For Quick Alerts
ALLOW NOTIFICATIONS  
For Daily Alerts

ಅತಿಯಾಗಿ ಮೌತ್ ವಾಶ್ ಬಳಕೆ ಮಾಡೋದ್ರಿಂದ ಈ ಸಮಸ್ಯೆಗಳು ಎದುರಾಗಬಹುದು

|

ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲ್ಲುಜ್ಜಿದ ನಂತರ ನೀವು ನಿಯಮಿತವಾಗಿ ಮೌತ್ ವಾಶ್ ಬಳಸುತ್ತಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ. ಇದರಿಂದ ನೀವು ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೀರಿ.ಇದು ಕೇಳಲು ಸ್ವಲ್ಪ ಆಶ್ಚರ್ಯವಾಗಬಹುದು, ಆದರೆ ಇದು ನಿಜ. ಮೌತ್ ವಾಶ್ಗೆ ಸಂಬಂಧಿಸಿದಂತೆ, ಅಗತ್ಯವಿದ್ದಾಗ ಮೌತ್‌ವಾಶ್ ಬಳಸುವುದರಿಂದ ಯಾವುದೇ ಹಾನಿ ಇಲ್ಲ ಎಂದು ವೈದ್ಯರು ಹೇಳುತ್ತಾರೆ, ಆದರೆ ಅಗತ್ಯವಿಲ್ಲದೆ ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ದೊಡ್ಡ ಹಾನಿ ಉಂಟಾಗುತ್ತದೆ. ಅದು ಹೇಗೆ ಎಂದು ತಿಳಿಯೋಣ.

ಮೌತ್ ವಾಶ್ ಕುರಿತ ಅಧ್ಯಯನವು ಏನು ಹೇಳುತ್ತದೆ?:

ಮೌತ್ ವಾಶ್ ಕುರಿತ ಅಧ್ಯಯನವು ಏನು ಹೇಳುತ್ತದೆ?:

ಕ್ವೀನ್ ಮೇರಿ ಯೂನಿವರ್ಸಿಟಿ'ಯು ನಿರ್ದಿಷ್ಟ ಬ್ರಾಂಡ್‌ನ ನಂಜುನಿರೋಧಕ ಮೌತ್ ವಾಶ್ ನ್ನು ಅಧ್ಯಯನ ಮಾಡಿದೆ. ಮೌತ್ ವಾಶ್ ನ ದೈನಂದಿನ ಬಳಕೆಯು ಹೃದಯಾಘಾತದ ಅಪಾಯವನ್ನು ಏಳು ಪ್ರತಿಶತ, ಪಾರ್ಶ್ವವಾಯು ಅಪಾಯವನ್ನು 10 ಪ್ರತಿಶತದಷ್ಟು ಮತ್ತು ರಕ್ತದೊತ್ತಡದ ಅಪಾಯವನ್ನು 3.5 ಪ್ರತಿಶತ ಹೆಚ್ಚಿಸುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಪ್ರಮುಖ ಸಂಶೋಧಕ ಅಮೃತಾ ಅಹ್ಲುವಾಲಿಯಾ ಅವರ ಪ್ರಕಾರ, ಮೌತ್‌ವಾಶ್‌ನಲ್ಲಿರುವ ರಾಸಾಯನಿಕವು ಕೆಟ್ಟ ಬ್ಯಾಕ್ಟೀರಿಯಾಗಳು ಜೊತೆಗೆ ಉತ್ತಮ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತವೆ, ಇದು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮೌತ್ವಾಶ್ ಬಳಸುವುದರ ಅನಾನುಕೂಲಗಳು:

ಮೌತ್ವಾಶ್ ಬಳಸುವುದರ ಅನಾನುಕೂಲಗಳು:

ಡಯಾಬಿಟಿಸ್ ಅಪಾಯ ಹೆಚ್ಚಾಗಬಹುದು:

ಒಂದು ವರದಿಯ ಪ್ರಕಾರ, ಇತರರಿಗೆ ಹೋಲಿಸಿದರೆ, ಮೌತ್ವಾಶ್ ಕನಿಷ್ಠ 2 ಬಾರಿ ಬಳಸುವುದರಿಂದ ಜನರು 55% ಮಧುಮೇಹದ ಅಪಾಯವನ್ನು ಎದುರಿಸಿದ್ದಾರೆ ಎಂದು ಹೇಳಿದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ.

ಬಾಯಿ ಒಣಗುವುದು:

ಬಾಯಿ ಒಣಗುವುದು:

ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಹೊಂದಿರುವ ಮೌತ್ ವಾಶ್ ಬಳಸುವುದರಿಂದ ನಿಮ್ಮ ಬಾಯಿ ಒಣಗುತ್ತದೆ. ಈ ಕಾರಣದಿಂದಾಗಿ ಬಾಯಿಯ ಕೆಟ್ಟ ವಾಸನೆಯ ಸಮಸ್ಯೆ ಉಂಟಾಗಬಹುದು. ಆದ್ದರಿಂದ ಮೌತ್ ವಾಶ್ ಬಳಸುವವರು ಜಾಗರೂಕರಾಗಿರಿ.

ಬಾಯಿ ಹುಣ್ಣು ಸಮಸ್ಯೆ:

ಬಾಯಿ ಹುಣ್ಣು ಸಮಸ್ಯೆ:

ಮೌತ್ವಾಶ್ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಹೊಂದಿರುವುದರಿಂದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಬಾಯಿಯೊಳಗೆ ಅಂಗಾಂಶಗಳ ನೋವು ಉಂಟುಮಾಡುತ್ತದೆ. ಆದ್ದರಿಂದ ಆಲ್ಕೋಹಾಲ್ ಆಧಾರಿತ ಮೌತ್‌ವಾಶ್ ಬಳಸಬಾರದು. ಇದು ಬಾಯಿಯಲ್ಲಿ ಗುಳ್ಳೆಗಳನ್ನು ಉಂಟುಮಾಡಬಹುದು.

ರುಚಿ ಸಂವೇದನಾ ದುರ್ಬಲವಾಗಬಹುದು:

ರುಚಿ ಸಂವೇದನಾ ದುರ್ಬಲವಾಗಬಹುದು:

ರಾಸಾಯನಿಕಗಳ ಬಳಕೆಯು ಬಾಯಿಯೊಳಗಿನ ರುಚಿ ಸಂವೇದನಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಹಲ್ಲುಗಳ ಮೇಲೆ ಕಂದು ಬಣ್ಣದ ಕಲೆಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಅಲರ್ಜಿಗಳು ಸಂಭವಿಸಬಹುದು ಮತ್ತು ದೇಹಕ್ಕೆ ಪ್ರಯೋಜನವಾಗುವ ಬ್ಯಾಕ್ಟೀರಿಯಾವನ್ನು ಸಹ ಅದರ ಬಳಕೆಯಿಂದ ನಿರ್ಮೂಲನೆ ಮಾಡಬಹುದು.

ಸಲಹೆ:

ಯಾವುದೇ ಕಾರಣಕ್ಕಾಗಿ ಹಲ್ಲುಜ್ಜಿದ ನಂತರ ನೀವು ಮೌತ್ವಾಶ್ ಬಳಸಲು ಬಯಸಿದರೆ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರು ಹೇಳಿದ ಮೌತ್ ವಾಶ್ ಬಳಸಿ. ವೈದ್ಯರ ಸಲಹೆಯಿಲ್ಲದೆ ಬಳಸುವ ಮೌತ್‌ವಾಶ್ ನಿಮ್ಮ ಬಾಯಿ ಮತ್ತು ಹಲ್ಲು ಎರಡನ್ನೂ ಹಾನಿಗೊಳಿಸುತ್ತದೆ.

English summary

Side Effects Of Using Mouthwash Daily in Kannada

Here we told about side effects of using mouthwash daily in kannada, read on
X
Desktop Bottom Promotion