For Quick Alerts
ALLOW NOTIFICATIONS  
For Daily Alerts

ಎಸ್ಜಿಮಾ ಬಗ್ಗೆ ನಿಮಗೆಷ್ಟು ಗೊತ್ತು? ಎಲ್ಲಾ ಚರ್ಮ ರೋಗ ಎಸ್ಜಿಮಾ ಅಲ್ಲ, ಹಾಗಾದರೆ ಕಂಡುಹಿಡಿಯುವುದು ಹೇಗೆ?

|

ಮಳೆಗಾಲ ಬಂತೆಂದರೆ ಸಾಕು ಭಾರತೀಯರಿಗೆ ಎಲ್ಲಿಲ್ಲದ ಹುರುಪು.ಆದರೆ ನಿಮಗೊಂದು ಗೊತ್ತಾ ಅನೇಕ ರೋಗಗಳು ವಕ್ಕರಿಸುವ ಸಮಯ ಅಂದರೆ ಅದು ಮಳೆಗಾಲ. ಅದರಲ್ಲೂ ವಿಶೇಷವಾಗಿ ಚರ್ಮರೋಗ ಉಂಟಾಗುವುದು ಈ ಕಾಲದಲ್ಲಿ ಹೆಚ್ಚು.

123

ಆರ್ದ್ರತೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯಿಂದಾಗಿ ಮಾನ್ಸೂನ್ ಸಮಯದಲ್ಲಿ ಚರ್ಮದ ಸೋಂಕುಗಳ ಸಾಧ್ಯತೆಯು ಹೆಚ್ಚಾಗುತ್ತದೆ. ಅನೇಕರಿಗೆ ತುರಿಕೆ, ಅಲರ್ಜಿಯಂತಹ ಚರ್ಮರೋಗಗಳು ಸಂಭವಿಸುತ್ತದೆ. ಕೆಲವೊಂದು ಚರ್ಮರೋಗಳು ಎಸ್ಜಿಮಾ ಎಂದು ಅಂದುಕೊಳ್ಳುವುದುಂಟು.

ಆದರೆ ಎಸ್ಜಿಮಾ ಆಗಿರುವುದಿಲ್ಲ. ಎಸ್ಜಿಮಾ ರೀತಿಯ ರೋಗಲಕ್ಷಣಗಳು ವಿವಿಧ ಚರ್ಮರೋಗಗಳಲ್ಲಿ ಸಂಭವಿಸುವುದುಂಟು. ಆದ್ದರಿಂದ ಇವುಗಳ ಸರಿಯಾದ ಚಿಕಿತ್ಸೆಗಾಗಿ ಅವುಗಳನ್ನು ಸಂಪೂರ್ಣವಾಗಿ ಪರೀಕ್ಷಿಸುವುದು ಮುಖ್ಯವಾಗಿರುತ್ತದೆ. ಹಾಗಾದರೆ ಇತರೆ ಚರ್ಮ ರೋಗ ಹಾಗೂ ಎಸ್ಜಿಮಾಕ್ಕಿರುವ ಭಿನ್ನತೆಗಳು ಏನು? ಅದನ್ನು ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಎಸ್ಜಿಮಾ ಎಂದರೇನು?

ಎಸ್ಜಿಮಾ ಎಂದರೇನು?

ಎಸ್ಜಿಮಾ ಎಂದರೆ ಸಾಂಕ್ರಾಮಿಕವಲ್ಲದ ಆದರೆ ದೀರ್ಘಕಾಲ ಚರ್ಮದ ಸಮಸ್ಯೆಯ ಸ್ಥಿತಿಯಾಗಿದೆ. ಅಂದರೆ ಶುಷ್ಕ ಮತ್ತು ಪರೆ, ಪರೆಯಾದ ಹಾಗೂ ತುರಿಕೆಯುಂಟು ಮಾಡುವ ಚರ್ಮದ ಸ್ಥಿತಿಯಾಗಿದೆ. ಇದು ಆನುವಂಶಿಕ, ಬದಲಾಗುತ್ತಿರುವ ತಾಪಮಾನದ ಪರಿಣಾಮ, ಪರಿಸರದ ಪರಿಣಾಮದಿಂದ ಉಂಟಾಗುತ್ತದೆ. ಇದು ಹೆಚ್ಚಾಗಿ ಶಿಶುಗಳು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ವಯಸ್ಕರ ಮೇಲೂ ಸಮಸ್ಯೆಯನ್ನು ಉಂಟುಮಾಡುತ್ತದೆ.

ಎಸ್ಜಿಮಾದ ಗುಣಲಕ್ಷಣಗಳೇನು?

ಎಸ್ಜಿಮಾದ ಗುಣಲಕ್ಷಣಗಳೇನು?

ಫ್ಲೆಕ್ಸುರಲ್ ಎಸ್ಜಿಮಾವು ಮಕ್ಕಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಎಸ್ಜಿಮಾವಾಗಿದ್ದು, ಚರ್ಮದ ಫೋಲ್ಡ್ ಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಇನ್ನು ಎಸ್ಜಿಮಾ ಎರಡು ವಿಧಗಳು ಅಂದರೆ ಶುಷ್ಕ ಮತ್ತು ತೇವದ ರೂಪದಲ್ಲಿ ಕಾಣಬಹುದು. ಆರಂಭದಲ್ಲಿ ಚರ್ಮವು ತುಂಬಾ ಒಣಗುತ್ತದೆ, ನಂತರ ದದ್ದುಗಳು ಬರುತ್ತದೆ ಇದು ಒಣ ಎಸ್ಜಿಮಾದ ಸಾಮಾನ್ಯ ಲಕ್ಷಣಗಳಾಗಿವೆ. ನಂತರ ಕಾಲಾನಂತರದಲ್ಲಿ, ಚರ್ಮದಲ್ಲಿ ಬಿರುಕುಗಳು ಉಂಟಾಗಬಹುದು, ಇದು ದ್ರವವನ್ನು ಹೊರಹಾಕುವ ಅಂದರೆ ತೇವದ ರೂಪದಲ್ಲಿ ಗುಳ್ಳೆಗಳ ರಚನೆಯೊಂದಿಗೆ ಪಫಿ, ಕೆಂಪು ಮತ್ತು ಉರಿಯೂತದ ಚರ್ಮಕ್ಕೆ ಕಾರಣವಾಗುತ್ತದೆ. ಇನ್ನು ವಯಸ್ಕರಲ್ಲಿ, ಎಸ್ಜಿಮಾಗೆ ಕಾರಣವಾಗುವ ವಿಭಿನ್ನ ಅಂಶಗಳಿವೆ. ಸಾಮಾನ್ಯವಾಗಿ, 50-60 ವರ್ಷ ವಯಸ್ಸಿನಲ್ಲಿ ಎಸ್ಜಿಮಾ ಕಾಡುವ ಸಾಧ್ಯತೆ ಹೆಚ್ಚು. ಅಂದರೆ ಈ ಸಮಯದಲ್ಲಿ ಒಣ ಚರ್ಮದ ಸಮಸ್ಯೆಗಳು ಉದ್ಭವಿಸಲು ಆರಂಭವಾಗುತ್ತದೆ. , ಆದ್ದರಿಂದ ಅವರ ದೇಹದಲ್ಲಿ ಒಣ ಎಸ್ಜಿಮಾವನ್ನು ಕಾಣಬಹುದು, ಇದು ಅಂತಿಮವಾಗಿ ತೇವ ಎಸ್ಜಿಮಾವಾಗಿ ಬದಲಾಗಬಹುದು.

ಎಸ್ಜಿಮಾ? ಅಥವಾ ಸಾಮಾನ್ಯ ಚರ್ಮ ರೋಗ ಅಂತ ತಿಳಿಯುವುದು ಹೇಗೆ?

ಎಸ್ಜಿಮಾ? ಅಥವಾ ಸಾಮಾನ್ಯ ಚರ್ಮ ರೋಗ ಅಂತ ತಿಳಿಯುವುದು ಹೇಗೆ?

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾಗುವುದರಿಂದ ಚರ್ಮ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ. ಇದರಿಂದ ಚರ್ಮವು ಅಲರ್ಜಿಗಳು, ಸೋಂಕುಗಳು ಮತ್ತು ದದ್ದುಗಳಿಗೆ ಹೆಚ್ಚು ಒಳಪಡುತ್ತದೆ. ಎಸ್ಜಿಮಾದಿಂದ ಹಿಡಿದು ಚರ್ಮದ ಅಲರ್ಜಿಗಳವರೆಗೆ, ಈ ಋತುವಿನಲ್ಲಿ ಚರ್ಮ ರೋಗಗಳು ಮತ್ತು ಇತರ ಸೋಂಕುಗಳ ಅಪಾಯವು ಗಣನೀಯವಾಗಿ ಹೆಚ್ಚಿರುತ್ತದೆ. ಇನ್ನು ಇವುಗಳೆಲ್ಲ ಒಂದೇ ರೀತಿಯಲ್ಲಿ ಇರುವುದರಿಂದ ಕನ್ಫ್ಯೂಷನ್ ಜಾಸ್ತಿ. ಆದರೆ ಗುಣಲಕ್ಷಣಗಳಲ್ಲಿ ಕೊಂಚ ಭಿನ್ನವಾಗಿದೆಯಾದ್ರು ಅದು ನಮಗೆ ಅಷ್ಟೇನು ತಿಳಿಯಲ್ಲ. ಹೀಗಾಗಿ ನಾವು ವೈದರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಉತ್ತಮ.

ಎಸ್ಜಿಮಾ ತರ ಹೋಲುವ ಇನ್ನಿತರ ಚರ್ಮ ಸಮಸ್ಯೆಗಳು ಯಾವುವು?

ಎಸ್ಜಿಮಾ ತರ ಹೋಲುವ ಇನ್ನಿತರ ಚರ್ಮ ಸಮಸ್ಯೆಗಳು ಯಾವುವು?

1. ಸ್ಕೇಬೀಸ್:

ಇದು ನಮ್ಮ ಚರ್ಮದ ಮೇಲೆ ಇರುವ ನಮಗೂ ಕಾಣದ ಹುಳ ಅಥವಾಮಿಟೆ-ಸಂಬಂಧಿತ ಉಂಟಾಗುವ ಚರ್ಮರೋಗವಾಗಿದೆ. ಇದು ಅತ್ಯಂತ ಕಿರಿಕಿರಿಯುಂಟು ಮಾಡುವ ಚರ್ಮರೋಗವಾಗಿದ್ದು ಎಲ್ಲ ಸಮಯದಲ್ಲಿ ತುರಿಸಬೇಕು ಅನ್ನಿಸುವಷ್ಟರ ಮಟ್ಟಿಗೆ ತುರಿಕೆ ಇರುತ್ತದೆ. ಇದು ದೈಹಿಕ ಸಂಪರ್ಕದ ಮೂಲಕ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಜಾಸ್ತಿ.

2. ಸೋರಿಯಾಸಿಸ್:

2. ಸೋರಿಯಾಸಿಸ್:

ಸೋರಿಯಾಸಿಸ್ ಅನ್ನುವ ಚರ್ಮ ರೋಗ ಕೂಡ ಎಸ್ಜಿಮಾದಂತೆ ಇರುತ್ತದೆ. ಆದರೆ ಇದು ಎಸ್ಜಿಮಾವಲ್ಲ. ಸೋರಿಯಾಸಿಸ್ ನಲ್ಲಿ ಮೊಣಕಾಲುಗಳು, ಮೊಣಕೈಗಳು, ನೆತ್ತಿಯ ಮೇಲೆ ಸಮಸ್ಯೆಗಳು ಉಂಟಾಗುವುದನ್ನು ನಾವು ಗಮನಿಸಬಹುದು. ಸೋರಿಯಾಸಿಸ್ ನಲ್ಲಿ ತೀವ್ರ ತುರಿಕೆ, ಚಿಪ್ಪುಗಳುಳ್ಳ ಕಲೆಗಳೊಂದಿಗೆ ರಾಶಸ್ ಇರುತ್ತದೆ. ಸೋರಿಯಾಸಿಸ್ ದೀರ್ಘಕಾಲದ ಸಮಸ್ಯೆಯಾಗಿದ್ದು ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ.

3.ಹೈವ್ಸ್ :

3.ಹೈವ್ಸ್ :

ಇದು ಒಂದು ರೀತಿಯ ತುರಿಕೆಯ ಪರಿಸ್ಥಿತಿಯಾಗಿದೆ. ಚರ್ಮದ ಮೇಲ್ಮೈಯಲ್ಲಿ ತುರಿಕೆ, ಕೆಂಪು ಅಥವಾ ಚರ್ಮದ ಬಣ್ಣದ ವೆಲ್ಟ್ಸ್ ಕೆಲವು ರೋಗಲಕ್ಷಣಗಳಾಗಿವೆ. ಇದು ಕೆಲವು ಆಹಾರಗಳು, ಔಷಧಗಳು ಅಥವಾ ಪರಿಸರ ಅಂಶಗಳಿಂದ ಉಂಟಾಗಬಹುದು.

4.ರಿಂಗ್ವರ್ಮ್:

4.ರಿಂಗ್ವರ್ಮ್:

ನೆತ್ತಿಯ ಅಥವಾ ಚರ್ಮದ ಮೇಲಿನ ಶಿಲೀಂಧ್ರಗಳಿಂದ ಉಂಟಾಗುವ ಸೋಂಕು ಇದಾಗಿದೆ. ಈ ಸಮಸ್ಯೆ ರಿಂಗ್ ರೂಪದಲ್ಲಿ ಇರುವುದರಿಂದ ಇದನ್ನು ರಿಂಗ್ವರ್ಮ್ ಎನ್ನುತ್ತಾರೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣವನ್ನು ಹೊಂದಿದೆ. ಸೋಂಕಿತ ಪ್ರಾಣಿ ಅಥವಾ ವಸ್ತುವನ್ನು ಸಂಪರ್ಕಿಸುವ ಮೂಲಕ ಅಥವಾ ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ, ರಿಂಗ್ವರ್ಮ್ ಹರಡಬಹುದು. ಸಾಮಾನ್ಯವಾಗಿ ಚಿಪ್ಪುಗಳುಳ್ಳ ಇದು ಕಿರಿಕಿರಿಯುಂಟುಮಾಡಬಹುದು. ನೋವು ಉಂಟು ಮಾಡಬಹುದು.

5. ಅಲರ್ಜಿ:

5. ಅಲರ್ಜಿ:

ಹವಾಮಾನ ಬದಲಾದಾಗ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. ಅವರಿಗೆ ಸೀನುವಿಕೆ, ತುರಿಕೆ, ಕೆಮ್ಮು, ಕೆಂಪು ಚರ್ಮ ಅಥವಾ ಊತದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

ಚರ್ಮರೋಗಕ್ಕೆ ಮಳೆಗಾಲದಲ್ಲಿ ಆಹಾರ ಕ್ರಮ!

ಚರ್ಮರೋಗಕ್ಕೆ ಮಳೆಗಾಲದಲ್ಲಿ ಆಹಾರ ಕ್ರಮ!

ಎಸ್ಜಿಮಾ ಯಾವುದೇ ಆಹಾರದಿಂದ ಬರುವುದಿಲ್ಲ ಆದರೆ ಉತ್ತಮ ಆಹಾರ ಸೇವನೆಯಿಂದ ಎಸ್ಜಿಮಾ ಹಾಗೂ ಇನ್ನಿತರ ಚರ್ಮ ಸಮಸ್ಯೆಗಳಿಂದ ಹೊರಬರಬಹುದು. ಸಿಹಿಯನ್ನು ಆದಷ್ಟು ಅವಾಯ್ಡ್ ಮಾಡುವುದು ಒಳ್ಳೆಯದು. ಬಾದಾಮಿ, ಗೋಡಂಬಿ, ವಾಲ್ನಟ್ಸ್ ಮುಂತಾದ ನಟ್ಸ್ಗಳನ್ನು ತಿಂದರೆ ಉತ್ತಮ. ಎಕ್ಸಿಮಾ ಇರುವವರಿಗೆ ಮೊಟ್ಟೆಗಳನ್ನು ಸೇವಿಸುತ್ತಿದ್ದಂತೆಯೇ ಅಲರ್ಜಿ, ತುರಿಕೆ ಹೆಚ್ಚಾಗಬಹುದು. ಸ್ಯಾಚುರೇಟೆಡ್ ಆಹಾರ ಹಾಗೂ ಟ್ರಾನ್ಸ್ ಫ್ಯಾಟ್ಸ್ ಪ್ರೊಸೆಸ್ಡ್ ಆಹಾರ, ಫಾಸ್ಟ್ ಫುಡ್, ಹಾಗೂ ರೆಡ್ ಮೀಟ್, ಬೆಣ್ಣೆ, ಡೈರಿ ಉತ್ಪನ್ನಗಳಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ಸ್ ಎಕ್ಸಿಮಾ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಒಮೆಗಾ 3 ಫ್ಯಾಟಿ ಆ್ಯಸಿಡ್ ಹೆಚ್ಚಿರುವ ಆಹಾರಗಳು ಎಕ್ಸಿಮಾ ರೋಗಿಗಳಿಗೆ ಪರಿಣಾಮಕಾರಿ ಆ್ಯಂಟಿ ಇನ್ಫ್ಲಮೇಟರ್ ಆಹಾರಗಳು. ಅಂದರೆ ಸಾಲ್ಮೋನ್ ಫಿಶ್, ಮ್ಯಾಕೆರೆಲ್, ಕಾಡ್ ಲಿವರ್ ಆಯಿಲ್ಗಳಲ್ಲಿ ಈ ಒಮೆಗಾ 3 ಫ್ಯಾಟಿ ಯಾಸಿಡ್ ಹೆಚ್ಚಾಗಿರುತ್ತದೆ. ಇವುಗಳ ಸೇವನೆ ಒಳ್ಳೆಯದು.

English summary

Skin conditions which may seem like eczema, but they are not in kannada

Skin conditions which may seem like eczema, but they are not in kannada , Readon;
Story first published: Thursday, August 25, 2022, 11:07 [IST]
X
Desktop Bottom Promotion