For Quick Alerts
ALLOW NOTIFICATIONS  
For Daily Alerts

ಡಯೆಟ್ ನಲ್ಲಿರುವವರು ಈ ಬೀದಿಬದಿಯ ಆಹಾರಗಳನ್ನು ಸೇವಿಸಬಹುದು

|

ಸದೃಢ ದೇಹ ಹಾಗೂ ಸರಿಯಾದ ತೂಕ ಕಾಪಾಡಿಕೊಳ್ಳಲು ಹೆಚ್ಚಿನವರು ಡಯೆಟ್ ಮೊರೆ ಹೋಗುತ್ತಾರೆ. ಈ ಸಮಯದಲ್ಲಿ ತಮ್ಮೆಲ್ಲಾ ಬಯಕೆಗಳಿಗೆ ಬೀಗ ಹಾಕಿ ಕಠಿಣವಾದ ಆಹಾರಕ್ರಮಗಳನ್ನು ಪಾಲಿಸುತ್ತಿರುತ್ತಾರೆ. ಅದರಲ್ಲೂ ಬೀದಿಬದಿಯ ಆಹಾರಕ್ಕಂತೂ ಅವಕಾಶವೇ ಇಲ್ಲ. ಆದರೆ ಈ ಡಯೆಟ್ ಮಾಡುವವರು ಕೆಲವೊಂದು ಬೀದಿಬದಿಯ ಆಹಾರಗಳನ್ನು ಸೇವಿಸಬಹುದೆಂದರೆ ಆಶ್ಚರ್ಯ ಆಗ್ತಿದೆಯಾ?.

ಹೌದು, ಬೀದಿಬದಿಯ ಆಹಾರಗಳು ಎಣ್ಣೆಯುಕ್ತ ಮತ್ತು ಕ್ಯಾಲೊರಿಗಳಿಂದ ತುಂಬಿವೆ. ಆದರೆ ಎಲ್ಲಾ ಆಹಾರಗಳು ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದಲ್ಲ, ಏಕೆಂದರೆ ಅವುಗಳಲ್ಲಿ ಕೆಲವು ನಿಮ್ಮ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಅಂತಹ ಬೀದಿಬದಿಯ ಆಹಾರಗಳಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಡಯೆಟ್ ಮಾಡುವವರು ಯಾವೆಲ್ಲಾ ಬೀದಿಬದಿಯ ಆಹಾರಗಳನ್ನು ತಿನ್ನಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಪನ್ನೀರ್ ಟಿಕ್ಕಾ:

ಪನ್ನೀರ್ ಟಿಕ್ಕಾ:

ತಂದೂರಿ ಪನೀರ್ ಟಿಕ್ಕಾದಿಂದ, ಮಸಾಲ ಪನೀರ್ ಟಿಕ್ಕಾದವರೆಗೆ ಹಲವಾರು ಟಿಕ್ಕಾ ತಿನಿಸುಗಳಿವೆ. ನೀವು ಇವುಗಳನ್ನು ಯಾವುದೇ ತೊಂದರೆಯಿಲ್ಲದೇ ತಿಂದು ಆನಂದಿಸಬಹುದು. ಪನೀರ್ ಟಿಕ್ಕಾವನ್ನು ಎಣ್ಣೆ ಹಾಕದೇ ಅಥವಾ ಬೆಂಕಿಯಲ್ಲಿ ಕಾಯಿಸಿ ತಯಾರಿಸಲಾಗುತ್ತದೆ. ಮೊಸರು ಮತ್ತು ಮಸಾಲೆ ಪೇಸ್ಟ್‌ನೊಂದಿಗೆ ಮ್ಯಾರಿನೇಡ್ ಮಾಡಿದ ಪನೀರ್ ಟಿಕ್ಕಾ ಬಾಯಲ್ಲಿ ನಿರೂರಿಸುತ್ತದೆ, ಜೊತೆಗೆ ಅದನ್ನು ಈರುಳ್ಳಿ ಮತ್ತು ಪುದೀನ ಚಟ್ನಿಯೊಂದಿಗೆ ತಿಂದರೆಂದರೆ ಸ್ವರ್ಗಕ್ಕೆ ಮೂರೇ ಮೆಟ್ಟಿಲು.

ಮೂಂಗ್ಲೆಟ್:

ಮೂಂಗ್ಲೆಟ್:

ಮೂಂಗ್ಲೆಟ್ ಮೂಲತಃ ತೊಗರಿಬೇಳೆ ಬಳಸಿ ತಯಾರಿಸಲಾಗುತ್ತದೆ. ಇದರಲ್ಲಿ ಪ್ರೋಟೀನ್ ಅನ್ನು ತುಂಬಿದ್ದು, ನೀವು ತೂಕ ಇಳಿಸಲು ಡಯೆಟ್ ಮಾಡುತ್ತಿದ್ದರೆ ಇದು ನಿಮಗೆ ಸೂಕ್ತವಾಗಿದೆ. ನೆನೆಸಿದ ಬೇಳೆಯನ್ನು ರುಬ್ಬಿ, ಅದಕ್ಕೆ ಮಸಾಲೆಗಳು ಮತ್ತು ಈರುಳ್ಳಿ, ಟೊಮೆಟೊ ಮತ್ತು ಕ್ಯಾಪ್ಸಿಕಂನಂತಹ ತರಕಾರಿಗಳನ್ನು ಬೆರೆಸಿ, ಅದನ್ನ ಚೆನ್ನಾಗಿ ಮಿಶ್ರಣ ಮಾಡಿ, ನಂತರ ಬಾಣಲೆಯಲ್ಲಿ ಸುರಿದು, ಎರಡೂ ಬದಿ ಬೇಯಿಸಿದರೆ, ಮೂಂಗ್ಲೆಟ್ ಸವಿಯಲು ರೆಡಿ. ಇದನ್ನು ಇಮ್ಲಿ ಚಟ್ನಿಯೊಂದಿಗೆ ಜೋಡಿಸಿ ಮತ್ತು ಹೊರಗಿನಿಂದ ಗರಿಗರಿಯಾದ ಮತ್ತು ಒಳಗಿನಿಂದ ಮೃದುವಾದ ಮೂಂಗ್ಲೆಟ್ ಅನ್ನು ಆನಂದಿಸಿ.

ಬೇಲ್ ಪುರಿ:

ಬೇಲ್ ಪುರಿ:

ಬೇಲ್ ಪುರಿ ಜನಪ್ರಿಯ ಮಹಾರಾಷ್ಟ್ರದ ತಿಂಡಿ, ಇದು ಭಾರತದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. ಪಫ್ಡ್ ರೈಸ್, ಸೆವ್, ಈರುಳ್ಳಿ, ಟೊಮೆಟೊ, ಹುಣಸೆ ಚಟ್ನಿ, ಪುದೀನ ಚಟ್ನಿ, ನಿಂಬೆ ರಸಗಳಿಂದ ತಯಾರಿಸಿದ ಬೇಲ್ ಪುರಿ ಒಂದು ಉತ್ತಮ ತಿಂಡಿ. ಇದನ್ನ ಬಿಸಿ ಕಪ್ ಚಹಾದೊಂದಿಗೆ ಸೇವಿಸಬಹುದು. ಈ 'ಬೀಚ್ ಸ್ನ್ಯಾಕ್' ಕ್ಯಾಲೊರಿಗಳನ್ನು ಕಡಿಮೆ ಹೊಂದಿದ್ದು, ಆಹಾರವಾಗಿಯೂ ಇದನ್ನು ಸವಿಯಬಹುದು.

ಶಕರ್ಕಂಡಿ ಚಾಟ್ ಅಥವಾ ಗೆಣಸಿನ ಚಾಟ್:

ಶಕರ್ಕಂಡಿ ಚಾಟ್ ಅಥವಾ ಗೆಣಸಿನ ಚಾಟ್:

ಶಕರ್ಕಂಡಿ ಚಾಟ್ ಅಥವಾ ಗೆನಸಿನ ಚಾಟ್ ಜನಪ್ರಿಯ ಉತ್ತರ ಭಾರತದ ತಿಂಡಿ, ಇದನ್ನು ಎಲ್ಲಾ ಆಹಾರ ಪ್ರಿಯರು ಇಷ್ಟಪಡುತ್ತಾರೆ. ಇದನ್ನು ಗೆಣಸು ಮತ್ತು ಕೆಲವು ಮಸಾಲೆಗಳೊಂದಿಗೆ ತಯಾರಿಸಲಾಗಿದ್ದು, ಆರೋಗ್ಯಕರವೂ ಹೌದು. ನೀವು ಮಾಡಬೇಕಾಗಿರುವುದು ಬೇಯಿಸಿದ ಗೆಣಸಿನ ಸಿಪ್ಪೆ ತೆಗದು, ಅವುಗಳನ್ನು ತುಂಡುಗಳಾಗಿ ಕತ್ತರಿಸಿ. ಅದಕ್ಕೆ ಬೆ ರಸ, ಚಾಟ್ ಮಸಾಲ, ಜೀರಿಗೆ ಪುಡಿ ಮತ್ತು ಕಲ್ಲು ಉಪ್ಪಿನ್ನು ಸೇರಿಸಿ, ಬೆರೆಸಿ. ಉತ್ತಮ ರುಚಿಗಾಗಿ ಚಾಟ್ ಅನ್ನು ಸೆವ್ ಮತ್ತು ದಾಳಿಂಬೆ ಬೀಜಗಳೊಂದಿಗೆ ಅಲಂಕರಿಸಿ. ವಿಧಾನಗಳು

ಮಸಾಲ ಕಾರ್ನ್:

ಮಸಾಲ ಕಾರ್ನ್:

ವಿವಿಧ ರೀತಿಯ ಮಸಾಲೆಗಳನ್ನು ಸೇರಿಸಿದ ಬೇಯಿಸಿದ ಕಾರ್ನ್ ಕಾಳುಗಳು ಮಳೆಗಾಲವನ್ನು ಆನಂದಿಸಲು ಸೂಕ್ತವಾದ ತಿಂಡಿ. ಇದನ್ನು ಬೇಯಿಸಿದ ಜೋಳದೊಂದಿಗೆ ತಯಾರಿಸಲಾಗಿದ್ದು, ಡಯೆಟ್ ಅನುಸರಿಸುತ್ತಿರುವವರಿಗೆ ಸೂಕ್ತವಾಗಿದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದು, ಹೆಚ್ಚುವರಿ ಕ್ಯಾಲೊರಿ ಅಥವಾ ಕೊಬ್ಬನ್ನು ಒಳಗೊಂಡಿರುವುದಿಲ್ಲ. ಈ ಬೀದಿ ಆಹಾರವನ್ನು ಮೊದಲು ಸಣ್ಣದಾಗಿ ಕುದಿಸಿ ನಂತರ ನಿಂಬೆ ರಸ, ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಚಾಟ್ ಮಸಾಲ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಗರಂ ಮಸಾಲ ಪುಡಿಯೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಈ ಆರೋಗ್ಯಕರ ಬೀದಿ ಆಹಾರವನ್ನು ಸೇವಿಸಬಹುದು.

English summary

Street Foods That You Can Eat While on a Diet in Kannada

Here we talking about Street foods that you can eat while on a diet in Kannada, read on
Story first published: Friday, July 23, 2021, 15:21 [IST]
X
Desktop Bottom Promotion