For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಅನ್ನ ಸೇವಿಸುತ್ತಿದ್ದೀರಾ? ಹಾಗಾದ್ರೆ ಈ ಅಡ್ಡಪರಿಣಾಮಗಳ ಬಗ್ಗೆ ಎಚ್ಚರವಿರಲಿ!

|

ಅನ್ನ ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗವಾಗಿದೆ. ಅನ್ನವಿಲ್ಲದೇ ಊಟ ಸಂಪೂರ್ಣವಾಗಲಾರದು. ಮೂರು ಹೊತ್ತು ಅನ್ನವನ್ನೇ ಸೇವಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಅತಿಯಾದ ಅನ್ನ ಸೇವನೆಯು ಆರೋಗ್ಯದ ಮೇಲೆ ಪರಿಣಾಮ ಬೀರುವುದೆಂದು ತಿಳಿದಿದೆಯೇ?.

ರೊಟ್ಟಿಗಿಂತ ಅನ್ನವನ್ನು ತಯಾರಿಸುವುದು ಸುಲಭ ಹಾಗೂ ಸಮಯ ಉಳಿತಾಯವೂ ಆಗುವುದು. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಅತಿಯಾದ ಅನ್ನ ಸೇವೆನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಅಡ್ಡಪರಿಣಾಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಧುಮೇಹದ ಅಪಾಯ:

ಮಧುಮೇಹದ ಅಪಾಯ:

ಪ್ರತಿನಿತ್ಯ ಅನ್ನವನ್ನು ತಿನ್ನುವುದರಿಂದ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ಅನಾನುಕೂಲತೆಗಳಿವೆ. ಅವುಗಳಲ್ಲಿ ಒಂದು ಮಧುಮೇಹಕ್ಕೆ ಸಂಬಂಧಿಸಿದೆ. ಬೇಯಿಸಿದ ಒಂದು ಬಟ್ಟಲು ಅನ್ನದಲ್ಲಿ ಕನಿಷ್ಠ 10 ಟೀಚಮಚ ಕ್ಯಾಲೋರಿ ಇರುತ್ತದೆ. ಪ್ರತಿದಿನ ಈ ಪ್ರಮಾಣದ ಅನ್ನವನ್ನು ಸೇವಿಸಿದರೆ, ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಧುಮೇಹಿಗಳು ಅನ್ನವನ್ನು ಸೇವಿಸದಂತೆ ಸೂಚಿಸಲಾಗುತ್ತದೆ.

ತೂಕ ಹೆಚ್ಚಾಗುವುದು:

ತೂಕ ಹೆಚ್ಚಾಗುವುದು:

ಅನ್ನದಲ್ಲಿ ಹೆಚ್ಚಿನ ಕ್ಯಾಲೋರಿ ಇರುವುದರಿಂದ, ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗಿ ಬೊಜ್ಜು ಬರುವ ಅಪಾಯವಿದೆ. ನೀವು ಈಗಾಗಲೇ ಅಧಿಕ ತೂಕ ಹೊಂದಿದ್ದರೆ, ಕಡಿಮೆ ಅನ್ನವನ್ನು ಸೇವಿಸಿ. ಇಲ್ಲವಾದಲ್ಲಿ ನಿಮ್ಮ ತೂಕ ಹೆಚ್ಚಾಗಿ ಇತರ ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗುತ್ತದೆ.

ಅತಿಯಾಗಿ ತಿನ್ನುವುದು:

ಅತಿಯಾಗಿ ತಿನ್ನುವುದು:

ಅಕ್ಕಿ ಭಾರವಾಗಿರುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ ಆದರೆ, ಸುಲಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ಸ್ವಲ್ಪ ಸಮಯದ ನಂತರ ಮತ್ತೆ ಹಸಿವು ಉಂಟಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ನೀವು ಏನನ್ನಾದರೂ ತಿನ್ನುತ್ತೀರಿ. ಹೀಗೆ ಅನ್ನದ ಸೇವನೆಯು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗುತ್ತದೆ. ಅತಿಯಾಗಿ ತಿನ್ನುವುದು ತೂಕ ಹೆಚ್ಚಳ, ಬೊಜ್ಜಿಗೆ ಕಾರಣವಾಗುತ್ತದೆ. ಹೀಗೆ ಒಂದೊಂದು ಅಂಶಗಳು ಒಂದೊಂದಕ್ಕೆ ಸಂಬಂಧಹೊಂದಿರುತ್ತವೆ.

ಜೀರ್ಣಶಕ್ತಿ ದುರ್ಬಲವಾಗುವುದು:

ಜೀರ್ಣಶಕ್ತಿ ದುರ್ಬಲವಾಗುವುದು:

ಬಿಳಿ ಅಕ್ಕಿಯಲ್ಲಿ ನಾರಿನ ಪ್ರಮಾಣ ತುಂಬಾ ಕಡಿಮೆ. ಆದ್ದರಿಂದ, ಅಕ್ಕಿಯನ್ನು ಅತಿಯಾಗಿ ಸೇವಿಸಿದರೆ ಗ್ಯಾಸ್-ಆಸಿಡಿಟಿ ಸಮಸ್ಯೆ ಆರಂಭವಾಗುತ್ತದೆ. ಇದು ಜೀರ್ಣಕ್ರಿಯೆ ದುರ್ಬಲವಾಗಲು ಅಥವಾ ಜೀರ್ಣಶಕ್ತಿ ಕುಂಠಿತವಾಗಲು ಕಾರಣವಾಗುತ್ತದೆ.

ಸೋಮಾರಿತನ ಬೆಳೆಯುವುದು:

ಸೋಮಾರಿತನ ಬೆಳೆಯುವುದು:

ಅನ್ನ ತಿನ್ನುವುದರಿಂದ ನಿಮಗೆ ನಿದ್ದೆ ಸುಲಭವಾಗಿ ಬರುತ್ತದೆ. ವಿಶೇಷವಾಗಿ ಹಗಲಿನಲ್ಲಿ ತಿಂದರೆ, ನಿದ್ರೆಯ ಜೊತೆಗೆ ಹೋರಾಡುವುದು ಕಷ್ಟವಾಗುತ್ತದೆ. ಅಕ್ಕಿಯನ್ನು ತಿನ್ನುವುದರಿಂದ, ದೇಹದಲ್ಲಿ ಸಕ್ಕರೆಯ ಪ್ರಮಾಣವು ವೇಗವಾಗಿ ಹೆಚ್ಚಾಗುತ್ತದೆ, ಇದರಿಂದಾಗಿ ನಿದ್ರೆ ಆರಂಭವಾಗುತ್ತದೆ. ಆದ್ದರಿಂದ ಅತಿಯಾಗಿ ಅನ್ನ ಸೇವಿಸುವುದನ್ನು ಕಡಿಮೆ ಮಾಡಿ, ಇದು ಜಡ ಅಥವಾ ಸೋಮಾರಿತನಕ್ಕೆ ಕಾರಣವಾಗುವುದು.

ವಿಟಮಿನ್ ಸಿ ಕೊರತೆ:

ವಿಟಮಿನ್ ಸಿ ಕೊರತೆ:

ಬಿಳಿ ಅಕ್ಕಿಯಲ್ಲಿ ವಿಟಮಿನ್-ಸಿ ಪ್ರಮಾಣವು ತುಂಬಾ ಕಡಿಮೆಯಾಗಿದೆ, ಹಾಗಾಗಿ ಇದನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಸಿಗುವುದಿಲ್ಲ. ಇದರಿಂದ ಮೂಳೆಗಳಿಗೆ ಯಾವುದೇ ಪೋಷಕಾಂಶ ಲಭ್ಯವಾಗದೇ, ಮೂಳೆಗಳು ದುರ್ಬಲಗೊಳ್ಳಲು ಆರಂಭವಾಗುತ್ತದೆ. ಆದ್ದರಿಂದ ಇನ್ನು ಮುಂದಾದರೂ ಅತಿಯಾದ ಅನ್ನಸೇವನೆಯನ್ನು ಆದಷ್ಟು ಕಡಿಮೆ ಮಾಡಿ.

English summary

Side Effects of Eating Rice Everyday in Kannada

Here we talking about Side effects of eating rice everyday in kannada, read on
Story first published: Tuesday, October 5, 2021, 13:51 [IST]
X
Desktop Bottom Promotion