For Quick Alerts
ALLOW NOTIFICATIONS  
For Daily Alerts

ಸೆಕೆ ಹೆಚ್ಚಾಗುತ್ತಿರುವಾಗ ಅಗ್ಯತವಾಗಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳಿವು

|

ಅಬ್ಬಾ ಏನು ಸೆಕೆ, ಸ್ವಲ್ಪ ಹೊರಗಡೆ ಹೋಗಿ ಬರುವಷ್ಟರಲ್ಲಿ ಬಿಸಿಲಿನ ತಾಪದಿಂದ ತುಂಬಾ ಆಯಾಸ ಉಂಟಾಗಿರುತ್ತದೆ. ಇನ್ನು ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ದೇಹವನ್ನು ತಂಪಾಗಿ ಇಡಬೇಕು, ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಕಾಡುವುದು. ಅತಿಯಾದ ತಾಪಮಾನ ಆಯಾಸ ಉಂಟು ಮಾಡುವುದು ಮಾತ್ರವಲ್ಲ ಹಾರ್ಟ್‌ಸ್ಟ್ರೋಕ್ ತರಬಹುದು.

ಸೆಕೆ ಹೆಚ್ಚಾಗುತ್ತಿದ್ದಂತೆ ಹೊರಗಡೆ ಓಡಾಡಿದರೆ ತ್ವಚೆ ಕಪ್ಪಾಗುವುದು, ಜ್ವರ ಬರುವುದು. ಅಲ್ಲದೆ ಮನೆಯಲ್ಲಿ ಮಕ್ಕಳಿದ್ದರೆ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಏಪ್ರಿಲ್‌-ಮೇ ತಿಂಗಳಿನಲ್ಲಿ ಸೆಕೆ ಮತ್ತಷ್ಟು ಹೆಚ್ಚಾಗುವುದರಿಂದ ಸೆಕೆಯಿಂದ ರಕ್ಷಿಸಿಕೊಳ್ಳಲು ಈ ಟಿಪ್ಸ್ ಪಾಲಿಸಿ:

ದೇಹದಲ್ಲಿ ನೀರಿನಂಶ ಕಾಪಾಡಿ

ದೇಹದಲ್ಲಿ ನೀರಿನಂಶ ಕಾಪಾಡಿ

ಬೇಸಿಗೆಯಲ್ಲಿ ಈ ಅಂಶ ನೀವು ತುಂಬಾ ಗಮನಿಸಬೇಕು. ಸೆಕೆ ಹೆಚ್ಚಾಗುತ್ತಿದ್ದಂತೆ ನಿಮ್ಮ ದೇಹ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನೀರು ಅತ್ಯವಶ್ಯಕ. ಬೇಸಿಗೆಯಲ್ಲಿ ಮೈ ತುಂಬಾ ಬೆವರುತ್ತದೆ ಇದರಿಂದ ಎಲೆಕ್ಟ್ರೋಲೈಟ್ಸ್ ಕಡಿಮೆಯಾಗುವುದರಿಂದ ಶಕ್ತಿ ಕುಂದುವುದು. ಆದ್ದರಿಂದ ಜ್ಯೂಸ್‌, ನೀರು ಕುಡಿಯಿರಿ. ಜೊತೆಗೆ ಕಲ್ಲಂಗಡಿ ಹಣ್ಣು, ನಿಂಬೆ ಹಣ್ಣು, ಕಿವಿ, ನಿಂಬು ಪಾನೀಯ ಮಾಡು ಕುಡಿಯಿರಿ.

ಲಘು ಆಹಾರವನ್ನು ಸಮಯಕ್ಕೆ ಸರಿಯಾಗಿ ತಿನ್ನಿ

ಲಘು ಆಹಾರವನ್ನು ಸಮಯಕ್ಕೆ ಸರಿಯಾಗಿ ತಿನ್ನಿ

ಬೇಸಿಗೆಯಲ್ಲಿ ನಾವು ನೀರು ಹೆಚ್ಚು ಕುಡಿಯುವುದರಿಂದ ಆಹಾರ ಸೇವಿಸುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಸೇವಿಸಿ. ಬೇಸಿಗೆಯಲ್ಲಿ ಕುಂಬಳಕಾಯಿ, ಸೌತೆ, ಸೊಪ್ಪು ಈ ರೀತಿಯ ಆಹಾರ ಸೇವಿಸಿ.

ಬೇಸಿಗೆಯಲ್ಲಿ ಮಾಂಸಾಹಾರ, ಮೊಟ್ಟೆ, ಇತರ ಪ್ರೊಟೀನ್ ಆಹಾರ, ಉಪ್ಪಿನಂಶವಿರುವ ಆಹಾರ ಸೇವಿಸಿ.

ತಣ್ಣೀರಿನಲ್ಲಿ ಸ್ನಾನ ಮಾಡಿ

ತಣ್ಣೀರಿನಲ್ಲಿ ಸ್ನಾನ ಮಾಡಿ

ಬೇಸಿಗೆಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ದೇಹವನ್ನು ತಂಪಾಗಿ ಇಡಬಹುದು. ಅಲ್ಲದೆ ಮಲಗುವ ಮುಂಚೆ ತಣ್ಣೀರಿನಲ್ಲಿ ಮೈ ತೊಳೆಯುವುದು ಅಥವಾ ಕೈ-ಕಾಲು ಮುಖ ತೊಳೆದು ಮಲಗಿ. ಅಲ್ಲದೆ ಐಸ್‌ಪ್ಯಾಕ್‌ ಅನ್ನು ಕುತ್ತಿಗೆ ಬಳಿ ಇಟ್ಟು ಮಲಗುವುದರಿಂದ ಸೆಕೆಗೆ ಹಿತವಾಗುವುದು.

ಲೈಟ್ಸ್ ಆಫ್‌ ಮಾಡಿ

ಲೈಟ್ಸ್ ಆಫ್‌ ಮಾಡಿ

ಇನ್ನು ತುಂಬಾ ಲೈಟ್ಸ್ ಆನ್‌ನಲ್ಲಿ ಇದ್ದರೆ ಅದು ಕೂಡ ಸೆಕೆ ಹೆಚ್ಚು ಮಾಡುತ್ತೆ, ಆದ್ದರಿಂದ ಲೈಟ್ಸ್ ಆಫ್‌ ಮಾಡಿ.

ಮಧ್ಯಾಹ್ನದ ಹೊತ್ತು ಬಿಸಿಲಿನಲ್ಲಿ ಓಡಾಡಬೇಡಿ

ಮಧ್ಯಾಹ್ನದ ಹೊತ್ತು ಬಿಸಿಲಿನಲ್ಲಿ ಓಡಾಡಬೇಡಿ

ಏನಾದರೂ ಕೆಲಸವಿದ್ದರೆ ಬೆಳಗ್ಗೆ ಅಥವಾ ಸಂಜೆ ಮಾಡುವುದು ಒಳ್ಳೆಯದು. ಮಧ್ಯಾಹ್ನ ಆದಷ್ಟು ಮನೆಯೊಳಗೆ ಅಥವಾ ತಂಪಾದ ಸ್ಥಳದಲ್ಲಿರಿ. ಇನ್ನು ಹೊರಗಡೆ ಓಡಾಡುವುದಾದರೆ ಕೊಡೆ ಹಿಡಿದು ಓಡಾಡಿರಿ, ಸನ್‌ಸ್ಕ್ರೀನ್ ಲೋಷನ್ ಬಳಸಿ.

ತೆಳುವಾದ, ಸಡಿಲವಾದ ಬಟ್ಟೆ ಧರಿಸಿ

ತೆಳುವಾದ, ಸಡಿಲವಾದ ಬಟ್ಟೆ ಧರಿಸಿ

ಇನ್ನು ಬೇಸಿಗೆಯನ್ನು ನೀವು ಧರಿಸುವ ಡ್ರೆಸ್‌ ಕಡೆ ಕೂಡ ಗಮನ ನೀಡಬೇಕು. ತೆಳುವಾದ ಕಾಟನ್‌/ಹತ್ತಿಯ ಬಟ್ಟೆಗಳು ಬೇಸಿಗೆ ಕಾಲಕ್ಕೆ ಒಳ್ಳೆಯದು.

ತುಂಬಾ ವ್ಯಾಯಾಮ ಮಾಡಬೇಡಿ

ತುಂಬಾ ವ್ಯಾಯಾಮ ಮಾಡಬೇಡಿ

ನೀವು ವ್ಯಾಯಾಮವನ್ನು ಮುಂಜಾನೆ ಮಾಡಿ, ಮಧ್ಯಾಹ್ನದ ಹೊತ್ತಿನಲ್ಲಿ ದೈಹಿಕ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

English summary

Summer Safety Tips to Beat the Heat in Kannada

Here are summer safety tips to beat the heat read on.. .
X
Desktop Bottom Promotion