಡುತ್ತಾರೆ.

ನೀವು ತುಂಬಾ ಹೊತ್ತು ಮಾಸ್ಕ್‌ ಧರಿಸುವುದರಿಂದ ನಿಮ್ಮ ಉಸಿರಾಟದ ಸಾಮರ್ಥ್ಯಕ್ಕೆ ತೊಂದರೆಯಾಗುವುದೇ?

ಏನಿಲ್ಲ, ಅಲ್ಲದೆ ಜನ ಸಾಮಾನ್ಯರು ದಿನಾ ಪೂರ್ತಿ ಮಾಸ್ಕ್‌ ಧರಿಸುವುದಿಲ್ಲ, ಆದರೆ ವೈದ್ಯರು ಹಾಗೂ ನರ್ಸ್‌ಗಳ ಬಗ್ಗೆ ಯೋಚಿಸಿ, ಆಸ್ಪತ್ರೆಯಲ್ಲಿ ಇರುವಷ್ಟು ಹೊತ್ತು ಮಾಸ್ಕ್‌ ಧರಿಸಿಯೇ ಇರಬೇಕು.

ಯಾವಾಗ ಮಾಸ್ಕ್‌ ಧರಿಸಬಾರದು?

ಯಾವಾಗ ಮಾಸ್ಕ್‌ ಧರಿಸಬಾರದು?

* ನೀವು ವ್ಯಾಯಾಮ ಮಾಡುವಾಗ

* ಚಿಕ್ಕ ಮಗುವಿಗೆ (ಇದರ ಶ್ವಾಸಕೋಶ ಬೆಳೆದಿರುವುದಿಲ್ಲ, ಆದ್ದರಿಂದ ಧರಿಸಬೇಡಿ)

* ಗಂಭೀರವಾದ ಉಸಿರಾಟದ ತೊಂದರೆ ಇದ್ದು ಸಹಜವಾಗಿ ಉಸಿರಾಡಲು ಸಾಧ್ಯವಾಗದವರು

ನಿಮಗೆ ಮಾಸ್ಕ್ ಧರಿಸಲು ಸಮಸ್ಯೆಯೇ?

ನಿಮಗೆ ಮಾಸ್ಕ್ ಧರಿಸಲು ಸಮಸ್ಯೆಯೇ?

ನಿಮಗೆ ಮಾಸ್ಕ್‌ ಧರಿಸಲು ಇಷ್ಟವಿಲ್ಲದಿದ್ದರೆ ಸಾರ್ವಜನಿಕ ಸ್ಥಳಗಳಿಗೆ, ಮಾಲ್‌, ರೆಸ್ಟೋರೆಂಟ್‌ಗಳಿಗೆ ಹೋಗಬೇಡಿ, ಮನೆಯಲ್ಲಿಯೇ ಇರಿ.

ನೀವು ಹೊರಗಡೆ ಹೋಗುವುದೇ ಆದರೆ ಮಾಸ್ಕ್ ಧರಿಸಿ ಹೋಗಿ ಇದರಿಂದ ನಿಮ್ಮನ್ನು ಕಾಪಾಡುವುದು ಮಾತ್ರವಲ್ಲ, ಬೇರೆಯವರನ್ನೂ ಕೋವಿಡ್ 19 ಮಹಾಮಾರಿಯಿಂದ ರಕ್ಷಿಸಬಹುದು.

English summary

What Happens To Your Lungs When You Wear A Face Mask Daily in Kannada

what happens to your lungs when you wear a face mask daily in Kannada,
X
Desktop Bottom Promotion