For Quick Alerts
ALLOW NOTIFICATIONS  
For Daily Alerts

ನಿಮ್ಮ ಮುಖ ಲಕ್ಷಣಗಳನ್ನು ಗಮನಿಸಿ ನಿಮಗಿರುವ ರೋಗಗಳ ಬಗ್ಗೆ ತಿಳಿದುಕೊಳ್ಳಿ

|

ವೈದ್ಯರ ಬಳಿಗೆ ಯಾವುದೇ ಅನಾರೋಗ್ಯ ಸಂಬಂಧಿ ವಿಚಾರವಾಗಿ ನೀವು ಹೋದಾಗ ಅವರು ನಿಮ್ಮ ಮುಖವನ್ನೇ ನೋಡಿಕೊಂಡು ಮಾತನಾಡುತ್ತಲಿರುವರು. ಈ ವೇಳೆ ನೀವು ವೈದ್ಯರು ಸ್ವಲ್ಪ ಹೆಚ್ಚು ಮಾತನಾಡುವವರು ಎಂದು ಭಾವಿಸಬಹುದು. ಆದರೆ ವೈದ್ಯರು ಮಾತನಾಡುತ್ತಲೇ ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾರೆ ಎಂದು ಖಂಡಿತವಾಗಿಯೂ ತಿಳಿಯದು. ಹೌದು, ಕೆಲವೊಂದು ರೋಗಗಳ ಲಕ್ಷಣಗಳು ಮುಖದ ಮೇಲೆ ಮೂಡುವ ಕಾರಣದಿಂದಾಗಿ ವೈದ್ಯರು ನಿಮ್ಮ ಮುಖ ನೋಡಿಕೊಂಡು ಮಾತನಾಡಿ, ಯಾವುದೇ ಲಕ್ಷಣಗಳು ಇದೆಯಾ ಎಂದು ನೋಡುವರು. ವೈದ್ಯರನ್ನು ಈ ಬಗ್ಗೆ ನಾವು ಮಾತನಾಡಿಸಿದ ವೇಳೆ ಅವರು ಕೆಲವೊಂದು ವಿಚಾರಗಳನ್ನು ನಮ್ಮ ಮುಂದಿಟ್ಟರು. ಅವರು ನಿಮ್ಮ ಮುಖದಲ್ಲಿ ಯಾವ ಚಿಹ್ನೆಗಳನ್ನು ಹುಡುಕುತ್ತಲಿರುವರು ಎಂದು ನೀವು ಈ ಲೇಖನವನ್ನು ಪೂರ್ತಿ ಓದಿದರೆ ತಿಳಿದುಬರುವುದು.

1. ಒಣ, ಎದ್ದುಬಂದಿರುವ ಚರ್ಮ ಮತ್ತು ತುಟಿ

1. ಒಣ, ಎದ್ದುಬಂದಿರುವ ಚರ್ಮ ಮತ್ತು ತುಟಿ

ಒಣ ಹಾಗೂ ಚರ್ಮವು ಎದ್ದು ಬರುವುದು ನಿರ್ಜಲೀಕರಣದ ಪ್ರಮುಖ ಲಕ್ಷಣವಾಗಿದೆ. ಬೆವರಿನ ಗ್ರಂಥಿಗಳ ಮೇಲೆ ಇದು ತುಂಬಾ ಗಂಭೀರ ಪರಿಣಾಮ ಬೀರಿದೆ ಎಂದು ಇದರಿಂದ ತಿಳಿಯಬಹುದು. ಇದರಲ್ಲಿ ಮುಖ್ಯವಾಗಿ ಹೈಪೋಥೈರಾಯ್ಡಿಸಮ್(ಥೈರಾಯ್ಡ್ ಹಾರ್ಮೋನ್ ಮಟ್ಟ ಕಡಿಮೆ ಇರುವುದು) ಅಥವಾ ಮಧುಮೇಹ. ಹೈಪೋಥೈರಾಯ್ಡಿಸಮ್ ನ ಇನ್ನು ಕೆಲವು ಲಕ್ಷಣಗಳೆಂದರೆ ಅದು ಶೀತ, ತೂಕ ಹೆಚ್ಚುವುದು ಮತ್ತು ನಿಶ್ಯಕ್ತಿ. ಮಧುಮೇಹದ ಕೆಲವೊಂದು ಲಕ್ಷಣಗಳು ಅತಿಯಾಗಿ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ ಮತ್ತು ದೃಷ್ಟಿ ಮಂದವಾಗುವುದು. ಈ ಲಕ್ಷಣಗಳೊಂದಿಗೆ ಇಸಬು, ಸೋರಿಯಾಸಿಸ್, ಡರ್ಮಟೈಟಿಸ್ ಅಥವಾ ಔಷಧಿ ಅಲರ್ಜಿಯ ಲಕ್ಷಣಗಳಾಗಿರಬಹುದು.

ALSO READ: ನಿಮ್ಮ ಕೂದಲನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು ಗೊತ್ತಾ?

2. ಮುಖದಲ್ಲಿ ಅತಿಯಾಗಿ ಕೂದಲ ಬೆಳವಣಿಗೆ

2. ಮುಖದಲ್ಲಿ ಅತಿಯಾಗಿ ಕೂದಲ ಬೆಳವಣಿಗೆ

ಅನಗತ್ಯ ಕೂದಲಿನ ಬೆಳವಣಿಗೆ ಮುಖದಲ್ಲಿ ಕಂಡುಬರುವುದು. ಅದರಲ್ಲೂ ಮುಖ್ಯವಾಗಿ ದವಡೆ ಅಂಚು, ಗಲ್ಲ ಮತ್ತು ತುಟಿಯ ಮೇಲ್ಭಾಗದಲ್ಲಿ ಕೂದಲು ಅತಿಯಾಗಿ ಬೆಳೆಯುವುದು. ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಲಕ್ಷಣವಾಗಿರಬಹುದು. ಹಾರ್ಮೋನ್ ಅಸಮತೋಲನದಿಂದಾಗಿ ಹೀಗೆ ಆಗುವುದು ಮತ್ತು ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಅಧಿಕವಾಗುವುದೇ ಅಸಾಮಾನ್ಯ ಕೂದಲು ಬೆಳವಣಿಗೆಗೆ ಕಾರಣ. ಆದರೆ ನೀವು ಇದನ್ನು ತಕ್ಷಣವೇ ದೊಡ್ಡ ಸಮಸ್ಯೆ ಎಂದು ಭಾವಿಸಬೇಡಿ. ಕೆಲವು ಮಹಿಳೆಯರಲ್ಲಿ ಅನುವಂಶೀಯವಾಗಿ ಮುಖದ ಮೇಲೆ ಕೂದಲು ಬೆಳೆಯಬಹುದು.

3. ಕಣ್ಣಿನ ರೆಪ್ಪೆಗಳಲ್ಲಿ ಹಳದಿ ಕಲೆಗಳು

3. ಕಣ್ಣಿನ ರೆಪ್ಪೆಗಳಲ್ಲಿ ಹಳದಿ ಕಲೆಗಳು

ಇದು ದೇಹದಲ್ಲಿ ಕೊಲೆಸ್ಟ್ರಾಲ್ ತುಂಬಿದ ಚಿಹ್ನೆಗಳು ಮತ್ತು ಇದನ್ನು ಕ್ಸಾಂಥೆಲಾಸ್ಮಾ ಎಂದು ಕರೆಯಲಾಗುತ್ತದೆ. ಇಂತಹ ಕಲೆ ಇರುವಂತಹವರಲ್ಲಿ ಹೃದಯಾಘಾತದ ಅಪಾಯವು ಹೆಚ್ಚಾಗಿರುವುದು. ಕ್ಸಾಂಥೆಲಾಸ್ಮಾ ಇರುವಂತಹವರಲ್ಲಿ ಅಧಿಕ ಮಟ್ಟದ ಬಿಎಂಐ ಮತ್ತು ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಿರುವದು ಕಂಡುಬರುವುದು ಎಂದು 2016ರಲ್ಲಿ ಮೆಡಿಕಲ್ ಪ್ರಿನ್ಸಿಪಾಲ್ ಆಂಡ್ ಪ್ರಾಕ್ಟೀಸ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ.

4. ಕಣ್ಣಿನ ಕೆಳಭಾಗ ಊದಿಕೊಳ್ಳುವುದು

4. ಕಣ್ಣಿನ ಕೆಳಭಾಗ ಊದಿಕೊಳ್ಳುವುದು

ಬಳಲಿರುವಂತಹ ಕಣ್ಣುಗಳು ದೀರ್ಘಕಾಲಿನ ಅಲರ್ಜಿಯ ಸೂಚನೆ ಮತ್ತು ಇದು ರಕ್ತನಾಳವನ್ನು ದುರ್ಬಲ ಮಾಡುವುದು ಮತ್ತು ಅದು ಸೋರುವಂತೆ ಮಾಡುವುದು. ಕಣ್ಣಿನ ಸುತ್ತಲು ಇರುವಂತಹ ಸೂಕ್ಷ್ಮ ಚರ್ಮದಲ್ಲಿ ಇದು ಊದಿಕೊಳ್ಳುವಂತೆ ಮಾಡುವುದು ಮತ್ತು ಕಡು ನೇರಳೆ ಬಣ್ಣ ಉಂಟು ಮಾಡುವುದು. ಇದಕ್ಕೆ ಇತರ ಕೆಲವು ಕಾರಣಗಳೆಂದರೆ ಅದು ಹೈಪೋಥೈರಾಯ್ಡಿಸಮ್ ಮತ್ತು ನಿದ್ರಾಹೀನತೆ.

ALSO READ:ತಲೆನೋವು ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ? ಇದಕ್ಕೆ ಮನೆಮದ್ದುಗಳೇನು?

5. ಮುಖದ ಅಸಿಮೈಟ್ರಿ

5. ಮುಖದ ಅಸಿಮೈಟ್ರಿ

ಇದು ಪಾರ್ಶ್ವವಾಯುವಿನ ಮೊದಲ ಚಿಹ್ನೆಯಾಗಿದೆ. ಹೆಚ್ಚಾಗಿ ಇಂತಹ ಸಮಸ್ಯೆ ವೇಳೆ ರೋಗಿಗಳು ವೈದ್ಯರ ಬಳಿಯಲ್ಲಿ ಹೇಳುವಂತಹ ವಿಚಾರವೆಂದರೆ, ನಾನು ಕನ್ನಡಿ ನೋಡಿದ ವೇಳೆ ಮುಖವು ತುಂಬಾ ಭಿನ್ನವಾಗಿ ಕಂಡುಬಂದಿದೆ. ಮುಖದ ಒಂದು ಭಾಗವು ಮರಗಟ್ಟಿದಂತೆ ಅಥವಾ ಪೂರ್ಣವಾಗಿ ನಗಲು ಆಗದಂತೆ ನಿಮಗೆ ಭಾವನೆ ಆಗಬಹುದು ಅಥವಾ ನಿಮಗೆ ಮಾತನಾಡಲು ತೊಂದರೆ ಆಗಬಹುದು. ಅಸಿಮೈಟ್ರಿ ಎನ್ನುವುದು ಬೆಲ್ಸ್ ಪಾಲ್ಸಿ ಆಗಿರಬಹುದು. ಆದರೆ ಇತರ ಪರೀಕ್ಷೆಗಳನ್ನು ಮಾಡದೆ ಪಾರ್ಶ್ವವಾಯುವಿನ ಬಗ್ಗೆ ಹೇಳುವಂತಿಲ್ಲ. ತುಂಬಾ ವೇಗವಾಗಿ ಇದನ್ನು ಪತ್ತೆ ಮಾಡಿದರೆ ಆಗ ಪಾರ್ಶ್ವವಾಯುವಿಗೆ ಚಿಕಿತ್ಸೆ ಮಾಡಬಹುದು. ದೃಷ್ಟಿ ಎರಡೆರಡು ಕಾಣುವುದು ಮತ್ತು ಕೈಗಳು ಹಾಗೂ ಕಾಲಿನಲ್ಲಿ ದುರ್ಬಲತೆಯು ಪಾರ್ಶ್ವವಾಯುವಿಗೆ ಕಾರಣವಾಗಿದೆ.

6. ಮೈಬಣ್ಣ ಮಾಸುವುದು

6. ಮೈಬಣ್ಣ ಮಾಸುವುದು

ಸಣ್ಣ ಬದಲಾವಣೆಗಳು ಕೆಲವೊಂದು ಸಲ ದೊಡ್ಡ ಅಪಾಯದ ಸೂಚನೆ ನೀಡುವುದು. ಚರ್ಮವು ಜೋತು ಬೀಳುವುದು ರಕ್ತ ಹೀನತೆಯ ಲಕ್ಷಣವಾಗಿರಬಹುದು. ಚರ್ಮವು ಹಳದಿಯಾಗುವುದು ಯಕೃತ್ ನ ಸಮಸ್ಯೆಯ ಲಕ್ಷಣಗಳು. ತುಟಿ ಅಥವಾ ಉಗುರಿನ ತುದಿಯಲ್ಲಿ ನೀಲಿ ಬಣ್ಣದ ಕಲೆ ಕಾಣಿಸುವುದು ಹೃದಯ ಅಥವಾ ಶ್ವಾಸಕೋಶದ ಕಾಯಿಲೆ ಲಕ್ಷಣಗಳು.

7. ದದ್ದುಗಳು ಮತ್ತು ಮಚ್ಚೆಗಳು

7. ದದ್ದುಗಳು ಮತ್ತು ಮಚ್ಚೆಗಳು

ಜೀರ್ಣಕ್ರಿಯೆಯ ಕೆಲವೊಂದು ಸಮಸ್ಯೆಗಳು ಚರ್ಮದಲ್ಲಿ ಕಾಣಿಸಿಕೊಳ್ಳಬಹುದು. ತುರಿಕೆಯೊಂದಿಗೆ ಕೆಂಪು ದದ್ದುಗಳು ಕಾಣಿಸಿಕೊಂಡರೆ ಇದು ಉದರ ಕಾಯಿಲೆ ಲಕ್ಷಣವಾಗಿರಬಹುದು. ಇದೊಂದು ರೀತಿಯ ಆಟೋಇಮ್ಯೂನ್ ಕಾಯಿಲೆಯಾಗಿದ್ದು, ದೇಹವು ಗ್ಲುಟೇನ್ ಗೆ ಪ್ರತಿಕ್ರಿಯಿಸುವ ರೀತಿಯಾಗಿದೆ. ಚಿಟ್ಟೆ ಗಾತ್ರದ ದದ್ದುಗಳು ಕೆನ್ನೆಯ ಮೂಳೆಗಳು ಮತ್ತು ಮೂಗಿನ ಸೇತುವೆ ಮೇಲೆ ಕಾಣಿಸಿಕೊಳ್ಳುವುದು ಲೂಪಸ್ ನ ಚಿಹ್ನೆ. ಇದು ಕೂಡ ಒಂದು ಆಟೋಇಮ್ಯೂನ್ ಕಾಯಿಲೆಯಾಗಿದೆ. ಅಲರ್ಜಿ, ಇಸಬು ಮತ್ತು ರೊಸಾಸಿಯಾ ಮುಖದ ಮೇಲೆ ದದ್ದು ಉಂಟು ಮಾಡಬಹುದು.

ALSO READ: ನಿಮ್ಮ ಮೆದುಳನ್ನು ಚುರುಕಾಗಿಸಲು ಈ ವಿಚಿತ್ರ ವ್ಯಾಯಾಮಗಳನ್ನು ಟ್ರೈ ಮಾಡಿ ನೋಡಿ

8. ಕೂದಲು ಉದುರುವಿಕೆ

8. ಕೂದಲು ಉದುರುವಿಕೆ

ಹುಬ್ಬು ಅಥವಾ ಕಣ್ಣ ರೆಪ್ಪೆಯ ಕೂದಲು ಉದುರುವಿಕೆಯು ಅಲೋಪೆಸಿಯಾ ಅರೆಟಾದ ಲಕ್ಷಣವಾಗಿದೆ. ಇದು ಒಂದು ರೀತಿಯ ಆಟೋಇಮ್ಯೂನ್ ಸಮಸ್ಯೆಯಾಗಿದ್ದು, ಕೂದಲಿನ ಕಿರುಚೀಲಗಳ ಮೇಲೆ ಪರಿಣಾಮ ಬೀರುವುದು. ಈ ಕಾಯಿಲೆಯು ದೇಹದ ಕೆಲವೊಂದು ಭಾಗಗಳಿಗೆ ಸೀಮಿತವಾಗಿರುವುದು ಅಥವಾ ಸಂಪೂರ್ಣ ದೇಹದಲ್ಲಿ ಕಾಣಿಸಬಹುದು. ಕಣ್ಣಿನ ಭಾಗದಲ್ಲಿ ಕಣ್ಣಿನ ರೆಪ್ಪೆಗಳು ಅಥವಾ ಹುಬ್ಬುಗಳ ಕುದಲು ಉದುರಬಹುದು. ಇದಕ್ಕೆ ಚಿಕಿತ್ಸೆ ಲಭ್ಯವಿದೆ. ಆದರೆ ಸಂಪೂರ್ಣವಾಗಿ ಪರಿಹಾರವಿಲ್ಲ.

9. ಹೊಸ ಮಚ್ಚೆಗಳು

9. ಹೊಸ ಮಚ್ಚೆಗಳು

ಮಚ್ಚೆಗಳು ಒಂದು ಚಿಂತೆಯ ವಿಚಾರವಲ್ಲವಾದರೂ ಹೊಸದಾಗಿ ಬೆಳೆವಣಿಗೆ ಆಗುವ ಮಚ್ಚೆಯನ್ನು ವೈದ್ಯರು ಅಥವಾ ಚರ್ಮರೋಗ ತಜ್ಞರಿಂದ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಇದು ಚರ್ಮದ ಕ್ಯಾನ್ಸರ್ ಆಗಿರಬಹುದು ಅಥವಾ ಕೆಲವೊಂದು ಸಂದರ್ಭದಲ್ಲಿ ಇದು ದೇಹದೊಳಗಿನ ರೋಗದ ಲಕ್ಷಣವಾಗಿರಬಹುದು ಅಥವಾ ಅನುವಂಶೀಯ ಕಾಯಿಲೆಯ ಚಿಹ್ನೆಯಾಗಿರಬಹುದು.

English summary

Signs of Disease That Are Written All Over Your Face

When doctors chat with patients eye to eye, it’s not just about creating rapport. Certain facial traits may reveal vital clues to underlying health conditions. We asked doctors around the country to share what they look for while examining patients.
X
Desktop Bottom Promotion