For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಸ್ಯಾನಿಟರಿ ಪ್ಯಾಡ್ ಖರೀದಿಸುವಾಗ ಈ ವಿಚಾರಗಳು ತಲೆಯಲ್ಲಿರಲಿ

|

ಬದಲಾಗುತ್ತಿರುವ ಜಗತ್ತಿನಿಂದಾಗಿ, ಮಹಿಳೆಯರು ತಮ್ಮ ಆರೋಗ್ಯ ಮತ್ತು ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳನ್ನು ಅನುಭವಿಸಿದ್ದಾರೆ. ಮಹಿಳೆಯರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ದೊಡ್ಡ ಬದಲಾವಣೆ ಎಂದರೆ ಪಿರಿಯಡ್ಸ್ ಅಥವಾ ಮುಟ್ಟಾದ ಸಮಯದಲ್ಲಿ ಬಳಸುತ್ತಿದ್ದ ಬಟ್ಟೆಗಳಿಂದ ಸ್ಯಾನಿಟರಿ ಪ್ಯಾಡ್‌ಗಳಿಗೆ ಬದಲಾಗಿರುವುದು.
ಋತುಸ್ರಾವ ಮಹಿಳೆಯರ ಜೀವನದ ಪ್ರಮುಖ ಭಾಗವಾಗಿದ್ದು, ಪ್ರತಿಯೊಂದು ಹೆಣ್ಣಿನ ಬದುಕಿನಲ್ಲೂ ನಡೆಯುವ ಸಹಜ ನೈಸರ್ಗಿಕ ಪ್ರಕ್ರಿಯೆ. ಈ ಸಮಯದಲ್ಲಿ ಮಹಿಳೆಯರು ಕಾಟನ್ ಪ್ಯಾಡ್ (ಸ್ಯಾನಿಟರಿ ಪ್ಯಾಡ್) ಗಳನ್ನು ಬಳಸುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವಾಗ ತಮ್ಮ ವೈಯಕ್ತಿಕ ಆರೋಗ್ಯದ ಜೊತೆಗೆ ಇತರ ವಿಷಯಗಳನ್ನು ಸಹ ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾದರೆ ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

pads

ಸ್ಯಾನಿಟರಿ ಪ್ಯಾಟ್ ಖರೀದಿಸುವಾಗ ಗಮನಿಸಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ಯಾವುದೇ ಪ್ಯಾಡ್ ಆದರೂ ಮೊದಲು ನೈರ್ಮಲ್ಯ ಕಾಪಾಡಿ:

ಯಾವುದೇ ಪ್ಯಾಡ್ ಆದರೂ ಮೊದಲು ನೈರ್ಮಲ್ಯ ಕಾಪಾಡಿ:

ಮೊತ್ತಮೊದಲಿಗೆ ಪ್ಯಾಡ್‌ಗಳ ಬಳಕೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಅನುಸರಿಸಿ. ಉದಾಹರಣೆಗೆ, ಪಿರಿಯಡ್ಸ್ ಸಮಯದಲ್ಲಿ ಪ್ರತಿ ನಾಲ್ಕರಿಂದ ಆರು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್ ಬದಲಾಯಿಸಿ. ಈ ಸಮಯದಲ್ಲಿ, ಬಳಸುತ್ತಿರುವ ಪ್ಯಾಡ್‌ನ ಗುಣಮಟ್ಟದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಎರಡನೆಯದಾಗಿ, ಕೆಲವು ಮಹಿಳೆಯರು ಒಂದೇ ಪ್ಯಾಡ್ ಅನ್ನು ದೀರ್ಘಕಾಲ ಬಳಸುತ್ತಾರೆ. ಇದು ಅಪಾಯಕಾರಿ, ಏಕೆಂದರೆ ಕೆಲವು ಪ್ಯಾಡ್‌ಗಳನ್ನು ಒಂದು ಬಾರಿಯ ಬಳಕೆಗಾಗಿ ಮಾತ್ರ ತಯಾರಿಸಲಾಗುತ್ತದೆ, ನೀವು ಅವುಗಳನ್ನು ಹೆಚ್ಚುಕಾಲ ಬಳಸಿದರೆ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚಾಗುತ್ತವೆ.

 ಗುಣಮಟ್ಟವನ್ನು ನೋಡಿಕೊಳ್ಳಿ:

ಗುಣಮಟ್ಟವನ್ನು ನೋಡಿಕೊಳ್ಳಿ:

ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವಾಗ, ಮೊದಲು ಅದರ ಗುಣಮಟ್ಟಕ್ಕೆ ಗಮನ ಕೊಡಿ. ಅನೇಕ ಬಾರಿ ಮಹಿಳೆಯರು ಯಾವ ಸ್ಯಾನಿಟರಿ ಪ್ಯಾಡ್‌ಗಳು ಕಡಿಮೆ ಹಣಕ್ಕೆ ಸಿಗುವುದೋ ಅದನ್ನೇ ಖರೀದಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಪ್ಯಾಡ್‌ಗಳನ್ನು ಖರೀದಿಸುವಾಗ, ಬೆಲೆ ಜಾಸ್ತಿಯಾದರೂ, ಉತ್ತಮ ಗುಣಮಟ್ಟದ್ದನ್ನೇ ಖರೀದಿಸಿ, ಏಕೆಂದರೆ ಆರೋಗ್ಯಕ್ಕಿಂತ ದುಡ್ಡೇನು ಹೆಚ್ಚಲ್ಲ.

ಪರಿಮಳಯುಕ್ತ ಪ್ಯಾಡ್ ಬೇಡ:

ಪರಿಮಳಯುಕ್ತ ಪ್ಯಾಡ್ ಬೇಡ:

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪರಿಮಳಯುಕ್ತ ಪ್ಯಾಡ್‌ಗಳನ್ನು ಪರಿಚಯಿಸಲಾಗಿದೆ. ಆದರೆ ಅದನ್ನು ಖರೀದಿಸುವ ಮೊದಲು ನೀವು ಸಾಕಷ್ಟು ಯೋಚಿಸಿ. ಏಕೆಂದರೆ ಇಂತಹ ಪ್ಯಾಡ್ ಗಳಲ್ಲಿ ಸಾಕಷ್ಟು ರಾಸಾಯನಿಕವಿರಬಹುದು, ಅದು ಚರ್ಮದ ದದ್ದು ಅಥವಾ ಅಲರ್ಜಿಗೆ ಕಾರಣವಾಗಬಹುದು. ಆದ್ದರಿಂದ ಪರಿಮಳಯುಕ್ತ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವುದನ್ನು ತಪ್ಪಿಸಿ, ಸುಗಂಧ ರಹಿತ ಪ್ಯಾಡ್‌ಗಳನ್ನು ಖರೀದಿಸಿ. ಪ್ಯಾಡ್ ಗಳನ್ನು ಆಗಾಗ ಬದಲಾಯಿಸುತ್ತಿದ್ದರೆ, ಕೆಟ್ಟ ವಾಸನೆಯ ಸನ್ನಿವೇಶದಿಂದ ಪಾರಾಗಬಹುದು.

 ಪರಿಸರದ ಮೇಲೆ ಪರಿಣಾಮ:

ಪರಿಸರದ ಮೇಲೆ ಪರಿಣಾಮ:

ಸ್ಯಾನಿಟರಿ ಪ್ಯಾಡ್ ಖರೀದಿಸುವಾಗ, ಸುಲಭವಾಗಿ ವಿಲೇವಾರಿ ಮಾಡಬಹುದಾದ ಪ್ಯಾಡ್ ಅನ್ನು ಆಯ್ಕೆ ಮಾಡಿ. ಸುಲಭವಾಗಿ ವಿಲೇವಾರಿ ಮಾಡಲಾಗದ ಸ್ಯಾನಿಟರಿ ಪ್ಯಾಡ್‌ಗಳು ನಮಗೆ ಹಾಗೂ ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ. ಸಿಂಥೆಟಿಕ್ ಪ್ಯಾಡ್ ಖರೀದಿಸುವುದನ್ನು ತಪ್ಪಿಸಿ. ಬದಲಾಗಿ ಜೈವಿಕ ವಿಘಟನೀಯ ಪ್ಯಾಡ್‌ಗಳನ್ನು ಬಳಸಿ. ಇದು ನಿಮಗೆ ಹಾಗೂ ಪರಿಸರಕ್ಕೆ ಸುರಕ್ಷಿತವಾಗಿದೆ.

ಗಾತ್ರವನ್ನು ನೆನಪಿನಲ್ಲಿಡಿ:

ಗಾತ್ರವನ್ನು ನೆನಪಿನಲ್ಲಿಡಿ:

ಸಾಮಾನ್ಯವಾಗಿ ಪ್ಯಾಡ್ ಖರೀದಿಸುವಾಗ ಮಹಿಳೆಯರು ಗಾತ್ರವನ್ನು ನೋಡಿಕೊಳ್ಳುವುದಿಲ್ಲ. ಇದು ಬಹಳ ಮುಖ್ಯ. ಗಾತ್ರ ಸರಿಯಾಗಿಲ್ಲದಿದ್ದರೆ, ಫಿಟ್ಟಿಂಗ್‌ನಲ್ಲಿ ಸಮಸ್ಯೆ ಇರಬಹುದು. ನೆನಪಿನಲ್ಲಿಡಿ, ಮೊದಲ ಬಾರಿಗೆ ಮುಟ್ಟದಾಗ ಸಾಮಾನ್ಯ ಗಾತ್ರದ ನ್ಯಾಪ್ಕಿನ್ ಅಥವಾ ಪ್ಯಾಡ್ ಬಳಸಿ, ಅದು ಬೇಗನೇ ಒದ್ದೆಯಾದರೆ, ಉದ್ದವಾದ ಪ್ಯಾಡ್ ಬಳಸಿ. ಆದರೆ ಕೆಲವು ಗಂಟೆಗಳ ನಂತರವೂ ರಕ್ತಸ್ರಾವ ಕಡಿಮೆ ಎಂದರೆ ಸಾಮಾನ್ಯ ಗಾತ್ರದ ಪ್ಯಾಡ್ ಮುಂದುವರಿಸಿ.

ಸಮಯವೂ ಮುಖ್ಯ:

ಸಮಯವೂ ಮುಖ್ಯ:

ರಾತ್ರಿಯಲ್ಲಿ ನಿಯಮಿತ ಪ್ಯಾಡ್‌ಗಳನ್ನು ಬಳಸುವುದರಿಂದ ಅನೇಕ ಬಾರಿ ಹುಡುಗಿಯರ ನಿದ್ರೆ ತೊಂದರೆಗೊಳಗಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವಿಭಿನ್ನ ರೀತಿಯ ಪ್ಯಾಡ್ ಅನ್ನು ಪ್ರಯತ್ನಿಸಿ. ನೈಟ್ ಪ್ಯಾಡ್‌ಗಳು ಹಿಂಭಾಗದಲ್ಲಿ ಉದ್ದ ಮತ್ತು ಅಗಲವಾಗಿರುತ್ತವೆ, ಆದ್ದರಿಂದ ಮಲಗಿದ್ದಾಗ ಲೀಕ್ ಆಗುವ ಸಾಧ್ಯತೆ ಕಡಿಮೆ. ಹೀಗೆ ಬೇರೆ ಬೇರೆ ಸಮಯಗಳಿಗೆ ಅನುಗುಣವಾಗಿ ಬಳಸಿ.

English summary

Things to Keep In Mind When You Are Buying Sanitary Pads in Kannada

Here we talking about Things to Keep In Mind When You Are Buying Sanitary Pads in Kannada, read on
Story first published: Friday, September 10, 2021, 11:27 [IST]
X
Desktop Bottom Promotion