For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ, ಅಸಿಡಿಟಿ, ತೂಕ ಇಳಿಕೆಗೆ ಸಹಕಾರಿ ಈ ಸೊಲ್ಕಾಢಿ ಪಾನೀಯ

|

ನೀವು ಪುರ್ನಪುಳಿ ಪಾನೀಯ ರುಚಿ ನೋಡಿರುತ್ತೀರಿ. ದಕ್ಷಿಣ ಕನ್ನಡ ಕಡೆ ಈ ಪಾನೀಯ ಹೆಚ್ಚಾಗಿ ಬಳಸುತ್ತಾರೆ. ಆದರೆ ಇಲ್ಲಿ ನೀಡಿರುವುದು ಪುರ್ನಪುಳಿ ಬಳಸಿ ಮಾಡುವ ಪಾನೀಯವಾಗಿದ್ದರೂ, ತೆಂಗಿನಕಾಯಿ ಹಾಲು ಹಾಗೂ ಮೆಣಸು, ಜೀರಿಗೆ, ಬೆಳ್ಳುಳ್ಳು ಬಳಸಿ ಮಾಡುವ ಪಾನೀಯ ಆಗಿದೆ.

ಇದೊಂದು ಕೊಂಕಣಿ ಶೈಲಿಯ ಪಾನೀಯವಾಗಿದ್ದು ಗೋವಾ ಕಡೆ ಹೆಚ್ಚಾಗಿ ಮಾಡುತ್ತಾರೆ. ಈ ಪಾನೀಯ ಅಲ್ಲಿ ಸೊಲ್ಕಾಢಿ ಎಂದೇ ಪ್ರಸಿದ್ಧ. ಇದನ್ನು ಪುರ್ನಪುಳಿ ಹಾಗೂ ತೆಂಗಿನಕಾಯಿ ಹಾಲು ಬಳಸಿ ಮಾಡಲಾಗುವುದು. ಅನ್ನದ ಜತೆ ಮಜ್ಜಿಗೆ ಸವಿಯುವ ರೀತಿಯಲ್ಲಿ ಈ ಪಾನೀಯವನ್ನು ಸವಿಯಬಹುದು.

ಊಟದ ನಂತರ ಈ ಪಾನೀಯ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇನ್ನು ಅಸಿಡಿಟಿ ಸಮಸ್ಯೆ ಇರುವವರು ಈ ಪಾನೀಯ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು. ದೇಹದಲ್ಲಿ ಉಷ್ಣಾಂಶವನ್ನು ನಿಯಂತ್ರಿಸುವ ಈ ಆರೋಗ್ಯಕರ ಪಾನೀಯದ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಗ್ರಿ

  • 12 ಪುನರ್ಪುಳಿ
  • 1 ಕಪ್ ತೆಂಗಿನತುರಿ
  • 1 ಹಸಿ ಮೆಣಸಿನಕಾಯಿ
  • 2 ಬೆಳ್ಳುಳ್ಳಿ ಎಸಳು
  • 2 ಚಮಚ ಕೊತ್ತಂಬರಿ ಬೀಜ
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ಅರ್ಧ ಚಮಚ ಜೀರಿಗೆ ಪುಡಿ
  • ರುಚಿಗೆ ತಕ್ಕ ಉಪ್ಪು
  • ಸ್ವಲ್ಪ ಪುದೀನಾ ಸೊಪ್ಪು (ಅಲಂಕಾರಕ್ಕೆ)

ಮಾಡುವುದು ಹೇಗೆ?

* ಈ ರೆಸಿಪಿ ಮಾಡಲು ಅರ್ಧ ಗಂಟೆ ಮೊದಲು ಅರ್ಧ ಕಪ್ ಬಿಸಿ ನೀರಿಗೆ ಪುರ್ನಪುಳಿ ಹಾಕಿಡಿ.
* ಈಗ ಆ ನೀರನ್ನು ಸೋಸಿ ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಹಸಿ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ.
* ಈಗ ತೆಂಗಿನಕಾಯಿಯನ್ನು ಸ್ವಲ್ಪ ನೀರು ಹಾಕಿ ಒಂದು ಎರಡು ರೌಂಡ್‌ ತಿರುಗಿಸಿ, ಶುದ್ಧ ಬಟ್ಟೆಯಲ್ಲಿ ತೆಂಗಿನಕಾಯಿ ಹಾಲನ್ನು ಹಿಂಡಿ ತೆಗೆಯಿರಿ.
* ಈಗ ಸ್ವಲ್ಪ ದೊಡ್ಡ ಬೌಲ್‌ಗೆ ತೆಂಗಿನಕಾಯಿ ಹಾಲು, ತರಿತರಿಯಾಗಿ ರುಬ್ಬಿದ ಮಸಾಲೆ, ಹಾಗು ಪುರ್ನಪುಳಿ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈಗ ರೆಡಿಯಾದ ಪುರ್ನಪುಳಿ ಪಾನೀಯವನ್ನು ಪುದೀನಾ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಊಟದ ಜತೆ ಸರ್ವ್‌ ಮಾಡಿ.

ಪ್ರಯೋಜನಗಳು:

ಜೀರ್ಣಕ್ರಿಯೆಗೆ ಒಳ್ಳೆಯದು: ಈ ಪಾನೀಯವನ್ನು ಊಟದ ಬಳಿಕ ಸೇವಿಸಿದರೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಅಜೀರ್ಣ ಸಮಸ್ಯೆ ಇರುವವರು ಈ ಪಾನೀಯ ಕುಡಿಯುವುದರಿಂದ ತಮ್ಮ ಸಮಸ್ಯೆಯನ್ನು ಇಲ್ಲವಾಗಿಸಬಹುದು.

ಅಸಿಡಿಟಿ ತಡೆಗಟ್ಟುತ್ತದೆ: ಅಸಿಡಿಟಿ ಬಂದಾಗ ಹೊಟ್ಟೆ ಉರಿ, ಉಸಿರಾಟಕ್ಕೆ ತೊಂದರೆ ಮುಂತಾದ ಸಮಸ್ಯೆ ಕಂಡು ಬರುವುದು. ಅಸಿಡಿಟಿ ಸಮಸ್ಯೆ ತಡೆಗಟ್ಟುವಲ್ಲಿ ಈ ಪಾನೀಯ ತುಂಬಾ ಸಹಕಾರಿ. ಊಟವಾದ ಬಳಿಕ ಈ ಪಾನೀಯ ಕುಡಿಯಿರಿ, ಅಸಿಡಿಟಿ ಸಮಸ್ಯೆ ತಡೆಗಟ್ಟಿ.

ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ: ದೇಹದ ಉಷ್ಣತೆ ಕಡಿಮೆ ಮಾಡಿ, ದೇಹವನ್ನು ತಂಪಾಗಿ ಇಡುವಲ್ಲಿ ತುಂಬಾ ಸಹಕಾರಿ. ಆದ್ದರಿಂದ ಬೇಸಿಗೆಗೆ ಸೂಕ್ತವಾದ ಪಾನೀಯ ಇದಾಗಿದೆ.

ತ್ವಚೆ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ತ್ವಚೆ ಆರೋಗ್ಯಕ್ಕೆ ಕೂಡ ಒಳ್ಳೆಯದು.
ತಲೆಸುತ್ತು, ವಾಂತಿ ತಡೆಗಟ್ಟಲು ಸಹಕಾರಿ: ವಾಂತಿ, ತಲೆಸುತ್ತು ಬಂದಾಗ ಈ ಪಾನೀಯ ಮಾಡಿದರೆ ಸುಸ್ತು ಬೇಗನೆ ನಿವಾರಣೆಯಾಗುವುದು.

ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ: ಈ ಪಾನೀಯ ಮಲಬ್ಧತೆ ತಡೆಗಟ್ಟುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.

ತಲೆನೋವಿಗೆ ಮನೆಮದ್ದು: ಮೈಗ್ರೇನ್‌ ಸಮಸ್ಯೆ ಬಂದಾಗ ಬೇಗನೆ ಹೋಗುವುದಿಲ್ಲ. ತಲೆನೋವಿನಿಂದಾಗಿ ಯಾವ ಕೆಲಸದ ಕಡೆ ಗಮನ ಹರಿಸಲು ಕೂಡ ಸಾಧ್ಯವಾಗುವುದಿಲ್ಲ. ಮೈಗ್ರೇನ್ ಬಂದಾಗ ಸೊಲ್ಕಾಢಿ ಮಾಡಿ ಕುಡಿದರೆ ತಲೆನೋವು ಕಡಿಮೆಯಾಗುವುದು.

ತೂಕ ಇಳಿಕೆಯಲ್ಲಿ ಸಹಕಾರಿ: ಸೊಲ್ಕಾಢಿ ಚಯಪಚಯ ಕ್ರಿಯೆಗೆ ಸಹಕಾರಿ. ಆದ್ದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆದು ತೂಕ ಇಳಿಸುವಲ್ಲಿಯೂ ಸಹಕಾರಿ.

English summary

solkadhi good for digestion and acidity

Here are Solkadhi Recipe, this drinks helps for better digestion and sooth acidity problem,good for reduce weight and also helps to cool the body. Here are solkadhi recipe and its benefits. Take a loo.
X
Desktop Bottom Promotion