For Quick Alerts
ALLOW NOTIFICATIONS  
For Daily Alerts

ಕಾಂಟಾಕ್ಟ್‌ ಲೆನ್ಸ್‌ ಹಾಕಿಯೇ ಮಲಗೋದ್ರಿಂದ ಏನಾಗುತ್ತೆ ಗೊತ್ತಾ..? ಈ ತಪ್ಪು ಮಾಡಲೇಬೇಡಿ..!

|

ಇತ್ತೀಚೆಗೆ ಹೆಚ್ಚಿನವರು ಕನ್ನಡಕ ಧರಿಸಲು ಇರಿಸು ಮುರಿಸು ಪಡುವುದರಿಂದ ಕಾಂಟಾಕ್ಟ್‌ ಲೆನ್ಸ್‌ ಬಳಸುವುದು ಹೆಚ್ಚು. ಕೆಲವರು ಕಣ್ಣಿನ ಸೌಂದರ್ಯ ಹೆಚ್ಚಿಲು, ಆಕರ್ಷಕವಾಗಿ ಕಾಣಲು ಲೆನ್ಸ್ ಬಳಸುತ್ತಾರಾದರೂ, ದೃಷ್ಟಿಯ ಸಮಸ್ಯೆಯ ಕಾರಣದಿಂದಲೂ ಕಾಂಟಾಕ್ಟ್‌ ಲೆನ್ಸ್ ಬಳಸುತ್ತಾರೆ. ಕನ್ನಡಕಕ್ಕಿಂತಲೂ ಈ ಲೆನ್ಸ್‌ ಬಳಸುವಾಗ ಸ್ವಲ್ಪ ಅಲ್ಲ ಹೆಚ್ಚಿಗೇ ಕಾಳಜಿ ವಹಿಸಬೇಕು.

contacts lens

ಕೆಲವೊಮ್ಮೆ ತಡವಾದ ಕೆಲಸ ಅಥವಾ ಪಾರ್ಟಿ ಮುಗಿಸಿ ಬಂದು ಸೀದಾ ಬೆಡ್‌ ಮೇಲೆ ಬಿದ್ದರೆ ಹಾಗೇ ನಿದ್ದೆ ಹೋಗಿಬಿಡುತ್ತೇವೆ. ಹೀಗಾದಾಗ ಲೆನ್ಸ್‌ ಕಣ್ಣಿನಲ್ಲೇ ಉಳಿದುಬಿಡುತ್ತೆ. ತೆಗೆಯಲೂ ಸಾವಧಾನ ಇರುವುದಿಲ್ಲ. ಹೀಗೆ ಕಣ್ಣಿನಲ್ಲೇ ಇರಿಸಿ ಮಲಗುವುದು ಸರಿಯೇ..? ಇದರಿಂದ ಸಮಸ್ಯೆಗಳುಂಟಾಗುತ್ತಾ...? ಹೀಗಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ಈ ಲೇಖನದ ಮೂಲಕ ಉತ್ತರ ಕೊಡುವ ಪ್ರಯತ್ನ ನಮ್ಮದು.

ಕಾಂಟಾಕ್ಟ್‌ ಲೆನ್ಸ್‌ ಹಾಕಿ ಮಲಗಬಹುದೇ..?

ಕಾಂಟಾಕ್ಟ್‌ ಲೆನ್ಸ್‌ ಹಾಕಿ ಮಲಗಬಹುದೇ..?

ಖಂಡಿತವಾಗಿಯೂ ಇಲ್ಲ.. ದೀರ್ಘಾವಧಿಯವರೆಗೂ ಮಲಗಿದರೂ ಅಥವಾ ಲೆನ್ಸ್‌ ಹಾಕಿಕೊಂಡೇ ಸಣ್ಣ ನಿದ್ದೆ ಮಾಡಿದರೂ ಕೂಡಾ ಕಣ್ಣಿಗೆ ಸಮಸ್ಯೆಯನ್ನು ತಂದೊಡ್ಡಬಹುದು. ಯಾಕೆಂದರೆ ನಿದ್ರಿಸಿದಾಗ ಕಾರ್ನಿಯಾ ಸ್ವಲ್ಪ ಊದಿಕೊಳ್ಳಲು ಪ್ರಾರಂಭಿಸುತ್ತೆ. ಕಾಂಟಾಕ್ಟ್‌ ಲೆನ್ಸ್‌ ಹಾಕಿ ಹೆಚ್ಚು ಸಮಯ ಮಲಗಿದಿರೂ ಹೆಚ್ಚು ಅಪಾಯಕ್ಕೆ ಒಳಗಾಗುತ್ತೀರಿ. ಹದಿನೈದು ನಿಮಿಷದ ಸಣ್ಣ ನಿದ್ದೆಯೂ ಕೂಡಾ ಕಣ್ಣಿನ ಮೇಲ್ಮೈ ಜೀವಕೋಶಗಳ ಮೇಲೆ ಬ್ಯಾಕ್ಟೀರಿಯಾ ಸಂಗ್ರಹಕ್ಕೆ ಕಾರಣವಾಗುತ್ತೆ.

ಕಾಂಟಾಕ್ಟ್‌ ಲೆನ್ಸ್‌ ಹಾಕಿ ಮಲಗಿದರೆ ಏನಾಗುತ್ತೆ..?

ಕಾಂಟಾಕ್ಟ್‌ ಲೆನ್ಸ್‌ ಹಾಕಿ ಮಲಗಿದರೆ ಏನಾಗುತ್ತೆ..?

ಕಾಂಟಾಕ್ಟ್‌ ಲೆನ್ಸ್‌ ತೆಗೆಯದೇ ಹಾಗೇ ಮಲಗಿದಲ್ಲಿ ಕಣ್ಣಿನಲ್ಲಿ ಕಿರಿಕಿರಿಯಿಂದ, ಕಣ್ಣಿನ ಇನ್ನಿತರ ಸಮಸ್ಯೆಯವರೆಗೂ ಇದು ಕಾರಣವಾಗುತ್ತೆ. ಕೆಲವೊಮ್ಮೆ ಕಣ್ಣಿನ ಸೋಂಕು ಆಗದಿದ್ದರೂ, ನಿಮ್ಮ ಕಣ್ಣಿಗೆ ಕಿರಿಕಿರಿಯಾಗುವುದು ತಪ್ಪದು. ಸಾಮಾನ್ಯವಾಗಿ ಮಲಗಿದಾಗ ನಿಮ್ಮ ಕಣ್ಣುಗಳು ಒಣಗುತ್ತವೆ. ಮಲಗಿ ಎದ್ದ ನಂತರ ಒಣಗಿದ ಕಣ್ಣಿನಿಂದ ಲೆನ್ಸ್‌ ತೆಗೆಯುವುದರಿಂದ ಕಣ್ಣಿನಲ್ಲಿ ಇರಿಟೇಷನ್‌ ಅಥವಾ ಹಾನಿಯೂ ಆಗಬಹುದು.

ಕಾಂಟಾಕ್ಟ್‌ ಲೆನ್ಸ್‌ ಹಾಕಿ ಮಲಗುವುದರಿಂದ ಕಣ್ಣಿನ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಆರರಿಂದ ಎಂಟು ಪಟ್ಟು ಹೆಚ್ಚಾಗಿರುತ್ತದೆ. ಗಂಭೀರ ಕಣ್ಣಿನ ಸೋಂಕು, ಕಾರ್ನಿಯಲ್‌ ಹಾನಿ ಹಾಗೂ ತೀರಾ ಅಪರೂಪದ ಸಂದರ್ಭದಲ್ಲಿ ಮಾತ್ರ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು. ನೀವು ದೃಷ್ಟಿ ದೋಷದ ಕಾರಣದಿಂದಾಗಲಿ ಅಥವಾ ಅಲಂಕಾರಕ್ಕಾಗಿ ಲೆನ್ಸ್ ಧರಿಸಿದರೂ ಸೋಂಕುಗಳಾಗುವ ಸಂಭವ ಹೆಚ್ಚಿರುತ್ತದೆ ಎನ್ನುವುದನ್ನು ನೆನಪಿಡಿ.

ಕಾಂಟಾಕ್ಟ್‌ ಲೆನ್ಸ್‌ ಧರಿಸಿ ಮಲಗುವುದು ಸೋಂಕಿನ ಅಪಾಯ ಹೇಗೆ ಹೆಚ್ಚಿಸುತ್ತೆ..?

ಕಾಂಟಾಕ್ಟ್‌ ಲೆನ್ಸ್‌ ಧರಿಸಿ ಮಲಗುವುದು ಸೋಂಕಿನ ಅಪಾಯ ಹೇಗೆ ಹೆಚ್ಚಿಸುತ್ತೆ..?

ನಮ್ಮ ಕಣ್ಣು ಪ್ರತಿದಿನ ಬ್ಯಾಕ್ಟೀರಿಯಾದೊಂದಿಗೆ ಸಂಪರ್ಕಕ್ಕೆ ಒಳಗಾಗುತ್ತೆ, ಆದರೆ ಸೋಂಕುಗಳಾವುದು ಕಡಿಮೆ ಯಾಕೆಂದರೆ ಪ್ರತಿದಿನ ಧೂಳು, ಮಾಲಿನ್ಯ ಕಾರಕಗಳಿಂದ ನಮ್ಮ ಕಣ್ಣಿಗೆ ರಕ್ಷಣೆ ನೀಡುವುದೇ ಕಾರ್ನಿಯಾ. ಕಾರ್ನಿಯಾ ಆರೋಗ್ಯಕರವಾಗಿರಬೇಕೆಂದರೆ ಆಮ್ಲಜನಕ ಹಾಗೂ ಹೈಡ್ರೇಷನ್‌ ಬೇಕೇ ಬೇಕು. ನಾವು ಎಚ್ಚರವಾಗಿಡುವಾಗ ಕಣ್ಣುಗಳನ್ನು ಆಗಾಗ ಮಿಟುಕಿಸುವುದರಿಂದ ಕಣ್ಣು ತೇವವಾಗಿರುತ್ತೆ.

ಕಣ್ಣೀರಿನ ಮೂಲಕ ಆಮ್ಲಜನಕವು ಕಾರ್ನಿಯಾಗೆ ತಲುಪುತ್ತದೆ. ಆದರೆ ಕಾಂಟಾಕ್ಟ್‌ ಲೆನ್ಸ್‌ ಕಣ್ಣಿನ ಮೇಲ್ಮೈ ಪದರವನ್ನು ಮುಚ್ಚಿಬಿಡುತ್ತದೆ. ಇದರಿಂದಾಗಿ ಆಮ್ಲಜನಕ ಹಾಗೂ ತೇವಾಂಶದ ಪ್ರಮಾಣದಲ್ಲಿ ತೀರಾ ಇಳಿಕೆಯಾಗಿಬಿಡುತ್ತದೆ. ಮಲಗಿರುವಾಗಂತೂ ಇದು ಇನ್ನಷ್ಟು ಇಳಿದುಬಿಡುತ್ತದೆ. ಆಮ್ಲಜನಕದ ಕೊರತೆಯಿಂದಾಗಿ ಕಾರ್ನಿಯಾ 'ಹೈಪೋಕ್ಸಿಯಾ' ಎನ್ನುವ ಸ್ಥಿತಿಯನ್ನು ತಲುಪುತ್ತದೆ. ಇದರಿಂದಾಗಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿಯನ್ನು ಕಾರ್ನಿಯಾ ಕಳೆದುಕೊಳ್ಳುತ್ತದೆ. ಹೀಗಾಗಿ ಸೋಂಕು ಗಂಭೀರವಾಗುವ ಸಾಧ್ಯತೆ ಹೆಚ್ಚು.

ಕಣ್ಣಿನ ಸೋಂಕಿನ ಲಕ್ಷಣಗಳು

ಕಣ್ಣಿನ ಸೋಂಕಿನ ಲಕ್ಷಣಗಳು

ಮೊದಲೇ ವಿವರಿಸಿದಂತೆ ನೀವು ಕಾಂಟಾಕ್ಟ್‌ ಲೆನ್ಸ್‌ ಧರಿಸಿಯೇ ನಿದ್ದೆ ಹೋದಲ್ಲಿ ಸೋಂಕಾಗುವ ಅಪಾಯ ಹೆಚ್ಚು. ಕಣ್ಣಿನ ಸೋಂಕು ಆಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು,

* ಮಂದ ದೃಷ್ಟಿ

* ಕಣ್ಣಿನಿಂದ ಲೋಳೆಯಂತೆ ದ್ರವ ಸ್ರವಿಸುವುದು

* ಕಣ್ಣು ಕೆಂಪಾಗುವುದು

* ಕಣ್ಣಿನಿಂದ ಅತಿಯಾಗಿ ನೀರು ಬರುವುದು ಕಣ್ಣಿನ ಸೋಂಕಿನ ಲಕ್ಷಣಗಳು. ಈ ಎಲ್ಲಾ ಲಕ್ಷಣಗಳು ಕಾಣಿಸಿದ ತಕ್ಷಣ ವೈದ್ಯರನ್ನು ಭೇಟಿ ಮಾಡುವುದನ್ನು ಮಾತ್ರ ಮರೆಯಬೇಡಿ. ನಿಮಗೆ ಕಣ್ಣಿನ ಸೋಂಕಾಗಿದೆ ಎಂದು ಅನಿಸಿದಲ್ಲಿ ಅದನ್ನು ಪ್ಲಾಸ್ಟಿಕ್‌ ಕಂಟೇನರ್‌ನಲ್ಲಿರಿ ಅದನ್ನು ವೈದ್ಯರ ಬಳಿಗೆ ತೆಗೆದುಕೊಂಡು ಹೋಗಿ.

ಲೆನ್ಸ್ ಧರಿಸುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಲೆನ್ಸ್ ಧರಿಸುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಕಾಂಟಾಕ್ಟ್‌ ಲೆನ್ಸ್‌ಗಳು ನಿಮ್ಮ ಕಣ್ಣುಗುಡ್ಡೆಯ ಸೂಕ್ಷ್ಮ ಅಂಗಾಂಶಗಳೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಕೆಲವೊಂದು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಆ ಮುನ್ನೆಚ್ಚರಿಕೆ ಕ್ರಮಗಳೇನು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ ನೋಡಿ.

* ಕಾಂಟಾಕ್ಟ್‌ ಲೆನ್ಸ್‌ ಧರಿಸಿ ಈಜಬೇಡಿ ಅಥವಾ ಹಾಟ್‌ ಟಬ್‌ಗೆ ಇಳಿಯಬೇಡಿ

* ಕಾಂಟಾಕ್ಟ್‌ ಲೆನ್ಸ್‌ ಧರಿಸುವಾಗ ಹಾಗೂ ತೆಗೆಯುವಾಗ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ.

* ನಿಮ್ಮ ಲೆನ್ಸ್‌ಗಳನ್ನು ಕಾಂಟಾಕ್ಟ್ ಲೆನ್ಸ್‌ ದ್ರಾವಣದಲ್ಲಿ ಮಾತ್ರ ತೊಳೆದು, ಸಂಗ್ರಹಿಸಿಡಿ, ಎಂದಿಗೂ ಲವಣಯುಕ್ತ ದ್ರಾವಣ ಅಥವಾ ನೀರಿನಿಂದ ತೊಳೆಯಬೇಡಿ.

*ನಿಮ್ಮ ಕಾಂಟಾಕ್ಟ್ ಲೆನ್ಸ್ ಕೇಸ್‌ನಲ್ಲಿ ಇರಿಸುವ ಮೊದಲು ಅದನ್ನು ಸ್ವಚ್ಛಗೊಳಿಸಲು ಸೋಂಕು ನಿವಾರಕ ದ್ರಾವಣದಿಂದ ಒರೆಸಿ.

*ಪ್ರತಿದಿನ ನಿಮ್ಮ ಲೆನ್ಸ್‌ ಕೇಸ್‌ನಲ್ಲಿ ಸೋಂಕು ನಿವಾರಕ ದ್ರಾವಣವನ್ನು ಬದಲಾಯಿಸಿ.

* ನಿಮ್ಮ ಲೆನ್ಸ್‌ ಹಾಗೂ ಲೆನ್ಸ್‌ ಕೇಸನ್ನು ಆಗಾಗ್ಗೆ ಅಂದರೆ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಬದಲಾಯಿಸಿ. ಬಿರುಕು ಬಿಟ್ಟ ಅಥವಾ ಒಡೆದ ಲೆನ್ಸ್ ಎಂದಿಗೂ ಬಳಸಬೇಡಿ.

* ನೀವು ಪ್ರಯಾಣಿಸುವಾಗ ಪ್ರಯಾಣಕ್ಕೆಂದೇ ಇರುವ ವಿಶೇಷ ಟ್ರಾವೆಲ್‌ ಸೈಜ್‌ ಕಾಂಟಾಕ್ಟ್‌ ಸೊಲ್ಯೂಷನ್‌ ಬಳಸಿ. ಈ ದ್ರಾವಣವನ್ನು ಎಂದಿಗೂ ಧೂಳು ಕೂತಿರುವ ಪ್ಲಾಸ್ಟಿಕ್‌ ಕಂಟೇನರ್‌ಗೆ ಸುರಿಯಬೇಡಿ.

*ಕಾಂಟ್ಯಾಕ್ಟ್ ಲೆನ್ಸ್‌ ಹಾಕಿ ಮಲಗುವುದು ಅಪಾಯಕಾರಿ ಏಕೆಂದರೆ ಇದು ನಿಮ್ಮ ಕಣ್ಣಿನ ಸೋಂಕಿನ ಅಪಾಯವನ್ನು ತೀವ್ರವಾಗಿ ಹೆಚ್ಚಿಸುತ್ತದೆ. ನೀವು ಲೆನ್ಸ್‌ ಹಾಕಿ ನಿದ್ರಿಸಿದರೆ, ನೀವು ಸಾಧ್ಯವಾದಷ್ಟು ಬೇಗ ಅದನ್ನು ತೆಗೆಯಿರಿ ಮತ್ತು ಮತ್ತೆ ಲೆನ್ಸ್‌ ಧರಿಸುವ ಮೊದಲು ನಿಮ್ಮ ಕಣ್ಣು ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಿ. ಸೋಂಕಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಉತ್ತಮ ಕಾಂಟ್ಯಾಕ್ಟ್ ಲೆನ್ಸ್ ನೈರ್ಮಲ್ಯವನ್ನು ಅಭ್ಯಾಸ ಮಾಡಿ. ಕಣ್ಣಿನ ದೃಷ್ಟಿಯು ಅತ್ಯಂತ ಅಮೂಲ್ಯವಾದದ್ದು, ದೃಷ್ಟಿ ಕಳೆದುಕೊಂಡರೆ ಮತ್ತೆ ಮರುಪಡೆಯುವುದು ಕಷ್ಟ.

English summary

What happens to your eyes if you fall asleep with your contacts lens in kannada

Here we are discussing about What happens to your eyes if you fall asleep with your contacts lens in kannada. read more.
X
Desktop Bottom Promotion