For Quick Alerts
ALLOW NOTIFICATIONS  
For Daily Alerts

ಟೈಪ್‌ 2 ಮಧುಮೇಹ: ಇದು ಪುರುಷ ಹಾಗೂ ಮಹಿಳೆಯರಲ್ಲಿ ಹೇಗೆ ಭಿನ್ನವಾಗಿರುತ್ತದೆ?

|

ಟೈಪ್ 2 ಮಧುಮೇಹ ವಯಸ್ಸಿನ , ಲಿಂಗದ ಬೇಧವಿಲ್ಲದೆ ಬರುವ ಜೀವನಶೈಲಿ ಸಂಬಂಧಿಸಿದ ಸಮಸ್ಯೆಯಾಗಿದೆ. ನಮ್ಮ ದೇಶದಲ್ಲಿ ಸುಮಾರು 77ಮಿಲಿಯನ್‌ಗಿಂತಲೂ ಹೆಚ್ಚು ಜನರಲ್ಲಿ ಮಧುಮೇಹದ ಸಮಸ್ಯೆಯಿದೆ.

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದಾಗ ಮಧುಮೇಹ ಉಂಟಾಗುವುದು. ಮಧುಮೇಹ ಬಂದಾಗ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಇದರಿಂದ ಉರಿಯೂತದ ಸಮಸ್ಯೆ ಉಂಟಾಗುವುದು. ಮಧುಮೇಹದ ಸಮಸ್ಯೆ ಪುರುಷರಿಗೂ ಬರುತ್ತದೆ, ಮಹಿಳೆಯರಿಗೂ ಬರುತ್ತದೆ, ಆದರೆ ಈ ಕಾಯಿಲೆ ಪುರುಷ ಹಾಗೂ ಮಹಿಳೆಯ ದೇಹದಲ್ಲಿ ತರುವ ಸಮಸ್ಯೆಗಳು ಭಿನ್ನವಾಗಿರುತ್ತೆ, ಅದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ:

ಯಾರಿಗೆ ಅಪಾಯ ಹೆಚ್ಚು?

ಯಾರಿಗೆ ಅಪಾಯ ಹೆಚ್ಚು?

ಅಧ್ಯಯನಗಳ ಪ್ರಕಾರ ಮಹಿಳೆಯರಿಗೆ ಪುರುಷರಿಗೆ ಈ ಮಧುಮೇಹದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ ಪುರುಷರಲ್ಲಿ ಟೆಸ್ಟೋಸ್ಟಿರೋನೆ ಹಾಗೂ ಆಂಡ್ರೊಜೆನ್ ಹಾರ್ಮೋನ್‌ ಹದಿ ವಯಸ್ಸಿನಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ. ಟೆಸ್ಟೋಸ್ಟಿರೋನೆ ಪುರುಷರಲ್ಲಿ ಸ್ನಾಯುಗಳು ಬೆಳೆಯಲಾರಂಭಿಸುತ್ತದೆ, ಗಡ್ಡ-ಮೀಸೆ ಬರಲಾರಂಭಿಸುತ್ತದೆ. ಈ ಹಾರ್ಮೋನ್‌ಗಳು ಪುರುಷರ ಬದುಕಿನಲ್ಲಿ ತುಂಬಾನೇ ಪ್ರಮುಖ ಪಾತ್ರವಹಿಸುತ್ತದೆ, ಈ ಹಾರ್ಮೋನ್‌ ವೀರ್ಯ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಹಾರ್ಮೋನ್‌ ಪುರುಷರ ಒಳಾಂಗದಲ್ಲಿ ಕೊಬ್ಬು ಶೇಖರವಾಗುವಂತೆ ಮಾಡುವುದು. ಈ ಕೊಬ್ಬು ಪುರುಷ ಅಂಗದ ಸುತ್ತ ಸಂಗ್ರಹವಾಗಿ ಚಯಪಚಯದಲ್ಲಿ ತೊಂದರೆ ಉಂಟು ಮಾಡುತ್ತದೆ. ಈ ಕೊಬ್ಬು ಪುರುಷರಲ್ಲಿ ಟೈಪ್‌ 2 ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅನೇಕ ಅಧ್ಯಯನಗಳು ಇವೆ.

ಮಹಿಳೆಯರಲ್ಲೂ ಸ್ವಲ್ಪ ಪ್ರಮಾಣದಲ್ಲಿ ಟೆಸ್ಟೋಸ್ಟಿರೋನೆ ಹಾರ್ಮೋನ್‌ ಇರುತ್ತದೆ, ಆದರೆ ಇದು ಅವರಲ್ಲಿ ಹಾರ್ಮೋನ್‌ ಸಮತೋಲನಕ್ಕೆ ಸಹಕಾರಿಯಾಗಿದೆ.

ಪುರುಷ ಹಾಗೂ ಮಹಿಳೆಯರಲ್ಲಿ ಮಧುಮೇಹದ ಲಕ್ಷಣಗಳಲ್ಲಿಯೂ ವ್ಯತ್ಯಾಸ ಟೈಪ್‌ 2 ಮಧುಮೇಹ ಬಂದಾಗ ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು

ಪುರುಷ ಹಾಗೂ ಮಹಿಳೆಯರಲ್ಲಿ ಮಧುಮೇಹದ ಲಕ್ಷಣಗಳಲ್ಲಿಯೂ ವ್ಯತ್ಯಾಸ ಟೈಪ್‌ 2 ಮಧುಮೇಹ ಬಂದಾಗ ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು

* ವಿಪರೀತ ಬಾಯಾರಿಕೆ

* ಆಗಾಗ ಮೂತ್ರವಿಸರ್ಜನೆ

* ತಲೆಸುತ್ತು

* ಸುಸ್ತು

* ತೂಕ ಇಳಿಕೆ

(ಈ ಲಕ್ಷಣಗಳು ಪುರುಷ ಹಾಗೂ ಮಹಿಳೆಯರಲ್ಲಿ ಕಂಡು ಬರುವುದು)

ಪುರುಷರಲ್ಲಿ ಕಂಡು ಬರುವ ಲಕ್ಷಣಗಳು: ಸಾಮಾನ್ಯ ಲಕ್ಷಣಗಳ ಜೊತೆಗೆ ಪುರುಷರಲ್ಲಿ ಸ್ನಾಯುಗಳು ಕಡಿಮೆಯಾಗುವುದು, ಶಿಷ್ನದಲ್ಲಿ ನೋವು, ತುರಿಕೆ ಕಂಡು ಬರುವುದು.

ಮಹಿಳೆಯರಲ್ಲಿ ಕಂಡು ಬರುವ ಲಕ್ಷಣಗಳು: ಮಹಿಳೆಯರಲ್ಲಿ ಜನನಾಂಗದಲ್ಲಿ ಯೀಸ್ಟ್ ಸೋಂಕು, ಮೂತ್ರ ಸೋಂಕು, ಪಿಸಿಒಎಸ್‌ ಸಮಸ್ಯೆ ಕಂಡು ಬರುವುದು.

ಇವುಗಳ ಜೊತೆಗೆ ಟೈಪ್‌ 2 ಮಧುಮೇಹವಿದ್ದರೆ ನರಗಳಿಗೆ ಸಂಬಂಧಿಸಿದ ಸಮಸ್ಯೆ, ಕಣ್ಣಿನ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಉಂಟಾಗುವುದು.

ಯಾರಲ್ಲಿ ಹೆಚ್ಚು ಸಮಸ್ಯೆ ಕಂಡು ಬರುವುದು ?

ಯಾರಲ್ಲಿ ಹೆಚ್ಚು ಸಮಸ್ಯೆ ಕಂಡು ಬರುವುದು ?

ಮಧುಮೇಹ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವುದಾದರೂ ಮಧುಮೇಹದ ಅಪಾಯ ಮಹಿಳೆಯರಲ್ಲಿ ಅಧಿಕ. ಮಹಿಳೆಯರಿಗೆ ಒಮ್ಮೆ ಮಧುಮೇಹ ಬಂದರೆ ಅವರಲ್ಲಿ ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ, ಪಾರ್ಶ್ವವಾಯು, ಖಿನ್ನತೆ, ಉದ್ವೇಗ ಈ ರೀತಿಯ ತೊಂದರೆಗಳು ಕಂಡು ಬರುವುದು.

ಮಧುಮೇಹಿಗಳಿಗೆ ತುಂಬಾ ಅಪಾಯಕಾರಿಯಾದ ಕೋವಿಡ್ 19

ಮಧುಮೇಹಿಗಳಿಗೆ ತುಂಬಾ ಅಪಾಯಕಾರಿಯಾದ ಕೋವಿಡ್ 19

ಕೋವಿಡ್‌ 19 ಸಮಯದಲ್ಲಿ ಈ ಕಾಯಿಲೆ ಮಧುಮೇಹಿಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಮಧುಮೇಹಿಗಳಲ್ಲಿ ಕೊರೊನಾ ತಗುಲಿದರೆ ರೋಗ ಲಕ್ಷಣಗಳು ತುಂಬಾ ಗಂಭೀರವಾಗುವುದು. ಇನ್ನು ಬ್ಲ್ಯಾಕ್‌ ಫಂಗಸ್‌ ಸಮಸ್ಯೆ ಕೂಡ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಮಧುಮೇಹ ಬಾರದಂತೆ ತಡೆಗಟ್ಟುವುದು ಹೇಗೆ?

ಮಧುಮೇಹ ಬಾರದಂತೆ ತಡೆಗಟ್ಟುವುದು ಹೇಗೆ?

* ಸಕ್ಕರೆ ಕಡಿಮೆ ಬಳಸಿ, ಕಾರ್ಬ್ಸ್‌ ಆಹಾರ ಮಿತಿಯಲ್ಲಿ ಸೇವಿಸಿ.

* ಪ್ರತಿದಿನ ವ್ಯಾಯಾಮ ಮಾಡಿ

* ಸಾಕಷ್ಟು ನೀರು ಕುಡಿಯಿರಿ

* ಮೈ ತೂಕ ಹೆಚ್ಚಾದರೆ ಕಡಿಮೆ ಮಾಡಿ

* ಧೂಮಪಾನ ಚಟವಿದ್ದರೆ ಬಿಡಿ

* ತೂಕದ ಬಗ್ಗೆ ಗಮನವಿರಲಿ

* ಒಂದೇ ಕಡೆ ತುಂಬಾ ಹೊತ್ತು ಕೂರಬೇಡಿ

* ನಾರಿನಂಶವಿರುವ ಆಹಾರ ಹೆಚ್ಚು ಸೇವಿಸಿ.

* ವಿಟಮಿನ್ ಡಿ ಸಾಕಷ್ಟು ಪಡೆಯಿರಿ

* ಸಂಸ್ಕರಿಸಿದ ಆಹಾರದಿಂದ ದೂರವಿರಿ

* ಕಾಫಿ, ಟೀ ಮಿತಿಯಲ್ಲಿ ಕುಡಿಯಿರಿ.

English summary

Type 2 Diabetes: How Is It Different For Men And Women in Kannada

Type 2 diabetes: How is it different for men and women, read on,
Story first published: Friday, June 25, 2021, 17:42 [IST]
X
Desktop Bottom Promotion