For Quick Alerts
ALLOW NOTIFICATIONS  
For Daily Alerts

ದೀರ್ಘಕಾಲ ಬದುಕಬೇಕೇ? ಹಾಗಾದರೆ ಈ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

|

ಆರೋಗ್ಯಕರ ಮತ್ತು ಸಂತೋಷದ ಜೀವನ ಪ್ರತಿಯೊಬ್ಬರ ಅಂತಿಮ ಗುರಿ. ಆದರೆ ಅದನ್ನು ಪಡೆಯುವುದು ಹೇಗೆ? ಇಂದಿನ ಅನಾರೋಗ್ಯಕರ ಜೀವನಶೈಲಿಯು ಅಕಾಲಿಕ ಮರಣಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಇದನ್ನು ತಪ್ಪಿಸಲು, ದೀರ್ಘಾಯುಷ್ಯ ಪಡೆಯಲು ನಾವು ಆರೋಗ್ಯಕರ ಆಹಾರ ಪದ್ಧತಿ ಪಾಲಿಸುವುದು ತುಂಬಾ ಮುಖ್ಯ.

ಇಟಲಿ, ಒಕಿನಾವಾ, ಜಪಾನ್, ಲೋಮಾ ಮೊದಲಾದ ದೇಶಗಳಲ್ಲಿ ಜನರು ಹೆಚ್ಚು ಕಾಲ ಬದುಕುತ್ತಿದ್ದಾರಂತೆ. ಅವರ ಈ ದೀರ್ಘಾಯಸ್ಸಿನ ರಹಸ್ಯವೆಂದರೆ, ದಿನನಿತ್ಯ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿ. ಹಾಗಾದರೆ ಅವರು ಸೇವಿಸುವ ಆಹಾರದಲ್ಲಿ ಏನೇನಿದೆ? ಹೆಚ್ಚು ಕಾಲ ಬದುಕಲು ಎಂತಹ ಆಹಾರ ಸೇವಿಸಬೇಕು ಎಂಬುದನ್ನು ಇಲ್ಲಿ ನೋಡೋಣ.

ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಆಹಾರ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಬೀನ್ಸ್ ತಿನ್ನಿ:

ಬೀನ್ಸ್ ತಿನ್ನಿ:

ಪ್ರತಿದಿನ ಕನಿಷ್ಠ ಅರ್ಧ ಕಪ್ ಬೀನ್ಸ್ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ದೈನಂದಿನ ಆಹಾರದಲ್ಲಿ ವಿವಿಧ ರೀತಿಯ ಬೀನ್ಸ್ ಸೇರಿಸಿ. ಇವುಗಳು ಸಸ್ಯ ಆಧಾರಿತ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಫೈಬರ್‌ನಿಂದ ತುಂಬಿರುತ್ತವೆ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಜೊತೆಗೆ, ಕರುಳಿನ ಆರೋಗ್ಯವನ್ನು ಸುಧಾರಿಸಿ, ವಿವಿಧ ರೋಗಗಳ ಅಪಾಯವನ್ನು ಕಡಿಮೆ ಮಾಡುವುದು.

ಕ್ರೂಸಿಫೆರಸ್ ತರಕಾರಿಗಳಿರಲಿ:

ಕ್ರೂಸಿಫೆರಸ್ ತರಕಾರಿಗಳಿರಲಿ:

ಹೂಕೋಸು, ಎಲೆಕೋಸು, ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ. ಇವುಗಳು ನೈಸರ್ಗಿಕ ಸಂಯುಕ್ತಗಳನ್ನು ಹೊಂದಿದ್ದು ಹೃದಯಕ್ಕೆ ಒಳ್ಳೆಯದು ಮತ್ತು ಕೆಲವು ರೀತಿಯ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ.

ಡ್ರೈ ಫ್ರೂಟ್ಸ್ ಬಿಡಬೇಡಿ:

ಡ್ರೈ ಫ್ರೂಟ್ಸ್ ಬಿಡಬೇಡಿ:

ಪ್ರತಿದಿನ ಸುಮಾರು 60 ಗ್ರಾಂ ಬೀಜಗಳನ್ನು ತಿನ್ನಿರಿ. ಇವುಗಳಲ್ಲಿ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಮುಖ್ಯವಾಗಿರಲಿ. ವಿವಿಧ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಪಿಸ್ತಾ, ವಾಲ್್ನಟ್ಸ್ ಮತ್ತು ಬಾದಾಮಿಯನ್ನು ಸೇರಿಸಬಹುದು ಜೊತೆಗೆ ಕಡಲೆಕಾಯಿಯನ್ನು ಸಹ ಸೇರಿಸಬಹುದು.

ಹೆಚ್ಚು ನೀರು ಕುಡಿಯಿರಿ:

ಹೆಚ್ಚು ನೀರು ಕುಡಿಯಿರಿ:

ಮೇಲಿನ ದೇಶಗಳ್ಲಿ ವಾಸಿಸುವ ಜನರು ಕಾಫಿ ಮತ್ತು ಚಹಾವನ್ನು ಕುಡಿಯುತ್ತಾರೆ, ಅದರ ಜೊತೆಗೆ ಅದಕ್ಕಿಂತಲೂ ಹೆಚ್ಚು ನೀರು ಕುಡಿಯುತ್ತಾರೆ. ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರು ಸಿಕ್ಕಾಗ ಯಾವುದೇ ರೋಗ ಅಥವಾ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಏಕೆಂದರೆ ಎಲ್ಲಾ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುವುದೇ ನೀರಿನ ಕೊರತೆಯಿಂದ.

ಕಡಿಮೆ ಸಕ್ಕರೆ ಸೇವಿಸಿ:

ಕಡಿಮೆ ಸಕ್ಕರೆ ಸೇವಿಸಿ:

ನಿಮ್ಮ ಆಹಾರದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ. ಇದು ನಿಮ್ಮ ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ದಿನವಿಡೀ ಸಕ್ಕರೆ ಇರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸುವ ಬದಲಿಗೆ ಅದನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುವುದು ಉತ್ತಮ.

ಮಾಂಸ ಸೇವವೆ ಮಿತಿಯಲ್ಲಿರಲಿ:

ಮಾಂಸ ಸೇವವೆ ಮಿತಿಯಲ್ಲಿರಲಿ:

ಹೆಚ್ಚು ಸಸ್ಯ ಆಧಾರಿತ ಆಹಾರ ಮತ್ತು ಬೀನ್ಸ್ ತಿನ್ನುವುದು ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನಕ್ಕೆ ಪ್ರಮುಖವಾದುದು. ನೀವು ಮಾಂಸವನ್ನು ಸೈಡ್ ಡಿಶ್ ಆಗಿ ಸೇರಿಸಬಹುದು ಆದರೆ ಹೆಚ್ಚಾಗಿ ಸೇವಿಸಬಾರದು. ಹಸಿರು ತರಕಾರಿಗಳು, ಸೊಪ್ಪು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ.

ನಿಮ್ಮ ಕುಟುಂಬದೊಂದಿಗೆ ತಿನ್ನಿರಿ:

ನಿಮ್ಮ ಕುಟುಂಬದೊಂದಿಗೆ ತಿನ್ನಿರಿ:

ಪ್ರತಿದಿನ, ಊಟ ಮಾಡುವ ಮೊದಲು ಕೃತಜ್ಞತೆಯನ್ನು ತೋರಿಸಿ. ಅಷ್ಟೇ ಅಲ್ಲ, ಪ್ರೀತಿಪಾತ್ರರ ಜೊತೆ ಊಟವನ್ನು ಮಾಡುವುದರಿಂದ, ನಿಮಗೆ ಸಂತೋಷವಾಗುವುದು. ಆಹಾರವನ್ನು ಸೇವಿಸುವಾಗ ನಿಮಗೆ ಸಂತೋಷವಾಗುತ್ತದೆ, ಅದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಹಿರಿಯರಿಂದ ಸಲಹೆಗಳನ್ನು ತೆಗೆದುಕೊಳ್ಳಿ:

ಹಿರಿಯರಿಂದ ಸಲಹೆಗಳನ್ನು ತೆಗೆದುಕೊಳ್ಳಿ:

ಯಾವುದೇ ವಿಷಯದ ಬಗ್ಗೆ ಉತ್ತಮ ಸಲಹೆಯನ್ನು ಅದನ್ನು ತಿಳಿದಿರುವ ಮತ್ತು ಅನುಭವಿಸಿದ ವ್ಯಕ್ತಿ ಮಾತ್ರ ನೀಡಬಹುದು. ಹೀಗಾಗಿ, ನಿಮ್ಮ ಅಜ್ಜಿ-ಅಜ್ಜರೊಂದಿಗೆ ಕುಳಿತು ಅವರಿಂದ ಕಲಿಯುವುದು ಉತ್ತಮ.

English summary

The Right Way to Eat to Live up to 100 years in Kannada

Living a healthy and happy life is on the top of everyone's list. But how does one get there? To know about the secret to long life, experts identified areas of the world where people live the longest.
Story first published: Friday, September 3, 2021, 11:00 [IST]
X
Desktop Bottom Promotion