For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಮಾತ್ರೆಗಳು ಹೇಳುವ ಶುದ್ಧ ಸುಳ್ಳುಗಳು

|

ದೈಹಿಕ ಚಟುವಟಿಕೆ ಇಲ್ಲದೆ, ಸರಿಯಾಗಿ ತಿನ್ನುತ್ತಾ ದೇಹ ಬೆಳೆಸಿಕೊಂಡರೆ ಆಗ ಆರೋಗ್ಯವು ಕೆಡುವುದು ಮಾತ್ರವಲ್ಲದೆ, ಬೊಜ್ಜು ಕೂಡ ಬೆಳೆಯುವುದು. ಇಂತಹ ಸಂದರ್ಭದಲ್ಲಿ ಬೊಜ್ಜು ಇಳಿಸಿಕೊಳ್ಳಬೇಕು ಎನ್ನುವ ಆಲೋಚನೆಯು ಮನಸ್ಸಿನೊಳಗೆ ತಿರುಗುತ್ತಾ ಇರುತ್ತದೆ. ಇದಕ್ಕಾಗಿ ಹಲವಾರು ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಬೊಜ್ಜು ಮಾತ್ರ ಹಾಗೆ ಇರುವುದು.

ಜನರು ಇಂತಹ ಸಮಸ್ಯೆ ಬಳಸಿಕೊಂಡು ಬೊಜ್ಜು ಇಳಿಸುವಂತಹ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿವೆ. ಆದರೆ ಕೆಲವೊಂದು ಸಲ ಅಸಾಧ್ಯವಾಗಿರುವ ರೀತಿಯಲ್ಲಿ ಬೊಜ್ಜು ಕರಗಿಸುತ್ತೇವೆ ಎಂದು ಮಾತ್ರೆಗಳು ಹೇಳುತ್ತವೆ. ಇಂತಹ ಪ್ರಚಾರದಿಂದಾಗಿ ಜನರು ಆ ಉತ್ಪನ್ನಗಳನ್ನು ಮುಗಿಬಿದ್ದು ಖರೀದಿಸಿ ಬಳಸಲು ಆರಂಭಿಸುವರು.

Weight-Loss Pills Lies You Should Never Believe

ಹೆಚ್ಚಿನ ಜನರು ದೇಹದ ತೂಕ ಇಳಿಸಲು ಮಾತ್ರೆಗಳನ್ನು ಸೇವಿಸುವರು ಮತ್ತು ಪ್ರೋಟೀನ್ ಶೇಕ್ ನ್ನು ಮಾತ್ರ ಸೇವನೆ ಮಾಡುವರು. ಆದರೆ ಇದರ ಪರಿಣಾಮ ಮಾತ್ರ ಯಾವತ್ತಿಗೂ ಕಾಣಸಿಗುವುದಿಲ್ಲ. ತೂಕ ಇಳಿಸಿಕೊಳ್ಳುವ ಸಪ್ಲಿಮೆಂಟ್ ಗಳನ್ನು ಸೇವನೆ ಮಾಡುವ ಪರಿಣಾಮವಾಗಿ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿ ಆಗುವುದು.

ಈ ಲೇಖನ ಓದಿದ ನಂತರ ತೂಕ ಇಳಿಸಿಕೊಳ್ಳಲು ಇರುವ ಕೆಲವೊಂದು ಮಾತ್ರೆಗಳು ಹೇಳುವಂತಹ ಸುಳ್ಳುಗಳನ್ನು ನೀವು ಇನ್ನು ಮುಂದೆ ಖಂಡಿತವಾಗಿಯೂ ನಂಬುವುದನ್ನು ಬಿಡುವಿರಿ!.

ಆಹಾರ ಪಥ್ಯವಿಲ್ಲದೆ ತೂಕ ಇಳಿಸುವುದು

ಆಹಾರ ಪಥ್ಯವಿಲ್ಲದೆ ತೂಕ ಇಳಿಸುವುದು

ಬೇಕಾದಷ್ಟು ತಿನ್ನಿ ಮತ್ತು ತೂಕ ಕೂಡ ಇಳಿಸಿ ಎನ್ನುವುದು ಅತೀ ದೊಡ್ಡ ಸುಳ್ಳು. ಆಹಾರ ಪಥ್ಯವಿಲ್ಲದೆ ಯಾವತ್ತಿಗೂ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಇದುವೇ ಪರಮ ಸತ್ಯ. ತೂಕ ಇಳಿಕೆ ಮಾಡುವಂತಹ ಮಾತ್ರೆಗಳನ್ನು ಸೇವಿಸಿದರೆ ಬೊಜ್ಜು ದೇಹ ಕರಗಿಸಬಹುದು ಎಂದು ಮಾತ್ರೆಗಳು ಹೇಳುತ್ತವೆ., ಆದರೆ ಇದು ಅಸಾಧ್ಯದ ಮಾತು. ದೇಹದಲ್ಲಿ ಜಮೆಯಾಗಿರುವಂತಹ ಕೊಬ್ಬು ಕಡಿಮೆ ಮಾಡಲು ಕ್ಯಾಲರಿ ಕಡಿಮೆ ಸೇವನೆ ಮಾಡಬೇಕು. ಕ್ಯಾಲರಿ ಸೇವನೆ ಕಡಿಮೆ ಮಾಡದೆ ಹೋದರೆ ಆಗ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಮಾತ್ರೆ ಸೇವನೆಯಿಂದಲೂ ಆಗದ ಮಾತು. ಪರಿಣಾಮಕಾರಿಯಾಗಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಿದ್ದರೆ ಆಗ ನೀವು ಅಡುಗೆ ಮನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು.

ವ್ಯಾಯಾಮ ಮಾಡಬೇಕೆಂದಿಲ್ಲ

ವ್ಯಾಯಾಮ ಮಾಡಬೇಕೆಂದಿಲ್ಲ

ಇದು ತೂಕ ಇಳಿಸುವ ಮಾತ್ರೆಗಳು ಹರಡುತ್ತಿರುವ ಮತ್ತೊಂದು ಸುಳ್ಳು ಎಂದರೂ ತಪ್ಪಾಗದು. ತೂಕ ಇಳಿಕೆ ಮಾಡಬೇಕಾದರೆ ಆಹಾರ ಮತ್ತು ವ್ಯಾಯಾಮವು ಅತೀ ಅಗತ್ಯವಾಗಿರುವುದು. ಇದರಲ್ಲಿ ಒಂದನ್ನು ನೀವು ಪಾಲಿಸದೆ ಇದ್ದರೆ, ಆಗ ನಿಮಗೆ ಬೇಕಾದಂತಹ ಫಲಿತಾಂಶವು ಸಿಗುವುದಿಲ್ಲ. ನೀವು ಯಾವ ರೀತಿಯ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ನಡೆಸುತ್ತೀರಿ ಎನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ ವೇಳಾಪಟ್ಟಿಯಲ್ಲಿ ದೈಹಿಕ ಚಟುವಟಿಕೆಯು ಅಗತ್ಯವಾಗಿರುವುದು.

ಚಯಾಪಚಯ ಹೆಚ್ಚಿಸುವುದು

ಚಯಾಪಚಯ ಹೆಚ್ಚಿಸುವುದು

ಮಾತ್ರೆಗಳು ನಿಮ್ಮ ಚಯಾಪಚಯ ಹೆಚ್ಚಿಸುವುದಿಲ್ಲ ಎನ್ನುವುದನ್ನು ನೀವು ಗಮನಿಸಬೇಕು. ಗ್ರೀನ್ ಟೀಯಂತಹ ಉತ್ಪನ್ನಗಳು ಕೂಡ ಇದನ್ನು ಮಾಡದು. ಇಂತಹ ಯಾವುದೇ ಉತ್ಪನ್ನಗಳು ಶಾಶ್ವತವಾಗಿ ತೂಕ ಇಳಿಸಲು ನೆರವಾಗದು.

ಹೊಟ್ಟೆ ತುಂಬಿದಂತೆ ಆಗುವುದು

ಹೊಟ್ಟೆ ತುಂಬಿದಂತೆ ಆಗುವುದು

ಮಾತ್ರೆಯಿಂದಾಗಿ ಯಾವತ್ತೂ ಹೊಟ್ಟೆ ತುಂಬಿದಂತೆ ಆಗದು. ದೇಹಕ್ಕೆ ಪ್ರೋಟೀನ್, ನಾರಿನಾಂಶ ಮತ್ತು ಕೊಬ್ಬು ಇದ್ದರೆ ಮಾತ್ರ ಹೊಟ್ಟೆ ತುಂಬುವುದು ಮತ್ತು ಪೋಷಕಾಂಶಗಳು ಸಿಗುವುದು. ತೂಕ ಇಳಿಸುವ ಸಪ್ಲಿಮೆಂಟ್ ಗಳು ಇದನ್ನು ಮಾಡದು. ತೂಕ ಇಳಿಸಿಕೊಳ್ಳಲು ಸರಿಯಾದ ವಿಧಾನವೆಂದರೆ ಆರೋಗ್ಯಕರ ಹಾಗೂ ಪೋಷಕಾಂಶಗಳು ಇರುವ ಆಹಾರ ಸೇವಿಸಿ ಮತ್ತು ಕ್ಯಾಲರಿ ಕಡಿಮೆ ಸೇವಿಸಿ. ನಿಮ್ಮ ತಿನ್ನುವ ಅಭ್ಯಾಸವನ್ನು ಬದಲಾಯಿಸಿಕೊಂಡರೆ ಆಗ ಖಂಡಿತವಾಗಿಯೂ ಒಳ್ಳೆಯ ರೀತಿಯಿಂದ ತೂಕ ಕಳೆದುಕೊಳ್ಳಲು ಸಾಧ್ಯವಾಗುವುದು.

ದೇಹ ವಿನ್ಯಾಸ ಬದಲಾಯಿಸುವುದು

ದೇಹ ವಿನ್ಯಾಸ ಬದಲಾಯಿಸುವುದು

ಕೆಲವೊಂದು ಸಪ್ಲಿಮೆಂಟ್ ಗಳು ಕೆಲವು ಹಾರ್ಮೋನುಗಳನ್ನು ನೀಡಿ ದೇಹದ ವಿನ್ಯಾಸ ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ತೂಕ ಕಳೆದುಕೊಳ್ಳಲು ಸೇವಿಸುವ ಮಾತ್ರೆಗಳು ದೇಹದ ವಿನ್ಯಾಸವನ್ನು ಬದಲಿಸುತ್ತದೆ ಎನ್ನುವುದಕ್ಕೆ ಯಾವುದೇ ರೀತಿಯ ಸಾಕ್ಷಿಗಳು ಇಲ್ಲ. ಹಾಗೂ ಇದು ಇದು ಸಂಭವಿಸಿದ್ದೇ ಆದರೆ ಖಂಡಿತವಾಗಿಯೂ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಚ್ಚರ.

English summary

Weight-Loss Pills Lies You Should Never Believe

Weight loss, as we all know is a sensitive issue for all. One who embarks on a weight loss journey always has this urge to shed kilos at a lightning speed. But it is known to all that everything takes its own time to happen. However, tall claims made by the companies producing weight loss products make people believe in unrealistic things. The alluring promises made by them never fail to attract people's attention.
X
Desktop Bottom Promotion