For Quick Alerts
ALLOW NOTIFICATIONS  
For Daily Alerts

ಹೆಚ್ಚು ನೀರು ಕುಡಿಯಲು ಈ ಟ್ರಿಕ್ಸ್ ಅನುಸರಿಸಿ

|

ನೀರು ಕುಡಿಯುವುದು ಎಷ್ಟು ಅಗತ್ಯ ಎಂದು ನಮಗೆಲ್ಲಾ ಗೊತ್ತು. ಆದರೆ ದಿನದ ಅಗತ್ಯದ ನೀರನ್ನು ನಾವು ಕ್ಲುಪ್ತಕಾಲಕ್ಕೆ ಮತ್ತು ಸರಿಯಾದ ಪ್ರಮಾಣದಲ್ಲಿ ಕುಡಿಯುತ್ತೇವೆಯೇ ಎಂಬುದು ಮೊದಲ ಪ್ರಶ್ನೆ.

ಇದನ್ನು ಸಾಧಿಸಲು ಕೆಲವು ಜಾಣ್ಮೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಅಗತ್ಯ ಕ್ರಮದಿಂದ ವಂಚಿತರಾಗದಂತೆ ತಡೆಯಬಹುದು. ಬನ್ನಿ, ನೋಡೋಣ:

1) ನಿಮಗೆ ಎಷ್ಟು ನೀರು ಬೇಕು ಎಂಬುದನ್ನು ನಿರ್ಧರಿಸಿ

1) ನಿಮಗೆ ಎಷ್ಟು ನೀರು ಬೇಕು ಎಂಬುದನ್ನು ನಿರ್ಧರಿಸಿ

ದಿನದ ಅವಶ್ಯಕತೆಗೆ ಬೇಕಾಗುವ ನೀರನ್ನು ಕುಡಿಯುವ ಮೂಲಕ ದೇಹದಲ್ಲಿ ಸಾಕಷ್ಟು ಆರ್ದ್ರತೆ ಉಳಿಯುವಂತೆ ಮಾಡಲು ಸಾಧ್ಯ. ಆದರೆ ಎಷ್ಟು ನೀರು ಬೇಕು ಎಂದು ಕಂಡುಕೊಳ್ಳಲು ಸುಲಭವಾದ ಜಾಣ್ಮೆಯ ವಿಧಾನ ಇಲ್ಲಿದೆ: ನಿಮ್ಮ ಮೂತ್ರದ ಬಣ್ಣವು ತಿಳಿ ಹಳದಿ ಮತ್ತು ಪಾರದರ್ಶಕದ ನಡುವಿನ ಬಣ್ಣವನ್ನು ಪಡೆದುಕೊಳ್ಳುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ದಿನವಿಡೀ ಎಷ್ಟು ನೀರು ಸೇವಿಸಬೇಕು ಎಂಬುದನ್ನು ಅಳೆಯಿರಿ. ನೀವು ಪ್ರತಿದಿನ ಆ ಪ್ರಮಾಣವನ್ನು ಕುಡಿಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ನೀರಿನ ಸೇವನೆಯನ್ನು ಮೇಲ್ವಿಚಾರಣೆ ಮಾಡಿ. ಕೆಲವು ಜನರು pen-and-paper tallies ಮತ್ತು charts ಮೊದಲಾದ ಆಪ್ ಗಳನ್ನು ಬಳಸುತ್ತಾರೆ. ಉಳಿದಂತೆ Waterlogged, Water Your Body, ಅಥವಾ Daily Water ಎಂಬ ಆಪ್ ಗಳ ಮೂಲಕವೂ ನೀವು ಕುಡಿಯುವ ನೀರಿನ ಪ್ರಮಾಣದ ಅಗತ್ಯತೆಯನ್ನು ಸುಲಭವಾಗಿ ಆಯೋಜಿಸಿಕೊಳ್ಳಬಹುದು.

2) ನೀವು ಕುಡಿಯುವ ನೀರು ತಣ್ಣಗಿರಬೇಕೇ ಹೊರತು ಅತಿ ಶೀತಲವಾಗಿರಬಾರದು

2) ನೀವು ಕುಡಿಯುವ ನೀರು ತಣ್ಣಗಿರಬೇಕೇ ಹೊರತು ಅತಿ ಶೀತಲವಾಗಿರಬಾರದು

ವ್ಯಕ್ತಿಯಿಂದ ವ್ಯಕ್ತಿಗೆ ತಾನು ಕುಡಿಯುವ ನೀರಿನ ತಾಪಮಾನ ಅಥವಾ ಎಷ್ಟು ತಣ್ಣಗಿರಬೇಕು ಎಂಬ ಮಾಹಿತಿ ಬೇರೆ ಬೇರೆಯಾಗಿದ್ದರೂ ಫ್ರಿಜ್ಜಿನ ನೀರು ಕುಡಿಯುವವರಾಗಿದ್ದರೆ ಹೆಚ್ಚೇ ಕುಡಿಯುತ್ತೀರಿ ಎಂದು ಡೆನ್ವರ್ ನಗರದಲ್ಲಿರುವ ಅಧಿಕೃತ ಆಹಾರತಜ್ಞೆ ಮತ್ತು Ask the Dietitian ಎಂಬ ಅಂತರ್ಜಾಲ ತಾಣದಲ್ಲಿ ಲೇಖಕಿಯಾಗಿರುವ ಜೋವಾನ್ ಲಾರ್ಸೆನ್ ರವರು ತಿಳಿಸುತ್ತಾರೆ. ಸೆಖೆ ವಿಪರೀತವಿದ್ದಾಗ ಖಾಲಿ ಹಾಲಿನ ಬಾಟಲಿಯಲ್ಲಿ ನೀರು ತುಂಬಿಸಿ ರಾತ್ರಿ ಫಿಜ್ಜಿನಲ್ಲಿಟ್ಟು ಬೆಳಿಗ್ಗೆ ಹೊರತೆಗೆದು ಬಳಿಕ ಕೈತೋಟದಲ್ಲಿ ಕಳೆಯುವ ಸಮಯದಲ್ಲಿ ಕುಡಿಯುತ್ತೇನೆ ಎಂದು ಅವರು ತಿಳಿಸುತ್ತಾರೆ. ಅಂದರೆ ಈ ನೀರು ಸಾಮಾನ್ಯ ತಣ್ಣಗಿರಬೇಕೇ ಹೊರತು ಅತೀಯಾಗಿ ಶೀತಲವಿರಬಾರದು. ಇದೇ ಕಾರಣಕ್ಕೆ ಮಣ್ಣಿನ ಜಾಡಿಯಲ್ಲಿ ಸಂಗ್ರಹಿಸಿದ ನೀರು ಅತ್ಯುತ್ತಮವಾಗಿದೆ. ಇದು ಅತಿ ತಣ್ಣಗೂ ಅಲ್ಲದ, ಬೆಚ್ಚಗೂ ಅಲ್ಲದ ನೀರನ್ನು ದಿನವಿಡೀ ನೀಡುತ್ತದೆ.

3) ಕೆಲವು ಸ್ವಾದಗಳಿರುವ ನೀರನ್ನು ಬಳಸಲು ಪ್ರಾರಂಭಿಸಿ

3) ಕೆಲವು ಸ್ವಾದಗಳಿರುವ ನೀರನ್ನು ಬಳಸಲು ಪ್ರಾರಂಭಿಸಿ

ಯಾವುದೇ ಆಹಾರವನ್ನು ಸತತವಾಗಿ ತಿನ್ನಲು ಸಾಧ್ಯವಿಲ್ಲ. ನೀರು ಸಹಾ ಹಾಗೇ. ಇದಕ್ಕೆ ರುಚಿ ಇಲ್ಲದಿದ್ದರೂ ನಮ್ಮ ನಾಲಿಗೆ ನೀರಿನಲ್ಲಿಯೂ ರುಚಿಯನ್ನು ಬಯಸುತ್ತದೆ. ಹಾಗಾಗಿ ಮುಂದಿನ ಬಾರಿ ನೀರನ್ನು ಕೊಂಚ ಸ್ವಾದಗಳೊಂದಿಗೆ ಕುಡಿಯಲು ಪ್ರಾರಂಭಿಸಿ. ಇಂದು ಈ ಸುವಾಸನೆಯನ್ನು ಕರಗಿಸಲು ಇನ್ಫ್ಯೂಸರ್ (infuser) ಎಂಬ ಉಪಕರಣ ಸಿಗುತ್ತಿದೆ. ಇದನ್ನು ಬಳಸಿ ವಿವಿಧ ಸ್ವಾದಗಳನ್ನು ನೀರಿಗೆ ಸೇರಿಸಬಹುದು. ಇದು ಸಾಧ್ಯವಿಲ್ಲದಿದ್ದರೆ ಲಿಂಬೆ, ಕಲ್ಲುಪ್ಪು, ದಾಳಿಂಬೆ, ಜೇನು ಮೊದಲಾದವುಗಳನ್ನು ಅಲ್ಪ ಪ್ರಮಾಣದಲ್ಲಿ ನೀರಿಗೆ ಬೆರೆಸಿ ಸೇವಿಸಬಹುದು ಎಂದು Northwestern ವಿಶ್ವವಿದ್ಯಾಲಯದ ಜಿಲ್ಲಾ ಆಹಾರ ತಜ್ಞ ಕರೆನ್ ಸೆಚೋವ್ಸ್ಕಿ ತಿಳಿಸುತ್ತಾರೆ. ಬದಲಾಗಿ, ಆಯಾ ದಿನಗಳಲ್ಲಿ ದೊರಕುವ ಋತುಮಾನದ ಫಲಗಳನ್ನೂ ನೀರಿಗೆ ಬೆರೆಸಬಹುದು. ಮಾವು, ಕಲ್ಲಂಗಡಿ, ಪುದೀನ, ಸೌತೆಕಾಯಿ, ತುಳಸಿ, ಕಿತ್ತಳೆ, ಲ್ಯಾವೆಂಡರ್ ಮೊದಲಾದವನ್ನೂ ನೀವು ಆಯ್ದುಕೊಳ್ಳಬಹುದು. ಆದರೆ ಪ್ರತಿ ದಿನವೂ ನೀವು ಹೊಸದಾಗಿ ನೀರನ್ನು ತುಂಬಿ ಹಣ್ಣಿನ ರಸವನ್ನು ಬೆರೆಸಬೇಕೇ ಹೊರತು ನಿನ್ನೆಯ ನೀರನ್ನು ಇಂದಿಗೆ ಉಳಿಸಬಾರದು. ದಿನದ ಅಗತ್ಯದ ಪ್ರಮಾಣವನ್ನು ಬೆಳಗ್ಗೆ ತುಂಬಿ ರಾತ್ರಿಯ ಮುನ್ನ ಎಲ್ಲವನ್ನೂ ಖಾಲಿ ಮಾಡಿಯೇ ಮಲಗುವುದು ನೀವು ಅಗತ್ಯ ಪ್ರಮಾಣದ ನೀರನ್ನು ಸೇವಿಸಿದ್ದೀರಿ ಎಂಬುದನ್ನು ಖಚಿತಪಡಿಸುತ್ತದೆ.

4) ಟೈಮರ್‌ಗಳು ಅಥವಾ ಅಲರ್ಟ್ ಗಳನ್ನು ಮೊಬೈಲಿನಲ್ಲಿ ಸ್ಥಾಪಿಸಿ

4) ಟೈಮರ್‌ಗಳು ಅಥವಾ ಅಲರ್ಟ್ ಗಳನ್ನು ಮೊಬೈಲಿನಲ್ಲಿ ಸ್ಥಾಪಿಸಿ

ಸಾಕಷ್ಟು ನೀರು ಕುಡಿಯಲು ನಿಮ್ಮ ದಿನಚರಿಯನ್ನು ನೀವು ಬದಲಾಯಿಸಿದರೆ, ನಿಮ್ಮ ದೇಹವೂ ಅದೇ ಪ್ರಕಾರ ಬದಲಾಗುತ್ತದೆ. ಜಲಸಂಚಯನ ದಿನಚರಿಯನ್ನು ಮುಂದುವರಿಸಲು ಮಾನಸಿಕ ದೃಢತೆ ಮಾತ್ರವೇ ಸಾಕಾಗುವುದಿಲ್ಲ. ದಿನವಿಡೀ ನಿಯಮಿತವಾಗಿ ನೀರು ಕುಡಿಯುವುದನ್ನು ನಿಮಗೆ ನೆನಪಿಸಲು ನಿಮ್ಮ ಫೋನ್‌ನಲ್ಲಿ ನಿಮಗೆ ಶಿಫಾರಸು ಮಾಡಲಾದ ನೀರನ್ನು ಕುಡಿಯುವಂತೆ ಹೇಳುವ ಟೈಮರ್‌ಗಳು ಅಥವಾ ಎಚ್ಚರಿಕೆಗಳನ್ನು ನಿಗದಿಪಡಿಸಿ. ಈ ಮೂಲಕ ನಿಮ್ಮ ಮೊಬೈಲ್ ಕಾಲ ಕಾಲಕ್ಕೆ ಎಚ್ಚರಿಕೆಯನ್ನು ನೀಡುತ್ತದೆ ಹಾಗೂ ಆ ಪ್ರಕಾರವೇ ನೀವು ಸಾಕಷ್ಟು ನೀರನ್ನು ಕುಡಿಯಬೇಕು. ಈ ನಿಮ್ಮ ಎಚ್ಚರಿಕೆಯ ರಿಂಗ್‌ಟೋನ್ ಗಳನ್ನು ನೀರಿನ ವಿಷಯಕ್ಕೆ ಸಂಬಂಧಿಸಿದ ಹಾಡುಗಳನ್ನಾಗಿ ಬದಲಿಸಿಕೊಂಡರೆ ಇನ್ನೂ ಉತ್ತಮ

5) ನಿಮ್ಮ ನೀರಿನ ಬಾಟಲಿಯಲ್ಲಿ ಗಡುವನ್ನು ಗುರುತಿಸಿ

5) ನಿಮ್ಮ ನೀರಿನ ಬಾಟಲಿಯಲ್ಲಿ ಗಡುವನ್ನು ಗುರುತಿಸಿ

ನಿಮಗೆ ಇನ್ನೂ ಹೆಚ್ಚು ಕಠಿಣವಾದ ವ್ಯವಸ್ಥೆಯ ಅಗತ್ಯವಿದ್ದರೆ, ನಿಮ್ಮ ಬಾಟಲಿಯಲ್ಲಿ ನೀರಿನ ಮಟ್ಟಗಳು ಮತ್ತು ನಿರ್ದಿಷ್ಟ ಗಡುವನ್ನು ಸೆಳೆಯಲು ಶಾಶ್ವತ ಮಾರ್ಕರ್ ಬಳಸಿ ಗೆರೆಗಳನ್ನು ಮೂಡಿಸಿ. ಆದ್ದರಿಂದ ದಿನದ ಯಾವುದೇ ಸಮಯದಲ್ಲಿ ನೀವು ಎಷ್ಟು ನೀರು ಕುಡಿದಿರಬೇಕು ಮತ್ತು ನೀವು ಎಷ್ಟು ಕುಡಿದಿದ್ದೀರಿ ಎಂಬುದು ನಿಮಗೆ ತಿಳಿಯುತ್ತದೆ. "hydration schedule" ಎಂಬ ಕಾರ್ಯಕ್ರಮವನ್ನು ಅನುಸರಿಸಿ, ಮತ್ತು ಖಾಲಿಯಾದ ನಿಮ್ಮ ನೀರಿನ ಬಾಟಲಿಯನ್ನು ಪುನಃ ತುಂಬಿಸುವುದನ್ನು ಮರೆಯಬೇಡಿ.

6) ನೀರು ಕುಡಿಯಲು ಸ್ಟ್ರಾ ಬಳಸಿ

6) ನೀರು ಕುಡಿಯಲು ಸ್ಟ್ರಾ ಬಳಸಿ

ರೆಸ್ಟೋರೆಂಟ್‌ಗಳಲ್ಲಿನ ಪಾನೀಯಗಳನ್ನು ಯಾವಾಗಲೂ ಸ್ಟ್ರಾಗಳೊಂದಿಗೆ ನೀಡಲು ಒಂದು ಕಾರಣವಿದೆ: ನೀವು ಸ್ಟ್ರಾ ಬಳಸಿ ಕುಡಿದಾಗ ಕಡಿಮೆ ಸಮಯದಲ್ಲಿ ಹೆಚ್ಚು ನೀರನ್ನು ಕುಡಿಯುತ್ತೀರಿ. ನಿಮ್ಮ ನೀರಿನ ದಿನಚರಿಗೆ ಅದೇ ವಿಧಾನವನ್ನು ಅನ್ವಯಿಸಿ, ಮತ್ತು ನೀವು ಅಂದುಕೊಳ್ಳುವುದಕ್ಕಿಂತಲೂ ಹೆಚ್ಚು ನೀರನ್ನು ನೀವು ಕುಡಿದಿರುತ್ತೀರಿ ಹಾಗೂ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತೀರಿ.

7) ಖಾರವಾದ ಆಹಾರಗಳನ್ನು ಸೇವಿಸಿ

7) ಖಾರವಾದ ಆಹಾರಗಳನ್ನು ಸೇವಿಸಿ

ಕೆಲವು ಮಸಾಲೆಯುಕ್ತ ಮೇಲೋಗರ ಅಥವಾ ಡೈನಮೈಟ್ ಚಿಕನ್ ಫಜಿಟಾ ದಂತಹ ಆಹಾರಗಳನ್ನು ಸೇವಿಸಿದ ನಂತರ ನೀವು ಒಂದು ಲೋಟ ನೀರಿಗಾಗಿ ಹಂಬಲಿಸುವುದು ಸಾಮಾನ್ಯವಾಗಿದೆ. ಏಕೆಂದರೆ ಈ ಆಹಾರಗಳು ಕೊಂಚ ಖಾರವಾಗಿದ್ದು ಉಪ್ಪಿನಂಶವೂ ಇರುವುದರಿಂದ ಇವುಗಳನ್ನು ಸೇವಿಸಿದ ನಂತರ ತಪ್ಪದೇ ನೀರನ್ನು ಕುಡಿಯಲೇಬೇಕಾಗುತ್ತದೆ. ಹಾಗಾಗಿ ಆದಷ್ಟೂ ನಿಮ್ಮ ಅಹಾರದಲ್ಲಿ ಆರೋಗ್ಯಕರ ಮಸಾಲೆಗಳಿರುವುದನ್ನು ಖಚಿತಪಡಿಸಿಕೊಳ್ಳಿ.

8) ನೀವು ಮೆಚ್ಚುವ ನೀರಿನ ಬಾಟಲಿಯನ್ನು ಹುಡುಕಿ

8) ನೀವು ಮೆಚ್ಚುವ ನೀರಿನ ಬಾಟಲಿಯನ್ನು ಹುಡುಕಿ

ನಿಮ್ಮ ನೀರಿನ ಬಾಟಲಿಯನ್ನು ಯಾವಾಗ ಹೆಚ್ಚು ಹೆಚ್ಚಾಗಿ ಪ್ರೀತಿಸುತ್ತೀರೋ, ನೀವು ಅದನ್ನು ಪ್ರತಿದಿನ ಬಳಸುವ ಸಾಧ್ಯತೆಯೂ ಹೆಚ್ಚು. ನೀವು ದೊಡ್ಡ ಅಥವಾ ಸಣ್ಣ, ಕ್ರೀಡಾ ಅಥವಾ ಮುದ್ದಾದ, ಅಥವಾ ಪ್ಲಾಸ್ಟಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಅಥವಾ ನಿಮಗೆ ಇಷ್ಟವಾಗುವ ಯಾವುದೇ ಬಾಟಲಿಯನ್ನು ಆಯ್ದುಕೊಳ್ಳಬಹುದು. ಇಂದು ಮಾರುಕಟ್ಟೆಯಲ್ಲಿ ವಿಭಿನ್ನವಾದ ಆಯ್ಕೆಗಳಿವೆ. ಪರಿಪೂರ್ಣವಾಗಿ ಮರುಬಳಕೆ ಮಾಡಬಹುದಾದ ಬಾಟಲಿಗಳೂ ಇವೆ. ಬಿಸಾಡಬಹುದಾದ ನೀರಿನ ಬಾಟಲಿಯನ್ನು ಪುನಃ ತುಂಬಿಸುವ ಬದಲು (ಇದು ಒಳ್ಳೆಯದಲ್ಲ), ನೀವು ಇಷ್ಟಪಡುವ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯನ್ನು ಹುಡುಕಿ ಮತ್ತು ಅದನ್ನು ಸಾರ್ವಕಾಲಿಕವಾಗಿ ಬಳಸಿ. ಸಾಧ್ಯವಾದರೆ ಮಣ್ಣಿನ ಹೂಜಿಯನ್ನು ಬಳಸುವ ಸಾಧ್ಯತೆಯನ್ನೂ ಪರಿಗಣಿಸಿ.

9) ನೀವು ಬಾಯಾರಿಕೆಗೆ ಒಳಗಾಗುವ ಮುನ್ನವೇ ನೀರು ಕುಡಿಯಿರಿ

9) ನೀವು ಬಾಯಾರಿಕೆಗೆ ಒಳಗಾಗುವ ಮುನ್ನವೇ ನೀರು ಕುಡಿಯಿರಿ

"ಬಾಯಾರಿಕೆಯಾಗುವ ಸೂಚನೆಯ ಮೂಲಕ ಜಲಸಂಚಯನದ ಸ್ಥಿತಿಯನ್ನು ಪಡೆಯುವುದು ಉತ್ತಮ ಸೂಚಕವಲ್ಲ ಎಂದು ನೆನಪಿಡಿ" ಎಂದು ಲಾರ್ಸೆನ್ ಹೇಳುತ್ತಾರೆ. ನಿಮಗೆ ಬಾಯಾರಿಕೆಯಾಗುತ್ತಿದೆ ಎಂದರೆ ಈ ಹೊತ್ತಿಗೆ, ನಿಮ್ಮ ದೇಹದ ಕಾರ್ಯಕ್ಷಮತೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ನಿಮ್ಮ ದೇಹವು ಈಗಾಗಲೇ ಸಾಕಷ್ಟು ನೀರನ್ನು ಕಳೆದುಕೊಂಡಿದೆ ಎಂದೇ ಅರ್ಥ ಎಂದು ಲಾರ್ಸೆನ್ ಹೇಳುತ್ತಾರೆ. ಹಾಗಾಗಿ, ಬಾಯಾರಿಕೆಯ ಸೂಚನೆಯನ್ನು ದೇಹ ನೀಡುವ ಮುನ್ನವೇ ಸಾಕಷ್ಟು ನೀರು ಕುಡಿಯುತ್ತಾ ಇರುವುದೇ ಜಾಣತನದ ಕ್ರಮವಾಗಿದೆ. ಇದನ್ನು ಸಾಧ್ಯವಾಗಿಸಲು ನೀರಿನ ಬಾಟಲಿಯೊಂದನ್ನು ಸದಾ ಜೊತೆಗೆ ಕೊಂಡೊಯ್ಯಿರಿ ಹಾಗೂ ಕಾಲ ಕಾಲಕ್ಕೆ ಕುಡಿಯುತ್ತಿರಿ.

10) ನೀರಿನ ಬದಲು ನಿರ್ಜಲೀಕರಣಕ್ಕೆ ಕಾರಣವಾಗುವ ಪಾನೀಯಗಳನ್ನೆಂದೂ ಸೇವಿಸದಿರಿ

10) ನೀರಿನ ಬದಲು ನಿರ್ಜಲೀಕರಣಕ್ಕೆ ಕಾರಣವಾಗುವ ಪಾನೀಯಗಳನ್ನೆಂದೂ ಸೇವಿಸದಿರಿ

ಈ ಜಗತ್ತಿನಲ್ಲಿ ನೀರಿನಷ್ಟು ಅಮೂಲ್ಯವಾದುದು ಇನ್ನೊಂದಿಲ್ಲ. ನೀರಿನ ಅಗತ್ಯತೆಯನ್ನು ನೀರೇ ಪೂರೈಸಬೇಕೇ ಹೊರತು ಇತರ ದ್ರವಗಳಲ್ಲ "ಕೆಫೀನ್ ಭರಿತ ಪಾನೀಯಗಳು ಮತ್ತು ಸಕ್ಕರೆ ಹಾಗೂ ಸೋಡಾಗಳು ನಿಮ್ಮ ದೇಹದಲ್ಲಿ ನೀರಿನ ಸಂಗ್ರಹವನ್ನು ಕಡಿಮೆ ಮಾಡುತ್ತದೆ" ಎಂದು ಲಾರ್ಸೆನ್ ಹೇಳುತ್ತಾರೆ. "ಕೆಫೀನ್ ನಿಮ್ಮ ಮೂತ್ರಪಿಂಡವನ್ನು ನೀರನ್ನು ಹೊರಹಾಕಲು ಉತ್ತೇಜಿಸುತ್ತದೆ, ಮತ್ತು ಸಕ್ಕರೆ ಸೋಡಾ ನಿಮ್ಮ ಸುತ್ತಮುತ್ತಲಿನ ಅಂಗಾಂಶಗಳಿಂದ ಸೋಡಾದಲ್ಲಿ ಸಾಂದ್ರೀಕೃತ ಸಕ್ಕರೆಯನ್ನು ದುರ್ಬಲಗೊಳಿಸಲು ನೀರನ್ನು ಎಳೆಯುತ್ತದೆ, ಇದರಿಂದಾಗಿ ನಿಮ್ಮ ಜಲಸಂಚಯನದ ಪ್ರಮಾಣ ಕಡಿಮೆಯಾಗುತ್ತದೆ. ಬಿಸಿ, ಆರ್ದ್ರ ವಾತಾವರಣದಲ್ಲಿ ನಿಮ್ಮ ದೇಹದಲ್ಲಿ ಸಾಕಷ್ಟು ಆರ್ದ್ರತೆ ಉಳಿಸಿಕೊಳ್ಳುವಂತೆ ಮಾಡಲು ಇವೆರಡನ್ನೂ ಶಿಫಾರಸು ಮಾಡುವುದಿಲ್ಲ. " ಆದ್ದರಿಂದ ನೀವು ಬೆಳಿಗ್ಗೆ ಎದ್ದ ಕೂಡಲೇ ಆ ಕಪ್ ಕಾಫಿ ಅಥವಾ ಗಾಜಿನ ರಸವನ್ನು ತಲುಪುವ ಬದಲು, ಸಾದಾ ನೀರನ್ನು ಕುಡಿಯುವುದು ಅಗತ್ಯ.

11) ನಿಮ್ಮ ನೀರನ್ನು ತಿನ್ನಿ

11) ನಿಮ್ಮ ನೀರನ್ನು ತಿನ್ನಿ

ನೀರು ಕುಡಿಯುವುದಲ್ಲವೇ? ತಿನ್ನುವುದೆಲ್ಲಿಂದ ಬಂತು? ಅಚ್ಚರಿ ಪಡಬೇಡಿ. ನಿಸರ್ಗ ಹಲವಾರು ಫಲಗಳನ್ನು ನೀರಿನಂಶದಿಂದ ತುಂಬಿಸಿ ಕೊಟ್ಟಿದೆ. ಕಲ್ಲಂಗಡಿ ಹಣ್ಣು ಮತ್ತು ಸೌತೆ ಕಾಯಿ ಇದಕ್ಕೆ ಜ್ವಲಂತ ಉದಾಹರಣೆ. ಇವುಗಳಲ್ಲಿ ಶೇಖಡಾ ತೊಂಭತ್ತಕ್ಕೂ ಹೆಚ್ಚು ನೀರಿನಂಶವಿದೆ. ಇವನ್ನು ತಿಂದರೆ ಅಷ್ಟು ಪ್ರಮಾಣದ ನೀರನ್ನು ತಿಂದಂತೆಯೇ ಲೆಕ್ಕ.

ಹೆಚ್ಚಿನ ನೀರಿನ ಅಂಶ ಹೊಂದಿರುವ ಉಳಿದ ಆಹಾರಗಳೆಂದರೆ ಲೆಟ್ಯೂಸ್, ಸೆಲರಿ, ಮೂಲಂಗಿ, ಟೊಮ್ಯಾಟೊ, ಪಾಲಕ್, ದೊಣ್ಣೆ ಮೆಣಸು, ಸ್ಟ್ರಾಬೆರಿ, ಕೋಸುಗಡ್ಡೆ ಮತ್ತು ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಮೊದಲಾದವು. ಈ ಆಹಾರಗಳನ್ನು ನಿಮ್ಮ ದೈನಂದಿನ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಬೇಕು. ಇದೇ ಸಮಯದಲ್ಲಿ, ಲಾರ್ಸೆನ್ ಹೀಗೆ ಹೇಳುತ್ತಾರೆ, "ನಿಮ್ಮ ದೇಹದಲ್ಲಿ ಸಾಕಷ್ಟು ನೀರಿನಂಶ ಉಳಿಯಲು ಸಾಕಷ್ಟು ನೀರನ್ನು ಒದಗಿಸಲು ಸಾಧ್ಯವಿರುವ ಆಹಾರಗಳ ಸೇವನೆಯ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ಹಾಗಾಗಿ ನೀವು ಹೆಚ್ಚುವರಿ ನೀರನ್ನು ಕುಡಿಯಲೇಬೇಕು". ಇದರ ಅರ್ಥವೆಂದರೆ ನೀರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಜೊತೆಗೇ ನೀರನ್ನೂ ಸಾಕಷ್ಟು ಕುಡಿಯುತ್ತಿರಬೇಕು.

English summary

Ways to Drink More Water Every Day

Here we are discussing about These Tricks Will Help You Drink Enough Water. Water Your Body, or Daily Water. These are the sneaky ways you’re making yourself dehydrated. Read more.
X