For Quick Alerts
ALLOW NOTIFICATIONS  
For Daily Alerts

ಉದ್ಯೋಗಸ್ಥ ತಾಯಂದಿರು ಎದುರಿಸುವ ಆರೋಗ್ಯ ಸಮಸ್ಯೆಗಳಿವು..! ನಿಮ್ಮ ಸ್ವಾಸ್ಥ್ಯದ ಬಗ್ಗೆ ನಿರ್ಲಕ್ಷ್ಯ ಬೇಡ..

|

ಹೆಚ್ಚಿನ ಮಹಿಳೆಯರು ಮಗುವಾದ ಮೇಲೂ ಉದ್ಯೋಗ ಮಾಡುತ್ತಾರೆ. ಕೆಲವೊಮ್ಮೆ ಅದರ ಅನಿವಾರ್ಯತೆಯೂ ಇರುತ್ತದೆ. ಆದರೆ ಮಗುವಾದ ಮೇಲೆ ಆಫೀಸು ಕೆಲಸದ ಜೊತೆಗೆ ಮಗುವಿನ ಕಾಳಜಿಯನ್ನೂ ವಹಿಸುವುದು ಒಂದು ಸವಾಲು ಎನ್ನಬಹುದು. ಆಫೀಸು ಕೆಲಸ ಮಾಡುತ್ತಾ ಮಗುವನ್ನು ನೋಡಿಳ್ಳುವ ಜೊತೆಗೆ ಇತರ ಮನೆಕೆಲಸವನ್ನೂ ಮಾಡುವ ಮಹಿಳೆಗೆ ಇತರರು ಸೂಪರ್‌ ವುಮನ್‌ ಎನ್ನಬಹುದು.

123

ಆದರೆ ವಾಸ್ತವವಾಗಿ ತಮಗಾಗಿ ಸ್ವಆರೈಕೆಯನ್ನು ಮಾಡಿಕೊಳ್ಳಲೂ ಪುರುಸೊತ್ತು ಇವರಿಗಿರುವುದಿಲ್ಲ. ಇತರರಿಗೆ ಇವರು ತುಂಬಾ ಚಟುವಟಿಕೆಯಿಂದ ಕೂಡಿರುವಂತೆ ಕಾಣಬಹುದು. ಆದರೆ ಇವರನ್ನು ಭಾದಿಸುವ ಸಮಸ್ಯೆಗಳು ಹಲವಾರು. ಅವುಗಳ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಸಾಮಾನ್ಯ ಸಮಸ್ಯೆಗಳು

ಸಾಮಾನ್ಯ ಸಮಸ್ಯೆಗಳು

ಮನೆ, ಆಫೀಸು, ಮಗುವಿನ ಆರೈಕೆಯನ್ನು ನಿಭಾಯಿಸುವ ಅನೇಕ ತಾಯಂದಿರು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಎರಡೂ ಕಡೆಗಣಿಸಲಾಗದ ಕರ್ತವ್ಯಗಳು ತಾಯಂದಿರನ್ನು ತೀವ್ರ ಒತ್ತಡಕ್ಕೆ ಒಳಪಡಿಸುತ್ತದೆ. ಇದೇ ಮುಂದೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ತಾಯಂದಿರಲ್ಲಿ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುವ ಅಂಶಗಳೆಂದರೆ ನಿರಂತರ ಒತ್ತಡ, ಅನಾರೋಗ್ಯಕರ ಆಹಾರ ಸೇವನೆ, ವಿಶ್ರಾಂತಿಯ ಕೊರತೆ, ಊಟವನ್ನು ಬಿಟ್ಟುಬಿಡುವುದು, ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ಕೆಲಸ ಮತ್ತು ಜೀವನದ ಮಧ್ಯೆ ಸಮತೋಲನವಿಲ್ಲದಿರುವುದು. ಕೆಲಸ ಮಾಡುವ ತಾಯಂದಿರು ಎದುರಿಸುವ ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳೆಂದರೆ..

೧. ಒತ್ತಡ ಮತ್ತು ಆತಂಕ

೧. ಒತ್ತಡ ಮತ್ತು ಆತಂಕ

ಹೆಚ್ಚಿನ ಕೆಲಸ ಮಾಡುವ ತಾಯಂದಿರು ವಿಶ್ರಾಂತಿಯಿಲ್ಲದೆ ಕೆಲಸ ಮಾಡುತ್ತಾರೆ, ಇದು ಅವರನ್ನು ದಣಿವು ಮತ್ತು ಒತ್ತಡಕ್ಕೆ ಸಿಲುಕಿಸುತ್ತದೆ. ಮಗುವನ್ನು ನೋಡಿಕೊಳ್ಳುವ ಮತ್ತು ರಾತ್ರಿಯಲ್ಲಿ ಮಗುವಿಗೆ ಹಾಲುಣಿಸುವ ಯುವ ತಾಯಂದಿರು ನಿದ್ರಾಹೀನತೆಯಿಂದಲೂ ಬಳಲುತ್ತಾರೆ ಮತ್ತು ಸಾಮಾನ್ಯವಾಗಿ 8 ಗಂಟೆಗಳಿಗಿಂತ ಕಡಿಮೆ ನಿದ್ರೆಯನ್ನು ಪಡೆಯುತ್ತಾರೆ. ಇದು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಇತರ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಅವರ ಕೆಲಸ-ಜೀವನದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದಾಗಿ ಅವರು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಾರೆ.

೨. ಹೃದಯದ ಸಮಸ್ಯೆ

೨. ಹೃದಯದ ಸಮಸ್ಯೆ

ನಿರಂತರ ಒತ್ತಡ ಮತ್ತು ಚಿಂತೆಯನ್ನು ಅನುಭವಿಸುವ ಮಹಿಳೆಯರು ಹೃದಯದ ಸಮಸ್ಯೆಗಳನ್ನು ಹೊಂದುವ ಸಾಧ್ಯತೆ ಇದೆ. ಕೆಲಸ ಮಾಡುವ ತಾಯಂದಿರು 35ವರ್ಷ ವಯಸ್ಸಿನವರೂ ಕೂಡಾ ತಮ್ಮ ಅಸಮತೋಲಿತ ಜೀವನಶೈಲಿಯಿಂದಾಗಿ ಹೃದಯ ಸಮಸ್ಯೆಗೆ ಒಳಗಾಗುತ್ತಾರೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡವು ಕಳಪೆ ಆಹಾರ ಪದ್ಧತಿ, ಆಗಾಗ್ಗೆ ಊಟವನ್ನು ಬಿಟ್ಟುಬಿಡುವುದು, ಒತ್ತಡದ ಜೀವನಶೈಲಿ ಮತ್ತು ಸಾಕಷ್ಟು ದೈಹಿಕ ಚಟುವಟಿಕೆಯ ಕೊರತೆಯಿಂದ ಉಂಟಾಗುತ್ತದೆ.

೩. ಥೈರಾಯ್ಡ್

೩. ಥೈರಾಯ್ಡ್

ಕೆಲಸ ಮಾಡುವ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆರೋಗ್ಯ ಸಮಸ್ಯೆಯೆಂದರೆ ಥೈರಾಯ್ಡ್‌. ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಹೈಪೋಥೈರಾಯ್ಡಿಸಮ್ ಅನ್ನು ಹೊಂದಿರುತ್ತಾರೆ. ಗರ್ಭಾವಸ್ಥೆಯಲ್ಲಿ ಮತ್ತು ನಂತರ ಹಾರ್ಮೋನುಗಳ ಬದಲಾವಣೆಯಿಂದಾಗಿ, ಹೆಚ್ಚಾಗಿ ತಾಯಂದಿರು ಥೈರಾಯ್ಡ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಚಯಾಪಚಯವನ್ನು ಕಡಿಮೆ ಮಾಡುತ್ತದೆ, ತೂಕ ಹೆಚ್ಚಾಗಲು ಮತ್ತು ಅನಿಯಮಿತ ಮುಟ್ಟಿಗೂ ಕಾರಣವಾಗುತ್ತದೆ. ಇದು ಕಿರಿಕಿರಿಯನ್ನು ಸಹ ಉಂಟುಮಾಡುತ್ತದೆ. ಇದರಿಂದಾಗಿ ನಿರ್ಜಲೀಕರಣ ಮತ್ತು ದೀರ್ಘಕಾಲದ ಮಲಬದ್ಧತೆ ಎರಡೂ ಸಾಮಾನ್ಯವಾಗಿದೆ.

4. ದೀರ್ಘಕಾಲದ ಬೆನ್ನುನೋವು

4. ದೀರ್ಘಕಾಲದ ಬೆನ್ನುನೋವು

ಕೆಲಸ ಮಾಡುವ ಮಹಿಳೆಯರು ಹೆಚ್ಚಾಗಿ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಮುಂದೆ ದೀರ್ಘಕಾಲ ಕುಳಿತುಕೊಳ್ಳಬೇಕಾಗುತ್ತದೆ. ದೇಹದ ಚಲನೆಗಳಿಲ್ಲದೆ ಕುರ್ಚಿಗೆ ಅಂಟಿಕೊಂಡಂತೆ ಕುಳಿತುಕೊಳ್ಳುವುದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೇ ಆಫೀಸಿನಿಂದ ಮನೆಗೆ ಬಂದ ಮೇಲೆ ವಿಶ್ರಾಂತಿಯನ್ನೂ ಪಡೆಯದೆ ತಮ್ಮ ಕುಟುಂಬವನ್ನು ನೋಡಿಕೊಳ್ಳಬೇಕಾಗುತ್ತದೆ ಇದರ ಪರಿಣಾಮವಾಗಿ, ಅವರು ನಿರಂತರವಾಗಿ ಬೆನ್ನು ನೋವನ್ನು ಎದುರಿಸುತ್ತಾರೆ, ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ತೀವ್ರಗೊಳ್ಳುತ್ತದೆ.

5. ಪೌಷ್ಠಿಕಾಂಶದ ಕೊರತೆ

5. ಪೌಷ್ಠಿಕಾಂಶದ ಕೊರತೆ

ಹೆಚ್ಚಿನ ತಾಯಂದಿರು ಹಾಗೂ ಮಹಿಳೆಯರು ಸಮಯದ ಕೊರತೆ ಮತ್ತು ಸ್ವಯಂ-ಆರೈಕೆಯ ಕಾರಣದಿಂದಾಗಿ ಮಹಿಳೆಯರು ಸಾಮಾನ್ಯವಾಗಿ ತಮ್ಮ ಆಹಾರವನ್ನು ನಿರ್ಲಕ್ಷಿಸುತ್ತಾರೆ ಅಥವಾ ಆಹಾರ ಸೇವಿಸುವ ಸಮಯವನ್ನು ಸ್ಕಿಪ್‌ ಮಾಡುತ್ತಾರೆ. ಅವರು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಆದರೆ ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುತ್ತಾರೆ. ಇದು ಕಬ್ಬಿಣ, ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಕೊರತೆಗೆ ಕಾರಣವಾಗುತ್ತದೆ.

6. ಮಾನಸಿಕ ಆರೋಗ್ಯ

6. ಮಾನಸಿಕ ಆರೋಗ್ಯ

ಹೆಚ್ಚಿನ ಉದ್ಯೋಗಸ್ಥ ತಾಯಂದಿರು ಮಗುವನ್ನು ಮನೆಯಲ್ಲಿ ತಮ್ಮ ಪೋಷಕರೊಂದಿಗೆ ಬಿಟ್ಟೋ ಅಥವಾ ಡೇಕೇರ್‌ನಲ್ಲಿ ಹಾಕಿ ಕೆಲಸಕ್ಕೆ ಹೋಗಿಬಿಡುತ್ತಾರೆ. ಆದರೆ ಆಫೀಸಿನಲ್ಲಿಯೂ ಮಗುವಿನದೇ ಚಿಂತೆ ಹೆಚ್ಚು ಕಾಡುತ್ತದೆ. ಇದರಿಂದಾಗಿ ಕೆಲಸದ ಮೇಲೂ ಏಕಾಗ್ರತೆ ಕಡಿಮೆಯಾಗಬಹುದು. ಮೊದಲಿನಂತೆ ಕೆಲಸ ಮಾಡಲೂ ಅಸಾಧ್ಯವಾಗಬಹುದು. ಸಂಶೋಧನೆಯ ಪ್ರಕಾರ ಮಹಿಳೆಯರು ಪುರುಷರಿಗಿಂತ ಹೆಚ್ಚು ದಣಿಯುತ್ತಾರೆ ಮತ್ತು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರಂತೆ. ಯಾಕೆಂದರೆ ಕೆಲಸದ ಜೊತೆಗೆ ಕುಟುಂಬದ ಕಾಳಜಿಯ ಹೊರೆಯೂ ಅವರ ಮೇಲಿರುತ್ತದೆ. ಇದು ನಿಶ್ಯಕ್ತಿ, ಸಿನಿಕತನ, ಬಯಕೆಯ ಕೊರತೆ, ತಲೆನೋವು, ಎದೆಯಲ್ಲಿ ಬಿಗಿತ, ವಾಕರಿಕೆ, ಹೊಟ್ಟೆನೋವು ಮತ್ತು ಕೆಲವೊಮ್ಮೆ ಹೆಚ್ಚು ಭಾವುಕವಾಗಿ ಅಳುವುದು ಮುಂತಾದ ಮಾನಸಿಕ ಮತ್ತು ದೈಹಿಕ ಲಕ್ಷಣಗಳನ್ನು ಉಂಟುಮಾಡುತ್ತದೆ.

ತಾಯಿಯಾಗಿ, ಉದ್ಯೋಗಸ್ಥೆಯಾಗಿ ಮುಂದುವರಿಯುವುದು ಸುಲಭದ ಮಾತಲ್ಲ, ಮನೆ, ಕೆಲಸ, ಮಕ್ಕಳು, ಕುಟುಂಬವರಿಗಾಗಿಯೇ ತಮ್ಮ ಹೆಚ್ಚಿನ ಸಮಯವನ್ನು ಕಳೆದುಬಿಡುತ್ತಾರೆ. ತಮ್ಮ ಬಗ್ಗೆ ಕಾಳಜಿ ವಹಿಸಲು ಸಮಯವೇ ಸಿಗದು. ಆದರೆ ತಾಯಿಯಾಗಿ, ಉದ್ಯೋಗಸ್ಥ ಮಹಿಳೆಯಾಗಿ ನಿಮಗಾಗಿ, ನಿಮ್ಮ ಸ್ವಆರೈಕೆಗಾಗಿ ಸಮಯವನ್ನು ಮೀಸಲಿಡಿ. ದೇಹವು ವಿಶ್ರಾಂತಿ ಬಯಸಿದಾಗ ಖಂಡಿತವಾಗಿಯೂ ವಿಶ್ರಾಂತಿ ಪಡೆದುಕೊಳ್ಳಿ. ನಿಯಮಿತ ಆರೋಗ್ಯ ತಪಾಸಣೆಯ ಜೊತೆಗೆ, ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮದ ಜೊತೆಗೆ ಸಾಕಷ್ಟು ನಿದ್ದೆಯನ್ನೂ ಮಾಡಿ. ನಿಮಗಾಗಿ ಸಮಯ ಬೇಕೆನಿಸಿದಾಗ ಮಗುವನ್ನು ಪೋಷಕರೊಂದಿಗೆ ಬಿಟ್ಟು, ಅಥವಾ ಪತಿಯೊಂದಿಗೆ ಬಿಟ್ಟು ವಿಶ್ರಾಂತಿ ಪಡೆಯಿರಿ ಅಥವಾ ನಿಮ್ಮಿಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮಗು, ಕುಟುಂಬದವರ ಆರೋಗ್ಯದ ಕಾಳಜಿಯ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ನಿಮಗೆ ಗಮನವಿರಲಿ.

Read more about: health
English summary

these are health problems faced by working mother in kannada

here we are discussing about these are health problems faced by working mother in kannada. Read more.
X
Desktop Bottom Promotion