For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಯೋನಿಯ ಸೋಂಕು ಬರದಂತೆ ತಡೆಗಟ್ಟಲು ಈ ಸಲಹೆಗಳನ್ನು ಪಾಲಿಸಿ

|

ಯೋನಿಯ ಆರೋಗ್ಯ ಹದಗೆಟ್ಟಿದೆ ಎಂಬುದರ ಸೂಚನೆಯೇ ಯೋನಿಯ ಸೋಂಕು. ಆದರೆ ಮಳೆಗಾಲದಲ್ಲಿ ಶೀತ ತಾಪಮಾನ ಮತ್ತು ಹೆಚ್ಚಿದ ತೇವಾಂಶದಿಂದಾಗಿ ಈ ಸೋಂಕು ಹೆಚ್ಚು ಕಾಣಸಿಗುತ್ತದೆ. ಏಕೆಂದರೆ ವಾತಾವರಣದಲ್ಲಿನ ಬದಲಾವಣೆಗಳು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತವೆ. ಆದ್ದರಿಂದ, ಮಳೆಗಾಲದಲ್ಲಿ ಯೋನಿ ಸೋಂಕನ್ನು ತಡೆಗಟ್ಟಿ, ಆರೋಗ್ಯವಾಗಿರುವುದು ತುಂಬಾ ಮುಖ್ಯವಾಗಿದೆ.

vaginal

ಮಳೆಗಾಲದಲ್ಲಿ ಯೋನಿ ಸೋಂಕನ್ನು ತಡೆಗಟ್ಟಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಯೋನಿಯ ಸೋಂಕು ಎಂದರೇನು?:

ಯೋನಿಯ ಸೋಂಕು ಎಂದರೇನು?:

ಮಳೆಗಾಲದಲ್ಲಿ ಉಂಟಾಗುವ ಹಠಾತ್ ತಾಪಮಾನದ ಏರಿಳಿತವು ರೋಗ ನಿರೋಧಕ ಶಕ್ತಿಯನ್ನು ಕಡಿಮೆಮಾಡುವುದಲ್ಲದೇ, ಮಹಿಳೆಯರನ್ನು ಮೂತ್ರದ ಸೋಂಕು, ಯೋನಿ ನಾಳದ ಉರಿಯೂತ, ಯೋನಿಯಲ್ಲಿ ತುರಿಕೆ ಮತ್ತು ಕಿರಿಕಿರಿ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಬಿಳಿಮುಟ್ಟು ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆ ಮುಂತಾದ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತದೆ. ಇವೆಲ್ಲವನ್ನು ಒಟ್ಟಾಗಿ ಯೋನಿ ಸೋಂಕುಗಳೆಂದು ಕರೆಯಲಾಗುವುದು. ಈ ಕಾಲದಲ್ಲಿ ಹೆಚ್ಚಿದ ತೇವಾಂಶವು ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಯೀಸ್ಟ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆದರೆ, ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ, ಮಹಿಳೆಯರು ಯೋನಿ ಸೋಂಕಿನಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು.

ಚರ್ಮ-ಸ್ನೇಹಿ ಮತ್ತು ಸಡಿಲವಾದ ಒಳ ಉಡುಪು ಧರಿಸಿ:

ಚರ್ಮ-ಸ್ನೇಹಿ ಮತ್ತು ಸಡಿಲವಾದ ಒಳ ಉಡುಪು ಧರಿಸಿ:

ನಿಮ್ಮ ಚರ್ಮಕ್ಕೆ ಉತ್ತಮವಾಗಿರುವಂತಹ ಹಾಗೂ ಸಡಿಲವಾದ ಒಳುಡುಪು ಧರಿಸುವುದು ಯೋನಿ ಸೋಂಕು ತಡೆಯಲು ಇರುವ ಪ್ರಮುಖ ಮಾರ್ಗವಾಗಿದೆ. ಇದರಿಂದ ನಿಮ್ಮ ಯೋನಿಯು ಆರೋಗ್ಯಕರವಾಗಿಲು ಸಹಾಯ ಮಾಡುತ್ತದೆ. ಬಿಗಿಯಾದ ಒಳ ಉಡುಪು ಗಾಳಿಯ ಹರಿವನ್ನು ಕಡಿಮೆ ಮಾಡುತ್ತದೆ, ದದ್ದುಗಳು ಮತ್ತು ಕಿರಿಕಿರಿ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಸಡಿಲವಾದ ಒಳ ಉಡುಪು ನಿಮ್ಮ ಯೋನಿಯು ಒಣಗಲು ಸಹಾಯ ಮಾಡುತ್ತದೆ, ಇದರಿಂದ ಯಾವುದೇ ಬ್ಯಾಕ್ಟೀರಿಯಾ ಬೆಳವಣಿಗೆಯಾಗುವುದಿಲ್ಲ, ಜೊತೆಗೆ ಗಾಳಿಯಾಡಲು ಅವಕಾಶ ದೊರೆಯುತ್ತದೆ.

ಕಾಲಕಾಲಕ್ಕೆ ಯೋನಿಯನ್ನು ಸ್ವಚ್ಛಗೊಳಿಸಿ:

ಕಾಲಕಾಲಕ್ಕೆ ಯೋನಿಯನ್ನು ಸ್ವಚ್ಛಗೊಳಿಸಿ:

ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಯೋನಿಯ ಪಿಹೆಚ್ ಮಟ್ಟ ಕಡಿಮೆಯಾಗುತ್ತದೆ. ಇದು ಮಹಿಳೆಯರನ್ನು ಯೋನಿ ಸೋಂಕಿಗೆ ಒಳಗಾಗುವಂತೆ ಮಾಡುತ್ತದೆ. ಯೋನಿಯನ್ನು ಆಗಾಗ್ಗೆ ಸ್ವಚ್ಛಗೊಳಿಸುವುದರಿಂದ ಬ್ಯಾಕ್ಟೀರಿಯಾದ ಸೋಂಕು ಮತ್ತು ದುರ್ವಾಸನೆಯಿಂದ ಮುಕ್ತವಾಗಿರಲು ಸಹಾಯ ಆಗುವುದು. ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಖಾಸಗಿ ಭಾಗಕ್ಕೆ ಬಳಸಬೇಡಿ ಅವು ಚರ್ಮಕ್ಕೆ ಕಿರಿಕಿರಿ ಉಂಟು ಮಾಡಿ , ತುರಿಕೆಗೆ ಕಾರಣವಾಗಬಹುದು.

ಸಾಕಷ್ಟು ನೀರು ಕುಡಿಯಿರಿ:

ಸಾಕಷ್ಟು ನೀರು ಕುಡಿಯಿರಿ:

ಮಳೆಗಾಲವು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮಳೆಗಾಲದಲ್ಲಿ ದೇಹದ ನೀರಿನಾಂಶ ಮತ್ತು ಉಪ್ಪನ್ನು ಬೇಗ ಕಳೆದುಕೊಳ್ಳುತ್ತಾರೆ. ಇದು ಯೋನಿಯಲ್ಲಿ ಕಿರಿಕಿರಿ ಮತ್ತು ಉರಿಯಾದ ಭಾವನೆಯನ್ನು ಅನುಭವಿಸುವಂತೆ ಮಾಡಬಹುದು. ಆದ್ದರಿಂದ ಸಾಕಷ್ಟು ನೀರು ಕುಡಿಯುವುದರ ಮೂಲಕ ನಿಮ್ಮನ್ನು ಹೈಡ್ರೀಕರಿಸುವುದು ಬ್ಯಾಕ್ಟೀರಿಯಾದ ಸಮತೋಲನ ಮತ್ತು ಆರೋಗ್ಯಕರ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಮೂಲಕ ಯೋನಿ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಿ:

ಮಸಾಲೆಯುಕ್ತ ಆಹಾರಗಳನ್ನು ತಪ್ಪಿಸಿ:

ಮಳೆಗಾಲದಲ್ಲಿ ಸಾಮಾನ್ಯವಾಗಿ ಮಸಾಲೆಯುಕ್ತ ಆಹಾರಗಳೇ ಇಷ್ಟವಾಗೋದು. ಆದರೆ ಮಸಾಲೆಯುಕ್ತ ಆಹಾರಗಳು ಯೋನಿಯಲ್ಲಿ ಉರಿಯಾದ ಸಂವೇದನೆಯನ್ನು ಉಂಟುಮಾಡಬಹುದು. ಮಸಾಲೆಯುಕ್ತ ಆಹಾರವನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಯೋನಿಯ ಪಿಹೆಚ್ ಮಟ್ಟವು ಸಹ ಶಿಲೀಂಧ್ರಗಳ ಸೋಂಕಿನ ಅಪಾಯವನ್ನುಂಟು ಮಾಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಮಸಾಲೆಯುಕ್ತ ಆಹಾರ ಕಡಿಮೆ ಮಾಡಿ, ನಿಮ್ಮ ಯೋನಿಯ ಬಗ್ಗೆ ಕಾಳಜಿ ವಹಿಸಿ ಮತ್ತು ಆರೋಗ್ಯವಾಗಿರಿ.

English summary

Tips to Prevent Vaginal Infections During the Monsoon in Kannada

Here we talking about Tips to Prevent Vaginal Infections During the Monsoon in Kannada, read on
Story first published: Monday, July 19, 2021, 18:22 [IST]
X
Desktop Bottom Promotion