For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಮಗುವನ್ನು ಪಡೆಯಲು ಪುರುಷರಿಗೆ ಸರಿಯಾದ ವಯಸ್ಸು ಯಾವುದು?

|

ಮದುವೆ ಆದ ಬಳಿಕ ಮಗು ಹೊಂದಬೇಕು ಎನ್ನುವುದು ಎಲ್ಲ ದಂಪತಿಯ ಕನಸಾಗಿರುತ್ತೆ. ಅದಕ್ಕಾಗಿ ಅನೇಕ ದಂಪತಿಗಳು ಫ್ಯಾಮಿಲಿ ಫ್ಲ್ಯಾನಿಂಗ್ ಮಾಡಿಕೊಂಡಿರುತ್ತಾರೆ. ಕೆಲವರು ಮದುವೆ ಕಳೆದು ಎರಡು ವರ್ಷ, ಕೆಲವರು ಮೂರು ವರ್ಷ ಹೀಗೆ ಫ್ಯಾಮಿಲಿ ಫ್ಲ್ಯಾನಿಂಗ್ ಮಾಡಿಕೊಂಡಿರುತ್ತಾರೆ. ಆದರೆ ಪುರುಷರ ವಯಸ್ಸು ಮಗು ಜನನಕ್ಕೆ ಎಷ್ಟು ಇಂಪಾರ್ಟೆಂಟ್ ಅನ್ನುವುದು ಎಷ್ಟು ಜನರಿಗೆ ಗೊತ್ತು? ಅನೇಕರಿಗೆ ಇದು ಗೊತ್ತೆ ಇಲ್ಲ.

123

ಯಾಕೆಂದರೆ ಮಗು ಜನನಕ್ಕೆ ತಾಯಿಯ ವಯಸ್ಸು ಮಾತ್ರ ಮುಖ್ಯ ಎಂದು ಅಂದುಕೊಂಡಿರುತ್ತಾರೆ. ಆದರೆ ಪುರುಷರ ವಯಸ್ಸು ಕೂಡ ಮಗುವಿನ ಜನನಕ್ಕೆ ಮುಖ್ಯ. ಹಾಗಾದರೆ ಪುರುಷರು ಯಾವ ವಯಸ್ಸಿನಲ್ಲಿ ತಂದೆ ಆಗುವುದು ಒಳ್ಳೆಯದು? ಆ ವಯಸ್ಸು ಕಳೆದರೆ ಮಕ್ಕಳು ಆಗುವುದಿಲ್ಲವೇ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಪುರುಷರು ತಂದೆ ಆಗಲು ಯಾವ ವಯಸ್ಸು ಸೂಕ್ತ?

ಪುರುಷರು ತಂದೆ ಆಗಲು ಯಾವ ವಯಸ್ಸು ಸೂಕ್ತ?

ತಾಯಿಯಾಗಲು ಸೂಕ್ತ ವಯಸ್ಸಿನ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಾ ಬಂದಿದೆ, ಆದರೆ ತಂದೆಯಾಗಲು ಯಾವ ವಯಸ್ಸು ಸೂಕ್ತ ಎಂಬ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ. ಯಾಕೆಂದರೆ ಮಗುವನ್ನು ಹೆರುವ ವಿಚಾರಕ್ಕೆ ಬಂದಾಗ ಕೇವಲ ತಾಯಿಯ ವಯಸ್ಸು ಮುಖ್ಯವಾಗುತ್ತದೆ ತಂದೆಯ ವಯಸ್ಸು ಮುಖ್ಯವಾಗುವುದಿಲ್ಲ ಎಂದು ಹೆಚ್ಚಿನ ಪುರುಷರು ಭಾವಿಸುತ್ತಾರೆ.

ಆದರೆ ಇದು ತಪ್ಪು. ಮಗುವನ್ನು ಪಡೆಯಲು ತಾಯಿಯ ವಯಸ್ಸು ಎಷ್ಟು ಮುಖ್ಯವೋ, ತಂದೆಯ ವಯಸ್ಸು ಕೂಡಾ ಅಷ್ಟೇ ಮುಖ್ಯ. ವಯಸ್ಸು ಹೆಚ್ಚಾಗುತ್ತಾ ಹೋದಂತೆ ನಿಮ್ಮ ವಯಸ್ಸಿನೊಂದಿಗೆ ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವು ಕುಸಿಯುತ್ತದೆ. ಹಾಗಾಗಿ ಮಗುವನ್ನು ಪಡೆಯಲು ಬರೀ ಹೆಣ್ಣು ಮಾತ್ರವಲ್ಲ ಗಂಡೂ ಅಷ್ಟೇ ಜವಾಬ್ದಾರನಾಗಿದ್ದಾನೆ. ತಜ್ಜ ವೈದ್ಯ್ರರ ಪ್ರಕಾರ ಮಗು ಹೊಂದಲು 22 ರಿಂದ 30 ವರ್ಷದವರೆ ಬೆಸ್ಟ್ ವಯಸ್ಸಂತೆ.

ಅದಾಗ್ಯೂ 35ರೊಳಗೆ ಮಗು ಪಡೆಯುವುದು ಒಳ್ಳೆಯದು. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಮಗು ಪಡೆಯುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. ಇನ್ನು 22 ರಿಂದ 25ರವರೆಗೆ ಪುರುಷನ ವೀರ್ಯಣುವಿನಲ್ಲಿ ಫಲವತ್ತತೆಯ ಗುಣಮಟ್ಟ ಚೆನ್ನಾಗಿರುವುದರಿಂದ ಈ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದು ಅತೀ ಉತ್ತಮವಂತೆ. 35 ವರ್ಷ ದಾಟಿದರೆ ಪುರುಷರ ವೀರ್ಯಣುವಿನ ಗುಣಮಟ್ಟ ಹಾಗೂ ಸ್ಪರ್ಮ್ ಕೌಂಟ್ ಕಡಿಮೆ ಆಗುತ್ತಾ ಹೋಗುತ್ತದೆ. 40 ವರ್ಷ ದಾಟಿದರೆ ಬಹಳ ಕಷ್ಟ.

ವಯಸ್ಸು ಜಾಸ್ತಿ ಆದರೆ ಮಗು ಆಗಲ್ವಾ?

ವಯಸ್ಸು ಜಾಸ್ತಿ ಆದರೆ ಮಗು ಆಗಲ್ವಾ?

ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಪುರುಷರ ವೀರ್ಯಣುವಿನ ಗುಣಮಟ್ಟ ಹಾಗೂ ಸ್ಪರ್ಮ್ ಕೌಂಟ್ ಕಡಿಮೆ ಆಗುತ್ತಾ ಹೋಗುತ್ತದೆ. ಸೈನ್ಸ್ ಪ್ರಕಾರ 40ರ ಬಳಿಕ ಅನೇಕ ಪುರುಷರಲ್ಲಿ ವೀರ್ಯಾಣುವಿನ ಗುಣಮಟ್ಟ ಹಾಗೂ ಸಂಖ್ಯೆ ಕಡಿಮೆಯಾಗುತ್ತಂತೆ. ಇದರಿಂದ ಮಗು ಉಂಟಾಗುವ ಸಾಧ್ಯತೆ ತೀರ ಕಡಿಮೆ. ಮಗು ಜನಿಸಲು ಮಹಿಳೆಯರಂತೆ ಪುರುಷರ ಫಲವತ್ತತೆ ಕೂಡ ಮುಖ್ಯ. ವಯಸ್ಸು ಜಾಸ್ತಿಯಾದಂತೆ ಫಲವತ್ತತೆಯ ಶಕ್ತಿ ಕುಂದುತ್ತಾ ಹೋಗುತ್ತದೆ. ಫಲವತ್ತತೆ ಕಡಿಮೆಯಾದರೆ ಮಗು ಜನನವಾಗುವುದಿಲ್ಲ. ಇನ್ನು ವಯಸ್ಸು ಜಾಸ್ತಿಯಾದ ಬಳಿಕ ಮಗು ಹೊಂದಿದರೆ ಮಕ್ಕಳ ಆರೋಗ್ಯದ ಮೇಲೆ ಸಮಸ್ಯೆ ಯಾಗುತ್ತದೆ.

ಈ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯುವುದಾದರೆ ಈ ಬಗ್ಗೆ ವೈದ್ಯರ ಬಳಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯುವುದು ಒಳ್ಳೆಯದು. ಇನ್ನು 2010 ರಲ್ಲಿ ನಡೆಸಿದ ಅಧ್ಯಯನವು ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗ ಜನಿಸಿದ ಮಕ್ಕಳಲ್ಲಿ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಎಂಬ ರೋಗ ಅಭಿವೃದ್ಧಿಯಾಗುವ ಅಪಾಯದ ಬಗ್ಗೆ ಎಚ್ಚರಿಸಿತ್ತು.

30 ವರ್ಷದ ಬಳಿಕ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆ!

30 ವರ್ಷದ ಬಳಿಕ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆ!

ಪ್ರತಿವರ್ಷವೂ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನಿನ ಪ್ರಮಾಣ ಕಡಿಮೆಯಾಗುತ್ತಾ ಸಾಗುತ್ತದೆ. ಹಾಗೂ ಮೂವತ್ತೈದು ವರ್ಷದ ಬಳಿಕ ವೀರ್ಯಾಣುಗಳಲ್ಲಿನ ಡಿಎನ್ ಎ ರಚನೆಯಲ್ಲಿಯೂ ಬದಲಾವಣೆ ಕಂಡುಬರುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ತಂದೆಯಾಗುವುದರಿಂದ ಕೆಲವಾರು ತೊಡಕುಗಳು ಎದುರಾಗಬಹುದು. ಉದಾಹರಣೆಗೆ ವಿಕಲಾಂಗ ಅಥವಾ ಮನೋವೈಕಲ್ಯ ಹೊಂದಿರುವ ಮಕ್ಕಳು ಹುಟ್ಟಬಹುದು. ಆದ್ದರಿಂದ ಮೂವತ್ತರ ಆಸುಪಾಸಿನಲ್ಲಿ, ಇದಕ್ಕೂ ತುಂಬಾ ತಡ ಎಂದರೆ ಮೂವತ್ತೈದರ ಒಳಗೆ ತಂದೆಯಾಗಿಬಿಡಬೇಕು. ಈ ರೀತಿಯ ಸಮಸ್ಯೆ ಎಲ್ಲರಿಗೂ ಅನ್ವಯಿಸಲ್ಲ. ಯಾಕೆಂದರೆ 35 ರ ಬಳಿಕವೂ ನಾರ್ಮಲ್ ಆಗಿರುವ ಮಕ್ಕಳು ಹುಟ್ಟುವುದನ್ನು ನಾವು ನೋಡಿದ್ದೇವೆ. ಎಲ್ಲದಕ್ಕೂ ಆಯಾ ಪರೀಕ್ಷೆಗಳು ಇರುವುದರಿಂದ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ವೀರ್ಯಾಣುಗಳ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು?

ವೀರ್ಯಾಣುಗಳ ಗುಣಮಟ್ಟದ ಬಗ್ಗೆ ನಿಮಗೆಷ್ಟು ಗೊತ್ತು?

ಗರ್ಭಧಾರಣೆಗೆ ಒಂದೇ ವೀರ್ಯಾಣು ಅಗತ್ಯವಿದ್ದರೂ ಇವುಗಳ ಸಾಂದ್ರತೆ ಪ್ರತಿ ಕಣದಲ್ಲೂ ಇಪ್ಪತ್ತು ಲಕ್ಷ ಇದ್ದರೆ ಮಾತ್ರವೇ ಗರ್ಭಧಾರಣೆ ಸಾಧ್ಯವಾಗುವುದು ನಿಸರ್ಗದ ಒಂದು ಸೋಜಿಗ. ಅಷ್ಟೇ ಅಲ್ಲ, ವೀರ್ಯಾಣುಗಳ ಗುಣಮಟ್ಟ ಅಥವಾ ಪರಿಪೂರ್ಣತೆಯೂ ಸರಿಸುಮಾರು ಮೂವತ್ತೈದು ವರ್ಷದವರೆಗೆ ಉತ್ತಮವಗಿರುತ್ತದೆ. ಆದರೆ ಕ್ರಮೇಣ ಇದು ಕ್ಷೀಣಿಸುತ್ತಾ ಬರುತ್ತದೆ. ಆದರೂ ಸಂಶೋಧನೆಗಳ ಪ್ರಕಾರ 22 ರಿಂದ 25ನೇ ವಯಸ್ಸಿನಲ್ಲಿ ಆರೋಗ್ಯ ಹಾಗೂ ವೀರ್ಯಾಣುಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಆದರೆ ಅನೇಕ ಯುವಕರು ಈ ವಯಸ್ಸಿನಲ್ಲಿ ಓದು ಅಂತ ಬ್ಯುಸಿ ಇರುತ್ತಾರೆ. ಹೀಗಾಗಿ ಓದು ಮುಗಿಸಿ ಒಂದು ಹಂತಕ್ಕೆ ಬರುವಾಗ 28 ಆಗುತ್ತೆ. 29 ರಲ್ಲಿ ಮದುವೆ ಆಗಿ 30ರೊಳಗೆ ಮಗು ಹೊಂದಿದರೆ ನಿಜಕ್ಕೂ ಬೆಸ್ಟ್.

ಹದಿಹರೆಯದಲ್ಲಿ ಮಗು ಹೊಂದಬಹುದೇ?

ಹದಿಹರೆಯದಲ್ಲಿ ಮಗು ಹೊಂದಬಹುದೇ?

ಹದಿನೈದರಿಂದ ಹತ್ತೊಂಭತ್ತರ ಹರೆಯದಲ್ಲಿಯೂ ಬಾಲಕರ ದೇಹದಲ್ಲಿ ಉತ್ತಮ ಬೆಳವಣಿಗೆಯಾಗಿದ್ದು ವೀರ್ಣಾಣುಗಳ ಉತ್ಪತ್ತಿಯೂ ಈಗತಾನೇ ಪ್ರಾರಂಭವಾಗಿರುತ್ತದೆ. ಈ ವಯಸ್ಸಿನಲ್ಲಿ ಆಗುವ ಗರ್ಭಧಾರಣೆಯಿಂದ ಹೆಚ್ಚಿನ ಸಂದರ್ಭದಲ್ಲಿ ಗರ್ಭದಲ್ಲಿಯೇ ಸತ್ತಿರುವ ಮಕ್ಕಳು ಹುಟ್ಟುವ ಸಾಧ್ಯತೆ ಅತಿ ಹೆಚ್ಚು. ಆದ್ದರಿಂದ ಪ್ರಾಪ್ತ ವಯಸ್ಕರಾಗುವವರೆಗೂ ಈ ನಿಟ್ಟಿನಲ್ಲಿ ಮುಂದುವರೆಯುವುದು ಸರಿಯಲ್ಲ. ಹೀಗಾಗಿ ಬಾಲ್ಯ ವಿವಾಹದಂತಹ ತಪ್ಪು ಮಾಡಿ ಮಕ್ಕಳ ಭವಿಷ್ಯವನ್ನು ಪೋಷಕರು ಹಾಳು ಮಾಡಬಾರದು.

English summary

The best age to become a father, as per studies in Kannada

The best age to become a father, as per studies in Kannada, Read on
Story first published: Sunday, June 26, 2022, 22:09 [IST]
X
Desktop Bottom Promotion