For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ವಾಂತಿ, ಬೇಧಿ, ಅಜೀರ್ಣ ತಡೆಗಟ್ಟಲು ಟಿಪ್ಸ್

|

ಮಳೆಗಾಲದಲ್ಲಿ ಶೀತ, ಕೆಮ್ಮು ಮಾತ್ರವಲ್ಲ ಆಗಾಗ ಹೊಟ್ಟೆ ಸಮಸ್ಯೆ ಕೂಡ ಕಾಡುವುದು. ಇದಕ್ಕೆ ಕಾರಣ ಜೀರ್ಣಕ್ರಿಯೆ ತುಂಬಾ ಕಡಿಮೆ ಇರುತ್ತದೆ ಅಲ್ಲದೆ ಈ ಸಮಯದಲ್ಲಿ ನೀರಿನಿಂದ ಬರುವ ಕಾಯಿಲೆ ಕೂಡ ಅಧಿಕ. ವಾಂತಿ-ಬೇಧಿ ಈ ರೀತಿಯ ಸಮಸ್ಯೆ ಕಾಡುವುದು, ಆದ್ದರಿಂದಲೇ ಮಳೆಗಾಲದಲ್ಲಿ ಹೊರಗಿನ ಆಹಾರ ತಿನ್ನುವುದು ಕಡಿಮೆ ಮಾಡಬೇಕು ಎಂದು ಹೇಳುವುದು.

ಇನ್ನು ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳನ್ನು(ಸ್ನ್ಯಾಕ್ಸ್‌) ಸ್ವಲ್ಪ ಹೆಚ್ಚಾಗಿಯೇ ಸೇವಿಸುತ್ತೇವೆ, ಬಿಸಿ ಬಿಸಿ ಟೀ ಜೊತೆ ಬಿಸಿ ಬಜ್ಜಿ, ಬೋಂಡಾ ಮುಂತಾದ ಸ್ನ್ಯಾಕ್ಸ್ ಸವಿಯಲೇನೋ ಇಷ್ಟವಾಗುವುದು, ಆದರೆ ಇವುಗಳನ್ನು ಜೀರ್ಣ ಮಾಡಲು ಹೊಟ್ಟೆಗೆ ಕಷ್ಟವಾಗಬಹುದು, ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.

ಆದ್ದರಿಂದ ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಕಡೆ ಗಮನ ನೀಡುವುದು ತುಂಬಾ ಮುಖ್ಯ. ನಾವಿಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡಲು ನೀವೇನು ಮಾಡಬೇಕು, ಏನು ಮಾಡಬಾರದು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಹೊಟ್ಟೆಯ ಆರೋಗ್ಯಕ್ಕಾಗಿ ಏನು ಮಾಡಬಾರದು?

ಹೊಟ್ಟೆಯ ಆರೋಗ್ಯಕ್ಕಾಗಿ ಏನು ಮಾಡಬಾರದು?

* ಹೊಟ್ಟೆ ತುಂಬಾ ಆಹಾರ ಸೇವಿಸಬೇಡಿ, ಮಳೆಗಾಲದಲ್ಲಿ ಲಘು ಆಹಾರ ಸೇವನೆ ಒಳ್ಳೆಯದು, ಇಲ್ಲದಿದ್ದರೆ ಅಜೀರ್ಣ, ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡಬಹುದು.

* ಇನ್ನು ಪಾನಿಪುರಿ, ಗೋಲ್‌ಗಪ್ಪಾ ಇಂಥ ಆಹಾರಗಳು ನಿಮಗೆ ತುಂಬಾ ಇಷ್ಟವಿದ್ದರೆ ಮನೆಯಲ್ಲಿ ಮಾಡಿ ಸವಿಯಿರಿ, ಹೊರಗಡೆಯಿಂದ ಸೇವಿಸಬೇಡಿ, ಏಕೆಂದರೆ ಹೊರಗಡೆ ಅವುಗಳನ್ನು ತಯಾರಿಸಲು ಬಳಸುವ ನೀರು ಇಷ್ಟರಮಟ್ಟಿಗೆ ಶುದ್ಧವಾದದ್ದು ಎಂದು ಹೇಳಲು ಸಾಧ್ಯವಿಲ್ಲ.

* ತಂಪಾದ ಪಾನೀಯ ತೆಗೆದುಕೊಳ್ಳಬೇಡಿ, ಇದು ದೇಹದಲ್ಲಿ ಖನಿಜಾಂಶ ಪ್ರಮಾಣ ಕಡಿಮೆ ಮಾಡುವುದು, ಅಲ್ಲದೆ ಕಿಣ್ವಗಳ ಚಟುವಟಿಕೆ ಕಡಿಮೆ ಮಾಡುವುದು. ದೇಹದಲ್ಲಿ ಖನಿಜಾಂಶಗಳು ಕಡಿಮೆಯಾದರೆ ಜೀರ್ಣಕ್ರಿಯೆ ಕಡಿಮೆಯಾಗುವುದು.

* ಈ ಸಮಯದಲ್ಲಿ ಹಾಲಿನ ಪದಾರ್ಥ ಕಡಿಮೆ ಸೇವಿಸಿ. ಏಕೆಂದರೆ ಮಳೆಗಾಲದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಜೀರ್ಣಮಾಡಿಕೊಳ್ಳಲು(ಮೊಸರು, ಮಜ್ಜಿಗೆ ಬಳಸಬಹುದು) ದೇಹಕ್ಕೆ ಸ್ವಲ್ಪ ಕಷ್ಟವಾಗುವುದು. ಇದರಿಂದ ಅಜೀರ್ಣ ಉಂಟಾಗುವುದು.

* ತಾಜಾ ಹಣ್ಣಿನ ಜ್ಯೂಸ್ ಅನ್ನು ಮನೆಯಲ್ಲೇ ಮಾಡಿ ಕುಡಿಯಿರಿ. ಏಕೆಂದರೆ ಹೊರಗಡೆ ಹಣ್ಣುಗಳನ್ನು ವ್ಯಾಪಾರಸ್ಥರು ತುಂಬಾ ಹೊತ್ತು ಕತ್ತರಿಸಿ ಇಟ್ಟಾಗ ಅದರಲ್ಲಿ ಬ್ಯಾಕ್ಟಿರಿಯಾಗಳು ಇರುವ ಸಾಧ್ಯತೆ ಹೆಚ್ಚು.

* ಸೊಪ್ಪು ಕಡಿಮೆ ಬಳಸಿ. ಸೊಪ್ಪುಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ಮಳೆಗಾಲದಲ್ಲಿ ಅವುಗಳಲ್ಲಿ ಚಿಕ್ಕ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸೊಪ್ಪು ಬಳಕೆ ಕಡಿಮೆ ಮಾಡಿ.

ಏನು ಮಾಡಬೇಕು?

ಏನು ಮಾಡಬೇಕು?

* ಮಿತಿಯಲ್ಲಿ ತಿನ್ನಿ, ಅದರಲ್ಲೂ ಸುಲಭವಾಗಿ ಜೀರ್ಣವಾಗುವಂಥ ಆಹಾರ ಹೆಚ್ಚಾಗಿ ಸೇವಿಸಿ.

* ಹರ್ಬಲ್ ಟೀ, ಮಸಾಲೆ ಟೀ ಬಳಸಿ. ಅಂದ್ರೆ ಚಕ್ಕೆ ಟೀ, ಗ್ರೀನ್‌ , ಶುಂಠಿ ಟೀ, ಲೆಮನ್ ಟೀ ಇವುಗಳು ಜೀರ್ಣಕ್ರಿಯೆಗೆ ಸಹಕಾರಿ ಅಲ್ಲದೆ ಮೈ ಬೊಜ್ಜು ಕರಗಿಸುವುದು. ಆದ್ದರಿಂದ ಮಳೆಗಾಲದಲ್ಲಿ ಈ ರೀತಿಯ ಟೀ ಕುಡಿಯುವುದರಿಂದ ಮೈ ತೂಕವನ್ನು ನಿಯಂತ್ರಣದಲ್ಲಿಡಬಹುದು.

* ಮೊಸರು, ಮಜ್ಜಿಗೆ, ಚೀಸ್ ಕೆಫೀರ್ ಮುಂತಾದ ಪ್ರೊಬಯೋಟಿಕ್ ಆಹಾರ ಸೇಇಸಿ. ಇವುಗಳಲ್ಲಿ ಆರೋಗ್ಯಕರ ಬ್ಯಾಕ್ಟಿರಿಯಾ ಇದ್ದು ಜೀರ್ಣಕ್ರಿಯೆಗೆ ಒಳ್ಳೆಯದು ಜೊತೆಗೆ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವುದು, ಇದರಿಂದಾಗಿ ರೊಗ ನಿರೋಧಕ ಶಕ್ತಿ ಹೆಚ್ಚುವುದು.

* ಅಡುಗೆಗೆ ಆರೋಗ್ಯಕರ ಎಣ್ಣೆ ಬಳಸಿ.

* ಮಳೆಗಾಲ ಅಂತ ನೀರು ಕುಡಿಯುವುದು ಕಡಿಮೆ ಮಾಡಬೇಡಿ. ತುಂಬಾ ನೀರು ಕುಡಿಯಿರಿ, ಅದರಲ್ಲೂ ಸ್ವಲ್ಪ ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು.

* ಕಹಿ ಆಹಾರ ಪದಾರ್ಥಗಳು ಅಂದ್ರೆ ಹಾಗಾಲಕಾಯಿ, ಮೆಂತೆಕಾಳುಗಳು, ಕಹಿಬೇವಿನ ಕಾಯಿ, ಎಲೆ ಇವುಗಳನ್ನು ಬಳಸಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ, ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನಬೇಡಿ, ಇದು ನಿಮ್ಮ ಹೊಟ್ಟೆಯನ್ನು ಹಾಳು ಮಾಡಬಹುಉದ.

* ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿ, ಸಕ್ಕರೆ ಬದಲಿಗೆ ಬೆಲ್ಲವನ್ನು ಹೆಚ್ಚಾಗಿ ಬಳಸಿ.

ಅಜೀರ್ಣ ಸಮಸ್ಯೆ ಉಂಟಾದರೆ ಮನೆಮದ್ದು

ಅಜೀರ್ಣ ಸಮಸ್ಯೆ ಉಂಟಾದರೆ ಮನೆಮದ್ದು

* ಶುಂಠಿ ಟೀ ಮಾಡಿ ಕುಡಿಯಿರಿ. (ಗರ್ಭಿಣಿಯರು ವೈದ್ಯರ ಸಲಹೆ ಪಡೆಯಿರಿ)

* ಒಂದೆರಡು ಪುದೀನಾ ಎಲೆ ತಿಂದರೆ ಕೂಡ ಒಳ್ಳೆಯದು. ಇನ್ನು ಅಡುಗೆ ಮಾಡುವಾಗ ಪುದೀನಾ ಎಲೆ ಬಳಸುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.

* ಒಂದು ಲೋಟ ನೀರಿಗೆ ಅರ್ಧ ನಿಂಬೆರಸ ಹಾಗೂ 1 ಚಮಚ ಬೇಕಿಂಗ್‌ ಸೋಡಾ ಹಾಕಿ ಮಿಕ್ಸ್ ಮಾಡಿ ಕುಡಿದರೆ ಅಜೀರ್ನ ಸಮಸ್ಯೆ ಕಡಿಮೆಯಾಗುವುವುದು.

* ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ ಚಕ್ಕೆ ಪುಡಿ ಹಾಕಿ ಕುಡಿಯುವುದು ಅಥವಾ ಚಕ್ಕೆ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಅಜೀರ್ನ ಸಮಸ್ಯೆ ದೂರವಾಗುವುದು.

ಕೊನೆಯದಾಗಿ:

ಕೊನೆಯದಾಗಿ:

ಒಂದು ವೇಳೆ ಬೇಧಿ ಉಂಟಾದರೆ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಗೂ 2 ಚಮಚ ಸಕ್ಕರೆ ಹಾಕಿ ಮಿಶ್ರ ಮಾಡಿ ಕುಡಿಯಿರಿ. ಇದನ್ನು ಕುಡಿದರೆ ಬೇಧಿ ನಿಲ್ಲುವುದು. ಜೊತೆಗೆ ಬ್ಲ್ಯಾಕ್ ಟೀ ಮಾಡಿ ಕುಡಿಯಿರಿ. ಸಾಕಷ್ಟು ನೀರು ಕುಡಿಯಬೇಕು. ಇಲ್ಲದಿದ್ದರೆ ನಿರ್ಜಲೀಕರಣ ಉಂಟಾಗುವುದು. ಇನ್ನು ತುಂಬಾ ವಾಂತಿ-ಬೇಧಿ ಉಂಟಾದರೆ ತುಂಬಾ ಸುಸ್ತಾಗುವ ಮುನ್ನವೇ ಆಸ್ಪತ್ರೆಗೆ ದಾಖಲಾಗಿ.

English summary

Ways To Maintain A Healthy Gut During Monsoon in kannada

Ways to maintain a healthy gut during monsoon in kannada, read on...
Story first published: Thursday, August 5, 2021, 9:03 [IST]
X
Desktop Bottom Promotion