For Quick Alerts
ALLOW NOTIFICATIONS  
For Daily Alerts

ಮೊಟ್ಟೆ ಜೊತೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

|

ಮೊಟ್ಟೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮೊಟ್ಟೆಗಳಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಆದರೆ, ಮೊಟ್ಟೆಗಳನ್ನು ಸೇವಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮುಖ್ಯವಾಗಿ ಮೊಟ್ಟೆ ಸೇವಿಸುವ ಮೊದಲು ಮತ್ತು ನಂತರ ಕೆಲವು ಆಹಾರಗಳನ್ನು ಸೇವಿಸಬಾರದು. ಈ ಬಗ್ಗೆ ಸರಿಯಾಗಿ ನಿಗಾ ವಹಿಸದಿದ್ದರೆ ಅಜೀರ್ಣ,ಆಯಾಸ, ವಾಕರಿಕೆಯಂತಹ ಸಮಸ್ಯೆ ಎದುರಾಗಬಹುದು.

ಹಾಗಾಗಿ ಮೊಟ್ಟೆಯ ಜೊತೆ ಯಾವ ಆಹಾರವನ್ನು ಸೇವಿಸಬಹುದು, ಯಾವ ಆಹಾರಾವನ್ನು ಸೇವಿಸಬಾರದು ಎಂಬ ಬಗ್ಗೆ ಎಚ್ಚರ ವಹಿಸುವುದು ಉತ್ತಮ. ಏಕೆಂದರೆ, ಸರಿಯಾದ ಆಹಾರ ಸಂಯೋಜನೆ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಇಲ್ಲಿ ನಾವು ಮೊಟ್ಟೆ ಜೊತೆ ಯಾವ ಆಹಾರ ತಿನ್ನಬಾರದು ಎಂಬುದನ್ನು ಹೇಳಿದ್ದೇವೆ.

ಮೊಟ್ಟೆಗಳೊಂದಿಗೆ ಸೇವಿಸಬಾರದ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಬೇಕನ್:

ಬೇಕನ್:

ಬಹಳಷ್ಟು ಜನರು ಮೊಟ್ಟೆ ಮತ್ತು ಬೇಕನ್ ಕಾಂಬಿನೇಷನ್ನ್ನು ಬಯಸುತ್ತಾರೆ. ಆದರೆ, ಈ ಸಂಯೋಜನೆಯು ನಿಮಗೆ ಆಲಸ್ಯವನ್ನುಂಟುಮಾಡುತ್ತದೆ. ಮೊಟ್ಟೆ ಮತ್ತು ಬೇಕನ್ ಕ್ರಮವಾಗಿ ಪ್ರೋಟೀನ್ ಮತ್ತು ಕೊಬ್ಬಿನಂಶದಲ್ಲಿ ಸಮೃದ್ಧವಾಗಿದೆ. ಇದು ತ್ವರಿತ ಶಕ್ತಿ-ಉತ್ತೇಜಿಸಲು ಮತ್ತು ಅಷ್ಟೇ ತ್ವರಿತವಾಗಿ ಬೀಳಲು ಕಾರಣವಾಗುತ್ತದೆ.

ಸಕ್ಕರೆ:

ಸಕ್ಕರೆ:

ಮೊಟ್ಟೆ ಹಾಗೂ ಸಕ್ಕರೆ ಎರಡೂ ಘಟಕಗಳನ್ನು ಸೇವಿಸಿದಾಗ ಅವು ಅಮೈನೋ ಆಮ್ಲವನ್ನು ಬಿಡುಗಡೆ ಮಾಡುತ್ತವೆ. ಇದು ರಕ್ತದಲ್ಲಿ ಹೆಪ್ಪುಗಟ್ಟುವಿಕೆಯ ರಚನೆಗೆ ಕಾರಣವಾಗುವುದರಿಂದ ಈ ಎರಡನ್ನು ಒಟ್ಟಿಗೆ ಸೇವಿಸುವುದು ಮಾನವ ದೇಹಕ್ಕೆ ವಿಷಕಾರಿಯಾಗುತ್ತದೆ.

ಸೋಯಾ ಹಾಲು:

ಸೋಯಾ ಹಾಲು:

ಸೋಯಾ ಹಾಲು ಮತ್ತು ಮೊಟ್ಟೆಗಳ ಸಂಯೋಜನೆಯನ್ನು ತಪ್ಪಿಸಬೇಕು. ಎರಡೂ ಬಹಳಷ್ಟು ಪ್ರೋಟೀನ್ ಹೊಂದಿರುತ್ತವೆ. ಆದ್ದರಿಂದ, ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹವು ಪ್ರೋಟೀನ್ಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಚಹಾ:

ಚಹಾ:

ವಿಶ್ವದ ಅತ್ಯುತ್ತಮ ಸಂಯೋಜನೆಗಳಲ್ಲಿ ಚಹಾ ಮತ್ತು ಮೊಟ್ಟೆ ಒಂದು. ಆದರೆ, ಇವುಗಳು ಬೇರೆ ಯಾವುದೇ ಆಹಾರಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಆದ್ದರಿಂದ ಚಹಾ ಕುಡಿದ ಕೂಡಲೇ ಮೊಟ್ಟೆಗಳನ್ನು ತಿನ್ನಬಾರದು. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಿ, ಮಲಬದ್ಧತೆ ಮತ್ತು ದೇಹದ ಅಂಗಗಳ ಇತರ ಗಂಭೀರ ಹಾನಿಗೆ ಕಾರಣವಾಗಬಹುದು.

ಬಾಳೆಹಣ್ಣು:

ಬಾಳೆಹಣ್ಣು:

ಬಾಳೆಹಣ್ಣನ್ನು ಸೇವಿಸಿದ ನಂತರ ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಇದು ಮಲಬದ್ಧತೆಗೆ ಕಾರಣವಾಗಬಹುದು. ಬಾಳೆಹಣ್ಣು ಮತ್ತು ಮೊಟ್ಟೆಗಳ ಸಂಯೋಜನೆಯು ದೇಹಕ್ಕೆ ಹಾನಿಕಾರಕವಾಗಿದ್ದು, ಜಿಮ್ ಗೆ ಹೋಗುವವರು ಈ ಎರಡನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸಬೇಕು.

ಮೀನು:

ಮೀನು:

ಬೇಯಿಸಿದ ಮೊಟ್ಟೆ ಮತ್ತು ಮೀನನ್ನು ಒಟ್ಟಿಗೆ ತಿನ್ನಬಾರದು. ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು.

ಪನ್ನೀರ್:

ಪನ್ನೀರ್:

ಮೊಟ್ಟೆ ಮತ್ತು ಪನೀರ್ ಎರಡರಲ್ಲೂ ಪ್ರೋಟೀನ್ ಅಧಿಕವಾಗಿರುತ್ತದೆ. ದೇಹಕ್ಕೆ ಅಧಿಕ ಪ್ರೋಟೀನ್ನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ, ಅವುಗಳನ್ನು ಒಟ್ಟಿಗೆ ತಿನ್ನಬಾರದು.

ಮೊಲದ ಮಾಂಸ:

ಮೊಲದ ಮಾಂಸ:

ಮೊಟ್ಟೆಗಳನ್ನು ವಿವಿಧ ರೀತಿಯ ಮಾಂಸದೊಂದಿಗೆ ಸಂಯೋಜನೆ ಮಾಡಿ ಸೇವಿಸಲಾಗುತ್ತದೆ. ಆದರೆ, ಮೊಟ್ಟೆಗಳನ್ನು ಮೊಲದ ಮಾಂಸದೊಂದಿಗೆ ಸೇವಿಸಿದರೆ ಅದು ಅತಿಸಾರಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಪರ್ಸಿಮನ್:

ಪರ್ಸಿಮನ್:

ಪರ್ಸಿಮನ್ ಒಂದು ರೀತಿಯ ಹಣ್ಣು, ಇದನ್ನು ಮೊಟ್ಟೆಯ ನಂತರ ತಿನ್ನುವುದರಿಂದ, ಗ್ಯಾಸ್ಟ್ರಿಕ್ ದಾಳಿ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ದೂರವಿಡಿ.

ತಪ್ಪಿಸಬೇಕಾದ ಇತರ ಆಹಾರಗಳು:

ತಪ್ಪಿಸಬೇಕಾದ ಇತರ ಆಹಾರಗಳು:

ಮೊಟ್ಟೆಗಳೊಂದಿಗೆ ತಪ್ಪಿಸಬೇಕಾದ ಇತರ ಕೆಲವು ಆಹಾರಗಳೆಂದರೆ - ಹಣ್ಣುಗಳು (ವಿಶೇಷವಾಗಿ ಕಲ್ಲಂಗಡಿ), ಚೀಸ್, ಹಾಲು ಮತ್ತು ಅದರ ಉತ್ಪನ್ನಗಳು ಮತ್ತು ಬೀನ್ಸ್. ಈ ಎಲ್ಲಾ ಆಹಾರಗಳನ್ನು ಮೊಟ್ಟೆಯ ಜೊತೆ ಅಥವಾ ಮೊಟ್ಟೆ ಸೇವಿಸುವ ಮೊದಲು, ನಂತರ ಸೇವಿಸಬೇಡಿ. ಮೊಟ್ಟೆ ಸೇವಿಸಿ ಸ್ವಲ್ಪ ಸಮಯದ ನಂತರ ಸೇವಿಸುವುದು ಒಳ್ಳೆಯದು.

English summary

Things You Should Not Mix With Eggs in Kannada

Here we talking about Things You Should Not Mix With Eggs in Kannada, read on
Story first published: Saturday, November 27, 2021, 14:30 [IST]
X
Desktop Bottom Promotion