For Quick Alerts
ALLOW NOTIFICATIONS  
For Daily Alerts

ಈ ಮಸಾಲೆ ಪದಾರ್ಥಗಳನ್ನು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಿಸಬಹುದು

|

ಆರೋಗ್ಯಕ್ಕಾಗಿ ಹೆಚ್ಚಿನ ಮಸಾಲೆ ಪದಾರ್ಥಗಳನ್ನು ತ್ಯಜಿಸಬೇಕು, ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ತರುಬಲ್ಲದು ಎಂದು ವೈದ್ಯರು ಹಲವರಿಗೆ ಸಲಹೆ ನೀಡಿರಬಹುದು, ಆದರೆ ನೆನಪಿರಲಿ ಎಲ್ಲಾ ಮಸಾಲೆ ಪದಾರ್ಥಗಳು ಅಪಾಯಕಾರಿ ಅಲ್ಲ, ಕೆಲವು ಮಸಾಲೆ ಪದಾರ್ಥಗಳನ್ನು ನಿತ್ಯವೂ ಸೇವಿಸಲೇಬೇಕು ಎನ್ನುತ್ತಾರೆ ಆಹಾರ ತಜ್ಞರು.

ದೀರ್ಘಕಾಲ ಬದುಕಲು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ಕಡಿಮೆ ಮಾಡಲು ದೈನಂದಿನ ಆಹಾರದಲ್ಲಿ ಈ ಕೆಲವು ಮಸಾಲೆಗಳನ್ನು ಸೇವಿಸಲೇಬೇಕು. ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಮಸಾಲೆಗಳು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.

ಅಧಿಕ ರಕ್ತದೊತ್ತಡ ಇತ್ತೀಚಿನ ದಿನಗಳಲ್ಲಿ ನೀವು ಊಹಿಸುವುದಕ್ಕಿಂತ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡುವ ತಂತ್ರಗಳಲ್ಲಿ ಆಹಾರ ಮತ್ತು ಜೀವನಶೈಲಿ ಹೊಂದಾಣಿಕೆಗಳು ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಮಸಾಲೆಗಳನ್ನು ಬಳಸುವುದರಿಂದ ಅಧಿಕ ರಕ್ತದೊತ್ತಡವನ್ನು ಉತ್ತಮವಾಗಿ ನಿಭಾಯಿಸಲು ಮತ್ತು ಹೃದ್ರೋಗಗಳ ಅನೇಕ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೇಗೆ ಮತ್ತು ಯಾವೆಲ್ಲಾ ಮಸಾಲೆ ಮುಂದೆ ನೋಡೋಣ:

1. ಬೆಳ್ಳುಳ್ಳಿ

1. ಬೆಳ್ಳುಳ್ಳಿ

ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮಸಾಲೆಗಳಲ್ಲಿ ಒಂದು ಬೆಳ್ಳುಳ್ಳಿ. ಬೆಳ್ಳುಳ್ಳಿಯು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ ಮತ್ತು ಇದು ಭಾರತೀಯ ಊಟಗಳಲ್ಲಿ ಕಂಡುಬರುವುದು ಅತೀ ಸಾಮಾನ್ಯ ಪದಾರ್ಥವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು ಅನೇಕ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಆಲಿಸಿನ್ ಅದರ ಪ್ರಾಥಮಿಕ ಸಂಯುಕ್ತಗಳಲ್ಲಿ ಒಂದಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ರಕ್ತನಾಳಗಳ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ಅದರ ಉರಿಯೂತದ ಗುಣ, ಆಂಟಿಮೈಕ್ರೊಬಿಯಲ್ ಮತ್ತು ಪ್ರತಿಜೀವಕ ಗುಣಲಕ್ಷಣಗಳ ಆಗರವಾಗಿದೆ.

2. ತುಳಸಿ

2. ತುಳಸಿ

ತುಳಸಿಯು ಸಸ್ಯ ಆಂಟಿಆಕ್ಸಿಡೆಂಟ್ ಆಗಿದ್ದು, ಯುಜೆನಾಲ್ನಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ದೇಹದಲ್ಲಿ ನೈಸರ್ಗಿಕ ಕ್ಯಾಲ್ಸಿಯಂ ಚಾನಲ್ ಬ್ಲಾಕರ್ ಆಗಿ ಕಾರ್ಯನಿರ್ವಹಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ತುಳಸಿಯಲ್ಲಿರುವ ಸಾರಭೂತ ತೈಲಗಳು ನಿಮ್ಮ ದೇಹದಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

3. ಏಲಕ್ಕಿ

3. ಏಲಕ್ಕಿ

ಏಲಕ್ಕಿಯು ಅದರ ವಾಸನೆ ಮತ್ತು ಅದ್ಭುತ ಪರಿಮಳಕ್ಕೆ ಹೆಸರುವಾಸಿಯಾಗಿದೆ ಆದರೆ ಈ ಸಿಹಿ ಮಸಾಲೆಯು ನೈಸರ್ಗಿಕ ಕ್ಯಾಲ್ಸಿಯಂ ಚಾನಲ್ ಬ್ಲಾಕರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ವಾಸ್ತವವಾಗಿ, ಹಂತ-1 ಅಧಿಕ ರಕ್ತದೊತ್ತಡ ರೋಗಿಗಳು ಮೂರು ತಿಂಗಳ ಕಾಲ 1.5 ಗ್ರಾಂ (ದಿನಕ್ಕೆ ಎರಡು ಬಾರಿ) ಏಲಕ್ಕಿಯನ್ನು ಸೇವಿಸಿದವರು ಸಿಸ್ಟೊಲಿಕ್, ಡಯಾಸ್ಟೊಲಿಕ್ ಮತ್ತು ಸರಾಸರಿ ರಕ್ತದೊತ್ತಡದಲ್ಲಿ ಗಮನಾರ್ಹವಾದ ಇಳಿಕೆಯನ್ನು ಹೊಂದಿದ್ದಾರೆ ಎಂದು ಸಂಶೋಧನಾ ವರದಿಯೊಂದು ಹೇಳುತ್ತದೆ.

4. ಶುಂಠಿ

4. ಶುಂಠಿ

ಇದು ಅತ್ಯಂತ ಪರಿಣಾಮಕಾರಿ ಮಸಾಲೆಯಾಗಿದ್ದು ಇದನ್ನು ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದರ ಸೇವನೆಯು ರಕ್ತಪರಿಚಲನೆ, ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ರಕ್ತದೊತ್ತಡ ಸೇರಿದಂತೆ ಹೃದಯದ ಆರೋಗ್ಯದ ಹಲವು ಅಂಶಗಳನ್ನು ಸುಧಾರಿಸುತ್ತದೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಸಹ ಸಹಾಯ ಮಾಡುತ್ತದೆ.

5. ದಾಲ್ಚಿನ್ನಿ

5. ದಾಲ್ಚಿನ್ನಿ

ಹೃದಯಕ್ಕೆ ಮಾತ್ರವಲ್ಲ, ದಾಲ್ಚಿನ್ನಿ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಮಸಾಲೆಯಾಗಿದೆ. ಇದು ದಾಲ್ಚಿನ್ನಿ ಮರದ ತೊಗಟೆಯಿಂದ ನಾವು ಪಡೆಯುವ ಸುವಾಸನೆಯ ಮಸಾಲೆಯಾಗಿದೆ. ಈ ಮಸಾಲೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಹಿಗ್ಗಿಸುತ್ತದೆ. ಇದರೊಂದಿಗೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಕೂದಲಿನ ಸಮಸ್ಯೆಗಳನ್ನು ತಡೆಯುತ್ತದೆ ಮತ್ತು ಕರುಳಿನ ಸೋಂಕನ್ನು ತಡೆಯುತ್ತದೆ.

English summary

Spices That May Help Lower High Blood Pressure in Kannada

Here we are discussing about Spices That May Help Lower High Blood Pressure in Kannada. Read more.
Story first published: Thursday, October 6, 2022, 17:24 [IST]
X
Desktop Bottom Promotion