For Quick Alerts
ALLOW NOTIFICATIONS  
For Daily Alerts

ಅಪ್ಪಿತಪ್ಪಿಯೂ ಊಟದ ನಂತರ ಈ ಕೆಲಸಗಳನ್ನು ಮಾಡಲೇಬೇಡಿ

|

ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಆರೋಗ್ಯವಾಗಿರಲು ನಾವು ಸಹ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತೇವೆ. ಆರೋಗ್ಯಕರ ಆಹಾರ ತಿಂದರೆ ಮಾತ್ರ ಸಾಕೇ?.

ಗೊತ್ತಿದ್ದೋ, ಗೊತ್ತಿಲ್ಲದೆಯೋ ಊಟದ ನಂತರ ನಾವು ಮಾಡಿಕೊಂಡಿರುವ ಕೆಲವು ಅಭ್ಯಾಸಗಳು ಅಥವಾ ಚಟುವಟಿಕೆಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೆಲವು ಅಭ್ಯಾಸ ತಕ್ಷಣವೇ ಸಮಸ್ಯೆಯಾಗಿ ಪರಿಣಮಿಸಿದರೆ, ಇನ್ನು ಕೆಲವು ತಡವಾಗಿ ಪರಿಣಾಮ ಬೀರುತ್ತದೆ.

ನಾವಿಂದು ಇಲ್ಲಿ ನಿಮಗೆ ಊಟ ಆದ ನಂತರ ಯಾವೆಲ್ಲಾ ಕೆಲಸಗಳನ್ನು ಮಾಡಲೇಬಾರದು, ಇದು ಹೇಗೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬುದನ್ನು ಸವಿವರವಾಗಿ ತಿಳಿಸಿಕೊಡಲಿದ್ದೇವೆ.

ಸ್ನಾನ ಬೇಡವೇ ಬೇಡ

ಸ್ನಾನ ಬೇಡವೇ ಬೇಡ

ಊಟ, ಉಪಹಾರವಾದ ನಂತರ ಎಂದಿಗೂ ಸ್ನಾನ ಮಾಡಬೇಡಿ. ಕನಿಷ್ಠ 30 ನಿಮಿಷಗಳ ನಂತರ ಸ್ನಾನ ಮಾಡುವುದು ಉತ್ತಮ. ಊಟದ ನಂತರ ಸ್ನಾನ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದಕ್ಕೆ ಕಾರಣ ಜೀರ್ಣಕ್ರಿಯೆಗೆ ನಿಮ್ಮ ದೇಹದಲ್ಲಿನ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ, ಆದರೆ ನೀವು ಸ್ನಾನ ಮಾಡುವಾಗ ದೇಹದ ಮೇಲೆ ನೀರು ಹರಿಯುವುದರಿಂದ ರಕ್ತನಾಳಗಳು ಚರ್ಮಕ್ಕೆ ತನ್ನ ಹರಿವನ್ನು ತಿರುಗಿಸುತ್ತವೆ, ಇದರಿಂದ ನಿಮ್ಮ ಜೀರ್ಣಕ್ರಿಯೆಗೆ ನೇರವಾಗಿ ಪರಿಣಾಮ ಬೀರುತ್ತದೆ. ಊಟ ಮಾಡಿದ ನಂತರ ಸ್ನಾನ ಮಾಡುವ ಅಭ್ಯಾಸ ನಿಮ್ಮದಾಗಿದ್ದರೆ ಇಂದೇ ಈ ಅಭ್ಯಾಸವನ್ನು ಬಿಡ್ಡುಬಿಡಿ.

ಧೂಮಪಾನ ಮಾಡದಿರಿ

ಧೂಮಪಾನ ಮಾಡದಿರಿ

ಧೂಮಪಾನವೇ ಕೆಟ್ಟ ಚಟ, ಅದರಲ್ಲೂ ಊಟದ ನಂತರ ಧೂಮಪಾನ ಮಾಡುವವರು ಈ ಬಗ್ಗೆ ಮತ್ತೊಮ್ಮೆ ಯೋಚಿಸಿನೋಡಿ. ಸಿಗರೇಟ್‌ನಲ್ಲಿ ಕನಿಷ್ಠ ಅರವತ್ತ ಕಾರ್ಸಿನೋಜೆನ್ಗಳಿವೆ. ಅಂದರೆ ಕ್ಯಾನ್ಸರ್‌ ಹುಟ್ಟಲು ಬೇಕಾದ ಅಂಶ ಎನ್ನಬಹುದು. ಇದು ಊಟದ ನಂತರ ಧೂಮಪಾನ ಮಾಡುವುದರಿಂದ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಊಟದ ನಂತರ ಧೂಮಪಾನ ಮಾಡುವ ಬಗ್ಗೆ ಯೋಚಿಸಲೇಬೇಡಿ.

ಚಹಾ ಮತ್ತು ಕಾಫಿ ಕುಡಿಯಬೇಡಿ

ಚಹಾ ಮತ್ತು ಕಾಫಿ ಕುಡಿಯಬೇಡಿ

ಹಲವರಿಗೆ ಊಟ ಅಥವಾ ಬೆಳಗಿನ ಉಪಹಾರದ ನಂತರ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ನಿಮ್ಮ ದೇಹಕ್ಕೆ ಅಪಾಯದ ಕುತ್ತನ್ನು ತಂದೊಡ್ಡುತ್ತದೆ ನೆನಪಿರಲಿ. ಕಾರಣ ಉಪಾಹಾರ ಅಥವಾ ಊಟದ ನಂತರ ಕಾಫೀ, ಟೀ ಸೇವನೆಯಿಂದ ದೇಹದ ಗ್ಲುಕೋಸ್‌ ಪ್ರತಿಕ್ರಿಯೆ ಅಥವಾ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮಧುಮೇಹಿಗಳಿಗೆ ಇದೊಂದು ಗಂಭೀರ ಸಮಸ್ಯೆಯಾಗಲೂಬಹುದು. ಆರೋಗ್ಯ ತಜ್ಞರ ಪ್ರಕಾರ ಊಟದ ಒಂದು ಗಂಟೆಯ ನಂತರ ಮಾತ್ರ ಚಹಾ ಅಥವಾ ಕಾಫಿಯನ್ನು ಸೇವಿಸಬೇಕು.

ಹಣ್ಣು ಬೇಡ ಎಂದು ಹೇಳಿ

ಹಣ್ಣು ಬೇಡ ಎಂದು ಹೇಳಿ

ಊಟದ ನಂತರ ಹಣ್ಣು ಸೇವಿಸುವುದು ಅನಾರೋಗ್ಯಕರ ಅಭ್ಯಾಸ ಎಂದರೆ ಎಂಥವರಿಗೂ ಆಶ್ಚರ್ಯವಾಗಬಹುದು, ಆದರೆ ಇದು ಸತ್ಯ. ಕಾರಣ ನಾವು ಸೇವಿಸುವ ಆಹಾರ ಜೀರ್ಣವಾಗಲು ಸಮಯ ಬೇಕಾಗುತ್ತದೆ, ಆದರೆ ಹಣ್ಣುಗಳು ಬೇಗೆ ಜೀರ್ಣವಾಗುತ್ತದೆ. ಆದ್ದರಿಂದ ಊಟದ ನಂತರ ಕೂಡಲೇ ಹಣ್ಣನ್ನು ಸೇವಿಸಿದಾಗ ಅದು ಆಹಾರದೊಂದಿಗೆ ಬೆರೆತುಹೋಗುತ್ತದೆ, ಇದರ ಪರಿಣಾಮವಾಗಿ ಆಹಾರವನ್ನು ಸಹ ಗೊಂದಲಗೊಳಿಸುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ವಾಕಿಂಗ್‌ ಮಾಡಬೇಡಿ

ವಾಕಿಂಗ್‌ ಮಾಡಬೇಡಿ

ಸಾಮಾನ್ಯವಾಗಿ ಜನರು ಆಹಾರ ಸುಲಭವಾಗಿ ಜೀರ್ಣವಾಗಲು ಊಟ ಮಾಡಿದ ತಕ್ಷಣ ವಾಕಿಂಗ್‌ ಮಾಡುವುದು ಅಭ್ಯಾಸವಾಗಿರುತ್ತದೆ. ಆದರೆ, ಇದು ಕೆಲವು ವೈಜ್ಞಾನಿಕ ಮೂಲಗಳು ಜೇಳುವ ಪ್ರಕಾರ ಊಟ ಆದ ನಂತರ ಕನಿಷ್ಠ 30 ನಿಮಿಷಗಳು ಆಹಾರವು ನೆಲೆಗೊಳ್ಳಲು ಸಮಯ ಬೇಕಾಗುತ್ತದೆ. ಈ ವೇಳೆ ವಾಕಿಂಗ್‌ ಮಾಡುವುದು ಆರೋಗ್ಯಕರವಲ್ಲ, ನಂತರ ಮಾಡುವುದು ಉತ್ತಮ.

ನಿದ್ರೆ ಮಾಡಬೇಡಿ

ನಿದ್ರೆ ಮಾಡಬೇಡಿ

ಊಟವಾದ ಕೂಡಲೇ ನಿದ್ದೆ ಮಾಡುವುದು ಕೆಟ್ಟ ಆಲೋಚನೆ. ಊಟದ ನಂತರ ತಕ್ಷಣ ನಿದ್ದೆ ಮಾಡುವ ಬದಲು ನೀವು ಹೆಚ್ಚು ಇಷ್ಟಪಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ. ಡಿವಿ ನೋಡುವುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡುವುದು ಇತರೆ ಚಟುವಟಿಕೆಗಳಲ್ಲಿ ನಿರತರಾಗಿ. ಏಕೆಂದರೆ ನೀವು ಮಲಗಿರುವಾಗ ಅನೇಕ ಜೀರ್ಣಕಾರಿ ರಸಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ ಮತ್ತು ಇದರ ಪರಿಣಾಮವಾಗಿ ಸಂಪೂರ್ಣ ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಬೆಲ್ಟ್ ಸಡಿಲಗೊಳಿಸುವುದು

ಬೆಲ್ಟ್ ಸಡಿಲಗೊಳಿಸುವುದು

ಊಟದ ನಂತರ ಸೊಂಟದ ಬೆಲ್ಟ್ ಅನ್ನು ಸಡಿಲಗೊಳಿಸುತ್ತಿದ್ದೀರಾ ಎಂದರೆ ನೀವು ಅಗತ್ಯಕ್ಕಿಂತ ಹೆಚ್ಚಿನದನ್ನು ಸೇವಿಸಿದ್ದೀರಿ ಎಂದರ್ಥ. ಇದು ಸಹ ಅನಾರೋಗ್ಯಕರ ಲಕ್ಷಣ. ನಿಮಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಸೇವಿಸಿ ಬೆಲ್ಟ್ ಸಡಿಲಗೊಳಿಸುವ ಪರಿಸ್ಥಿತಿಯನ್ನು ತಪ್ಪಿಸುವುದು ಉತ್ತಮ.

English summary

Things You Should Never Do After Eating a Meal in Kannada

Here we are discussing about Things You Should Never Do After Eating a Meal in Kannada. avoid sleeping immediately after, because as you lie down, many digestive juices travel in opposite direction and as a result entire digestion process is affected Read more.
Story first published: Monday, June 21, 2021, 14:17 [IST]
X
Desktop Bottom Promotion