For Quick Alerts
ALLOW NOTIFICATIONS  
For Daily Alerts

ಬಿಪಿ ಹೆಚ್ಚಾದರೆ ಕಂಡು ಬರುವ ಈ 6 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

|

ಅಧಿಕ ರಕ್ತದೊತ್ತಡ ಇಂದಿನ ಜನರಲ್ಲಿ ಅತಿ ಸಾಮಾನ್ಯ ಕಾಯಿಲೆಯಾಗಿದೆ. ಜನರ ಜೀವನ ಶೈಲಿ , ಒತ್ತಡದ ಬದುಕು ಈ ಹೈಪರ್‌ಟೆನ್ಷನ್ ಗೆ ಕಾರಣವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಅಧಿಕ ರಕ್ತದೊತ್ತಡ ದಿನವನ್ನು ಆಚರಿಸಲಾಗುತ್ತಿದೆ. ಅಧಿಕ ರಕ್ತದೊತ್ತಡದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 17ರಂದು ವರ್ಲ್ಡ್ ಹೈಪರ್‌ಟೆನ್ಷನ್ ಲೀಗ್ ಇದನ್ನು ಆಚರಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿ.ಪಿ ಅನ್ನೋ ಪದ ಕಾಮನ್ ಕಾಯಿಲೆಯಾದರೂ ಇದು ಸೈಲೆಂಟ್ ಕಿಲ್ಲರ್ ಅನ್ನೋದು ಮನುಷ್ಯನಿಗೆ ಇನ್ನು ಅರಿವಿಗೆ ಬಂದಿಲ್ಲ.

ಹೌದು, ಅಧಿಕ ರಕ್ತದೊತ್ತಡದ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೂ ಸಹ ನೀವು ಅದನ್ನು ದಿನನಿತ್ಯದ ದಣಿವು, ಕೆಲಸದ ಒತ್ತಡ ಅಥವಾ ಶ್ರಮ ಎಂದು ನೆಗ್ಲೆಟ್ ಮಾಡದಿರಿ. ಯಾಕೆಂದರೆ ಬಿಪಿ ಅನ್ನುವ ಮಹಾಮಾರಿ ನಿಮ್ಮ ಪ್ರಾಣವನ್ನೇ ಕಿತ್ತುಕೊಳ್ಳಬಹುದು. ಅಧಿಕ ರಕ್ತದೊತ್ತಡಗಳಿಂದ ಹೃದಯಾಘಾತ, ರಕ್ತನಾಳ ಸಮಸ್ಯೆ, ಪಾರ್ಶ್ವವಾಯು, ಸ್ಮರಣೆ ಸಮಸ್ಯೆಗಳು ಅಥವಾ ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳು ಎದುರಾಗಬಹುದು.

ಇನ್ನು ಪ್ರಪಂಚದಾದ್ಯಂತ ಸುಮಾರು 1.13 ಶತಕೋಟಿ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಪೈಕಿ ಮಹಿಳೆಯರಿಗಿಂತ ಪುರುಷರಲ್ಲೇ ಅತೀ ಹೆಚ್ಚುಬಿಪಿ ಸಮಸ್ಯೆ ಸಾಮಾನ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂದಿನ ದಿನಗಳಲ್ಲಿ ಅಧಿಕ ರಕ್ತದೊತ್ತಡದ ಘಟನೆಗಳು ಪ್ರಪಂಚದಾದ್ಯಂತ ತೀವ್ರ ಏರಿಕೆಯಾಗುತ್ತಿದ್ದು ಮೊದಲೆಲ್ಲ ವಯಸ್ಸಾದವರಲ್ಲಿ ಮಾತ್ರ ಈ ರೋಗ ಕಂಡು ಬರುತ್ತಿತ್ತು ಆದರೆ ಈಗ ಇದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಅಧಿಕ ಯುವಕರಲ್ಲಿ ರಕ್ತದೊತ್ತಡ ಸಮಸ್ಯೆ ಕಾಣುತ್ತಿದ್ದೇವೆ.

ಮೂಗಿನ ರಕ್ತಸ್ರಾವ!

ಮೂಗಿನ ರಕ್ತಸ್ರಾವ!

ಮೂಗುವಿನಲ್ಲಿ ರಕ್ತಸ್ರಾವ ಉಂಟಾಗುವುದನ್ನು ನಾವು ಎಂದು ಅಲ್ಲಗಳೆಯಬಾರದು. ಮೂಗಿನಲ್ಲಿ ರಕ್ತ ಸೋರುವಿಕೆ ಕೇವಲ ಸೈನಸೈಟಿಸ್ ನಿಂದಾಗುವುದಲ್ಲ ಬದಲಾಗಿ. ವ್ಯಕ್ತಿಯ ರಕ್ತದೊತ್ತಡ ಹೆಚ್ಚಾದಾಗಲೂ ಸಂಭವಿಸುತ್ತದೆ. ನಿಮ್ಮ ಮೂಗಿನಿಂದ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ಯಾವತ್ತು ನಿರ್ಲಕ್ಷಿಸಲು ಹೋಗಬೇಡಿ. ಕೂಡಲೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವುದು ಒಳ್ಳೆಯದು.ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಬಹುದು. ನಿರಂತರ ಮೂಗಿನ ರಕ್ತಸ್ರಾವ ಅಧಿಕ ರಕ್ತದೊತ್ತಡದ ಲಕ್ಷಣವಾಗಿದೆ.

ತಲೆನೋವು!

ತಲೆನೋವು!

ನೀವು ಎಲ್ಲಾ ಸಮಯದಲ್ಲೂ ತಲೆನೋವಿನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಬಗ್ಗೆ ಎರಡನೇ ಚಾನ್ಸ್ ತೆಗೆದುಕೊಳ್ಳಬೇಡಿ. ಯಾಕೆಂದರೆ ನಿರಂತರ ತಲೆನೋವು ಬರುತ್ತಿದ್ದರೆ ಅದು ರಕ್ತದೊತ್ತಡದಿಂದ ಆಗಿರುತ್ತದೆ. ರಕ್ತದೊತ್ತಡ ಹೊಂದಿರುವ ಹೆಚ್ಚಿನ ಜನರು ನಿರಂತರವಾಗಿ ತಲೆನೋವಿನ ಸಮಸ್ಯೆಯನ್ನು ಹೊಂದುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಇದಕ್ಕೆ ಚಿಕಿತ್ಸೆ ಪಡೆಯುವುದು ಉತ್ತಮ ಬುದ್ದಿ. ಇನ್ನು ವೈದ್ಯರ ಪ್ರಕಾರ, ನಿಮ್ಮ ಬುರುಡೆಯ ಹೆಡತಲೆಯಲ್ಲಿ ನಿರಂತರವಾಗಿ ನೋವು ಸಂಭವಿಸುತ್ತಿದ್ದರೆ ಅಂತವರು ಕೂಡಲೇ ಬಿಪಿ ಟೆಸ್ಟ್ ನಡೆಸುವುದು ಅಗತ್ಯವಂತೆ.

ಆಯಾಸ!

ಆಯಾಸ!

ನೀವು ನಿಮ್ಮ ಕಚೇರಿ ಕೆಲಸ ಅಥವಾ ಮನೆ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತಿಲ್ಲವೇ . ಸ್ವಲ್ಪ ಕೆಲಸ ಮಾಡಿದಾಗ ಸುಸ್ತು ಫೀಲ್ ಆಗುತ್ತಿದ್ಯಾ? ಇದಕ್ಕೆ ಕಾರಣ ರಕ್ತದೊತ್ತಡ. ಹೌದು, ಸಣ್ಣ -ಪುಟ್ಟ ಕೆಲಸ ಮಾಡಿದರೂ ನಿಮಗೆ ತೀವ್ರ ದಣಿವು ಆಗಲು ಆರಂಭವಾದರೆ ನೀವು ಈ ಸಂಬಂಧ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಇದು ಅಧಿಕ ರಕ್ತದೊತ್ತಡದ ಲಕ್ಷಣವಾಗಿದೆ.

ಉಸಿರಾಟದ ಸಮಸ್ಯೆ!

ಉಸಿರಾಟದ ಸಮಸ್ಯೆ!

ಒಬ್ಬ ವ್ಯಕ್ತಿ ರಕ್ತದೊತ್ತಡ ಹೆಚ್ಚಾದಾಗ ಉಸಿರಾಡಲು ಕಷ್ಟಪಡಬಹುದು. ಇದು ಅಧಿಕ ರಕ್ತದೊತ್ತಡದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಉಸಿರಾಟದ ಸಮಸ್ಯೆ ಕೇವಲ ಹೃದಯ ಸಂಬಂಧಿ ಕಾಯಿಲೆಯಲ್ಲ ಬದಲಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಲೂ ಉಂಟಾಗುತ್ತದೆ.

ದೃಷ್ಟಿ ಸಮಸ್ಯೆ!

ದೃಷ್ಟಿ ಸಮಸ್ಯೆ!

ಅಧಿಕ ರಕ್ತದೊತ್ತಡದ ಮತ್ತೊಂದು ಲಕ್ಷಣವೆಂದರೆ ಅದು ಕಣ್ಣು ಕತ್ತಲಾಗುವುದು. ಎಲ್ಲಿಗೂ ನಡೆದುಕೊಂಡು ಹೋಗುತ್ತಿದ್ದೀರಿ ಅಂದುಕೊಳ್ಳಿ ಕೂಡಲೇ ನಿಮಗೆ ಕಣ್ಣು ಕತ್ತಲಾಗುವುದು ಅಂದರೆ ಸಂಪೂರ್ಣ ದೃಷ್ಟಿ ಹೋದಂತಹ ಅನುಭವವಾಗುವುದು.. ಈ ರೀತಿಯ ಅನುಭವ ಕೆಲವು ಬಾರಿ ಆದರೆ ವೈದ್ಯರ ಸಲಹೆ ಮೇರೆಗೆ ಇದಕ್ಕೆ ಬೇಕಾದ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಎದೆ ನೋವು!

ಎದೆ ನೋವು!

ನಿಮಗೆ ಎದೆ ನೋವು ಸಂಭವಿಸಿದರೆ ಇದು ಸಾಮಾನ್ಯ ಎಂದು ತಳ್ಳಿ ಹಾಕಬೇಡಿ ಏಕೆಂದರೆ ಅಧಿಕ ರಕ್ತದೊತ್ತಡದ ಮತ್ತೊಂದು ಲಕ್ಷಣವೇ ಎದೆನೋವು. ಹೌದು, ನಿರಂತರವಾಗಿ ನಿಮಗೆ ಎದೆನೋವು ಸಂಭವಿಸುತ್ತಿದ್ದರೆ ನೀವು ಅದನ್ನು ನಿರ್ಲಕ್ಷಿಸಬೇಡಿ, ಕೂಡಲೇ ಬೇಕಾದ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಎದೆ ನೋವು ಮಾತ್ರವಲ್ಲದೇ ಸಿವೀಯರ್ ಆಗಿ ರಕ್ತದೊತ್ತಡ ಉಂಟಾದರೆ ಹಾರ್ಟ್ ಅಟ್ಯಾಕ್ ಕೂಡ ಸಂಭವಿಸುತ್ತದೆ. ಅಲ್ಲದೇ ಸ್ಟ್ರೋಕ್ ನಂತಹ ಮಾರಕ ರೋಗ ಸಂಭವಿಸಬಹುದು. ಹೀಗಾಗಿ ಕೇರ್ ಫುಲ್ ಆಗಿ ಇರುವುದು ಉತ್ತಮ.

ಅಧಿಕ ರಕ್ತದೊತ್ತಡದ ನಿರ್ವಹಣೆ ಹೇಗೆ?

ಅಧಿಕ ರಕ್ತದೊತ್ತಡದ ನಿರ್ವಹಣೆ ಹೇಗೆ?

ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಈ ವಿಚಾರ ನಿಮ್ಮ ಗಮನಕ್ಕೆ ಬಂದರೆ ಅದನ್ನು ನಿಯಂತ್ರಣದಲ್ಲಿ ಇಡುವ ಕೆಲಸ ಮಾಡಿ. ಯಾವುದಾದರೂ ಲಕ್ಷಣಗಳು ಕಂಡು ಬಂದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯಿರಿ. ವಾರಕ್ಕೊಂದು ಬಾರಿಯಾದರೂ ಬಿಪಿ ಚೆಕ್ ಮಾಡಿಕೊಳ್ಳಿ. ಸಮತೋಲಿನ ಆಹಾರ ಸೇವಿಸಿ, ದೇಹದ ತೂಕವನ್ನು ಬ್ಯಾಲೆನ್ಸ್ ರೀತಿಯಲ್ಲಿ ಇಟ್ಟುಕೊಳ್ಳಿ. ಹೆಚ್ಚು ಚಟುವಟಿಕೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯ ಸ್ಥಿರವಾಗಿ ಇಟ್ಟುಕೊಳ್ಳಿ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಉತ್ತಮ ಈ ಮೂಲಕ ಅಧಿಕ ರಕ್ತದೊತ್ತಡದಿಂದ ಪಾರಾಗಬಹುದು.

English summary

Signs Of High Blood Pressure in Kannada

6 signs of high blood pressure you shouldn't ignore in kannada, Read on,
X
Desktop Bottom Promotion