For Quick Alerts
ALLOW NOTIFICATIONS  
For Daily Alerts

40 ವರ್ಷ ದಾಟಿದ ಮೇಲೆ ಮಹಿಳೆಯರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾದ ಆರೋಗ್ಯ ಪರೀಕ್ಷೆಗಳಿವು

|

ನಮಗೆ ವಯಸ್ಸಾದಂತೆ ನಮ್ಮ ದೇಹವು ಸೂಕ್ಷ್ಮ ಬದಲಾವಣೆಗಳಿಗೆ ಒಳಗಾಗುತ್ತದೆ. ದೈಹಿಕ ನೋಟ ಬಾಹ್ಯವಾಗಿ ಎಲ್ಲರಿಗೂ ಗೋಚರವಾದರೆ ದೇಹದೊಳಗೆ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಆದರೆ ಅದು ಯಾರಿಗೂ ತಿಳಿದಿರುವುದಿಲ್ಲ.

ವಿಶೇಷವಾಗಿ ಮಹಿಳೆಯರು 40 ವರ್ಷ ದಾಟಿದ ಮೇಲೆ ಹೃದಯ ಸಂಬಂಧಿ ಕಾಯಿಲೆಗಳು, ಸ್ತನ ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ತುತ್ತಾಗುವುದು ಸಾಮಾನ್ಯ. ಆದ್ದರಿಂದ ಇವರು ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವುದು ತುಂಬಾ ಮುಖ್ಯ. ಇದರಿಂದ ರೋಗ ಲಕ್ಷಣಗಳನ್ನ ಗುರುತಿಸಿ ಮುಂದಾಗುವ ಅಪಾಯವನ್ನು ತಡೆಯಬಹುದು.

ಇಲ್ಲಿ 40 ವರ್ಷ ದಾಟಿದ ಮೇಲೆ ಮಹಿಳೆಯರು ಮಾಡಿಸಿಕೊಳ್ಳಬೇಕಾದ ಆರೋಗ್ಯ ಪರೀಕ್ಷೆಗಳನ್ನು ನೀಡಲಾಗಿದೆ:

ರಕ್ತದೊತ್ತಡ ತಪಾಸಣೆ:

ರಕ್ತದೊತ್ತಡ ತಪಾಸಣೆ:

ಅಧಿಕ ರಕ್ತದೊತ್ತಡವು ವಯಸ್ಸಾದಂತೆ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಆಹಾರ ಮತ್ತು ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ರಕ್ತದೊತ್ತಡವನ್ನು ಕಡಿಮೆ ಮಾಡುವುದು ಸುಲಭ. ನಿಯಮಿತ ವ್ಯಾಯಾಮವು ಇದನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಔಷಧಿಗಳನ್ನು ಶಿಫಾರಸು ಮಾಡಲಾಗುತ್ತದೆ.

ಸ್ತನ ಕ್ಯಾನ್ಸರ್:

ಸ್ತನ ಕ್ಯಾನ್ಸರ್:

ಎಲ್ಲಾ ವಯಸ್ಸಿನ ಮಹಿಳೆಯರಿಗೆ ನಿಯಮಿತವಾಗಿ ಸ್ತನ ಪರೀಕ್ಷೆಯನ್ನು ಶಿಫಾರಸು ಮಾಡಲಾಗುವುದು. ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಎಲ್ಲಾ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಎರಡು ಸಾಮಾನ್ಯ ಕ್ಯಾನ್ಸರ್ ಮತ್ತು ವಯಸ್ಸಾದಂತೆ ಇದರ ಅಪಾಯವು ಹೆಚ್ಚಾಗುತ್ತದೆ. ಎರಡು ವಾರಗಳಿಗೊಮ್ಮೆ ಮನೆಯಲ್ಲಿ ಸ್ವಯಂ-ಸ್ತನಗಳ ಪರೀಕ್ಷೆ ಮಾಡಬಹುದು. ಅದೇಗ ಅಂದರೆ ಆರಂಭಿಕ ಹಂತದಲ್ಲಿ ಯಾವುದೇ ಉಂಡೆಗಳ ರಚನೆಯನ್ನ ನೀವು ಕಾಣಬಹುದು. ಈ ಕ್ಯಾನ್ಸರ್ ವಿರುದ್ಧ ರಕ್ಷಣೆಗಾಗಿ ವರ್ಷಕ್ಕೊಮ್ಮೆ ಪ್ಯಾಪ್ ಸ್ಮೀಯರ್ ಮತ್ತು ಮ್ಯಾಮೊಗ್ರಾಮ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

ಆಸ್ಟಿಯೊಪೊರೋಸಿಸ್:

ಆಸ್ಟಿಯೊಪೊರೋಸಿಸ್:

ವಯಸ್ಸಾದಂತೆ ಮೂಳೆ ಸಾಂದ್ರತೆ ಮತ್ತು ಶಕ್ತಿಯನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದ್ದು, ಇದು ಆಸ್ಟಿಯೊಪೊರೋಸಿಸ್ಗೆ ಕಾರಣವಾಗಬಹುದು. ಇದು ಮೂಳೆಗಳು ಹೆಚ್ಚು ದುರ್ಬಲವಾಗಲು ಕಾರಣವಾಗುವುದರಿಂದ ಸುಲಭವಾಗಿ ಗಾಯ ಅಥವಾ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಮೂಳೆಗಳ ಸಾಂದ್ರತೆಯನ್ನು ಗುರುತಿಸಲು ಡೆಕ್ಸಾ ಸ್ಕ್ಯಾನ್ ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ:

ರಕ್ತದಲ್ಲಿನ ಸಕ್ಕರೆ ಮಟ್ಟ:

20 ಮತ್ತು 30 ರ ವಯಸ್ಸಿನಲ್ಲಿ ತಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರಿಕೆ ವಹಿಸದ ಜನರು 40 ರ ವಯಸ್ಸಿನಲ್ಲಿ ಮಧುಮೇಹದಿಂದ ಬಳಲುವ ಸಾಧ್ಯತೆ ಹೆಚ್ಚು. ಈ ಹಿಂದೆ ಅಜಾರೂಕತೆಯಿಂದ ಸೇವಿಸಿದ ಆಹಾರ ಮತ್ತು ತೂಕ ಹೆಚ್ಚಾಗುವುದರಿಂದ ಮೇದೋಜ್ಜೀರಕ ಗ್ರಂಥಿಯ ಮೇಲೆ ಒತ್ತಡ ಉಂಟಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಲಭವಾಗಿ ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ತುಂಬಾ ಮುಖ್ಯ.

ಕೊಲೆಸ್ಟ್ರಾಲ್ ಪ್ರೊಫೈಲ್:

ಕೊಲೆಸ್ಟ್ರಾಲ್ ಪ್ರೊಫೈಲ್:

ಈ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ತೀವ್ರವಾದ ಹೃದ್ರೋಗ ಮತ್ತು ಪಾರ್ಶ್ವವಾಯು ಬರುವ ಅಪಾಯವನ್ನು ಕಡಿಮೆ ಮಾಡಬಹುದು. ಅಧಿಕ ಕೊಲೆಸ್ಟ್ರಾಲ್ ಮಟ್ಟವು ಹೃದಯ ಸಂಬಂಧಿತ ಕಾಯಿಲೆಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ, ನಿಮ್ಮ ಆಹಾರವನ್ನು ಬದಲಾಯಿಸುವುದು ಮತ್ತು ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಕಡಿಮೆ ಮಾಡಬಹುದು. 30 ರ ನಂತರ ಪ್ರತಿಯೊಬ್ಬರೂ ಪ್ರತಿ ಐದು ವರ್ಷಗಳಿಗೊಮ್ಮೆ ತಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರಿಶೀಲಿಸಬೇಕು. ನಿಮ್ಮ ಒಟ್ಟು ಕೊಲೆಸ್ಟ್ರಾಲ್ ಮಟ್ಟವು ಪ್ರತಿ ಡೆಸಿಲಿಟರ್ಗೆ 200 ಮಿಲಿಗ್ರಾಂಗಿಂತ ಕಡಿಮೆಯಿರಬೇಕು (ಮಿಗ್ರಾಂ / ಡಿಎಲ್).

English summary

Tests Every Woman Must Take In Their 40s in Kannada

Here we talking about Tests Every Woman Must Take In Their 40s in Kannada, read on
Story first published: Thursday, June 10, 2021, 17:26 [IST]
X
Desktop Bottom Promotion