For Quick Alerts
ALLOW NOTIFICATIONS  
For Daily Alerts

ಸ್ಜೋಗ್ರೆನ್ಸ್ ಸಿಂಡ್ರೋಮ್‌: ಕಣ್ಣು, ಬಾಯಿ ಒಣಗುವ ಈ ಕಾಯಿಲೆಗೆ ಕಾರಣವೇನು, ಲಕ್ಷಣಗಳೇನು? ಚಿಕಿತ್ಸೆಯೇನು?

|

ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ? ಎಂಬ ಗಾದೆ ಮಾತಿದೆ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆವಿರುತ್ತದೆ. ನನಗೆ ಯಾವುದೇ ಸಮಸ್ಯೆಯಿಲ್ಲ, ಶೇ.100ರಷ್ಟು ಆರೋಗ್ಯವಂತರು ಎಂದು ಹೇಳಲು ಕೆಲವರಿಗಷ್ಟೇ ಸಾಧ್ಯವಾಗುವುದು.

ಆದರೆ ಕೆಲರಿಗೆ ಅಪರೂಪದ ಕಾಯಿಲೆ ಬಂದಿರುತ್ತದೆ, ಅಂಥದ್ದೊಂದು ಕಾಯಿಲೆ ಇದೆ ಎಂದು ವಿಶ್ವ ಚಾಂಪಿಯನ್ ಟೆನ್ನಿಸ್ ಆಟಗಾರ್ತಿ ವೀನಸ್‌ ವಿಲಿಯಮ್ಸ್ ಹೇಳಿದ್ದಾರೆ. ಅವರಿಗಿರುವ ಕಾಯಿಲೆಯ ಹೆಸರು ಸ್ಜೋಗ್ರೆನ್ಸ್. ಆ ಕಾಯಿಲೆ ಏನು, ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಸ್ಜೋಗ್ರೆನ್ಸ್ ಸಿಂಡ್ರೋಮ್‌ ಎಂದರೇನು?

ಸ್ಜೋಗ್ರೆನ್ಸ್ ಸಿಂಡ್ರೋಮ್‌ ಎಂದರೇನು?

ಸ್ಜೋಗ್ರೆನ್ಸ್ ಎಂಬುವುದು ಅಟೋಇಮ್ಯೂನೆ ಕಾಯಿಲೆಯಾಗಿದೆ. ಈ ಕಾಯಿಲೆ ಬಂದಾಗ ಕಣ್ಣುಗಳು ಒಣಗುವುದು, ಬಾಯಿ ಒಣಗುವುದು ಈ ರೀತಿಯ ಲಕ್ಷಣಗಳು ಕಂಡು ಬರುವುದು. ಇದು ಲೂಪಸ್, ರುಮಾಟೈಡ್‌ ಸಂಧಿವಾತ, ಪಿತ್ತರಸದ ಕೋಲಾಂಜೈಟಿಸ್ ಈ ರೀತಿಯ ಸಮಸ್ಯೆಗಳ ಜೊತೆ ಸಂಬಂಧ ಹೊಂದಿದೆ. ಈ ರೀತಿಯ ಸಮಸ್ಯೆ ವಿಶ್ವದಲ್ಲಿ 0.1 ರಿಂದ ಶೇ.4ರಷ್ಟು ಜನರಲ್ಲಿ ಕಂಡು ಬರುವುದು.

ಸ್ಜೋಗ್ರೆನ್ಸ್ ಸಿಂಡ್ರೋಮ್‌ಗೆ ಕಾರಣವೇನು?

ಸ್ಜೋಗ್ರೆನ್ಸ್ ಸಿಂಡ್ರೋಮ್‌ಗೆ ಕಾರಣವೇನು?

ಸ್ಜೋಗ್ರೆನ್ಸ್ ಸಿಂಡ್ರೋಮ್‌ ಎಂಬುವುದು ಅಟೋ ಇಮ್ಯೂನೆ ಕಾಯಿಲೆಯಾಗಿದ್ದು ತಮ್ಮ ದೇಹದ ರೋಗ ನಿರೋಧಕಗಳು ತಪ್ಪಾಗಿ ನಮ್ಮ ಜೀವ ಕಣಗಳು ಹಾಗೂ ನರಗಳಿಗೆ ಹಾನಿಯುಂಟಾಗುವುದು. ಆದರೆ ಈ ರೀತಿ ಆಗಲು ಕಾರಣವೇನು ಎಂಬುವುದು ತಿಳಿದು ಬಂದಿಲ್ಲ, ಬ್ಯಾಕ್ಟಿರಿಯಾ ಅಥವಾ ವೈರಸ್‌ ಸೋಂಕಿನಿಂದ ಈ ರೀತಿ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ದೇಹದ ಪ್ರತಿಕಾಯಗಳು ಮೊದಲಿಗೆ ಎಂಜಲು ಹಾಗೂ ಕಣ್ಣೀರಿನ ಗ್ರಂಥಿಗಳನ್ನು ಮರೆತು ಬಿಡುತ್ತವೆ, ಇದರಿಂದಾಗಿ ಎಂಜಲು ಕಡಿಮೆಯಾಗುವುದು, ಕಣ್ಣಿನಲ್ಲಿ ನೀರು ಕಡಿಮೆಯಾಗುವುದು. ಇದು ದೇಹದ ಇತರ ಭಾಗಗಳಾದ ಕಿಡ್ನಿ, ಲಿವರ್‌, ಶ್ವಾಸಕೋಶ, ಮೂಳೆಗಳು, ಥೈರಾಯ್ಡ್‌ ಗ್ರಂಥ, ನರಗಳಿಗೆ ಹಾನಿಯುಂಟು ಮಾಡುವುದು.

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಸ್ಜೋಗ್ರೆನ್ಸ್ ಸಿಂಡ್ರೋಮ್‌ ಅನ್ನು ವೈದ್ಯರು ಪ್ರೈಮರಿ ಹಾಗೂ ಸೆಕೆಂಡರಿ ಸ್ಜೋಗ್ರೆನ್ಸ್ ಸಿಂಡ್ರೋಮ್‌ ಆಗಿ ವಿಂಗಡಿಸಿದ್ದಾರೆ. ಪ್ರೈಮರಿ ಸ್ಜೋಗ್ರೆನ್ಸ್ ಸಿಂಡ್ರೋಮ್‌ನಲ್ಲಿ ಸಂಧಿವಾತ ಇರಲ್ಲ, ಸೆಕೆಂಡರಿ ಸ್ಜೋಗ್ರೆನ್ಸ್ ಸಿಂಡ್ರೋಮ್‌ನಲ್ಲಿ ಸಂಧಿವಾತ ಉಂಟಾಗುವುದು.

ಸ್ಜೋಗ್ರೆನ್ಸ್ ಸಿಂಡ್ರೋಮ್‌ ಲಕ್ಷಣಗಳು

ಸ್ಜೋಗ್ರೆನ್ಸ್ ಸಿಂಡ್ರೋಮ್‌ ಲಕ್ಷಣಗಳು

* ಕಣ್ಣು ಉರಿ, ಕಣ್ಣು ತುರಿಸುವುದು, ಕಣ್ಣುಗಳು ಒಣಗುವುದು

* ಅಗೆಯುವಾಗ, ನುಂಗುವಾಗ ತೊಂದರೆಯುಂಟಾಗುವುದು

*ಸಂಧಿವಾತ

* ತ್ವಚೆಯಲ್ಲಿ ಗುಳ್ಳೆಗಳು ಏಳುವುದು

* ನಾಲಗೆಯಲ್ಲಿ ಊತ

* ಆಗಾಗ ಒಣ ಕೆಮ್ಮು

* ಜನನೇಂದ್ರೀಯ ಒಣಗುವುದು

* ತಲೆಸುತ್ತು

* ಮಾತನಾಡುವಾಗ ತೊಂದರೆಯಾಗುವುದು

* ಕಣ್ಣುಗಳು ಮಂಜಾಗುವುದು

* ಮೈಕೈ ನೋವು

* ಶ್ವಾಸಕೋಶದ ಕಾಯಿಲೆ

ಯಾರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು?

* ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಖಮಡು ಬರುವುದು

* 40 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಂಡು ಬರುವುದು

* ಯಾರಿಗೆ ಸಂಧಿವಾತದ ಸಮಸ್ಯೆ ಇದೆಯೋ ಅವರಲ್ಲಿ ಈ ಸಮಸ್ಯೆ ಕಂಡು ಬರುವುದು.

ಸ್ಜೋಗ್ರೆನ್ಸ್ ಸಿಂಡ್ರೋಮ್‌ನಿಂದ ಉಂಟಾಗುವ ತೊಂದರೆಗಳು

ಸ್ಜೋಗ್ರೆನ್ಸ್ ಸಿಂಡ್ರೋಮ್‌ನಿಂದ ಉಂಟಾಗುವ ತೊಂದರೆಗಳು

* ಕಣ್ಣುಗಳಲ್ಲಿ ಸಮಸ್ಯೆ

* ದಂತಗಳು ಹುಳುಕಾಗುವುದು

* ಯೀಸ್ಟ್ ಸೋಂಕು

* ಶ್ವಾಸಕೋಶ, ಕಿಡ್ನಿ, ಲಿವರ್‌ನಲ್ಲಿ ಉರಿಯೂತ

* ನರಗಳಿಗೆ ತೊಂದರೆ

ಪತ್ತೆ ಹೇಗೆ, ಚಿಕಿತ್ಸೆಯೇನು?

ಪತ್ತೆ ಹೇಗೆ, ಚಿಕಿತ್ಸೆಯೇನು?

ಈ ಸಮಸ್ಯೆಯ ಲಕ್ಷಣಗಳು ಇತರ ಕಾಯಿಲೆಯ ಲಕ್ಷಣಗಳಂತೆ ಕಂಡು ಬರುವುದರಿಂದ ಗುರುತಿಸುವುದು ಕಷ್ಟವಾಗಬಹುದು. ಈ ಕೆಳಗಿನ ಪರೀಕ್ಷೆ ಮಾಡಿಸಿದರೆ ಪತ್ತೆ ಹಚ್ಚಬಹುದು.

* ರಕ್ತ ಪರೀಕ್ಷೆ

* ಕಣ್ಣಿನ ಪರೀಕ್ಷೆ

* ಎಂಜಲು ಪರೀಕ್ಷೆ

* ಇಮೇಜಿಂಗ್‌ ಪರೀಕ್ಷೆ: sialogram ಮತ್ತು salivary scintigraphy

* ಬಯೋಸ್ಪೈ

ಚಿಕಿತ್ಸೆ

* ಪ್ರಾರಂಭದ ಹಂತದಲ್ಲಿ ಆದರೆ ಔ‍ಷಧಗಳಿಂದ ಗುಣಪಡಿಸಬಹುದು. ಔಷಧಗಳಿಂದ ಎಂಜಲು ಉತ್ಪತ್ತಿ ಹೆಚ್ಚಿಸಬಹುದು, ಕಣ್ಣುಗಳು ಒಣಗುವುದನ್ನು ತಡೆಗಟ್ಟಬಹುದು.

* ಸಮಸ್ಯೆ ಸ್ವಲ್ಪ ಅಧಿಕವಾಗಿದ್ದರೆ ಚಿಕ್ಕದಾದ ಸರ್ಜರಿ ಮಾಡಿ ಸರಿಪಡಿಸಲಾಗುವುದು.

English summary

Sjogren's Syndrome Causes, Symptoms, Diagnosis And Treatment in Kannada

Sjogren's Syndrome Causes, Symptoms, Diagnosis And Treatment in Kannada, read on...
Story first published: Thursday, October 14, 2021, 16:00 [IST]
X
Desktop Bottom Promotion