For Quick Alerts
ALLOW NOTIFICATIONS  
For Daily Alerts

ವಿಟಮಿನ್ ಕೆ ಕೊರತೆ ಉಂಟಾದರೆ ಕಂಡು ಬರುವ ಲಕ್ಷಣಗಳಿವು

|

ನಮ್ಮ ದೇಹ ಸರಿಯಾಗಿ ಕಾರ್ಯ ನಿರ್ವಹಿಸಿಲು ಪ್ರತಿಯೊಂದು ವಿಟಮಿನ್ಸ್ ಅವಶ್ಯಕ. ಯಾವುದೇ ಒಂದು ವಿಟಮಿನ್ ಕೊರತೆ ಉಂಟಾದರೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಲೇಖನದಲ್ಲಿ ವಿಟಮಿನ್ ಕೆ ಕೊರತೆ ಉಂಟಾದರೆ ದೇಹದಲ್ಲಿ ಕಂಡು ಬರುವ ಲಕ್ಷಣಗಳು ಹಾಗೂ ಅದನ್ನು ತಡೆಗಟ್ಟುವುದು ಹೇಗೆ ಎಂದು ಹೇಳಿದ್ದೇವೆ.

Vitamin K Deficiency Causes

ವಿಟಮಿನ್ ಕೆ ದೇಹಕ್ಕೆ ಅವಶ್ಯಕವಾದ ವಿಟಮಿನ್ ಆಗಿದ್ದು, ಇದರಲ್ಲಿ 2 ವಿಧ 1. ವಿಟಮಿನ್ ಕೆ1, ಕೆ2. ಈ ವಿಟಮಿನ್ಸ್ ದೇಹದಲ್ಲಿ ಪ್ರೊಟೀನ್ ಉತ್ಪತ್ತಿ ಮಾಡಿ ಗಾಯವಾದಾಗ ರಕ್ತಸ್ರಾವ ತುಂಬಾ ಆಗುವುದನ್ನು ತಡೆಗಟ್ಟುವಲ್ಲಿ ಸಹಕಾರಿ. ವಿಟಮಿನ್ ಕೆ ಕೊರತೆ ಉಂಟಾದರೆ ರಕ್ತ ಹೆಪ್ಪುಗಟ್ಟದೆ ಅಧಿಕ ರಕ್ತಸ್ರಾವ ಉಂಟಾಗಿ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ವಿಟಮಿನ್ ಕೆ ಅವಶ್ಯಕ.

ದೇಹಕ್ಕೆ ಅಗ್ಯತವಿರುವ ವಿಟಮಿನ್ ಕೆ ಆರೋಗ್ಯಕರ ಆಹಾರದಲ್ಲಿ ದೊರೆಯುತ್ತದೆ. ವಿಟಮಿನ್ ಕೆ ಕಡಿಮೆ ಇರುವ ಆಹಾರ ತಿನ್ನುವುದರಿಂದ ವಿಟಮಿನ್ ಕೆ ಕೊರತೆ ಉಂಟಾಗುವುದು. ವಿಟಮಿನ್ ಕೆ ಕೊರತೆಗೆ ಕಾರಣ ಹಾಗೂ ಅದು ಉಂಟಾದರೆ ದೇಹದಲ್ಲಿ ಕಂಡು ಬರುವ ಲಕ್ಷಣಗಳ ಬಗ್ಗೆ ಈ ಕೆಳಗ್ಗೆ ನೀಡಲಾಗಿದೆ ನೋಡಿ.

ವಿಟಮಿನ್ ಕೆ ಕೊರತೆಗೆ ಕಾರಣಗಳು

ವಿಟಮಿನ್ ಕೆ ಕೊರತೆಗೆ ಕಾರಣಗಳು

* ಆಹಾರಕ್ರಮದಲ್ಲಿ ವಿಟಮಿನ್ ಕೆ ಕೊರತೆ

* ದೇಹವು ಕೊಬ್ಬಿನಂಶವನ್ನು ಹೀರಿಕೊಳ್ಳಲು ಅಸಮರ್ಥವಾದಾಗ

* ದೇಹದ ರಕ್ತ ತೆಳ್ಳಗೆ ಮಾಡುವ warfarinನಂಥ ಮಾತ್ರೆ ತೆಗೆದುಕೊಂಡಾಗ

* ವಿಟಮಿನ್ ಮತ್ತು ವಿಟಮಿನ್ ಇ ಅತ್ಯಧಿಕ ತೆಗೆದುಕೊಂಡಾಗ

* ಕೆಲವು ತಾಯಂದಿರ ಎದೆಹಾಲಿನಲ್ಲಿ ವಿಟಮಿನ್ ಕೆ ಕಡಿಮೆ ಇರುತ್ತದೆ

* ನವಜಾತ ಶಿಶುವಿನ ಜಠರ ಕೆಲವು ದಿನಗಳವರೆಗೆ ವಿಟಮಿನ್ ಕೆ 2 ಉತ್ಪಾದಿಸುವುದಿಲ್ಲ

* ಮಗುವಿನ ಲಿವರ್ ವಿಟಮಿನ್ ಕೆ ಬಳಸಿಕೊಳ್ಳಲು ಅಸಮರ್ಥವಾದಾಗ ವಿಟಮಿನ್ ಕೆ ೊರತೆ ಉಂಟಾಗುವುದು.

ವಿಟಮಿನ್ ಕೆ ಲಕ್ಷಣಗಳು

ವಿಟಮಿನ್ ಕೆ ಲಕ್ಷಣಗಳು

ವಿಟಮಿನ್ ಕೆ ಕೊರತೆಯ ಸಾಮಾನ್ಯ ಲಕ್ಷಣವೆಂದರೆ ರಕ್ತಸ್ರಾವ ನಿಲ್ಲದೇ ಇರುವುದು, ನಂತರ ದೇಹದಲ್ಲಿ ಈ ಲಕ್ಷಣಗಳೂ ಕಂಡು ಬರುತ್ತದೆ.

* ದೇಹದಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಕಲೆಗಳು ಕಂಡು ಬರುವುದು

* ಕಪ್ಪು ಬಣ್ಣದಲ್ಲಿ ಮಲವಿಸರ್ಜನೆ, ಮಲದಲ್ಲಿ ರಕ್ತವೂ ಗೋಚರಿಸುವುದು

* ಉಗುರಿನಲ್ಲಿ ರಕ್ತ ಹೆಪ್ಪುಗಟ್ಟುವುದು

* ಮುಟ್ಟಿನ ಸಮಯದಲ್ಲಿ ಅತ್ಯಧಿಕ ರಕ್ತಸ್ರಾವ

ನವಜಾತ ಶಿಶುಗಳಲ್ಲಿ ವಿಟಮಿನ್ ಕೆ ಕಂಡು ಬಂದರೆ ಕಂಡು ಬರುವ ಲಕ್ಷಣಗಳು

ನವಜಾತ ಶಿಶುಗಳಲ್ಲಿ ವಿಟಮಿನ್ ಕೆ ಕಂಡು ಬಂದರೆ ಕಂಡು ಬರುವ ಲಕ್ಷಣಗಳು

* ಗಂಡು ಮಗುವಾಗಿದ್ದರೆ ಅದರ ಶಿಶ್ನದಲ್ಲಿ ರಕ್ತಸ್ರಾವ ಉಂಟಾಗುವುದು

* ದೇಹದ ಇತರ ಭಾಗಗಳಲ್ಲಿ ಅಂದರೆ ತ್ವಚೆ, ಮೂಗು, ಗುದಧ್ವಾರದಲ್ಲಿ ರಕ್ತಸ್ರಾವ

* ಹೊಕ್ಕುಳ ಬಳ್ಳಿ ಕತ್ತರಿಸಿದ ಜಾಗದಲ್ಲಿ ರಕ್ತಸ್ರಾವ

* ಮೆದುಳಿನಲ್ಲಿ ಇದ್ದಕ್ಕಿದ್ದಂತೆ ರಕ್ತಸ್ರಾವ (ಹೀಗೆ ಉಂಟಾದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ)

ಯಾವ ಮಕ್ಕಳಲ್ಲಿ ವಿಟಮಿನ್ ಕೆ ಕೊರತೆ ಕಂಡು ಬರುವ ಸಾಧ್ಯತೆ ಹೆಚ್ಚು?

ಯಾವ ಮಕ್ಕಳಲ್ಲಿ ವಿಟಮಿನ್ ಕೆ ಕೊರತೆ ಕಂಡು ಬರುವ ಸಾಧ್ಯತೆ ಹೆಚ್ಚು?

1. ಅವಧಿಗೆ ಮುನ್ನ ಹುಟ್ಟುದ ಮಕ್ಕಳಲ್ಲಿ ವಿಟಮಿನ್ ಕೆ ಕಂಡು ಬರುವ ಸಾಧ್ಯತೆ ಇದೆ.

2. ಗರ್ಭಿಣಿ ಅಥವಾ ತಾಯಿ anticoagulants, anti-seizureನಂಥ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಮಗುವಿನಲ್ಲಿ ವಿಟಮಿನ್ ಕೆ ಕೊರತೆ ಉಂಟಾಗುವುದು.

3. ಕೊಬ್ಬು ಹೀರಿಕೊಳ್ಳುವ ಸಾಮಾರ್ಥ್ಯ ಕಡಿಮೆ ಇರುವ ಮಕ್ಕಳಲ್ಲಿ (fat malabsorption) ವಿಟಮಿನ್ ಕೆ ಕೊರತೆ ಉಂಟಾಗುವುದು.

ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟಲು 11ರಿಂದ 13.5 ಸೆಕೆಂಡ್ ತೆಗೆದುಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದರೆ ವಿಟಮಿನ್ ಕೆ ಕೊರತೆ ಉಂಟಾಗಿರುತ್ತದೆ.

ವಿಟಮಿನ್ ಕೆ ಕೊರತೆಗೆ ಚಿಕಿತ್ಸೆ

ವಿಟಮಿನ್ ಕೆ ಕೊರತೆಗೆ ಚಿಕಿತ್ಸೆ

ವಿಟಮಿನ್ ಕೆ ಕೊರತೆಯನ್ನು ಪೈಟೋನಯೊಡಿನ್ , ವಿಟಮಿನ್ ಕೆ1 ಸಪ್ಲಿಮೆಂಟ್ ತೆಗೆದುಕಳ್ಳುವುದರಿಂದ ಕಡಿಮೆಯಾಗುವುದು. ಕೆಲವೊಂದು ಕೇಸ್‌ಗಳಲ್ಲಿ ವೈದ್ಯರು ತ್ವಚೆಗೆ ಚುಚ್ಚುಮದ್ದಿನ ಮೂಲಕ ವಿಟಮಿನ್ ಕೆ ನೀಡುತ್ತಾರೆ.

ವಿಟಮಿನ್ ಕೆ ತಡೆಗಟ್ಟುವುದು ಹೇಗೆ?

ವಿಟಮಿನ್ ಕೆ ತಡೆಗಟ್ಟುವುದು ಹೇಗೆ?

ಹಸಿರು ಸೊಪ್ಪು ತರಕಾರಿಗಳಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಹೆಚ್ಚೆಚ್ಚು ಸೊಪ್ಪು ತರಕಾರಿ ತಿನ್ನುವುದರಿಂದ ವಿಟಮಿನ್ ಕೆ ದೊರೆಯುವುದು. ಪೇರಳೆಹಣ್ಣು, ಹಳದಿ ಕ್ಯಾಪ್ಸಿಕಂ, ಕೆಂಪು ಕ್ಯಾಪ್ಸಿಕಂ, ಕಿವಿ ಹಣ್ಣು, ಬ್ರೊಕೋಲಿ, ಲಿಚಿ, ಪಪ್ಪಾಯಿ, ಸ್ಟ್ರಾಬೆರ್ರಿ, ನಿಂಬೆಹಣ್ಣು,ಅನಾನಾಸ್, ಹೂಕೋಸು, ನೆಲ್ಲಿಕಾಯಿ ಇವುಗಳಲ್ಲಿ ವಿಟಮಿನ್ ಕೆ ಇದೆ.

English summary

Vitamin K Deficiency: Causes, Symptoms,Treatment

There are certain people who are at risk of vitamin K deficiency. Read on to know what causes vitamin K deficiency, its symptoms and how to treat it.
X
Desktop Bottom Promotion