For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಮುಟ್ಟಿನ ದಿನಗಳಲ್ಲಿ ಇವುಗಳಿಂದ ದೂರವಿರಿ

|

ಮಹಿಳೆಯರ ಮುಟ್ಟಿನ ದಿನಗಳು ಕಾಣುವಷ್ಟು ಸುಲಭವಾಗಿರುವುದಿಲ್ಲ. ಸಾಕಷ್ಟು ನೋವು, ಕಿರಿಕಿರಿಗಳಿಂದ ತುಂಬಿರುತ್ತದೆ. ಆದರೆ ಕೆಲವರಲ್ಲಿ ಅತಿಯಾಗಿರುತ್ತದೆ, ಕೆಲವರಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ ಅಷ್ಟೇ. ಆದರೆ ಈ ಸಮಯದಲ್ಲಿ ಮಹಿಳೆಯರು ಒತ್ತಡದಲ್ಲಿರುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಮಹಿಳೆಯರ ಅವಧಿಗಳ ಮೇಲೆ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ ಈ ಲೇಖನದಲ್ಲಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡಬಾರದ ವಿಷಯಗಳು ಏನೇಂಬುದನ್ನು ನೋಡೋಣ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ತಪ್ಪಿಸಬೇಕಾದ ವಿಚಾರಗಳು ಇಲ್ಲಿವೆ:

ಉಪವಾಸ ಮಾಡಬೇಡಿ:

ಉಪವಾಸ ಮಾಡಬೇಡಿ:

ಉಪವಾಸ ಅಥವಾ ಪಥ್ಯದಲ್ಲಿರುವುದು ಮುಟ್ಟಿನ ಸಮಯದಲ್ಲಿ ಒಳ್ಳೆಯದಲ್ಲ. ಮುಟ್ಟಿನ ಸಮಯದಲ್ಲಿ ದೇಹದಿಂದ ರಕ್ತವು ಹೊರಬರುತ್ತದೆ, ಇದು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ, ಆದ್ದರಿಂದ ನೀವು ಅವಧಿಗಳಲ್ಲಿ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳಬೇಕು ಎಂಬುದನ್ನ್ ನೆನಪಿನ್ನಲ್ಲಿಡಿ. ಉತ್ತಮವಾದ ಆಹಾರ ನಿಮಗೆ ಶಕ್ತಿಯನ್ನು ಒದಗಿಸುತ್ತದೆ.

ಪ್ಯಾಡ್ ಬದಲಾಯಿಸುವಲ್ಲಿ ಸೋಮಾರಿಯಾಗಬೇಡಿ:

ಪ್ಯಾಡ್ ಬದಲಾಯಿಸುವಲ್ಲಿ ಸೋಮಾರಿಯಾಗಬೇಡಿ:

ನೈರ್ಮಲ್ಯ ಕರವಸ್ತ್ರವನ್ನು ಬದಲಾಯಿಸುವಲ್ಲಿ ಸೋಮಾರಿಯಾಗಬೇಡಿ. ಕೆಲವರು ಕಡಿಮೆ ರಕ್ತಸ್ರಾವದಿಂದಾಗಿ ಮಹಿಳೆಯರು ಒಂದೇ ಪ್ಯಾಡ್ ಅನ್ನು ಹೆಚ್ಚು ಸಮಯದವರೆಗೆ ಬಳಸುತ್ತಾರೆ, ಆದರೆ ಇದು ಸೋಂಕಿಗೆ ಕಾರಣವಾಗಬಹುದು, ಆದ್ದರಿಂದ ಒಂದೇ ಪ್ಯಾಡ್ ಅನ್ನು ದೀರ್ಘಕಾಲದವರೆಗೆ ಇಟ್ಟುಕೊಳ್ಳಬೇಡಿ. ಆಗಾಗ ಬದಲಾಯಿಸುತ್ತೀರಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಅನಾರೋಗ್ಯಕರ ಆಹಾರದಿಂದ ದೂರವಿರಿ:

ಅನಾರೋಗ್ಯಕರ ಆಹಾರದಿಂದ ದೂರವಿರಿ:

ಮುಟ್ಟಿನ ಅವಧಿಗಳಲ್ಲಿ ಜಂಕ್ ಫುಡ್ ಅನ್ನು ಹಂಬಲಿಸುವುದು ಸಾಮಾನ್ಯವಾಗಿದೆ ಆದರೆ ಈ ಸಮಯದಲ್ಲಿ ಅನಾರೋಗ್ಯಕರ ಆಹಾರದಿಂದ ನಿಮ್ಮನ್ನು ದೂರವಿಡಿ ಏಕೆಂದರೆ ಇದು ನಿಮ್ಮ ತೂಕವನ್ನು ಹೆಚ್ಚಿಸುವುದಲ್ಲದೆ ಎಣ್ಣೆ ಮತ್ತು ಮಸಾಲೆಗಳಿಂದ ಉಂಟಾಗುವ ನೋವನ್ನು ಹೆಚ್ಚಿಸುತ್ತದೆ. ಆದ್ದರಿಂದ ಜಂಕ್ ಫುಡ್ ಕಡಿಮೆ ಮಾಡಿ.

ಹೆಚ್ಚು ವ್ಯಾಯಾಮ ಬೇಡ:

ಹೆಚ್ಚು ವ್ಯಾಯಾಮ ಬೇಡ:

ಭಾರೀ ವ್ಯಾಯಾಮ ಅಥವಾ ಜಿಮ್‌ಗೆ ಕೆಲವು ದಿನಗಳ ವಿರಾಮ ನೀಡಿ. ಅವಧಿಗಳಲ್ಲಿ ಅತಿಯಾದ ದೈಹಿಕ ಚಟುವಟಿಕೆಯನ್ನು ತಪ್ಪಿಸಿ, ಏಕೆಂದರೆ ಅದು ನಿಮ್ಮ ಬೆನ್ನು ನೋವು ಅಥವಾ ಸೆಳೆತಗಳಿಗೆ ಕಾರಣವಾಗಬಹುದು. ಹಾಗಂತ ಸುಮ್ಮನೆ ಕೂರಬೇಡಿ, ಸಣ್ಣ-ಪುಟ್ಟ ವ್ಯಾಯಾಮ ಮಾಡುವುದು ಒಳ್ಳೆಯದು

ಅಸುರಕ್ಷಿತ ದೈಹಿಕ ಸಂಬಂಧಗಳು :

ಅಸುರಕ್ಷಿತ ದೈಹಿಕ ಸಂಬಂಧಗಳು :

ಈ ಅವಧಿಗಳಲ್ಲಿ ರಕ್ಷಣೆಯಿಲ್ಲದ ಸಂಬಂಧವು ಗರ್ಭಧಾರಣೆಯ ಅಪಾಯವನ್ನುಂಟುಮಾಡುವುದಿಲ್ಲ ಎಂಬ ಭ್ರಮೆ ಹೊಂದಿರುತ್ತಾರೆ. ಆದರೆ ಇದು ತಪ್ಪು. ಮುಟ್ಟಿನ ಅವಧಿಗಳಲ್ಲಿ ಅಸುರಕ್ಷಿತ ಸಂಬಂಧಗಳನ್ನು ಹೊಂದಿರುವುದು ನಿಮ್ಮನ್ನು ತೊಂದರೆಗೆ ಸಿಲುಕಿಸುತ್ತದೆ.

ಗಟ್ಟಿಯಾದ ಸಾಬೂನು ಬಳಸಬೇಡಿ:

ನಿಮ್ಮ ಖಾಸಗಿ ಭಾಗವನ್ನು ಗಟ್ಟಿಯಾದ ಸೋಪಿನಿಂದ ಸ್ವಚ್ಛಗೊಳಿಸಬೇಡಿ. ಅಲ್ಲದೆ, ಆಲ್ಕೋಹಾಲ್ ಇರುವ ಟಿಶ್ಯೂ ಪೇಪರ್ ಬಳಸಬೇಡಿ. ಇದು ಶುಷ್ಕತೆಯನ್ನು ಹೆಚ್ಚಿಸಬಹುದು, ಇದು ತುರಿಕೆ ಅಥವಾ ಇತರ ಸೋಂಕುಗಳಿಗೆ ಕಾರಣವಾಗಬಹುದು.

English summary

Things You Should Never Do On Your Period in Kannada

here we told about Things You Should Never Do On Your Period in Kannada, read on
X
Desktop Bottom Promotion