For Quick Alerts
ALLOW NOTIFICATIONS  
For Daily Alerts

ಮೂರು ಡೋಸ್ ಲಸಿಕೆ ತೆಗೆದುಕೊಂಡಿದ್ದೀರಾ?: ಹಾಗಾದ್ರೆ ನಿಮಗೆ ಕೊರೊನಾದ ಭಯವೇ ಬೇಡ

|

ಕೊರೊನಾ ಮಹಾಮಾರಿ ವಿರುದ್ಧ ಜನರನ್ನು ರಕ್ಷಿಸಲು ಬ್ರಹ್ಮಾಸ್ತ್ರದಂತೆ ಕೊರೊನಾ ಲಸಿಕೆ ಬಂದಿತ್ತು. ಅನೇಕರು ಒಂದು ಡೋಸ್, ಎರಡು ಡೋಸ್ ಎಂದು ಲಸಿಕೆಯನ್ನು ಪಡೆದಿದ್ದರು. ಇದೀಗ ಬೂಸ್ಟರ್ ಡೋಸ್ ಎಂಬ ಹೆಸರಿನಲ್ಲಿ ಮೂರನೇ ಡೋಸ್ ಕೂಡ ಜನರಿಗೆ ಲಭ್ಯವಾಗುತ್ತಿದೆ. ಕೊರೊನಾ ಹೋಯ್ತು ಮೂರನೇ ಡೋಸ್ ಯಾಕೆ ಬೇಕು ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು.

COVID-19 vaccines

ಹೌದು, ಯಾಕೆಂದ್ರೆ ಮೊದಲು ಮತ್ತು ಎರಡನೇ ಕೊರೊನಾ ಲಸಿಕೆಯ ಡೋಸ್ ಗಿಂತ ಮೂರನೇಯ ಡೋಸ್ ಅತ್ಯುತ್ತಮವಾಗಿ ಜನರ ದೇಹದಲ್ಲಿ ಕಾರ್ಯನಿರ್ವಹಿಸುತ್ತಿದೆಯಂತೆ. ಕೊರೊನಾ ವಿರುದ್ಧ ಮೂರನೇ ಡೋಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

PLOS ಮೆಡಿಸಿನ್‌ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನವು, ಎರಡು ಡೋಸ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಸೀಮಿತ ಮತ್ತು ಅಲ್ಪಾವಧಿಯ ರಕ್ಷಣೆಯನ್ನು ಮಾತ್ರ ಒದಗಿಸುತ್ತವೆ. ಆದರೆ ಮೂರನೇ ಡೋಸ್ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಮಾಡುತ್ತದೆ ಅಲ್ಲದೇ ರಕ್ಷಣೆಯ ಮಟ್ಟದ ಅವಧಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದರ ಬಗ್ಗೆ ಅಧ್ಯಯನಕಾರರು ಹೇಳುವುದೇನು?

ಇದರ ಬಗ್ಗೆ ಅಧ್ಯಯನಕಾರರು ಹೇಳುವುದೇನು?

ಹೆಚ್ಚಿನ ಸಮಯ ಅಂದರೆ ಹಿಂದಿನ ಎರಡು ಡೋಸ್ ಗಿಂತ ಜಾಸ್ತಿ ಸಮಯ ಸೋಂಕಿನ ವಿರುದ್ಧ ನಮ್ಮ ದೇಹವನ್ನು ಮೂರನೇ ಡೋಸ್ ರಕ್ಷಣೆ ಮಾಡುತ್ತದೆ ಮತ್ತು ಈ ಮೊದಲು ಡೋಸ್ ತೆಗೆದುಕೊಂಡಿದ್ದರು ಆಸ್ಪತ್ರೆಗೆ ಸೇರುವ ಪ್ರಮಾಣ ಜಾಸ್ತಿ ಇತ್ತು. ಆದರೆ ಮೂರನೇ ಡೋಸ್ ದೇಹಕ್ಕೆ ರಕ್ಷಣೆ ನೀಡುತ್ತದೆ ಆಸ್ಪತ್ರೆಗೆ ಸೋಮ್ಕಿನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕೂಡ ವಿರಳ ಅಂದರೆ ಮೂರನೇ ಡೋಸ್ ತೆಗೆದುಕೊಳ್ಳುವ ಮೂಲಕ ಸೋಂಕು ತೀವ್ರವಾಗುತ್ತಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಹೇಗೆ ಅಧ್ಯಯನ ಮಾಡಲಾಯ್ತು?

ಹೇಗೆ ಅಧ್ಯಯನ ಮಾಡಲಾಯ್ತು?

ಡೆನ್ಮಾರ್ಕ್ ಜನರ ಮೇಲೆ ಈ ಅಧ್ಯಯನ ನಡೆಸಲಾಗಿದ್ದು ಮೊದಲ ಡೋಸ್ ನೀಡಿದ್ದ ಪಡೆದಿದ್ದ ಜನರಲ್ಲಿ ನಾಲ್ಕು ತಿಂಗಳ ಬಳಿಕ ಮತ್ತೆ ಸೋಂಕು ತಗುಲಿದೆ. ಮೊದಲ ಡೋಸ್ ಕೇವಲ 40% ಪರಿಣಾಮಕಾರಿಯಾಗಿರುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ಇನ್ನು ಎರಡನೇ ಡೋಸ್ ಕೂಡ ಶೇ55.1ರಷ್ಟು ಪರಿಣಾಮಕಾರಿಯಾಗಿದ್ದು, ನಾಲ್ಕು ತಿಂಗಳ ಬಳಿಕ ಶೇ. 52.3 ರಷ್ಟು ಜನರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಆದರೆ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ಎಂದು ಹೇಳುತ್ತಿರುವ ಡೋಸ್ ಶೇ. 83.3ರಷ್ಟು ಪರಿಣಾಮ ಕಾರಿಯಾಗಿದ್ದು, ನಾಲ್ಕು ತಿಂಗಳ ಬಳಿಕವೂ ಶೇ. 77.6 ರಷ್ಟು ಒಮಿಕ್ರಾನ್ ವಿರುದ್ಧ ರಕ್ಷಣೆ ನೀಡುತ್ತಿದೆ. ಆರುವತ್ತು ವರ್ಷ ಮೇಲ್ಪಟ್ಟವರಲ್ಲೂ ಮೂರನೇ ಡೋಸ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅಧ್ಯಯನ ತಿಳಿಸಿದೆ. ಒಟ್ಟಾರೆಯಾಗಿ ಮೂರನೇ ಡೋಸ್ ದೀರ್ಘಕಾಲದವರೆಗೆ ರಕ್ಷಣೆ ನೀಡುತ್ತಿದೆ. ಸೋಂಕು ಜಾಸ್ತಿಯಾಗದಂತೆ ತಪ್ಪಿಸುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

ಮೂರು ಡೋಸ್ ಲಸಿಕೆ ಒಳ್ಳೆಯದು

ಮೂರು ಡೋಸ್ ಲಸಿಕೆ ಒಳ್ಳೆಯದು

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತ ಸೇರಿ ವಿವಿಧ ದೇಶಗಳಲ್ಲಿ ವಿವಿಧ ಲಸಿಕೆಗಳನ್ನು ಒಂದೊಂದು ಡೋಸ್ ರೂಪದಲ್ಲಿ ನೀಡಲಾಗುತ್ತಿದೆ. ಭಾರತದಲ್ಲೂ ಕೊರೊನಾ ಲಸಿಕೆಗೆ ಭರ್ಜರಿ ಬೆಂಬಲ ಜನರಿಂದ ಸಿಕ್ಕಿದೆ. ಇದೀಗ ಕೊರೊನಾದ ತಳಿ ಒಮಿಕ್ರಾನ್ ಹಾಗೂ ಅದರ ಉಪ ತಳಿಗಳ ಉಪಟಳ ಹೆಚ್ಚಾದ ಹಿನ್ನೆಲೆ ಮೂರನೇ ಡೋಸ್ ಅಂದರೆ ಬೂಸ್ಟರ್ ಡೋಸ್ ನೀಡಲು ಮೊದಲು ಅಮೆರಿಕದಲ್ಲಿ ಆರಂಭಿಸಲಾಯಿತು. ಇದೀಗ ಭಾರತದಲ್ಲು ಮೂರನೇ ಡೋಸ್ ನೀಡಲಾಗುತ್ತಿದೆ. ಅಧ್ಯಯನದ ಪ್ರಕಾರ ಮೂರನೇ ಡೋಸ್ ಕೊರೊನಾದ ಎಲ್ಲ ತಳಿಗಳ ವಿರುದ್ಧ ಹೋರಾಟ ಮಾಡುವ ಶಕ್ತಿಯನ್ನು ಹೊಂದಿದೆಯಂತೆ. ಅಲ್ಲದೇ ಸೋಂಕಿನ ಪ್ರಮಾಣವನ್ನು ಕುಗ್ಗಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ.

English summary

Three COVID-19 vaccines may provide greater protection from COVID-19 infections than two says study in kannada

Study Says 3 doses of corona vaccine will give protect against omicron, read on...
Story first published: Saturday, September 3, 2022, 8:50 [IST]
X
Desktop Bottom Promotion