For Quick Alerts
ALLOW NOTIFICATIONS  
For Daily Alerts

ಈ ಕೆಟ್ಟ ಅಹಾರ ಅಭ್ಯಾಸಗಳು ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಚ್ಚರ..!

|

ಬೆಳಗಿನ ಆಹಾರ ಇಡೀ ದಿನದ ಎಲ್ಲಾ ಹೊತ್ತಿನ ಅಹಾರಕ್ಕಿಂತ ನಿಮ್ಮ ಆರೋಗ್ಯದ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಇದರ ಬಗ್ಗೆ ವಿಶೇಷ ಕಾಳಜಿ ವಹಿಸುವುದ ಅತ್ಯಂತ ಮುಖ್ಯ. ಬೆಳಗಿನ ಉಪಾಹಾರ ಬಿಟ್ಟರೆ ನಿಮ್ಮ ರಕ್ತದ ಸಕ್ಕರೆಯ ಮಟ್ಟ ಕಡಿಮೆ ಅಗುತ್ತದೆ ಎಚ್ಚರ.

ಅದರಲ್ಲೂ ಮಧುಮೇಹ ರೋಗಿಗಳಂತೂ ಬೆಳಗಿನ ಆಹಾರ ಮತ್ತು ಅದರ ಪೌಷ್ಟಿಕಾಂಶಗಳ ಬಗ್ಗೆ ಸಾಕಷ್ಟು ಕಾಳಜಿವಹಿಸಲೇಬೇಕು.

These Poor Breakfast Habits Can Lead To Rise In Blood Sugar Levels in Kannada

ಅಧಿಕ ಕೊಬ್ಬಿನಾಂಶ, ಪ್ರೋಟೀನ್‌ ಇದ್ದರೂ ಆರೋಗ್ಯಕರವಲ್ಲ, ಉಪಾಹಾರ ಬಿಟ್ಟರೂ, ಪೈಬರ್‌ ಅಂಶ ಕಡಿಮೆ ಆದರೂ ಆರೋಗ್ಯಕರವಲ್ಲ.

ಈ 4 ಅನಾರೋಗ್ಯಕರ ಉಪಹಾರ ಅಭ್ಯಾಸಗಳು ದೇಹದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಉಂಟುಮಾಡಬಹುದು.

1. ಉಪಹಾರ ತಪ್ಪಿಸುವುದು

1. ಉಪಹಾರ ತಪ್ಪಿಸುವುದು

ಬೆಳಗಿನ ಊಟವನ್ನು ತಪ್ಪಿಸಿಕೊಂಡರೆ ಅದು ಆರೋಗ್ಯಕ್ಕೆ ಹಾನಿಕರ. ಸಂಶೋಧನೆಯ ಪ್ರಕಾರ, ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರು ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ರಕ್ತದ ಸಕ್ಕರೆಯ ತೀವ್ರ ಕಡಿಮೆ ಮಟ್ಟಕ್ಕರ ತಲುಪಬಹುದು ಎನ್ನಲಾಗಿದೆ.

2. ಪ್ರೋಟೀನ್ ಕೊರತೆ

2. ಪ್ರೋಟೀನ್ ಕೊರತೆ

ಸಂಶೋಧನೆಯ ಪ್ರಕಾರ, ಪ್ರೋಟೀನ್ ಸೇವನೆಯು ದೀರ್ಘಕಾಲದವರೆಗೆ ಹಸಿವನ್ನು ತಡೆಯುತ್ತದೆ. ಆದರೆ, ಹೆಚ್ಚಿನ ಪ್ರೋಟೀನ್ ಆಹಾರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಲ್ಪಾವಧಿಯ ಅಧ್ಯಯನಗಳು ಸೂಚಿಸಿವೆ. ಆದರೆ, ಹೆಚ್ಚಿನ ಪ್ರಮಾಣದ ಪ್ರಾಣಿ ಪ್ರೋಟೀನ್ ಅನ್ನು ತಪ್ಪಿಸಲೇಬೇಕು. ಇದು ಟೈಪ್ 2 ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸಬಹುದು. ಬೀನ್ಸ್, ಮಸೂರ, ಬೀಜಗಳು, ಮೀನು ಇತ್ಯಾದಿಗಳಲ್ಲಿ ಅಧಿಕ ಪ್ರೋಟೀನ್‌ಗಳಿದ್ದು, ನಿಮ್ಮ ಉಪಹಾರವು ಇಂಥಾ ಪ್ರೋಟೀನ್ನಿಂದ ಸಮೃದ್ಧವಾಗಿರಬೇಕು.

3. ಕೊಬ್ಬಿನಂಶ

3. ಕೊಬ್ಬಿನಂಶ

ಅಧಿಕ ಕೊಬ್ಬಿನಂಶದ ಉಪಹಾರವು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರ ಕ್ರಮವಲ್ಲ. ಕೊಬ್ಬುಗಳು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದು ಅಂತಿಮವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟಗಳ ಏರಿಕೆಯನ್ನು ನಿಧಾನಗೊಳಿಸುತ್ತದೆ. ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ ಕೊಬ್ಬುಗಳು ಹಾನಿಕಾರಕವಲ್ಲ. ಕೊಬ್ಬಿನ ಅತಿಯಾದ ಸೇವನೆಯು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಬಹುದು. ಇನ್ಸುಲಿನ್ ಪ್ರತಿರೋಧವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಸ್ಪೈಕ್ ಇರುವ ಸ್ಥಿತಿಯಾಗಿದೆ.

4. ಉಪಹಾರದಲ್ಲಿ ಫೈಬರ್ ಅನ್ನು ತಪ್ಪಿಸುವುದು

4. ಉಪಹಾರದಲ್ಲಿ ಫೈಬರ್ ಅನ್ನು ತಪ್ಪಿಸುವುದು

ಬೆಳಗಿನ ಉಪಾಹಾರದಲ್ಲಿ ಫೈಬರ್ ಭರಿತ ಆಹಾರವನ್ನು ಎಂದಿಗೂ ತಪ್ಪಿಸಬಾರದು. ಫೈಬರ್ ಭರಿತ ಆಹಾರದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಗತ್ಯ ಪ್ರಮಾಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

English summary

These Poor Breakfast Habits Can Lead To Rise In Blood Sugar Levels in Kannada

Here we are discussing about These Poor Breakfast Habits Can Lead To Rise In Blood Sugar Levels in Kannada. Read more.
Story first published: Wednesday, August 17, 2022, 11:23 [IST]
X
Desktop Bottom Promotion