For Quick Alerts
ALLOW NOTIFICATIONS  
For Daily Alerts

ಕೋವಿಡ್ ಲಸಿಕೆ ಪಡೆದ ಮಹಿಳೆಯರ ಋತುಚಕ್ರದಲ್ಲಿ ಆಗಿರುವಂತಹ ಬದಲಾವಣೆಗಳಿವು!

|

ಕೋವಿಡ್-19 ಲಸಿಕೆ ಪಡೆದವರಲ್ಲಿ ನಾನಾ ಅಡ್ಡಪರಿಣಾಮಗಳು ಕಂಡುಬಂದರೂ, ಸಾಮಾನ್ಯವಾಗಿ ಮಹಿಳೆಯರು ತಮ್ಮ ಋತುಚಕ್ರದಲ್ಲಿ ಬದಲಾವಣೆಗಳನ್ನು ಅನುಭವಿಸಿದ್ದೇವೆ ಎಂದು ಹೇಳುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತಿದೆ ಈ ಹೊಸ ಅಧ್ಯಯನ. ಅಮೇರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಿಂದ ಧನಸಹಾಯ ಪಡೆದ ಇತ್ತೀಚಿನ ಅಧ್ಯಯನವು , ಲಸಿಕೆ ಹಾಕದ ಮಹಿಳೆಯರಿಗೆ ಹೋಲಿಸಿದರೆ, ಕೋವಿಡ್-19 ಲಸಿಕೆಯನ್ನು ಒಂದು ಡೋಸ್ ಪಡೆದ ಮಹಿಳೆಯರು ಹಲವಾರು ಬದಲಾವಣೆಗಳನ್ನು ಅನುಭವಿಸಿದ್ದಾರಂತೆ. ಅಂತಹ ಬದಲಾವಣೆಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಕೋವಿಡ್ ಲಸಿಕೆ ಮಹಿಳೆಯರ ಋತುಚಕ್ರದ ಮೇಲೆ ಪ್ರಭಾವ ಬೀರಿದ 5 ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ :

ಋತುಚಕ್ರದ ಅವಧಿ:

ಋತುಚಕ್ರದ ಅವಧಿ:

ಒಂದು ಅಧ್ಯಯನದ ಪ್ರಕಾರ, ಕೋವಿಡ್ ಲಸಿಕೆಯ ಮೊದಲ ಶಾಟ್ ಪಡೆದ ಮಹಿಳೆಯರು, ಲಸಿಕೆಯನ್ನು ಪಡೆಯದ ಮಹಿಳೆಯರಿಗಿಂತ ಒಂದು ದಿನ ಹೆಚ್ಚು ಮುಟ್ಟನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ. ಅಂದರೆ ಮೂರು -ನಾಲ್ಕು ದಿನ ಇದ್ದ ರಕ್ತಸ್ರಾವ, ಲಸಿಕೆ ಪಡೆದ ಮೇಲೆ 5 -6ದಿನಗಳವರೆಗೆ ಮುಂದುವರಿಯಬಹುದು ಅಥವಾ ಅದಕ್ಕಿಂತ ಹೆಚ್ಚು ಮುಂದುವರಿಯಬಹುದು.

ಹೆಚ್ಚು ರಕ್ತಸ್ರಾವ :

ಹೆಚ್ಚು ರಕ್ತಸ್ರಾವ :

ಕೋವಿಡ್ ಲಸಿಕೆ ನಂತರ ಮುಟ್ಟಿನಲ್ಲಿ ಆಗುವ ಬದಲಾವಣೆಗಳಲ್ಲಿ ಹೆಚ್ಚು ರಕ್ತಸ್ರಾವ ಕೂಡ ಒಂದು. ಈವರೆಗೆ ಮಿತವಾಗಿದ್ದ ರಕ್ತಸ್ರಾವ ಲಸಿಕೆ ಪಡೆದ ನಂತರ ತೀವ್ರವಾಗಿರುತ್ತದೆ ಅಥವಾ ಸಾಮಾನ್ಯವಾಗಿದ್ದ ರಕ್ತಸ್ರಾವ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಇದೇ ರೀತಿ 30,000 ಕ್ಕೂ ಹೆಚ್ಚು ಮಹಿಳೆಯರು ಚುಚ್ಚುಮದ್ದಿನ ನಂತರ ಮುಟ್ಟಿನ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಅಧ್ಯಯನ ಹೇಳುತ್ತದೆ.

ಮುಟ್ಟು ಮಿಸ್ ಆಗುವುದು:

ಮುಟ್ಟು ಮಿಸ್ ಆಗುವುದು:

ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಲಸಿಕೆ ಪಡೆದ ಸಂದರ್ಭಗಳಲ್ಲಿ ಒಂದು ತಿಂಗಳ ಕಾಲ ಅವಧಿಯನ್ನು ಕಳೆದುಕೊಂಡಿದ್ದಾರೆ. ಲಸಿಕೆ ಪಡೆದ ತಿಂಗಳು ಮುಟ್ಟಾಗದೇ, ಮುಂದಿನ ತಿಂಗಳು ಆಗುವುದು ಅಥವಾ ಅನಿಯಮಿತ ಅಂದರೆ, ತಿಂಗಳು ಬಿಟ್ಟು ತಿಂಗಳು ಮುಟ್ಟಾಗುವುದು, ತಿಂಗಳ ಅಂತರ ಹೆಚ್ಚು -ಕಡಿಮೆ ಆಗುವುದು. ಈ ರೀತಿಯ ಅನೇಕ ಸಮಸ್ಯೆಗಳನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ.

ತೀವ್ರ ಸೆಳೆತ :

ತೀವ್ರ ಸೆಳೆತ :

ಲಸಿಕೆ ತೆಗೆದುಕೊಂಡ ನಂತರ ಅನೇಕ ಮಹಿಳೆಯರು ತೀವ್ರ ಮತ್ತು ಅಸಹನೀಯ ಮುಟ್ಟಿನ ಸೆಳೆತವನ್ನು ಅನುಭವಿಸಿದ್ದಾರೆ. ಜೊತೆಗೆ ಭಾರೀ ರಕ್ತಸ್ರಾವ ಮತ್ತು ತೀವ್ರವಾದ ಸೆಳೆತದ ಬಗ್ಗೆಯೂ ದೂರುಗಳಿವೆ. "ಲಸಿಕೆ ಪಡೆದ ನಂತರದ ಅವಧಿಗಳು ವಿಭಿನ್ನವಾಗಿವೆ. ನನಗೆ ಎಂದಿಗೂ ಸೆಳೆತ ಇರಲಿಲ್ಲ, ಆದರೆ ಈ ಬಾರಿ ಅದು ಅಸಹನೀಯವಾಗಿತ್ತು. ಇದರಿಂದ ಹೊರಬರಲು ಮಾತ್ರೆಯ ಮೊರೆಹೋಗಬೇಕಾಯಿತು. ಇದಕ್ಕೆ ಲಸಿಕೆಯೇ ನೇರ ಕಾರಣ ಎಂಬುದು ತಿಳಿದಿಲ್ಲ. ಆದರೆ ಮುಟ್ಟಿನ ಸಮಯದಲ್ಲಿ ತೀವ್ರವಾದ ಸೆಳೆತವು ಲಸಿಕೆ ಪಡೆದ ನಂತರವೇ ಸಂಭವಿಸಿದ್ದು". ಇದು ಅಧ್ಯಯನಕ್ಕೆ ಮಹಿಳೆ ನೀಡಿದ ಮಾಹಿತಿ.

ಮುಟ್ಟು ನಿಂತವರಲ್ಲಿ ಸಮಸ್ಯೆ:

ಮುಟ್ಟು ನಿಂತವರಲ್ಲಿ ಸಮಸ್ಯೆ:

ಲಸಿಕೆಯು ತಮ್ಮ ಋತುಬಂಧದ ಮೇಲೆ ಪರಿಣಾಮ ಬೀರಿದೆ ಎಂದು ಅನೇಕ ಮಹಿಳೆಯರು ವರದಿ ಮಾಡಿದ್ದಾರೆ. ಮುಟ್ಟು ನಿಲ್ಲುವ ವೇಳೆ ರಕ್ತಸ್ರಾವಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳನ್ನು ಎದುರಿಸಬಹುದು, ಅಥವಾ ಈಗಾಗಲೇ ಮುಟ್ಟು ನಿಂತಿದ್ದರೆ, ಮತ್ತೆ ರಕ್ತಸ್ರಾವ ಶುರುವಾಗಬಹುದು. ಇದು ಮಹಿಳೆಯರ ಆರೋಗ್ಯದ ಮೇಲೆ ಸಾಕಷ್ಟು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ ವೈದ್ಯರಿಂದ ಮೌಲ್ಯಮಾಪನ ಮಾಡಬೇಕು ತಜ್ಞರು ಹೇಳುತ್ತಾರೆ. ಆದ್ದರಿಂದ ನೀವೇನಾದ್ರು ವ್ಯಾಕ್ಸಿನೇಷನ್ ನಂತರ ನಿಮ್ಮ ಋತುಚಕ್ರದಲ್ಲಿ ಯಾವುದೇ ಬದಲಾವಣೆಯನ್ನು ಅನುಭವಿಸಿದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ.

English summary

Ways COVID Vaccine Can Impact Your Menstrual Health in Kannada

Here we talking about Ways COVID Vaccine Can Impact Your Menstrual Health in Kannada, read on
Story first published: Thursday, January 13, 2022, 18:21 [IST]
X
Desktop Bottom Promotion