For Quick Alerts
ALLOW NOTIFICATIONS  
For Daily Alerts

ಈ 11 ಲಕ್ಷಣಗಳು ಕಂಡು ಬಂದರೆ ದಂತ ವೈದ್ಯರನ್ನು ಭೇಟಿಯಾಗಿ

|

ಏನು ನೋವು ಬಂದರೂ ಸಹಿಸಿಕೊಳ್ಳಬಲ್ಲೆ, ಈ ಹಲ್ಲುನೋವು ಸಹಿಸಕ್ಕೆ ಅಸಾಧ್ಯವಾಗಿದೆ ಎಂದು ನೋವು ಅನುಭವಿಸಿದ ಪ್ರತಿಯೊಬ್ಬರು ಅಂದುಕೊಳ್ಳುವುದುಂಟು. ಇನ್ನುಈ ಹಲ್ಲು ನೋವು ಹೆಚ್ಚಿನ ಬಾರಿ ರಾತ್ರಿ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಶುರುವಾಗಿ ಬಿಡುತ್ತದೆ. ಅಷ್ಟೊತ್ತಿಗೆ ದಂತ ವೈದ್ಯರು ಕೂಡ ಸಿಗುವುದು ಕಷ್ಟವೇ, ದಿನ ಬೆಳಗಾಗುವುದನ್ನೇ ಕಾಯುತ್ತೇವೆ. ಇನ್ನು ವೈದ್ಯರ ಬಳಿ ಹೋದರೂ ತಕ್ಷಣ ಪರಿಹಾರ ಸಿಗುವುದಿಲ್ಲ, ಹುಳುಕು ಹಲ್ಲುಗಳನ್ನು ತೆಗೆದರೆ ಒಂದೆರಡು ದಿನ ನೋವು ಅನುಭವಿಸಲೇ ಬೇಕು. ಇನ್ನು ಹಲ್ಲು ತುಂಬಾ ಸೂಕ್ಷ್ಮವಿರುವವರಿಗೆ ಬಿಸಿಯಾದ ವಸ್ತುಗಳನ್ನು ತಿಂದಾಗ, ಐಸ್‌ಕ್ರೀಂನಂಥ ತಣ್ಣನೆಯ ವಸ್ತುಗಳನ್ನು ತಿಂದಾಗ, ಇನ್ನು ಸಿಹಿ ತಿಂದಾಗ ಹಲ್ಲು ನೋವು ಉಂಟಾಗುವುದು.

Signs You Need To See A Dentist

ಇನ್ನು ಕೆಲವರ ವಸಡುಗಳು ತುಂಬಾ ಬಲಹೀನವಾಗಿರುತ್ತದೆ. ಆಗ ಹಲ್ಲುಜ್ಜುವಾಗ ರಕ್ತಸ್ರಾವ ಉಂಟಾಗುವುದು. ಇನ್ನು ವಸಡಿನಲ್ಲಿ ಈತ, ಬಾಯಿ ಒಣಗುವುದು ಮುಂತಾದ ಸಮಸ್ಯೆ ಕೂಡ ಉಂಟಾಗುವುದು. ಹಲ್ಲುನೋವು ಉಂಟಾದಾಗ ಕೆಲವೊಂದು ಮನೆಮದ್ದುಗಳಿಗೆ ನೋವು ಕಡಿಮೆಯಾಗುವುದು, ಆದರೆ ಕೆಲವೊಂದು ಸಮಸ್ಯೆಗಳಿಗೆ ವೈದ್ಯರನ್ನು ಕಂಡು ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ನಿಮಗೆ ಹಲ್ಲುನೋವಿನಿಂದ ಮುಕ್ತಿ ಸಿಗುವುದಿಲ್ಲ, ಇಲ್ಲಿ ಯಾವ ಲಕ್ಷಣಗಳು ಕಂಡು ಬಂದರೆ ದಂತ ವೈದ್ಯರನ್ನು ಕಾಣುವುದು ಸೂಕ್ತ ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ:

1. ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತ ಕಂಡು ಬಂದರೆ

1. ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತ ಕಂಡು ಬಂದರೆ

ನೀವು ಹಲ್ಲುಜ್ಜುವಾಗ ನಿಮ್ಮ ಬ್ರೆಷ್‌ನಲ್ಲಿ ರಕ್ತ ಕಂಡು ಬಂದರೆ ಅದನ್ನು ನಿರ್ಲಕ್ಷ್ಯ ಮಾಡಲೇಬೇಡಿ. ನಿಮ್ಮ ವಸಡು ಬಲಹೀನವಾಗುತ್ತಿದೆ ಎಂಬುವುದರ ಲಕ್ಷಣವಾಗಿದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಹಲ್ಲುಗಳು ಪುಡಿ ಪುಡಿಯಾಗುತ್ತವೆ ಹಾಗೂ ವಯಸ್ಸಾಗುವ ಮುನ್ನವೇ ಎಲ್ಲಾ ಹಲ್ಲುಗಳು ಬಿದ್ದು ಹೋಗುತ್ತವೆ. ಆದ್ದರಿಂದ ಹಲ್ಲಿನ ವಸಡುಗಳ ಮದ್ಯ ರಕ್ತ ಕಂಡು ಬಂದರೆ ದಂತ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸುವುದು ಒಳ್ಳೆಯದು.

2. ಹಲ್ಲಿನ ಬುಡದಲ್ಲಿ ವಸಡುಗಳು ಸವೆಯುವುದು

2. ಹಲ್ಲಿನ ಬುಡದಲ್ಲಿ ವಸಡುಗಳು ಸವೆಯುವುದು

ವಯಸ್ಸು 30 ದಾಟುತ್ತಿದ್ದಂತೆ ಕೆಲವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಆದರೆ ಮೊದಲಿಗೆ ಇದೊಂದು ಸಮಸ್ಯೆ ಅಂತ ಅನಿಸುವುದೇ ಇಲ್ಲ, ಹಲ್ಲಿನ ಬುಡದಲ್ಲಿ ಸ್ವಲ್ಪ ವಸಡು ಸವೆದಂತೆ ಕಾಣುವುದು, ಮೊದಲಿಗೆ ಯಾವುದೇ ನೋವು ಕಾಣಿಸುವುದಿಲ್ಲ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಕೆಲವೇ ವರ್ಷಗಳಲ್ಲಿ ಹಲ್ಲಿನ ಬುಡ ಬಲಹೀನವಾಗಿ ಹಲ್ಲುಗಳು ಬಿದ್ದುವಾಗುತ್ತವೆ. ಈ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗಮನಿಸಿದರೆ ಹಲ್ಲುಗಳ ಆರೈಕೆ ಮಾಡುವುದು ಸುಲಭ.

3. ಬಾಯಿ ತುಂಬಾ ಒಣಗುತ್ತಿದ್ದರೆ

3. ಬಾಯಿ ತುಂಬಾ ಒಣಗುತ್ತಿದ್ದರೆ

ಸಾಮಾನ್ಯವಾಗಿ ಬಾಯಲ್ಲಿ ಎಂಜಲು ಉತ್ಪತ್ತಿಯಾಗುತ್ತಿರುತ್ತದೆ. ಈ ಎಂಜಲು ಬಾಯಲ್ಲಿ ಇದ್ದಾಗ ತಿಂದ ಆಹಾರ ಹಲ್ಲಿನಲ್ಲಿ ಅಂಟಿಕೊಳ್ಳುವುದಿಲ್ಲ. ಆದರೆ ಕೆಲವರಿಗೆ ಬಾಯಿ ತುಂಬಾ ಒಣಗಿದ ಅನುಭವ ಉಂಟಾಗುತ್ತದೆ. ಈ ರೀತಿ ಆಗುತ್ತಿದ್ದರೆ ಇದು ಅನಾರೋಗ್ಯದ ಲಕ್ಷಣವಾಗಿದ್ದು ಕೂಡಲೇ ದಂತ ವೈದ್ಯರನ್ನು ಭೇಟಿಯಾಗಿ ಸಲಹೆಯನ್ನು ಪಡೆಯಿರಿ.

4. ಹಲ್ಲುಗಳು ಅಲುಗಾಡುತ್ತಿದ್ದರೆ

4. ಹಲ್ಲುಗಳು ಅಲುಗಾಡುತ್ತಿದ್ದರೆ

ಹಲ್ಲುಗಳು ಗಟ್ಟಿಮುಟ್ಟಾಗಿದ್ದರೆ 60 ವರ್ಷ ದಾಟಿದರೂ ಅಲುಗಾಡುವುದಿಲ್ಲ, ಆದರೆ ಕೆಲವರಿಗೆ 30 ದಾಟುತ್ತಿದ್ದಂತೆ ಒಂದೊಂದೇ ಹಲ್ಲುಗಳು ಬೀಳಲಾರಂಭಿಸುತ್ತದೆ. ಹಲ್ಲುಗಳು ಬಲಹೀನವಾಗಿದ್ದರೆ ಈ ರೀತಿ ಉಂಟಾಗುತ್ತದೆ. ಹಲ್ಲುಗಳು ಬಲಹೀನವಾಗಿದ್ದರೆ ಸ್ವಲ್ಪ ಗಟ್ಟಿಯಾದ ಆಹಾರ ವಸ್ತುಗಳನ್ನು ಕಚ್ಚಿದರೂ ಹಲ್ಲುಗಳು ಮುರಿದು ಹೋಗುತ್ತವೆ. ಹಲ್ಲುಗಳು ಗಟ್ಟಿಮುಟ್ಟಾಗಲು ದಂತ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

5. ದವಡೆಯಲ್ಲಿ ಊತ

5. ದವಡೆಯಲ್ಲಿ ಊತ

ದವಡೆಯಲ್ಲಿ ಗುಳ್ಳೆಗಳು, ಊತ, ಬಾಯಿಹುಣ್ಣು ಈ ರೀತಿಯ ಸಮಸ್ಯೆ ಕಂಡು ಬಂದರೆ 7-8 ದಿನಗಳವರೆಗೆ ಇರುತ್ತದೆ. ಈ ಸಮಸ್ಯೆ ಬೇಗನೆ ಹೋಗಲಾಡಿಸಲು ದಂತವೈದ್ಯರನ್ನು ಭೇಟಿಯಾಗುವುದು ಸೂಕ್ತ. ಬಾಯಲ್ಲಿ ಸೋಂಕಿನ ಸಮಸ್ಯೆ ಇರುವವರು ತಿಂದ ಆಹಾರ,ಕುಡಿದ ಜ್ಯೂಸ್‌, ಅವರ ಎಂಜಲು ಬೇರೆಯವರಿಗೆ ತಾಗಿದರೆ ಅವರಿಗೂ ಉಂಟಾಗುವ ಸಾಧ್ಯತೆ ಇರುತ್ತದೆ.

6. ಹಲ್ಲುನೋವು

6. ಹಲ್ಲುನೋವು

ಪದೇ ಪದೇ ಹಲ್ಲುನೋವು ಉಂಟಾಗುತ್ತಿದ್ದರೆ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ, ಏಕೆಂದರೆ ಇದರಿಂದ ಹುಳುಕು ಹಲ್ಲಿನ ಸಮಸ್ಯೆ ಬರಬಹುದು, ಇನ್ನು ಹಲ್ಲುಗಳು ತುಂಬಾ ಸೂಕ್ಷ್ಮವಾಗುವುದು, ಇದರಿಂದ ಹಲ್ಲುಗಳು ಬೇಗನೆ ಹಾಳಾಗುವುದು. ಪದೇ ಪದೇ ನೋವು ಉಂಟಾಗುತ್ತಿದ್ದರೆ ಅದನ್ನು ತಡೆಗಟ್ಟಲು ಯಾವ ಟೂತ್‌ಪೇಸ್ಟ್, ಮೌತ್‌ವಾಶ್‌ ಒಳ್ಳೆಯದೆಂದು ವೈದ್ಯರು ಸೂಚಿಸುತ್ತಾರೆ, ಅದನ್ನು ಪಾಲಿಸಿದರೆ ಹಲ್ಲುನೋವು ಉಂಟಾಗುವುದಿಲ್ಲ.

7. ರೂಟ್‌ ಕೆನಾಲ್ ಮಾಡಿಸಿದ್ದರೆ

7. ರೂಟ್‌ ಕೆನಾಲ್ ಮಾಡಿಸಿದ್ದರೆ

ಹಲ್ಲುಗಳಲ್ಲಿ ಹುಳುಕು ಬಂದು, ಅದರಲ್ಲಿ ರಂಧ್ರ ಬಿದ್ದಿದ್ದರೆ, ಸ್ವಲ್ಪ ಹಲ್ಲು ಮುರಿದು ಹೋಗಿದ್ದರೆ ಆಗಾ ರೂಟ್‌ ಕೆನಾಲ್‌ ಚಿಕಿತ್ಸೆ ನೀಡುತ್ತಾರೆ, ಈ ಚಿಕಿತ್ಸೆ ಪಡೆದುಕೊಂಡವರು ನಿಯಮಿತವಾಗಿ ದಂತ ವೈದ್ಯರನ್ನು ಭೇಟಿಯಾಗಬೇಕು, ಇಲ್ಲದಿದ್ದರೆ ಪುನಃ ಹಲ್ಲು ನೋವಿನ ಸಮಸ್ಯೆ ಕಾಡುವುದು. ಇನ್ನು ಒಂದು ಅಥವಾ ಎರಡು ಹಲ್ಲು ಕಟ್ಟಿಸಿದ್ದರೆ ಆಗ ಕೂಡ ವೈದ್ಯರು ಸುಚಿಸಿದ ಸಮಯಕ್ಕೆ ಅವರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಬೇಕು.

8. ಈ ಚಿಕಿತ್ಸೆಯಲ್ಲಿರುವವರು ದಂತ ವೈದ್ಯರನ್ನು ಭೇಟಿಯಾದರೆ ಸೂಕ್ತ

8. ಈ ಚಿಕಿತ್ಸೆಯಲ್ಲಿರುವವರು ದಂತ ವೈದ್ಯರನ್ನು ಭೇಟಿಯಾದರೆ ಸೂಕ್ತ

ಹೃದಯ ಸಂಬಂಧಿ ಚಿಕಿತ್ಸೆ, ಮಧುಮೇಹ, ಹೆಚ್‌ಐವಿ ಪಾಸಿಟಿವ್ ಕಾಯಿಲೆ ಇರುವವರು, ರೇಡಿಯೆಷನ್, ಕೀಮೋಥೆರಪಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ, ಹಾರ್ಮೋನ್‌ ಬದಲಾವಣೆಯ ಚಿಕಿತ್ಸೆಗೆ ಒಳಗಾಗಿದ್ದರೆ ದಂತ ವೈದ್ಯರನ್ನು ಭೇಟಿಯಾಗುವುದು ಸೂಕ್ತ, ಇಲ್ಲದಿದ್ದರೆ ಹಲ್ಲುಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ.

9. ಗರ್ಭಧಾರಣೆಯಾದಾಗ

9. ಗರ್ಭಧಾರಣೆಯಾದಾಗ

ಗರ್ಭಧಾರಣೆಯಾದಾಗ ಶರೀರದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಕೆಲವರಿಗೆ ಹಲ್ಲುಗಳು ಬಲಹೀನವಾಗುವುದು, ಹಲ್ಲುಗಳಲ್ಲಿ ರಕ್ತಸ್ರಾವ ಮುಂತಾದ ಸಮಸ್ಯೆ ಕಾಡಬಹುದು, ಆಗ ದಂತ ವೈದ್ಯರನ್ನು ಭೇಟಿಯಾದರೆ, ಗರ್ಭಿಣಿಯರಿಗೆ ಸೂಕ್ತವಾಗುವ ಚಿಕಿತ್ಸೆ ನೀಡುತ್ತಾರೆ.

10. ತಿನ್ನುವಾಗ ತೊಂದರೆ ಉಂಟಾದರೆ

10. ತಿನ್ನುವಾಗ ತೊಂದರೆ ಉಂಟಾದರೆ

ಆಹಾರ ಜಗಿಯಲು, ನುಂಗಲು ತೊಂದರೆ ಉಂಟಾದರೆ, ಹಲ್ಲುಗಳಲ್ಲಿ ತುಂಬಾ ನೋವು ಕಾಣಿಸಿದರೆ ದಮತ ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಆಹಾರ ತಿನ್ನಲು ಸಾಧ್ಯವಾಗದಿದ್ದಾಗ, ಸಮಸ್ಯೆ ಪರಿಹಾರವಾಗುವವರೆಗೆ ದ್ರವರೂಪದ ಆಹಾರ ತೆಗೆದುಕೊಳ್ಳಿ.

11. ಸಿಗರೇಟ್‌, ತಂಬಾಕು ಅಭ್ಯಾಸವಿದ್ದರೆ

11. ಸಿಗರೇಟ್‌, ತಂಬಾಕು ಅಭ್ಯಾಸವಿದ್ದರೆ

ಸಿಗರೇಟ್‌ ಹಾಗೂ ತಂಬಾಕು ಅಭ್ಯಾಸವಿರುವವರ ಬಾಯಿ ದುರ್ವಾಸನೆ ಬೀರುವುದರ ಜತೆಗೆ, ಹಲ್ಲುಗಳು ಬಿಳುಪು ಮಾಯವಾಗಿ ಕಪ್ಪಾಗುವುದು. ಇವರ ಹಲ್ಲುಗಳು ನೋಡಲು ಅಸಹ್ಯ ತರಿಸುವಂತಿರುತ್ತದೆ. ಹಲ್ಲುಗಳು ಆಕರ್ಷಕವಾಗಿ ಕಾಣಬೇಕೆಂದರೆ ದಂತ ವೈದ್ಯರನ್ನು ಭೇಟಿಯಾಗಿ ಹಲ್ಲುಗಳನ್ನು ಸ್ವಚ್ಛಮಾಡುವುದು ಒಳ್ಳೆಯದು. ಇನ್ನು ತಂಬಾಕು ಹಾಗೂ ಧೂಮಪಾನ ಅನಾರೋಗ್ಯ ಉಂಟು ಮಾಡುವುದು.

ಬಾಯಿಯ ಸ್ವಾಸ್ಥ್ಯಕ್ಕೆ ಹೀಗೆ ಮಾಡಿ

ಬಾಯಿಯ ಸ್ವಾಸ್ಥ್ಯಕ್ಕೆ ಹೀಗೆ ಮಾಡಿ

1. ದಿನದಲ್ಲಿ ಎರಡು ಬಾರಿ ಹಲ್ಲುಜ್ಜಿ. ಬೆಳಗ್ಗೆ ಹಾಗೂ ಮಲಗುವ ಮುನ್ನ ಹಲ್ಲುಜ್ಜುವ ಅಭ್ಯಾಸ ಒಳ್ಳೆಯದು.

2. ಆಹಾರ ತಿಂದ ಬಳಿಕ ಬಾಯಿ ಮುಕ್ಕಳಿಸಿ.

* ವಾರಕ್ಕೊಮ್ಮೆ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸಿ.

* ಕೃತಕ ಹಲ್ಲು ಬಳಸುತ್ತಿರುವವರು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

English summary

Signs You Need To See A Dentist

Most of the time we not nuch care about dental health, but if you see these dental issue its better to consult dentist, catching problem early save your teeth.
X
Desktop Bottom Promotion