For Quick Alerts
ALLOW NOTIFICATIONS  
For Daily Alerts

ಅಸಿಡಿಟಿ ಹಾಗೂ ಮಲಬದ್ದತೆಯನ್ನು ನಿವಾರಿಸುವ ಯೋಗಾಸನಗಳಿವು

|

ನಿಮ್ಮ ಬೆಳಿಗ್ಗೆ ಹೊಟ್ಟೆನೋವಿನಿಂದ ಪ್ರಾರಂಭವಾಗುತ್ತದೆಯೇ? ಅಸಿಡಿಟಿ ಮತ್ತು ಮಲಬದ್ಧತೆ ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಎರಡು ಸಾಮಾನ್ಯ ಜೀರ್ಣಕಾರಿ ಸಮಸ್ಯೆಗಳು. ಬಹುತೇಕ ಎಲ್ಲರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸಮಸ್ಯೆಗೆ ಒಳಗಾಗುತ್ತಾರೆ. ನಿಮ್ಮ ಅನ್ನನಾಳ ಮತ್ತು ಹೊಟ್ಟೆಯ ನಡುವಿನ ಸ್ನಾಯುಗಳು ಸರಿಯಾಗಿ ಮುಚ್ಚದಿದ್ದಾಗ, ಜೀರ್ಣಕಾರಿ ರಸವು ಅನ್ನನಾಳದಲ್ಲಿ ಸಂಗ್ರಹಗೊಳ್ಳುತ್ತದೆ. ಇದು ಆಗಾಗ್ಗೆ ಸಂಭವಿಸಿದಾಗ, ಇದು ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಗೆ (ಜಿಇಆರ್ಡಿ) ಕಾರಣವಾಗಬಹುದು.

ಹೀಗಿದ್ದಾಗ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಆದರೆ ಕೆಲವು ಜೀವನಶೈಲಿಯ ಬದಲಾವಣೆಗಳ ಜೊತೆಗೆ ದೈನಂದಿನ ಜೀವನದಲ್ಲಿ ಯೋಗವನ್ನು ಸೇರಿಸುವುದರ ಮೂಲಕ ನೀವು ಅಪಾಯವನ್ನು ಕಡಿಮೆ ಮಾಡಬಹುದು. ಯೋಗವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ ಹಾಗೂ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುವ ಹಲವಾರು ಯೋಗ ಭಂಗಿಗಳು ಇದ್ದರೂ, ವಜ್ರಾಸನ ಮತ್ತು ಮಲಸಾನಗಳೆರಡು ನಿಮ್ಮ ಅಸಿಡಿಟಿ ಮತ್ತು ಮಲಬದ್ಧತೆಗಳನ್ನು ನಿವಾರಿಸಬಹುದು. ಅದನ್ನು ಮಾಡುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಅಸಿಡಿಟಿ ಮತ್ತು ಮಲಬದ್ಧತೆಗೆ ವಜ್ರಾಸನ:

ಅಸಿಡಿಟಿ ಮತ್ತು ಮಲಬದ್ಧತೆಗೆ ವಜ್ರಾಸನ:

ಥಂಡರ್ಬೋಲ್ಟ್ ಪೋಸ್ ಎಂದೂ ಕರೆಯಲ್ಪಡುವ ವಜ್ರಾಸನವು ಜನಪ್ರಿಯ ಯೋಗ ಆಸನವಾಗಿದ್ದು ಅದು ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಮ್ಮ ಕಾಲುಗಳು ಮತ್ತು ತೊಡೆಗಳಿಗೆ ರಕ್ತದ ಹರಿವನ್ನು ತಡೆದು, ಅದನ್ನು ಹೊಟ್ಟೆಗೆ ನಿರ್ದೇಶಿಸುತ್ತದೆ. ಇದು ಆಹಾರದ ಚಲನೆಯನ್ನು ಸುಧಾರಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ಪೋಷಕಾಂಶಗಳ ಉತ್ತಮ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸಿ, ಆಮ್ಲೀಯತೆ ಅಥವಾ ಅಸಿಡಿಟಿಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಹೇಗೆ ಮಾಡುವುದು?:

ಹೇಗೆ ಮಾಡುವುದು?:

ಮೊದಲು ನೇರವಾಗಿ ಕುಳಿತುಕೊಳ್ಳಿ. ಎರಡು ಕಾಲುಗಳನ್ನೂ ಮುಂದೆ ಚಾಚಿ ಬೆನ್ನು ನೇರ ಮಾಡಿ ಕುಳಿತುಕೊಳ್ಳಿ. ಈಗ ಬಲಗಾಲನ್ನು ಹಿಂದೆ ತೆಗೆದುಕೊಳ್ಳಿ. ಎಡಗಾಲನ್ನು ಹಿಂದೆ ತೆಗೆದುಕೊಳ್ಳಿ. ಎರಡು ಹಿಮ್ಮಡಿಗಳನ್ನು ಸೇರಿಸಿ ಗುದದ್ವಾರದ ಭಾಗಕ್ಕೆ ಎರಡು ಹಿಮ್ಮಡಿಗಳು ಬರುವ ರೀತಿಯಲ್ಲಿ ಇಟ್ಟುಕೊಳ್ಳಿ. ಎರಡು ಮಂಡಿಗಳನ್ನು ಸೇರಿಸಿ. ಮಂಡಿಯ ಕೆಳಭಾಗದಲ್ಲಿರುವ ಚರ್ಮವನ್ನು ಮೇಲಕ್ಕೆ ಬರುವ ರೀತಿಯಲ್ಲಿ ಎಳೆದುಕೊಂಡು ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳಿ. ಪಕ್ಕೆಲುಬಿನ ಭಾಗವನ್ನು ಹಿಗ್ಗಿಸಿ. ಎದೆಯನ್ನು ಮೇಲಕ್ಕೆತ್ತಿ ಭುಜಗಳನ್ನು ಕೆಳಗಿಳಿಸಿ. ಬೆನ್ನು ನೇರ ಇರಬೇಕು. ದೃಷ್ಟಿಯೂ ನೇರವಾಗಿರಬೇಕು. ಎರಡು ಕೈಗಳನ್ನು ಧ್ಯಾನ ಮುದ್ರೆ ಅಥವಾ ಚಿನ್ಮುದ್ರೆ ಅಥವಾ ಎರಡು ಮಂಡಿಗಳ ಮೇಲೆ ಕೈಗಳನ್ನು ಇಟ್ಟುಕೊಳ್ಳಬಹುದು. ನಂತರ ನಿಧಾನವಾಗಿ ಬಲಗಾಲು ಆಮೇಲೆ ಎಡಗಾಲನ್ನು ಮುಂದೆ ತೆಗೆದುಕೊಂಡು ಕೈಗಳನ್ನು ಹಿಂದೆ ನೆಲಕ್ಕೆ ಊರಿ ವಿಶ್ರಾಂತಿ ಪಡೆಯಿರಿ.

ಆಮ್ಲೀಯತೆ ಮತ್ತು ಮಲಬದ್ಧತೆಗೆ ಮಾಲಾಸನ:

ಆಮ್ಲೀಯತೆ ಮತ್ತು ಮಲಬದ್ಧತೆಗೆ ಮಾಲಾಸನ:

ಮಾಲಾಸನ ನಿಮ್ಮ ಸೊಂಟ ಮತ್ತು ತೊಡೆಸಂದು ತೆರೆಯುವಂತೆ ಮಾಡಿ, ನಿಮ್ಮ ಚಲನಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ನೋವನ್ನು ತಡೆಯುತ್ತದೆ. ಸ್ಕ್ವಾಟ್ ಅಥವಾ ಗಾರ್ಲ್ಯಾಂಡ್ ಭಂಗಿಯ ಮುಖ್ಯ ಉದ್ದೇಶವೆಂದರೆ ಇದು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದರ ಜೊತೆಗೆ ತೊಡೆಸಂದು, ಪಾದದ ಮತ್ತು ಹಿಪ್ ನ್ನು ವಿಸ್ತರಿಸುತ್ತದೆ. ಇದು ಕರುಳನ್ನು ವಿಶ್ರಾಂತಿ ಮತ್ತು ಹಿಗ್ಗಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಹೇಗೆ ಮಾಡುವುದು:

ಹೇಗೆ ಮಾಡುವುದು:

ಕಾಲುಗಳನ್ನು ಹಾಗೆ ಹಿಂದಕ್ಕೆ ತನ್ನಿ ಮತ್ತು ಪಾದಗಳ ಮೇಲೆ ಕುಳಿತುಕೊಳ್ಳಿ. ಪಾದಗಳು ನೆಲದ ಮೇಲಿರಲಿ. ಮೊಣಕಾಲನ್ನು ಹಾಗೆ ಮಡಚಿ ಮತ್ತು ಬೆನ್ನು ನೇರವಾಗಿ ಇರಲಿ. ತೊಡೆಗಳನ್ನು ದೂರ ಮಾಡಿಕೊಂಡು ಉಸಿರು ಬಿಡಿ. ತೊಡೆಯ ಮಧ್ಯೆ ಹಣೆಯು ನಿಲ್ಲುವಂತೆ ಮಾಡಿ. ನಮಸ್ಕಾರ ಮಾಡುವ ರೀತಿ ಕುಳಿತುಕೊಳ್ಳಿ. ಪ್ರಾರ್ಥನೆಯ ಭಂಗಿಗೆ ಬನ್ನಿ ಮತ್ತು ಅಂಗೈಗಳನ್ನು ಜೋಡಿಸಿ. ಮೊಣಕೈಗಳನ್ನು ನೆಲಕ್ಕೂರಿ ಮೊಣಕಾಲಿನ ಹಿಂಭಾಗಕ್ಕೆ ಎತ್ತಿಕೊಳ್ಳಿ. ಇದರಿಂದ ಹಣೆಯು ಬಲವಾಗುವುದು.

ಉಸಿರು ಬಿಡಿ. ಈಗ ಹಣೆಯ ಭಾಗಕ್ಕೆ ಒಳಭಾಗದ ತೊಡೆಗಳನ್ನು ಒತ್ತಿ ಮತ್ತು ಕೈಗಳನ್ನು ಮುಂದಕ್ಕೆ ಮಾಡಿ.

ಒಂದು ನಿಮಿಷ ಕಾಲ ಹಾಗೆ ಇರಿ. ನಿಮಗೆ ಸ್ವಲ್ಪ ಅಹಿತರವೆನಿಸಬಹುದು. ಕಾಲು ಮತ್ತು ತೊಡೆಯ ಭಾಗದಲ್ಲಿ ನೋವು ಕಂಡುಬರಬಹುದು. ಆರಾಮ ಮಾಡಿ ಮತ್ತು ಸ್ವಲ್ಪ ಕುಳಿತುಕೊಳ್ಳಿ. ನಿಮಗ ಅಗತ್ಯವಿರುವಷ್ಟು ಸಲ ಇದನ್ನು ಪುನರಾವರ್ತಿಸಿ.

ನೀವು ಇದನ್ನು ದಿನಕ್ಕೆ ಹತ್ತು ನಿಮಿಷ ಮಾಡಬಹುದು. ಕಾಲುಗಳು ಬಲಿಷ್ಠವಾಗಿದ್ದರೆ ಆಗ ನೀವು ಬಲಶಾಲಿ ಹಾಗೂ ಸಂತೋಷವಾಗಿ ಇರಬಹುದು.

ಆಮ್ಲೀಯತೆ ಮತ್ತು ಮಲಬದ್ಧತೆಯನ್ನು ನಿರ್ವಹಿಸಲು ಸಹಾಯ ಮಾಡುವ ಇತರ ಕೆಲವು ವಿಧಾನಗಳು:

ಆಮ್ಲೀಯತೆ ಮತ್ತು ಮಲಬದ್ಧತೆಯನ್ನು ನಿರ್ವಹಿಸಲು ಸಹಾಯ ಮಾಡುವ ಇತರ ಕೆಲವು ವಿಧಾನಗಳು:

  • ಫೈಬರ್ ಅಧಿಕವಾಗಿರುವ ಆಹಾರವನ್ನು ಸೇವಿಸಿ ಏಕೆಂದರೆ ಅವುಗಳು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.
  • ಫೈಬರ್ ತಿನ್ನುವುದರ ಜೊತೆಗೆ ಹೆಚ್ಚಿನ ದ್ರವಯುಕ್ತ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ಮಲವು ಸುಲಭವಾಗಿ ಹಾದುಹೋಗಲು ಸಹಾಯ ಮಾಡುತ್ತದೆ.
  • ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸಲು ಧೂಮಪಾನವನ್ನು ತಪ್ಪಿಸಿ
  • ಆಮ್ಲವನ್ನು ರಿಫ್ಲಕ್ಸ್ ಆಗದಂತೆ ನೋಡಿಕೊಳ್ಳಲು ತಿನ್ನುವ ನಂತರ ಕನಿಷ್ಠ 3 ಗಂಟೆಗಳ ಕಾಲ ಕುಳಿತುಕೊಳ್ಳಿ
  • ಮಸಾಲೆಯುಕ್ತ ಅಥವಾ ಜಿಡ್ಡಿನ ಆಹಾರವನ್ನು ತಪ್ಪಿಸಿ ಏಕೆಂದರೆ ಅವುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು
English summary

Vajrasana And Malasana Yoga Poses To Relieve Acidity And Constipation

Here we told about Vajrasana and Malasana Yoga Poses to Relieve Acidity and Constipation, read on
Story first published: Saturday, March 20, 2021, 16:21 [IST]
X
Desktop Bottom Promotion