For Quick Alerts
ALLOW NOTIFICATIONS  
For Daily Alerts

ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಂಡವರು ಈ ವಿಚಾರಗಳನ್ನು ನೆನಪಿನಲ್ಲಿಡಿ

|

ಹಲ್ಲುಗಳನ್ನು ಒಂದು ನಿರ್ದಿಷ್ಟ ಸ್ಥಾನದಲ್ಲಿ ಇರಿಸಲು ಕ್ಲಿಪ್ ಹಾಕುತ್ತಾರೆ. ಆದರೆ ಇಂತಹ ಕ್ಲಿಪ್ ಹಾಕಿದ ಹಲ್ಲುಗಳನ್ನು ನೋಡಿಕೊಳ್ಳಲು ಸಾಕಷ್ಟು ಕಾಳಜಿ ಮತ್ತು ತಾಳ್ಮೆ ಅಗತ್ಯ. ಏಕೆಂದರೆ ನಾವು ತಿಂದ ಆಹಾರಗಳು ಆ ಕ್ಲಿಪ್ ಸಂದಿಯಲ್ಲಿ ಅಥವಾ ಹಲ್ಲುಗಳ ಸಂದಿಯಲ್ಲಿ ಸಿಲುಕಿಹಾಕಿಕೊಳ್ಳುತ್ತವೆ. ಇದು ಒಸಡಿನ ಸಮಸ್ಯೆಗಳು, ಹಲ್ಲು ಹುಳಹಿಡಿಯುವಿಕೆ, ಬಾಯಿಯ ದುರ್ವಾಸನೆ ಇತ್ಯಾದಿಗಳಿಗೆ ಕಾರಣವಾಗಬಹುದು.

ಆದ್ದರಿಂದ, ನೀವು ಈ ಕ್ಲಿಪ್ ಹಾಕಿಕೊಂಡಿದ್ದರೆ, ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಹಲ್ಲುಗಳನ್ನು ಪರಿಣಾಮಕಾರಿಯಾಗಿ ನೋಡಿಕೊಳ್ಳಲು ನೀವು ಅನುಸರಿಸಬಹುದಾದ ಕೆಲವು ಸುಲಭ ಸಲಹೆಗಳು ಇಲ್ಲಿವೆ.

ಹಲ್ಲಿಗೆ ಕ್ಲಿಪ್ ಹಾಕಿದ್ದಾಗ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಈ ಆಹಾರ ಸೇವಿಸಬೇಡಿ:

ಈ ಆಹಾರ ಸೇವಿಸಬೇಡಿ:

ನಿಮ್ಮ ಹಲ್ಲಿಗೆ ಕ್ಲಿಪ್ ಹಾಕಿದ್ದರೆ, ಕೆಲವು ಆಹಾರ ತಿನ್ನುವ ತಪ್ಪಿಸಲು ಮಾಡಬೇಕು. ಇವುಗಳಲ್ಲಿ ಕ್ಯಾಂಡಿ, ಪಾಪ್‌ಕಾರ್ನ್ ಮುಂತಾದ ಗಟ್ಟಿಯಾದ ಆಹಾರ ಪದಾರ್ಥಗಳು ಸೇರಿವೆ. ಈ ಆಹಾರ ಪದಾರ್ಥಗಳು ನಿಮ್ಮ ಹಲ್ಲುಗಳಿಗೆ ಅಂಟಿಕೊಳ್ಳುತ್ತವೆ ಮತ್ತು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ.

ನಿಯಮಿತವಾಗಿ ಹಲ್ಲುಜ್ಜಿ:

ನಿಯಮಿತವಾಗಿ ಹಲ್ಲುಜ್ಜಿ:

ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹಲ್ಲುಜ್ಜುವುದು ಮುಖ್ಯ, ವಿಶೇಷವಾಗಿ ನೀವು ಕ್ಲಿಪ್ ಧರಿಸಿದಾಗ. ಪ್ರತಿ ಊಟದ ನಂತರ ಬ್ರಷ್ ಮಾಡಿ. ಆಹಾರ ಸೇವಿಸಿದ ನಂತರ ಕ್ಲಿಪ್ ತಂತಿಗಳ ನಡುವೆ ಯಾವುದೇ ಆಹಾರ ಕಣ ಅಂಟಿಕೊಳ್ಳದಂತೆ ನೋಡಿಕೊಳ್ಳಿ.

ಸಮಯಕ್ಕೆ ಸರಿಯಾಗಿ ದಂತವೈದ್ಯರನ್ನು ಭೇಟಿ ಮಾಡಿ:

ಸಮಯಕ್ಕೆ ಸರಿಯಾಗಿ ದಂತವೈದ್ಯರನ್ನು ಭೇಟಿ ಮಾಡಿ:

ನೀವು ಆಗಾಗ ದಂತವೈದ್ಯರನ್ನು ಭೇಟಿ ಮಾಡುತ್ತಿರಬೇಕು ಇದರಿಂದ ಕ್ಲಿಪ್ ಗಳು ಅದೇ ಸ್ಥಳದಲ್ಲಿದೆಯೇ ಎಂದು ಪರಿಶೀಲಿಸಬಹುದು. ಈ ಕ್ಲಿಪ್ ನಿಂದಾಗಿ ನಿಮಗೆ ಯಾವುದೇ ನೋವು ಇದ್ದರೆ, ಅದನ್ನು ದಂತವೈದ್ಯರಿಗೆ ತಿಳಿಸುವುದು ಉತ್ತಮ.

ಡೆಂಟಲ್ ವ್ಯಾಕ್ಸನ್ನು ಜೊತೆಗೇ ಇಟ್ಟಿರಿ:

ಡೆಂಟಲ್ ವ್ಯಾಕ್ಸನ್ನು ಜೊತೆಗೇ ಇಟ್ಟಿರಿ:

ಕ್ಲಿಪ್ ಹಾಕಿಸಿಕೊಂಡ ಮೊದಲ ವಾರದಲ್ಲಿ ದಂತವೈದ್ಯರು ನಿಮಗೆ ಡೆಂಟಲ್ ವ್ಯಾಕ್ಸನ್ನು ನೀಡುತ್ತಾರೆ. ನಿರಂತರ ಸಂಪರ್ಕ ಮತ್ತು ಘರ್ಷಣೆಯಿಂದ ಒಸಡುಗಳಿಗೆ ಕಿರಿಕಿರಿಯಾದಾಗ ಇವುಗಳನ್ನು ಕ್ಲಿಪ್ ಗೆ ಹಚ್ಚಬಹುದು ಅಥವಾ ತುಪ್ಪವನ್ನು ಬಳಸಬಹುದು. ಇದರಿಂದ ನಿಮ್ಮ ಒಸಡುಗಳಲ್ಲಿ ಉಂಟಾಗುವ ಯಾವುದೇ ಕಡಿತವನ್ನು ತಡೆಯಬಹುದು.

English summary

Tips for People Who Wear Braces in Kannada

Here we talking about Tips for people who wear braces in Kannada, read on
Story first published: Saturday, July 31, 2021, 17:51 [IST]
X
Desktop Bottom Promotion