For Quick Alerts
ALLOW NOTIFICATIONS  
For Daily Alerts

ಬೆಂಗಳೂರು, ಮುಂಬಯಿಯಲ್ಲಿ ಹೆಚ್ಚಾಗುತ್ತಿದೆ ಬ್ಲ್ಯಾಕ್‌ ಫಂಗಸ್, ಯಾರಿಗೆ ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?

|

ಭಾರತದಲ್ಲಿ ನಾಲ್ಕನೇ ಅಲೆಯ ಆತಂಕ ಶುರುವಾಗಿದೆ, ಇನ್ನೂ ಆತಂಕದ ವಿಷಯ ಎಂದರೆ ದೇಶದ ನಗರಗಳಾದ ಮುಂಬೈ, ಬೆಂಗಳೂರಿನಲ್ಲಿ ಬ್ಲ್ಯಾಕ್‌ ಫಂಗಸ್‌ ಕೇಸ್‌ಗಳು ಕಂಡು ಬರುತ್ತಿದೆ. ಭಾರತದಲ್ಲಿ 2ನೇ ಅಲೆ ತುಂಬಾ ಕೆಟ್ಟ ಪ್ರಭಾವ ಬೀರಿತ್ತು, ಈ ಸಮಯದಲ್ಲಿ ಕೋವಿಡ್‌ 19ನಿಂದ ಚೇತರಿಸಿದ ಮಧುಮೇಹಿಗಳಿಗೆ ಬೀಕರವಾಗಿ ಕಾಡಿದ್ದು ಬ್ಲ್ಯಾಕ್‌ ಫಂಗಸ್‌. ಕೋವಿಡ್‌ 19ನಿಂದ ಚೇತರಿಸಿದ್ದರೂ ಬ್ಲ್ಯಾಕ್‌ ಫಂಗಸ್‌ಗೆ ಕೆಲವರು ಬಲಿಯಾದರು. ಇನ್ನು ಕೆಲವರ ಕಣ್ಣುಗಳಿಗೆ ಹಾನಿಯುಂಟಾಯಿತು.

ಇದೀಗ ಕಳೆದ ಕೆಲವು ದಿನಗಳಿಂದ ಮತ್ತೆ ಬ್ಲ್ಯಾಕ್‌ ಫಂಗಸ್‌ ಕೇಸ್‌ಗಳು ಆಸ್ಪತ್ರೆಗಳಲ್ಲಿ ವರದಿಯಾಗುತ್ತವೆ. ಒಂದು ಕೇಸ್‌ ಬರುತ್ತಿದ್ದಂತೆ ಜೊತೆ-ಜೊತೆಗೆ ಇನ್ನೂ ಮೂರು ಕೇಸ್‌ಗಳು ಬಂದೆವು. ಕಳೆದ ಒಂದು ವಾರದಲ್ಲಿ ನಾಲ್ಕು ಜನರು ಬ್ಲ್ಯಾಕ್‌ ಫಂಗಸ್‌ನಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೆಬ್ಬಾಳದ ಮಣಿಪಾಲ್‌ ಆಸ್ಪತ್ರೆಯ ENT ತಜ್ಞ ಡಾ. ಸಂತೋಷ್‌ ಎಸ್‌ ಹೆಲ್ತ್‌ ಸೈಟ್‌ಗೆ ತಿಳಿಸಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,927 ಹೊಸ ಕೊರೊನಾ ಕೇಸ್‌ಗಳು ವರದಿಯಾಗಿವೆ.

ಬ್ಲ್ಯಾಕ್‌ ಫಂಗಸ್‌ ರೋಗಿಗಳಲ್ಲಿ ಕಂಡು ಬರುತ್ತಿರುವ ಲಕ್ಷಣಗಳು

ಬ್ಲ್ಯಾಕ್‌ ಫಂಗಸ್‌ ರೋಗಿಗಳಲ್ಲಿ ಕಂಡು ಬರುತ್ತಿರುವ ಲಕ್ಷಣಗಳು

ಬ್ಲ್ಯಾಕ್‌ ಫಂಗಸ್‌ ಲಕ್ಷಣಗಳು ಎಲ್ಲಾ ರೋಗಿಗಳಲ್ಲಿ ಒಂದೇ ರೀತಿಯಿಲ್ಲ, ಒಬ್ಬೊಬ್ಬರಲ್ಲಿ ಒಂದೊಂದು ಲಕ್ಷಣಗಳು ಕಂಡು ಬರುತ್ತಿವೆ.

ಸಾಮಾನ್ಯವಾಗಿ ಕಂಡು ಬರುತ್ತಿರುವ ಲಕ್ಷಣಗಳೆಂದರೆ

* ತಲೆನೋವು

* ತಲೆಭಾರ

* ಮುಖದಲ್ಲಿ ನೋವು

ಯಾರಿಗೆ ಬ್ಲ್ಯಾಕ್‌ ಫಂಗಸ್‌ ಅಪಾಯ ಹೆಚ್ಚು?

ಯಾರಿಗೆ ಬ್ಲ್ಯಾಕ್‌ ಫಂಗಸ್‌ ಅಪಾಯ ಹೆಚ್ಚು?

* ಮಧುಮೇಹ ನಿಯಂತ್ರಣದಲ್ಲಿ ಇರದವರಿಗೆ

* ಏಡ್ಸ್‌ ರೋಗಿಗಳಿಗೆ

* ಸ್ಟಿರಾಯ್ಡ್‌ ಚಿಕಿತ್ಸೆ ಪಡೆಯುತ್ತಿರುವವರಿಗೆ

* ದೇಹದಲ್ಲಿ ಆಮ್ಲದ ಪ್ರಮಾಣ ನಿಯಂತ್ರಣದಲ್ಲಿ ಇರದಿದ್ದರೆ

* ಅಂಗಾಂಗ ಕಸಿ ಮಾಡಿಸಿದವರಿಗೆ

* ಸ್ಟೆಮ್‌ ಸೆಲ್‌ ಟ್ರಾನ್ಸ್‌ಪ್ಲ್ಯಾಂಟ್‌

* ಅವಧಿಪೂರ್ವ ಜನನ ಅಥವಾ ಕಡಿಮೆ ಜನನ ತೂಕ

ಬ್ಲ್ಯಾಕ್‌ ಫಂಗಸ್‌ ಹರಡುವ ವಿಧಾನ

ಬ್ಲ್ಯಾಕ್‌ ಫಂಗಸ್‌ ಹರಡುವ ವಿಧಾನ

ಯಾರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುತ್ತದೋ ಅಂದರೆ ನಿಯಂತ್ರಣದಲ್ಲಿ ಇರದ ಮಧುಮೇಹ ಮುಂತಾದ ಸಮಸ್ಯೆ ಇರುವರಿಗೆ ಬ್ಲ್ಯಾಕ್ ಫಂಗಸ್‌ ಹರಡುವುದು. ಕೋವಿಡ್‌ 19 ಇರುವವರಲ್ಲಿ ಬ್ಲ್ಯಾಕ್‌ ಫಂಗಸ್‌ ಹೆಚ್ಚಾಗಿ ಕಂಡು ಬರುವುದು ಇನ್ನು ಮೂಗು ಹಾಗೂ ಸೈನಸ್ ಸಮಸ್ಯೆ ಇರುವವರಲ್ಲಿಯೂ ಬ್ಲ್ಯಾಕ್‌ ಫಂಗಸ್‌ ಉಂಟಾಗುವ ಸಾಧ್ಯತೆ ಇದೆ.

ಬ್ಲ್ಯಾಕ್‌ ಫಂಗಸ್‌ನಿಂದ ಭಾರತಕ್ಕೆ ಹೊಸ ಅಪಾಯ ಎದುರಾಗಲಿದೆಯೇ?

ಬ್ಲ್ಯಾಕ್‌ ಫಂಗಸ್‌ನಿಂದ ಭಾರತಕ್ಕೆ ಹೊಸ ಅಪಾಯ ಎದುರಾಗಲಿದೆಯೇ?

ಭಾರತದಲ್ಲಿ ಫಂಗಲ್‌ ಸೈನಸೈಟಿಸ್‌ ಸಮಸ್ಯೆ ಹೆಚ್ಚಿದೆ, ಬೇರೆ ದೇಶಗಳಲ್ಲಿ ಇಲ್ಲ ಎಂದೇನು ಅಲ್ಲ, ಆದರೆ ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ಈ ರೀತಿಯ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಸೈನಸೈಟಿಸ್‌, ಮಧುಮೇಹ ಸಮಸ್ಯೆ ಇರುವವರು ಹೆಚ್ಚು ಜಾಗ್ರತೆವಹಿಸಬೇಕು.

ನಿಮ್ಮ ಸುರಕ್ಷತೆಗೆ ಏನು ಮಾಡಬೇಕು?

ನಿಮ್ಮ ಸುರಕ್ಷತೆಗೆ ಏನು ಮಾಡಬೇಕು?

1. ಸೈನಸೈಟಿಸ್‌ಗೆ ಚಿಕಿತ್ಸೆ ಪಡೆಯಿರಿ

2. ಮಧುಮೇಹವನ್ನು ನಿಯಂತ್ರಣದಲ್ಲಿಡಿ

3. ಒಂದು ವೇಳೆ ಬ್ಲ್ಯಾಕ್‌ ಫಂಗಸ್‌ ಇರಬಹುದೇ ಎಂಬ ಸಂಶಯ ಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ.

English summary

Sudden Rise of Black Fungus Cases In Mumbai, Bangalore

Sudden Rise of Black Fungus Cases In Mumbai, Bangalore, read on...
Story first published: Wednesday, April 27, 2022, 16:51 [IST]
X
Desktop Bottom Promotion