For Quick Alerts
ALLOW NOTIFICATIONS  
For Daily Alerts

ಕರಿಬೇವನ್ನು ಈ ವಿಧಾನಗಳಲ್ಲಿ ಸೇವಿಸಿದರೆ, ಬಿಪಿ ನಿಯಂತ್ರಣದಲ್ಲಿರುವುದು

|

ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡದಂತಹ ಸಮಸ್ಯೆ ಸಾಮಾನ್ಯವಾಗಿದೆ. ಇಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು, ಜೊತೆಗೆ ಮಾರಕವೂ ಹೌದು. ಆದ್ದರಿಂದ ಇದನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ.

ಈಗ ಚಳಿಗಾಲವಾಗಿರುವುದರಿಂದ ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡ ಇರುವ ರೋಗಿಗಳು ಬಿಪಿ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಇದಕ್ಕೆ ಕರಿಬೇವಿನ ಎಲೆಗಳು ತುಂಬಾ ಉಪಯುಕ್ತವಾಗಿವೆ. ಹಾಗಾದರೆ, ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ರಕ್ತದೊತ್ತಡ ನಿಯಂತ್ರಣಕ್ಕೆ ಕರಿಬೇವಿನ ಎಲೆಗಳನ್ನು ಸೇವಿಸಬೇಕಾದ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ರಕ್ತದೊತ್ತಡ ಅಥವಾ ಬಿಪಿ ಎಂದರೇನು?:

ರಕ್ತದೊತ್ತಡ ಅಥವಾ ಬಿಪಿ ಎಂದರೇನು?:

ರಕ್ತದೊತ್ತಡದ ಕಾಯಿಲೆಯು ಸೈಲೆಂಟ್‌ ಕಿಲ್ಲರ್‌ಆಗಿದ್ದು, ಅಧಿಕ ಮತ್ತು ಕಡಿಮೆ ರಕ್ತದೊತ್ತಡಗಳೆರಡೂ ಜೀವಕ್ಕೆ ಅಪಾಯಕಾರಿ. ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ರಕ್ತದೊತ್ತಡಕ್ಕೆ ಬಲಿಯಾಗಿದ್ದಾರೆ. ಈ ಕಾರಣದಿಂದಾಗಿ ಪ್ರತಿ ವರ್ಷ ಸುಮಾರು 3 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.

ಅಧಿಕ ರಕ್ತದೊತ್ತಡವು ಅಪಧಮನಿಗಳಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುವ ಸ್ಥಿತಿಯಾಗಿದ್ದು, ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡುವುದಾಗಿದೆ. ಸಾಮಾನ್ಯ ರಕ್ತದೊತ್ತಡದ ಮಟ್ಟವು 120/80 ಆಗಿದ್ದು, ಬಿಪಿ ಮಟ್ಟವು ಇದಕ್ಕಿಂತ ಹೆಚ್ಚಾದಾಗ, ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಅದಕ್ಕಿಂತ ಕಡಿಮೆಯಾದಾಗ ಕಡಿಮೆ ಅಥವಾ ಲೋ ಬಿಪಿ ಎಂದು ಕರೆಯುತ್ತಾರೆ.

ಕರಿಬೇವಿನ ಎಲೆಯು ರಕ್ತದೊತ್ತಡ ನಿಯಂತ್ರಣಕ್ಕೆ ಹೇಗೆ ಸಹಕಾರಿ?:

ಕರಿಬೇವಿನ ಎಲೆಯು ರಕ್ತದೊತ್ತಡ ನಿಯಂತ್ರಣಕ್ಕೆ ಹೇಗೆ ಸಹಕಾರಿ?:

ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಬ್ಬಿಣ ಮತ್ತು ತಾಮ್ರ ಸಮೃದ್ಧವಾಗಿದೆ. ಇದರೊಂದಿಗೆ, ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಕಾರ್ಬಜೋಲ್ ಆಲ್ಕಲಾಯ್ಡ್ಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೇ, ಹೃದಯವನ್ನು ರಕ್ಷಿಸುತ್ತದೆ. ಜೊತೆಗೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇವಲ್ಲದೇ, ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ತ್ವಚೆಯು ಕಾಂತಿಯುತವಾಗುವುದರ ಜೊತೆಗೆ ದೃಷ್ಟಿ ಸುಧಾರಣೆಯೂ ಆಗುವುದು.

ರಕ್ತದೊತ್ತಡವನ್ನು ನಿಯಂತ್ರಿಸಲು, ಬಿಪಿ ರೋಗಿಗಳು ಈ 3 ವಿಧಾನಗಳಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸಬೇಕು. ಅವುಗಳೆಂದರೆ:

ರಕ್ತದೊತ್ತಡವನ್ನು ನಿಯಂತ್ರಿಸಲು, ಬಿಪಿ ರೋಗಿಗಳು ಈ 3 ವಿಧಾನಗಳಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸಬೇಕು. ಅವುಗಳೆಂದರೆ:

ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ:

ರಕ್ತದೊತ್ತಡವನ್ನು ನಿಯಂತ್ರಿಸಲು, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಕರಿಬೇವಿನ ಎಲೆಗಳನ್ನು ತೊಳೆದು ಅಗಿಯಬೇಕು. ಹೀಗೆ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಸೂಪ್‌ಗೆ ಸೇರಿಸುವ ಮೂಲಕ:

ಸೂಪ್‌ಗೆ ಸೇರಿಸುವ ಮೂಲಕ:

ಹಾಗೆಯೇ ತಿನ್ನಲು ಇಷ್ಟವಾಗದವರು, ಕೆಲವು ಎಲೆಗಳನ್ನು ಸೂಪ್‌ಗೆ ಸೇರಿಸುವ ಮೂಲಕ ಸೇವಿಸಬಹುದು. ಈ ಮೂಲಕವೂ ರಕ್ತದೊತ್ತಡವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಸಹ ಬಳಸಬಹುದು.

ಕರಿಬೇವಿನ ಎಲೆಯ ನೀರು ಸೇವನೆ:

ಕರಿಬೇವಿನ ಎಲೆಯ ನೀರು ಸೇವನೆ:

ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಕೂಡ ಬಳಸಬಹುದು. ಕರಿಬೇವಿನ ಎಲೆಯ ನೀರು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದನ್ನು ಮಾಡಲು, ಬಾಣಲೆಯಲ್ಲಿ ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಕೆಲವು ಕರಿಬೇವಿನ ಎಲೆಗಳನ್ನು ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಸ್ವಲ್ಪ ತಣ್ಣಗಾದ ನಂತರ ಅದನ್ನು ಸೇವಿಸಿ.

ಹೀಗೆ ಪ್ರತಿನಿತ್ಯ ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಜೊತೆಗೆ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ.

English summary

Ways to eat Curry Leaves to Control Blood Pressure in Kannada

Here we talking about Ways to eat Curry Leaves to Control Blood Pressure in Kannada, read on
Story first published: Monday, December 6, 2021, 10:33 [IST]
X
Desktop Bottom Promotion