For Quick Alerts
ALLOW NOTIFICATIONS  
For Daily Alerts

ಈ 5 ವಸ್ತುಗಳನ್ನು ತಿನ್ನುವುದರಿಂದ ಕೊರೊನಾ, ಫಂಗಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು

|

ಕೊರೊನಾದ ಅಟ್ಟಹಾಸವೇ ಇನ್ನೂ ಮುಗಿದಿಲ್ಲ, ಈ ನಡುವೆ ಬಣ್ಣ ಬಣ್ಣದ ಶಿಲೀಂಧ್ರಗಳ ಕಾಟ ಬೇರೆ ಶುರುವಾಗಿದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ, ನಮ್ಮಲ್ಲಿರುವ ಕುಂಠಿತ ಗೋರ ನಿರೋಧಕ ಶಕ್ತಿ ಎಂಬುದು ಮಾತ್ರ ಸತ್ಯ. ತಜ್ಞರ ಪ್ರಕಾರ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಕೊರೊನಾ ಮತ್ತು ಫಂಗಸ್ ಎರಡೂ ಗಂಭೀರವೆಂದು ಪರಿಗಣಿಸಲಾಗುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳಲು ನಾವು ನಮಗೆ ರಕ್ಷಣೆ ನೀಡುವಂತಹ ಆಹಾರ ಸೇವಿಸುವುದು ಅವಶ್ಯಕವಾಗಿದೆ. ಈ ಲೇಖನದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ವಸ್ತುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅನಾನಸ್:

ಅನಾನಸ್:

ಉರಿಯೂತದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮತ್ತು ಜೀರ್ಣಕ್ರಿಯೆಯನ್ನು ಬಲಪಡಿಸಲು ಅನಾನಸ್ ಅನ್ನು ಬಳಸಲಾಗುತ್ತದೆ. ಈ ಹಣ್ಣಿನಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಮತ್ತು ಮ್ಯಾಂಗನೀಸ್ ಇದೆ. ದೈನಂದಿನ ಆಹಾರದಲ್ಲಿ ಒಂದು ಕಪ್ ಅನಾನಸ್ ಸೇವಿಸುವುದರಿಂದ ವೈರಲ್ ಸೋಂಕು ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ದೊಣ್ಣೆ ಮೆಣಸಿನ ಕಾಯಿ:

ದೊಣ್ಣೆ ಮೆಣಸಿನ ಕಾಯಿ:

ಸಿಟ್ರಸ್ ಯುಕ್ತ ಹಣ್ಣುಗಳು ಅಥವಾ ತರಕಾರಿಗಳಲ್ಲಿ ಕ್ಯಾಪ್ಸಿಕಂ ಬರುವುದಿಲ್ಲ ಎಂದು ಯೋಚನೆ ಮಾಡುತ್ತಿರಬೇಕು ಅಲ್ವಾ? ಹೌದು, ಇದು ಸಿಟ್ರಸ್ ಆಗಿಲ್ಲದಿದ್ದರೂ, ಇದರಲ್ಲಿ ವಿಟಮಿಸ್ ಸಿ ಯನ್ನು ಸ್ವಲ್ಪ ಪ್ರಮಾಣದಲ್ಲಿ, ಅದಕ್ಕಿಂತ ಮುಖ್ಯವಾಗಿ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಕ್ಯಾಪ್ಸಿಕಂನಲ್ಲಿರುವ ಖನಿಜಗಳು ಮತ್ತು ಜೀವಸತ್ವಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ ಜೊತೆಗೆ ಚರ್ಮದ ಟೋನ್ ಮತ್ತು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ.

ನಿಂಬೆ:

ನಿಂಬೆ:

ಆ್ಯಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆಯು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ. ನಿಂಬೆಯಲ್ಲಿ ಮ್ಯಾಂಗನೀಸ್, ವಿಟಮಿನ್ ಬಿ 6, ಥಯಾಮಿನ್, ಪ್ಯಾಂಟೊಥೆನಿಕ್ ಆಮ್ಲ, ತಾಮ್ರ ಮತ್ತು ರಿಬೋಫ್ಲಾವಿನ್ ಕೂಡ ಇದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳಿಗೆ ಹಾನಿಯಾಗುವ ಮೂಲಕ ಸೋಂಕನ್ನು ಉಂಟುಮಾಡುವ ಸ್ವತಂತ್ರ ರಾಡಿಕಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಕಿತ್ತಳೆ:

ಕಿತ್ತಳೆ:

ನಾವು ವಿಟಮಿನ್ ಸಿ ಬಗ್ಗೆ ಮಾತನಾಡುವಾಗ, ನಾಲಿಗೆಗೆ ಬರುವ ಮೊದಲ ಹೆಸರು ಕಿತ್ತಳೆ. 100 ಗ್ರಾಂ ಕಿತ್ತಳೆ ಸುಮಾರು 53.2 ಮಿಲಿಗ್ರಾಂ ವಿಟಮಿನ್ ಸಿ ಹೊಂದಿದೆ. ಆದ್ದರಿಂದ ಈ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಕಿತ್ತಳೆ ಸೇವಿಸಿ. ಇದು ನಿಮ್ಮ ರೋಗ ನಿರೋಧಕಶಕ್ತಿ ವೃದ್ಧಿಗೆ ಸಹಾಯ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ನೆಲ್ಲಿಕಾಯಿ:

ನೆಲ್ಲಿಕಾಯಿ:

ನೆಲ್ಲಿಕಾಯಿಯನ್ನು ವಿವಿಧ ರೋಗಗಳ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ನೀವು ಕಿತ್ತಳೆಯನ್ನು ನೆಲ್ಲಿಕಾಯಿಯೊಂದಿಗೆ ಹೋಲಿಸಿದರೆ, ಅದರಲ್ಲಿರುವ ವಿಟಮಿನ್ ಸಿ ಪ್ರಮಾಣವು ಕಿತ್ತಳೆಗಿಂತ 20 ಪಟ್ಟು ಹೆಚ್ಚು. ಆದ್ದರಿಂದ ನೆಲ್ಲಿಕಾಯಿಯನ್ನು ಅಥವಾ ಅದರ ರಸವನ್ನು ಪ್ರತಿದಿನ ಸೇವಿಸುವದರಿಂದ ನಿಮಗೆ ಉತ್ತಮ ಆರೋಗ್ಯ ಲಾಭ ದೊರೆಯುವುದು.

English summary

Things to Include in Your Diet to Reduce the Risk of Covid-19 and Fungus Infection in Kannada

Here we talking about Things to include in your diet to reduce the risk of covid-19 and fungus infection in Kannada, read on
Story first published: Wednesday, June 2, 2021, 9:20 [IST]
X
Desktop Bottom Promotion