For Quick Alerts
ALLOW NOTIFICATIONS  
For Daily Alerts

ಪಾದಗಳ ಆರೋಗ್ಯಕ್ಕೆ ನಿತ್ಯ ಈ ವ್ಯಾಯಾಮಗಳನ್ನು ತಪ್ಪದೇ ಮಾಡಿ

|

ಉತ್ತಮ ದೈಹಿಕ ಆರೋಗ್ಯವನ್ನು ಹೊಂದಲು ಪೌಷ್ಟಿಕಾಂಶ ಭರಿತ ಊಟ-ತಿಂಡಿಯನ್ನು ಮಾಡಿದರೆ ಸಾಲದು. ಅದರ ಜೊತೆಗೆ ಒಂದಿಷ್ಟು ದೈಹಿಕ ವ್ಯಾಯಾಮ ಅಥವಾ ದೇಹ ದಂಡನೆಯು ಆಗಬೇಕು, ಇಲ್ಲವಾದರೆ ದೇಹದಲ್ಲಿ ಅನಗತ್ಯ ಬೊಜ್ಜು ಸಂಗ್ರಹವಾಗುತ್ತವೆ. ಅನಗತ್ಯವಾದ ಬೊಜ್ಜು ಮತ್ತು ದೇಹದ ತೂಕವು ನಮ್ಮ ಕಾಲು ಮತ್ತು ಪಾದಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ದೇಹದ ತೂಕ ಹೆಚ್ಚಾದಂತೆ ಪಾದಗಳಿಗೆ ತೂಕದ ನಿರ್ವಹಣೆ ಕಷ್ಟವಾಗುವುದು. ಆಗ ಮಂಡಿ ನೋವು, ಪಾದಗಳ ಸೆಳೆತ ಮತ್ತು ಅತಿಯಾದ ಆಯಾಸ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ನಮ್ಮ ಪಾದಗಳು ನಮ್ಮ ದೇಹದ ಸಂಪೂರ್ಣ ತೂಕವನ್ನು ಹೊರುತ್ತವೆ. ನಾವು ನಿಲ್ಲುವಾಗ, ನಡೆಯುವಾಗ, ಕೆಲಸ ಮಾಡುವಾಗ, ಓಡುವಾಗ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲೂ ನಮ್ಮ ಪಾದಗಳು ನಮಗೆ ಬೆಂಬಲಿಸುತ್ತವೆ. ದೇಹದ ಸಂಪೂರ್ಣ ಭಾರವನ್ನು ಹೊರುವಾಗ ಪಾದಗಳ ಸ್ನಾಯುಗಳು ದಿನವಿಡೀ ಕೆಲಸ ಮಾಡುತ್ತಿರುತ್ತವೆ. ಹಾಗಾಗಿ ನಾವು ನಮ್ಮ ಪಾದಗಳ ಆರೈಕೆ ಹಾಗೂ ಶಕ್ತಿಯನ್ನು ಹೆಚ್ಚಿಸಲು ಸೂಕ್ತ ಗಮನ ನೀಡಬೇಕು. ಅದಕ್ಕಾಗಿ ಕೆಲವು ಆಸನಗಳನ್ನು ಅಥವಾ ವ್ಯಾಯಾಮಗಳನ್ನು ಮಾಡಬೇಕು.

ಸಾಮಾನ್ಯವಾಗಿ ನಾವು ದೇಹವನ್ನು ದಂಡಿಸಲು ವಿವಿಧ ವ್ಯಾಯಾಮ, ಯೋಗಾಸನ, ನಡಿಗೆ, ಓಟಗಳನ್ನು ಮಾಡುತ್ತೇವೆ. ಆದರೆ ಪ್ರತ್ಯೇಕವಾಗಿ ಪಾದಗಳ ಬಗ್ಗೆ ಕಾಳಜಿಯನ್ನು ವಹಿಸುವುದು ಕಮ್ಮಿ. ಪಾದಗಳ ಆರೈಕೆಗೆ ಮತ್ತು ಅವುಗಳ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೆಲವು ಸ್ಟ್ರೆಚಸ್ ಗಳನ್ನು ಮಾಡಬೇಕು. ಅವುಗಳ ಮಾಹಿತಿ ನಿಮಗೂ ಬೇಕಿದ್ದರೆ ಈ ಮುಂದಿನ ವಿವರಣೆಯನ್ನು ಪರಿಶೀಲಿಸಿ.

ಓಟಗಾರರ ಸ್ಟ್ರೆಚಸ್

ಓಟಗಾರರ ಸ್ಟ್ರೆಚಸ್

ಓಟಗಾರರ ಪಾದಗಳು ಅತ್ಯಂತ ಬಿಗಿಯಾದ ಸ್ನಾಯುಗಳಿಂದ ಕೂಡಿರುತ್ತವೆ. ಓಟಗಾರರು ಓಡುವಾಗ ಪಾದಗಳ ಹಿಗ್ಗಿಸುವಿಕೆಯನ್ನು ಸುಲಭವಾಗಿ ಮಾಡುತ್ತಾರೆ. ಅದು ಅವರ ಓಟದ ವೇಗವನ್ನು ಹೆಚ್ಚಿಸಲು ಸಹಾಯ ಮಾಡುವುದು.

ಓಟಗಾರರ ಸ್ಟ್ರೆಚಸ್ ಮಾಡುವ ವಿಧಾನ

ಮೊದಲು ನೆಲದ ಮೇಲೆ ನೇರವಾಗಿ ನಿಂತುಕೊಳ್ಳಬೇಕು. ನಂತರ ನಿಮ್ಮ ಮುಂಭಾಗದ ಕಾಲನ್ನು 90 ಡಿಗ್ರಿ ಕೋನದ ಅಳತೆಯಲ್ಲಿ ನೇರವಾಗಿ ನಿಂತುಕೊಳ್ಳಿ. ನಂತರ ಹಿಂಭಾಗದ ಕಾಲಿನ ಹಿಮ್ಮಡಿಯನ್ನು ನೆಲದ ಕಡೆಗೆ ನಿಧಾನವಾಗಿ ಎಳೆಯಲು ಪ್ರಯತ್ನಿಸಿ. ಈ ಭಂಗಿಯನ್ನು 30 ಸೆಕೆಂಡ್‌ಗಳ ಕಾಲ ಹಿಡಿದುಕೊಳ್ಳಿ. ನಂತರ ಇತರ ಕಾಲುಗಳಿಂದ ಪುನರಾವರ್ತಿಸಿ.

ಹೆಬ್ಬೆರಳಿನ ಸ್ಟ್ರೆಚ್

ಹೆಬ್ಬೆರಳಿನ ಸ್ಟ್ರೆಚ್

ನಮ್ಮ ಪಾದಗಳು ಅನೇಕ ಮೂಳೆಗಳು ಮತ್ತು ಆಂತರಿಕ ಸ್ನಾಯುಗಳಿಂದ ಕೂಡಿದೆ. ಅವು ನಮಗೆ ನಡೆಯಲು, ನೃತ್ಯ ಮಾಡಲು, ಓಡಲು ಸೇರಿದಂತೆ ಇನ್ನಿತರ ಸಂಕೀರ್ಣಗಳನ್ನು ನಿರ್ವಹಿಸಲು ಸಹಾಯ ಮಾಡುವುದು. ವಯಸ್ಸಾದಂತೆ ನಮ್ಮ ಪಾದಗಳ ಶಕ್ತಿಯು ಕ್ಷೀಣಿಸುತ್ತಾ ಬರುವುದು. ಹಾಗಾಗಿ ಹೆಬ್ಬೆರಳಿನ ಸ್ಟ್ರೆಚ್ ಅನುಸರಿಸುವುದು ಉತ್ತಮ.

ಹೆಬ್ಬೆರಳಿನ ಸ್ಟ್ರೆಚ್ ಮಾಡುವ ವಿಧಾನ

ಈ ವಿಧಾನವು ಅತ್ಯಂತ ಸರಳ. ನಿಮ್ಮ ಕೈಬೆರಳುಗಳನ್ನು ಹರಡಿಕೊಂಡಂತೆ ಕಾಲ್ಬೆರಳುಗಳನ್ನು ಸಹ ಹರಡಿಕೊಳ್ಳಿ. ಅವುಗಳನ್ನು ಒಮ್ಮೆ ಹಿಗ್ಗಿಸಿ. ನಂತರ ಸಾಮಾನ್ಯ ಸ್ಥಿತಿಗೆ ತನ್ನಿ. ಮತ್ತೆ ಅದೇ ಕ್ರಮವನ್ನು ಅನುಸರಿಸಿ. ದಿನದಲ್ಲಿ 8ರಿಂದ 10 ಬಾರಿ ಮಾಡಿ. ಈ ಕ್ರಮವನ್ನು ದಿನದಲ್ಲಿ ಯಾವುದೇ ಸಮಯದಲ್ಲಾದರೂ ಮಾಡಬಹುದು.

ಮುಂಜಾನೆಯ ಸ್ಟ್ರೆಚ್

ಮುಂಜಾನೆಯ ಸ್ಟ್ರೆಚ್

ಕಾಲಿನ ಆರೋಗ್ಯ ಹಾಗೂ ಶಕ್ತಿಯನ್ನು ಹೆಚ್ಚಿಸಲು ನೀವು ಬಯಸುತ್ತೀರಿ ಎಂದಾದರೆ ನಿಮಗೆ ಈ ವ್ಯಾಯಾಮ ಉತ್ತಮವಾಗುವುದು.

ಮುಂಜಾನೆಯ ಸ್ಟ್ರೆಚ್ ಮಾಡುವ ವಿಧಾನ

ಈ ವ್ಯಾಯಾಮ ಮಾಡಲು ನಿಮಗೆ ಸ್ಥಿತಿಸ್ಥಾಪಕತ್ವ ಬೇಕಾಗುವುದು. ಮೊದಲು ನಿಮ್ಮ ಮೊಣಕಾಲುಗಳನ್ನು ಬಾಗಿಸಿ ಕುರ್ಚಿಯ ಮೇಲೆ ಕುಳಿತಂತೆ ಮಾಡಬೇಕು. ಆದರೆ ಕುರ್ಚಿಯನ್ನು ಬಳಸಬಾರದು. ನಂತರ ನಿಧಾನವಾಗಿ ನಿಮಗೆ ನಿಮ್ಮ ಕಾಲನ್ನು ಎಷ್ಟು ವಿಸ್ತರಿಸಲು ಸಾಧ್ಯವಾಗುವುದೋ ಅಷ್ಟು ವಿಸ್ತರಿಸಿ. ನಿಮ್ಮ ಬೆನ್ನು ಮೂಳೆಯು ನೇರವಾಗಿ ಇರಬೇಕು. ಈ ಭಂಗಿಯನ್ನು 20 ಸೆಕೆಂಡ್‌ಗಳ ಕಾಲ ಮಾಡಿ. ನಂತರ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ.

ಮಾರ್ಬಲ್ ಪಿಕ್

ಮಾರ್ಬಲ್ ಪಿಕ್

ಮಾರ್ಬಲ್ ಪಿಕ್ ವ್ಯಾಯಾಮವು ನಿಮ್ಮ ಕಾಲ್ಬೆರಳುಗಳಿಗೆ ಅತ್ಯುತ್ತಮವಾದ ವ್ಯಾಯಾಮವನ್ನು ಕೊಡುವುದು. ಇದು ಪಾದಗಳ ವಿವಿಧ ಅಂಗಗಳನ್ನು ಸಹ ಬಲಪಡಿಸುತ್ತದೆ.

ಮಾರ್ಬಲ್ ಪಿಕ್ ಮಾಡುವ ವಿಧಾನ

ಮೊದಲು ಒಂದು ಬುಟ್ಟಿಯಲ್ಲಿ ಮಾರ್ಬಲ್ ಕಲ್ಲು ತುಂಬಿಸಿ ಇಟ್ಟಿಕೊಳ್ಳಿ. ಇನ್ನೊಂದು ಕಾಲಿ ಬುಟ್ಟಿಯನ್ನು ಅದರ ಪಕ್ಕದಲ್ಲಿ ಇಡಿ. ನಂತರ ಅವುಗಳ ಎದುರಿಗೆ ಒಂದು ಕುರ್ಚಿಯನ್ನು ಇಟ್ಟುಕೊಳ್ಳಿ. ಅದರಲ್ಲಿ ನೀವು ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಒಂದು ಪಾದದ ಕಾಲ್ಬೆರಳುಗಳಿಂದ ಬುಟ್ಟಿಯಲ್ಲಿರುವ ಮಾರ್ಬಲ್ ಕಲ್ಲನ್ನು ಎತ್ತಿ ಇನ್ನೊಂದು ಬುಟ್ಟಿಯಲ್ಲಿ ಹಾಕಿ. ಹೀಗೆ ಎರಡು ಪಾದಗಳ ಕಾಲ್ಬೆರಳುಗಳಿಂದ ಕಲ್ಲುಗಳನ್ನು ಎತ್ತಿ ಕಾಲಿ ಬುಟ್ಟಿಗೆ ಹಾಕಿ. ಮೊದಲು 10 ಮಾರ್ಬಲ್ ಕಲ್ಲುಗಳನ್ನು ಎತ್ತುವ ಗುರಿಯನ್ನು ಇಟ್ಟುಕೊಳ್ಳಿ. ನಂತರ ಅದರ ಸಂಖ್ಯೆಯನ್ನು ನಿಧಾನವಾಗಿ ಹೆಚ್ಚಿಸುತ್ತಾ ಬನ್ನಿ.

English summary

These Foot Stretches You Should Do Every Day

Our feet carry the entire weight of our body. They support us when we are standing, walking, running, wearing heels or doing any other work. The muscles of our feet work throughout the day to balance the weight of our body. But as we get older, the muscles of our feet get weak and people often experience foot and ankle pain. To prevent such complications later in life, it is important to take necessary steps now. Here we are giving ideas for foot stretches you should do every day. Read on.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more