For Quick Alerts
ALLOW NOTIFICATIONS  
For Daily Alerts

ವೃಷಣ ಕ್ಯಾನ್ಸರ್: ಪುರುಷರೇ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ

|

ವೃಷಣ ಕ್ಯಾನ್ಸರ್ ನ ಸಾಧ್ಯತೆಯು ಅಪರೂಪದ್ದಾದರೂ ಇದು ಇನ್ನೂ ಪ್ರಚಲಿತಲ್ಲಿದೆ. ಟೆಸ್ಟೋಸ್ಟಿರೋನ್ ಎಂದು ಕರೆಯಲ್ಪಡುವ ಪುರುಷ ಹಾರ್ಮೋನು ಹಾಗೂ ವೀರ್ಯಾಣುಗಳನ್ನು ಸ್ರವಿಸುವ ಪುರುಷ ಜನನಾಂಗವಾದ ವೃಷಣಗಳನ್ನು ಈ ಕ್ಯಾನ್ಸರ್ ಬಾಧಿಸುತ್ತದೆ. ತನ್ನ ವೃಷಣಗಳು ಕ್ಯಾನ್ಸರ್ ನಿಂದ ಬಾಧಿತವಾಗಿವೆ ಎಂಬ ಅರಿವು ರೋಗಿಗೆ ಬರಲು ಕೆಲವೊಮ್ಮೆ ತೀರಾ ತಡವಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಈ ಬಗೆಯ ಕ್ಯಾನ್ಸರ್ ನ ರೋಗಲಕ್ಷಣಗಳು ಅಷ್ಟು ಸ್ಪಷ್ಟವಾಗಿ ಇರಲಾರವು.

Testicular Cancer: Symptoms, Causes, Diagnosis And Treatment in Kannada

ವೃಷಣ ಕ್ಯಾನ್ಸರ್ ನ ರೋಗ ಲಕ್ಷಣಗಳ ಕುರಿತಾಗಿ ಅಹಮದಾಬಾದ್ ನ ಆರ್ನಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೂತ್ರರೋಗ ತಜ್ಞರು, ಚೇರ್ಮನ್ ಹಾಗೂ ನಿರ್ದೇಶಕರಾಗಿರುವ ಡಾ. ರೋಹಿತ್ ಜೋಶಿಯವರು ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ನಾವಿಲ್ಲಿ ಓದುಗರೊಡನೆ ಹಂಚಿಕೊಳ್ಳುತ್ತಿರುವ ಉದ್ದೇಶವೇನೆಂದರೆ, ಅರಿವಿನ ಮೂಲಕ ರೋಗಿಯು ಆದಷ್ಟು ಬೇಗನೇ ಎಚ್ಚೆತ್ತುಕೊಂಡು ಯೋಗ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುವ ದಿಶೆಯಲ್ಲಿ ಯೋಗ್ಯ ರೀತಿಯ ಕ್ರಮವನ್ನು ಕೈಗೊಳ್ಳುವುದಕ್ಕೆ ಮುಂದಾಗಲಿ ಎಂಬುದೇ ಆಗಿದೆ. ಹಾಗಾದರೆ ರೋಗಲಕ್ಷಣಗಳು ಏನೇನು ಅನ್ನೋದನ್ನ ನೋಡೋಣ...

ವೃಷಣಗಳು ಊದಿಕೊಂಡಂತಿರುವುದು ಅಥವಾ ವೃಷಣಗಳಲ್ಲಿ ಗೆಡ್ಡೆಯಂತಹ ವಸ್ತುವಿನ ಉಪಸ್ಥಿತಿ

ವೃಷಣಗಳು ಊದಿಕೊಂಡಂತಿರುವುದು ಅಥವಾ ವೃಷಣಗಳಲ್ಲಿ ಗೆಡ್ಡೆಯಂತಹ ವಸ್ತುವಿನ ಉಪಸ್ಥಿತಿ

ಯಾವುದೇ ಒಂದು ವೃಷಣದಲ್ಲಿ ಅಥವಾ ವೃಷಣ ಚೀಲದಲ್ಲಿ ನೋವು ರಹಿತವಾದ ಯಾವುದೇ ಗೆಡ್ಡೆ/ಗಂಟು ಅಥವಾ ಬಾತುಕೊಂಡಿರುವುದು ಕಂಡು ಬಂದಲ್ಲಿ, ಅಂತಹ ಪರಿಸ್ಥಿತಿಯು ನಿಮ್ಮನ್ನು ಕಳವಳಕ್ಕೀಡು ಮಾಡಬೇಕು. ತುರ್ತು ಗಮನವನ್ನು ಹರಿಸುವ ಅಗತ್ಯವನ್ನು ಸೂಚಿಸುವ ಕೆಂಪು ನಿಶಾನೆಯು ಅದಾಗಿರಬಹುದು! ಆರಂಭದಲ್ಲಿ ಯಾವುದೇ ರೀತಿಯ ನೋವನ್ನೂ ಉಂಟುಮಾಡದೇ ಸದ್ದಿಲ್ಲದ ಹಾಗೆ ಕ್ಯಾನ್ಸರ್ ಬೆಳೆಯುವ ಸಾಧ್ಯತೆ ಇದೆ ಹಾಗೂ ಬಳಿಕ ತಡವಾಗಿ ಗಮನಕ್ಕೆ ಬರುವ ಸಾಧ್ಯತೆಯೂ ಇದೆ. ಹಾಗಾಗಿ, ವೃಷಣದ ಜಾಗದಲ್ಲಿ ಯಾವುದೇ ರೀತಿಯ ಬಾತುಕೊಂಡಿರುವಂತಹ ಸ್ಥಿತಿಯು ಕಂಡುಬಂದಲ್ಲಿ ಮುಂದಿನ ಹಂತದ ರೋಗಲಕ್ಷಣಗಳಿಗಾಗಿ ಕಾಯುತ್ತಾ ಕೂರದೇ, ಕೂಡಲೇ ತಪಾಸಣೆಗೆ ಒಳಗಾಗಿರಿ.

ದೇಹದ ಆ ಕೆಳಭಾಗದಲ್ಲಿ ನೋವು

ದೇಹದ ಆ ಕೆಳಭಾಗದಲ್ಲಿ ನೋವು

ಯಾವುದೇ ನಿಖರವಾದ ಕಾರಣವಿಲ್ಲದೇ ನಿಮ್ಮ ಶರೀರದ ಯಾವುದೇ ಭಾಗದಲ್ಲಿ ನೋವು ಅಥವಾ ಕಿರಿಕಿರಿ ಕಾಣಿಸಿಕೊಂಡರೆ ನೀವು ಚಿಂತೆಗೊಳಗಾಗಲೇ ಬೇಕು, ಅದರಲ್ಲೂ ವಿಶೇಷವಾಗಿ ದೇಹದ ಆ ಕೆಳಭಾಗದಲ್ಲಿ ನೋವಿದ್ದಲ್ಲಿ.... ಏಕೆಂದರೆ ಈ ಬಗೆಯ ಕ್ಯಾನ್ಸರ್ ನ ಒಂದು ಲಕ್ಷಣವೇನೆಂದರೆ, ಯಾವುದೇ ಊದಿಕೊಳ್ಳುವಿಕೆಯು (ಸ್ವೆಲ್ಲಿಂಗ್) ಇಲ್ಲದೆಯೂ ಕೂಡ ವೃಷಣದಲ್ಲಿ ಅಥವಾ ವೃಷಣಚೀಲದಲ್ಲಿ ನೋವು ಅಥವಾ ಕಿರಿಕಿರಿಯ ಇರುವಿಕೆ.

ಆ ಭಾಗವು ಭಾರವಿದ್ದಂತೆ ಭಾಸವಾಗುವುದು

ಆ ಭಾಗವು ಭಾರವಿದ್ದಂತೆ ಭಾಸವಾಗುವುದು

ವೃಷಣ ಚೀಲವು ಭಾರವಿರುವಂತೆ ಅನಿಸತೊಡಗಿದರೆ, ನಿಜಕ್ಕೂ ನಿಮ್ಮ ಪಾಲಿಗೆ ಅದೊಂದು ಎಚ್ಚರಿಕೆಯ ಕರೆಗಂಟೆಯಂತಿರುವ ರೋಗ ಲಕ್ಷಣ. ಬೆಳೆಯುತ್ತಿರುವ ಕ್ಯಾನ್ಸರ್ ನ ಕಾರಣದಿಂದ ಸಾಮಾನ್ಯವಾಗಿ ಹೀಗಾಗುತ್ತದೆ.

ಮಂದವಾದ ನೋವು

ಮಂದವಾದ ನೋವು

ಕಿಬ್ಬೊಟ್ಟೆಯ ಕೆಳಭಾಗದಲ್ಲಿ ಅಥವಾ ಗುಪ್ತಾಂಗದ ಭಾಗದಲ್ಲಿ ನೋವಿರುವಿಕೆ. ಆದರೆ ಈ ನೋವು ಗುಪ್ತಾಂಗದ ಭಾಗಕ್ಕಷ್ಟೇ ಸೀಮಿತವಾಗಿರಬೇಕೆಂದಿಲ್ಲ. ಅದು ಕಿಬ್ಬೊಟ್ಟೆಯ ಕೆಳಭಾಗದತ್ತಲೂ ಹರಡಬಹುದು.

ಬೆನ್ನುನೋವು

ಬೆನ್ನುನೋವು

ಬಿಟ್ಟುಬಿಡದೇ ಕಾಡುವ ಬೆನ್ನುನೋವನ್ನು ಮಾಂಸಖಂಡದ ಅಥವಾ ಬೆನ್ನುಹುರಿಗೆ ಸಂಬಂಧಿಸಿದ ನೋವೆಂದು ಅನೇಕ ಬಾರಿ ನಿಮ್ಮ ವೈದ್ಯರೂ ಕೂಡ ತಪ್ಪಾಗಿ ಭಾವಿಸುವ ಸಾಧ್ಯತೆಯೂ ಇಲ್ಲದಿಲ್ಲ!! ಹಾಗಾಗಿ, ಒಂದೊಮ್ಮೆ ನೀವೇನಾದರೂ ಅಂತಹ ಅವಿರತ ಬೆನ್ನುನೋವಿನಿಂದ ಬಳಲುತ್ತಿದ್ದಲ್ಲಿ, ನಿಮ್ಮ ಗುಪ್ತಾಂಗದ ಜಾಗವನ್ನೂ ಒಮ್ಮೆ ತಪಾಸಣೆಗೊಳಪಡಿಸುವುದರಲ್ಲಿ ಅರ್ಥವಿದೆ. ಹಾಗೆಯೇ ಆ ಭಾಗದಲ್ಲೇನಾದರೂ ಅಸಹಜವಾದ ಊದಿಕೊಳ್ಳುವಿಕೆಯು ಕಂಡುಬರುತ್ತದೆಯೇ ಎಂದು ಪರಿಶೀಲಿಸಿ. ಹಾಗೇನಾದರೂ ಅನಿಸಿದಲ್ಲಿ ನಿಮ್ಮ ವೈದ್ಯರಿಗೆ ಆ ಕುರಿತು ವರದಿ ಮಾಡಿರಿ.

 ಅಸಹಜ ರೋಗಲಕ್ಷಣಗಳು

ಅಸಹಜ ರೋಗಲಕ್ಷಣಗಳು

ದಮ್ಮು ಕಟ್ಟುವಿಕೆ, ಎದೆನೋವು, ಹಾಗೂ ರಕ್ತಮಿಶ್ರಿತ ಕಫದಂತಹ ಕೆಲವು ರೋಗಲಕ್ಷಣಗಳು ದಾರಿತಪ್ಪಿಸುವ ಹಾಗಿರುತ್ತವೆ ಹಾಗೂ ಇಂತಹ ರೋಗಲಕ್ಷಣಗಳೇ ಕೆಲವೊಮ್ಮೆ ವೃಷಣ ಕ್ಯಾನ್ಸರ್ ನ ಸೂಚನೆಯಾಗಿರುವ ಸಾಧ್ಯತೆಯೂ ಇರುತ್ತದೆ!!! ಇವೆಲ್ಲವೂ ಉಲ್ಪಣಾವಸ್ಥೆಗೆ ತಲುಪಿದ ವೃಷಣ ಕ್ಯಾನ್ಸರ್ ನ ರೋಗಲಕ್ಷಣಗಳು.

ಕಾಲುಗಳಲ್ಲಿ ಕಾಣಿಸಿಕೊಳ್ಳುವ ಬಾವು

ಕಾಲುಗಳಲ್ಲಿ ಕಾಣಿಸಿಕೊಳ್ಳುವ ಬಾವು

ಒಂದು ಅಥವಾ ಎರಡೂ ಕಾಲುಗಳೂ ಬಾತುಕೊಳ್ಳುವುದು ಕೂಡ ವೃಷಣ ಕ್ಯಾನ್ಸರ್ ನ ರೋಗಲಕ್ಷಣವಾಗಿರುವ ಸಾಧ್ಯತೆ ಇದೆ.

English summary

Testicular Cancer: Symptoms, Causes, Diagnosis And Treatment in Kannada

Testicular Cancer: Symptoms, Causes, Diagnosis And Treatment, Read On...
Story first published: Saturday, February 20, 2021, 9:29 [IST]
X
Desktop Bottom Promotion