For Quick Alerts
ALLOW NOTIFICATIONS  
For Daily Alerts

ಈ 10 ಸೂತ್ರ ಪಾಲಿಸಿದರೆ ಥೈರಾಯ್ಡ್ ಸಮಸ್ಯೆ ತಡೆಗಟ್ಟಬಹುದು

|

ಥೈರಾಯ್ಡ್ ಸಮಸ್ಯೆ ಎನ್ನುವುದು ಇತ್ತೀಚಿಗೆ ಹೆಚ್ಚಾಗುತ್ತದೆ. ಪುರುಷ ಹಾಗೂ ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಜೀವನಶೈಲಿ.

How To Manage Thyroid Naturally | Boldsky Kannada
Thyroid


ಥೈರಾಯ್ಡ್ ಎನ್ನುವುದು ನಮ್ಮ ದೇಹದ ಗಂಟಲಿನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್‌ ಆಗಿದೆ. ದೇಹದಲ್ಲಿ ಚಯಾಪಚಯ ಕ್ರಿಯೆ ಸರಿಯಾಗಿ ನಡೆಯಲು ಥೈರಾಯ್ಡ್ ಹಾರ್ಮೋನ್‌ ತುಂಬಾ ಮುಖ್ಯ. ಈ ಹಾರ್ಮೋನ್ ಉತ್ಪತ್ತಿಯಲ್ಲಿ ಹೆಚ್ಚಾದರೆ ಹೈಪರ್ ಥೈರಾಯ್ಡ್ ಉಂಟಾಗುತ್ತದೆ, ಕಡಿಮೆಯಾದರೆ ಹೈಪೋ ಥೈರಾಯ್ಡ್ ಉಂಟಾಗುತ್ತದೆ.

ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣ ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರ ಶೈಲಿ, ವ್ಯಾಯಾಮ ಮಾಡದಿರುವುದು. ಇಲ್ಲಿ ಕೆಲವೊಂದು ಟಿಪ್ಸ್ ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು:

1. ಆಹಾರಕ್ರಮ ಹೀಗಿರಲಿ

1. ಆಹಾರಕ್ರಮ ಹೀಗಿರಲಿ

ಆಹಾರದಲ್ಲಿ ತರಕಾರಿ, ಹಣ್ಣುಗಳು, ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳು, ಧಾನ್ಯಗಲಿರಲಿ. ವಿಟಮಿನ್ ಬಿ 12 ಇರುವ ಆಹಾರಗಳಾದ ಬಟಾಣಿ, ಅಶ್ವಗಂಧ, ಎಳ್ಳು, ತುನಾ ಮೀನು, ಮೊಟ್ಟೆ, ಹಾಲು, ಚೀಸ್ ಇವುಗಳನ್ನು ಬಳಸಿ. ಈ ಉತ್ಪನ್ನಗಳು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

2. ಗ್ಲುಟೇನ್‌ ರಹಿತ ಆಹಾರ ಸೇವಿಸಿ

2. ಗ್ಲುಟೇನ್‌ ರಹಿತ ಆಹಾರ ಸೇವಿಸಿ

ಗ್ಲುಟೇನ್ ಅಧಿಕವಿರುವ ಆಹಾರ ಸೇವನೆಯಿಂದ ಥೈರಾಯ್ಡ್ ಹಾರ್ಮೋನ್‌ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗುವುದು. ಬ್ರೆಡ್, ಪಾಸ್ತಾ, ಕುಕ್ಕೀಸ್, ಪಿಜ್ಜಾ, ಪೇಸ್ಟ್ರಿ, ಸಾಸ್, ತಂಪು ಪಾನೀಯಗಳು ಇವುಗಳಲ್ಲಿ ಗ್ಲುಟೇನ್ ಅಂಶವಿರುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳಿಂದ ದುರವಿರಿ. ಗ್ಲುಟೇನ್ ರಹಿತ ಆಹಾರಗಳಾದ ಹಣ್ಣುಗಳು, ತರಕಾರಿ, ಧಾನ್ಯಗಳು, ಮಾಂಸ, ಮೀನು, ಚಿಕನ್ ಇವುಗಳನ್ನು ತಿನ್ನುವುದು ಒಳ್ಳೆಯದು.

3. ಹೆಚ್ಚು ಸಕ್ಕರೆ ಬಳಸಬೇಡಿ

3. ಹೆಚ್ಚು ಸಕ್ಕರೆ ಬಳಸಬೇಡಿ

ಥೈರಾಯ್ಡ್ ಸಮಸ್ಯೆ ಇರುವವರು ತುಂಬಾ ಸಕ್ಕರೆ ಬಳಸುವುದು ಒಳ್ಳೆಯದಲ್ಲ. ಸಕ್ಕರೆ ಬಳಸುವುದರಿಂದ ಉರಿಯೂತ ಮತ್ತಷ್ಟು ಅಧಿಕವಾಗುವುದು. ಥೈರಾಯ್ಡ್ ಗ್ರಂಥಿ ಎರಡು ಬಗೆಯ ಹಾರ್ಮೋನ್ ಉತ್ಪತ್ತನ ಮಾಡುತ್ತದೆ. ಅದನ್ನು T3 (triiodothyronine) ಮತ್ತು T4(thyroxine) ಹಾರ್ಮೋನ್ ಎಂದು ಕರೆಯುತ್ತಾರೆ ಥೈರಾಯ್ಡ್ ಸಮಸ್ಯೆ ಇರುವವರಲ್ಲಿಈ ಹಾರ್ಮೋನ್‌ಗಳ ಅಸಮತೋಲನ ಉಂಟಾಗುವುದು.

4. ಈ ಆಹಾರಗಳನ್ನು ತಿನ್ನಿ

4. ಈ ಆಹಾರಗಳನ್ನು ತಿನ್ನಿ

ಹೈಪೋಥೈರಾಯ್ಡ್ ಉಂಟಾದರೆ ಅಜೀರ್ಣ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಇದರಿಂದ ಮಲಬದ್ಧತೆ ಉಂಟಾಗುವುದು. ಮೊಸರು, ಚೀಸ್, ಕೆಫೀರ್ ಇವುಗಳಲ್ಲಿರುವ ಆರೋಗ್ಯಕರ ಬ್ಯಾಕ್ಟಿರಿಯಾ ಹೊಟ್ಟೆಯ ಆರೋಗ್ಯವನ್ನು ವೃದ್ಧಿಸುತ್ತದೆ.

5. ಸೆಲೆನಿಯೋಮ್ ಅಧಿಕವಿರುವ ಅಹಾರ ತಿನ್ನಿ

5. ಸೆಲೆನಿಯೋಮ್ ಅಧಿಕವಿರುವ ಅಹಾರ ತಿನ್ನಿ

ಸೆಲೆನಿಯೋಮ್ ಇರುವ ಆಹಾರ T4 ಹಾರ್ಮೋನ್ ಸಮಪ್ರಮಾಣದಲ್ಲಿ ಇಡುವಲ್ಲಿ ಸಹಕಾರಿ. ಬ್ರೆಜಿಲ್ ನಟ್ಸ್, ತುನಾ ಮೀನು, ಟರ್ಕಿ ಕೋಳಿ ಇವುಗಳಲ್ಲಿ ಸೆಲೋನಿಯಮ್ ಅಧಿಕವಿರುತ್ತದೆ. ಈ ಆಹಾರಗಳ ಸೇವನೆ ಆರೋಗ್ಯಕರ.

6. ಅಯೋಡಿನ್ ಹೆಚ್ಚಿರುವ ಆಹಾರ ಸೇವಿಸಿ

6. ಅಯೋಡಿನ್ ಹೆಚ್ಚಿರುವ ಆಹಾರ ಸೇವಿಸಿ

ಅಯೋಡಿನ್ ಕೊರತೆಯಿಂದ ಕೂಡ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ದೇಹದಲ್ಲಿ ಅನೇಕ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಥೈರಾಯ್ಡ್ ಹಾರ್ಮೋನ್ ಅವಶ್ಯಕ. ದೇಹದಲ್ಲಿ ಅಯೋಡಿನ್ ಅಂಶ ಕಡಿಮೆಯಾದರೆ ಹೈಪೋಥೈರಾಯ್ಡ್ ಉಂಟಾಗುತ್ತದೆ. ಸೀಗಡಿ, ಮೃದ್ವಂಗಿಗಳು, ಮೊಸರು, ಚೀಸ್ ಇವುಗಳನ್ನು ತಿನ್ನಿ.

7. ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು

7. ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು

ಚಯಾಪಚಯ ಕ್ರಿಯೆ ಸರಿಯಾಗಿ ನಡೆಯಲು ಕಬ್ಬಿಣದಂಶ ಅವಶ್ಯಕ. ಕಬ್ಬಿಣದಂಶದ ಕೊರತೆ ಉಂಟಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಕುಂಬಳಕಾಯಿ ಬೀಜ, ಆಲೂಗಡ್ಡೆ, ದವಸ ಧಾನ್ಯಗಳು, ಚಾಕೋಲೆಟ್, ಪಾಲಾಕ್ ಸೊಪ್ಪು ಇವುಗಳಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ.

8. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ

8. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ

ಮಾನಸಿಕ ಒತ್ತಡ ಹೆಚ್ಚಾದಂತೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದು, ಥೈರಾಯ್ಡ್ ಸಮಸ್ಯೆಯಿದ್ದವರು ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾದರೆ ಸಮಸ್ಯೆ ಮತ್ತಷ್ಟು ಕ್ಲಿಷ್ಟಕರವಾಗುವುದು. ಆದ್ದರಿಂದ ಮಾನಸಿಕ ಒತ್ತಡವನ್ನು ಹೊರಹಾಕಲು ಮನಸ್ಸಿಗೆ ಖುಷಿ ನೀಡುವ ಕಾರ್ಯಗಳನ್ನು ಮಾಡಿ.

9. ಯೋಗ ಅಭ್ಯಾಸ

9. ಯೋಗ ಅಭ್ಯಾಸ

ಯೋಗ ಮತ್ತು ಧ್ಯಾನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಯೋಗಾಸನದಲ್ಲಿ ಸರ್ವಾಂಗಾಸನ, ಮತ್ಸ್ಯಾಸನ, ಪ್ರಾಣಯಾಮ, ಉಜ್ವೈನ್ ಪ್ರಾಣಯಾಮ ಇವುಗಳನ್ನು ಮಾಡುವುದರಿಂದ ಥೈರಾಯ್ಡ್ ಹಾರ್ಮೋನ್‌ಗಳನ್ನು ಸಮತೋಲನದಲ್ಲಿ ಇಡಲು ಸಹಕಾರಿ.

10. ಆಕ್ಯೂಪಂಕ್ಚರ್ ಟ್ರೈ ಮಾಡಿ

10. ಆಕ್ಯೂಪಂಕ್ಚರ್ ಟ್ರೈ ಮಾಡಿ

ಆಕ್ಯೂಪಂಕ್ಷರ್ ವಿಧಾನದಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು. ಆಕ್ಯೂಪಂಕ್ಚರ್ ಮೂಲಕ ಥೈರಾಯ್ಡ್ ಹಾರ್ಮೋನ್‌ಗಳನ್ನು ಸಮತೋಲನದ್ಲಿ ಇಡಬಹುದು. ಆಕ್ಯೂಪಂಕ್ಚರ್ ವಿಧಾನ ಮಾನಸಿಕ ಒತ್ತಡ ಕಡಿಮೆಯಾಗುವುದು ಹಾಗೂ ಥೈರಾಯ್ಡ್ ಹಾರ್ಮೋನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿಯಾಗಲು ಸಹಕಾರಿಯಾಗಿದೆ.

ಥೈರಾಯ್ಡ್ ಕುರಿತು ಅತೀ ಹೆಚ್ಚು ಕೇಳ್ಪಡುವ ಪ್ರಶ್ನೆಗಳಿವು

ಥೈರಾಯ್ಡ್ ಕುರಿತು ಅತೀ ಹೆಚ್ಚು ಕೇಳ್ಪಡುವ ಪ್ರಶ್ನೆಗಳಿವು

ಥೈರಾಯ್ಡ್‌ಗೆ ಪ್ರಮುಖ ಕಾರಣವೇನು?

ಕಬ್ಬಿಣದಂಶ, ಸೆಲೆನಿಯೋಮ್, ಅಯೋಡಿನ್ ಇವುಗಳ ಕೊರತೆ ಉಂಟಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ.

ಥೈರಾಯ್ಡ್‌ಗೆ ಅತ್ಯುತ್ತಮವಾದ ಆಹಾರ ಯಾವುವು?

ಬ್ರೆಜಿಲ್ ನಟ್ಸ್, ಹೇಝಲ್‌ನಟ್ಸ್, ಮೊಸರು, ಮೊಟ್ಟೆ, ಮೀನು, ಲಿವರ್.

ಯಾವ ಆಹಾರ ಒಳ್ಳೆಯದಲ್ಲ?

ಪೈನ್‌ ನಟ್ಸ್, ಕಡಲೆ, ಸ್ಟ್ರಾಬೆರ್ರಿ, ಕ್ಯಾಬೇಜ್‌, ಬ್ರೊಕೋಲಿ, ಹೂಕೋಸು, ಸೋಯಾ ಇವುಗಳನ್ನು ಥೈರಾಯ್ಡ್ ಸಮಸ್ಯೆ ಇರುವವರು ಹೆಚ್ಚಾಗಿ ಸೇವಿಸಬೇಡಿ.

ಥೈರಾಯ್ಡ್‌ಗೆ ಯಾವ ಆಹಾರ ಒಳ್ಳೆಯದಲ್ಲ?

ಯೋಗ, ವ್ಯಾಯಾಮ, ಧಾನ್ಯಗಳು, ಈಜು, ಸೈಕ್ಲಿಂಗ್‌, ನಡೆಯುವುದು ಇವೆಲ್ಲಾ ಥೈರಾಯ್ಡ್‌ ಹಾರ್ಮೋನ್‌ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

English summary

Ways To Manage Your Thyroid Naturally

When there is an abnormal production of thyroid hormones, thyroid problems occur. Here are some effective ways to manage your thyroid problems naturally.
Story first published: Tuesday, February 25, 2020, 12:56 [IST]
X
Desktop Bottom Promotion