For Quick Alerts
ALLOW NOTIFICATIONS  
For Daily Alerts

ಸೌತೆಕಾಯಿ ತಿನ್ನುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ

|

ಬೇಸಿಗೆಯಲ್ಲಿ ಹೆಚ್ಚಿನ ಜನರು ತಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಸೇರಿಸುತ್ತಾರೆ. ಇದರಲ್ಲಿ ಪೌಷ್ಠಿಕಾಂಶದ ಮೌಲ್ಯವು ತುಂಬಾ ಉತ್ತಮವಾಗಿದೆ. ಸೌತೆಕಾಯಿ ಬೇಸಿಗೆ ಕಾಲದಲ್ಲಿ ಆ್ಯಂಟಿಆಕ್ಸಿಡೆಂಟ್ಗಳನ್ನು ನೀಡುತ್ತದೆ. ಇದರಲ್ಲಿ ಸಾಕಷ್ಟು ಜೀವಸತ್ವಗಳಿವೆ. ಕಡಿಮೆ ಕ್ಯಾಲೋರಿ ಹೊಮದಿರುವ ಸೌತೆಕಾಯಿ ತೂಕ ಇಳಿಕೆಗೂ ಸಹಕಾರಿ. ಇಂತಹ ಸೌತೆಕಾಯಿ ಸಹ ನಿಮಗೆ ಹಾನಿ ಮಾಡುತ್ತದೆ ಎಂದರೆ ನಂಬುತ್ತೀರಾ? ಹೌದು ಈ ಸೌತೆಕಾಯಿಯನ್ನು ಸೇವಿಸಲು ಸರಿಯಾದ ಸಮಯ ಹಾಗೂ ವಿಧಾನವಿದೆ, ಆಗ ಮಾತ್ರ ಅದು ಉತ್ತಮ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.

ಸೌತೆಕಾಯಿಯನ್ನು ಯಾವ ಸಮಯದಲ್ಲಿ ಹೇಗೆ ಸೇವಿಸಬೇಕು ಎಂಬುದನ್ನು ಈ ಕೆಳಗೆ ಹೇಳಿದ್ದೇವೆ:

ಸೌತೆಕಾಯಿ ತುಂಬಾ ಪ್ರಯೋಜನಕಾರಿ ಆದರೆ…

ಸೌತೆಕಾಯಿ ತುಂಬಾ ಪ್ರಯೋಜನಕಾರಿ ಆದರೆ…

ಸೌತೆಕಾಯಿಯನ್ನು ಬೇಸಿಗೆಯಲ್ಲಿ ಸಲಾಡ್, ರೈತಾದಲ್ಲಿ, ಹಸಿ ತರಕಾರಿಗಳೊಂದಿಗೆ ತಿನ್ನಲಾಗುತ್ತದೆ. ಕಡಿಮೆ ಕ್ಯಾಲೋರಿಗಳಿದಾಗಿ ಅನೇಕ ಜನರು ಸೌತೆಕಾಯಿಯನ್ನು ಬಳಸುತ್ತಾರೆ ಮತ್ತು ರಾತ್ರಿಯಲ್ಲಿ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತಾರೆ. ಆದರೆ ಕೆಲವು ಪೌಷ್ಟಿಕತಜ್ಞರು ರಾತ್ರಿಯಲ್ಲಿ ಸೌತೆಕಾಯಿ ತಿನ್ನುವುದು ಸರಿಯಲ್ಲ ಎಂದು ಹೇಳುತ್ತಾರೆ. ಯಾಕೆಂದರೆ, ಸೌತೆಕಾಯಿಯಲ್ಲಿ ನೀರು ಮಾತ್ರ ಇರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ ಸೌತೆಕಾಯಿಯಲ್ಲಿ 95 ಪ್ರತಿಶತದಷ್ಟು ನೀರು ಇರುವುದು ನಿಜ ಆದರೆ ಜೀರ್ಣಿಸಿಕೊಳ್ಳಲು ಅಷ್ಟು ಸುಲಭವಲ್ಲ ಎಂಬುದು ತಜ್ಞರ ಮಾತು.

ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ರಾತ್ರಿಯಲ್ಲಿ ಸೇವಿಸಬೇಕು. ಅದಕ್ಕಾಗಿಯೇ ಮಲಗುವ ಸಮಯಕ್ಕೆ 2-3 ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದು ಸೂಕ್ತವಾಗಿದೆ. ರಾತ್ರಿಯಲ್ಲಿ ನೀವು ಹೆಚ್ಚು ಸೌತೆಕಾಯಿಯನ್ನು ತಿನ್ನುತ್ತಿದ್ದರೆ, ನಿದ್ರೆಯ ಕೊರತೆಯಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು.

ರಾತ್ರಿ ಸೌತೆಕಾಯಿ ತಿಂದರೆ ಈ ಸಮಸ್ಯೆಗಳು ಸಂಭವಿಸಬಹುದು:

ರಾತ್ರಿ ಸೌತೆಕಾಯಿ ತಿಂದರೆ ಈ ಸಮಸ್ಯೆಗಳು ಸಂಭವಿಸಬಹುದು:

ಕೆಲವು ತಜ್ಞರು ರಾತ್ರಿಯಲ್ಲಿ ಹೆಚ್ಚು ಸೌತೆಕಾಯಿಯನ್ನು ಸೇವಿಸಿದರೆ ನಿಮಗೆ ವಾಯು ಸಮಸ್ಯೆ ಉಂಟಾಗಬಹುದು ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ, ನಿಮಗೆ ಹೊಟ್ಟೆಯ ಸಮಸ್ಯೆ ಇದ್ದರೆ, ಸೌತೆಕಾಯಿ ಮತ್ತಷ್ಟು ಹಾನಿ ಮಾಡುತ್ತದೆ. ಸೌತೆಕಾಯಿಯನ್ನು ಹೂಕೋಸು ಮತ್ತು ಕೋಸುಗಡ್ಡೆಯ ಜೊತೆ ತಿನ್ನುವುದು ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಡ್ರಗ್ಸ್.ಕಾಮ್ ಪ್ರಕಾರ, ಸೌತೆಕಾಯಿಗಳಲ್ಲಿ ಕಂಡುಬರುವ ಕುಕುರ್ಬಿಟಾಸಿನ್ ಈ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಸೌತೆಕಾಯಿಗಳಲ್ಲಿ ಕಹಿ ಉಂಟುಮಾಡುತ್ತದೆ.

ಹಾಗಾದರೆ ಸೌತೆಕಾಯಿ ತಿನ್ನಲು ಸರಿಯಾದ ಮಾರ್ಗ:

ಹಾಗಾದರೆ ಸೌತೆಕಾಯಿ ತಿನ್ನಲು ಸರಿಯಾದ ಮಾರ್ಗ:

ಸೌತೆಕಾಯಿಯ ಪೌಷ್ಠಿಕಾಂಶವು ಉತ್ತಮವಾಗಿದೆ. ಆದ್ದರಿಂದ ಅದನ್ನು ತಿನ್ನುವುದನ್ನು ನಿಲ್ಲಿಸಬೇಡಿ, ಆದರೆ ಅದನ್ನು ಸರಿಯಾಗಿ ತಿನ್ನಿರಿ. ಸೌತೆಕಾಯಿಯಲ್ಲಿ ಸಾಕಷ್ಟು ನೀರು ಇದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಸೌತೆಕಾಯಿಯನ್ನು ಸೇವಿಸಿದ ಕೂಡಲೇ ಹೆಚ್ಚು ನೀರು ಕುಡಿಯಬೇಡಿ. ಸೌತೆಕಾಯಿ ಸಿಪ್ಪೆಗಳಲ್ಲಿ ಕುಕುರ್ಬಿಟಾಸಿನ್ ಹೆಚ್ಚು ಕಂಡುಬರುತ್ತದೆ, ಆದ್ದರಿಂದ ಸೌತೆಕಾಯಿಯನ್ನು ಚೆನ್ನಾಗಿ ತೊಳೆಯಿರಿ, ಸಿಪ್ಪೆ ಸುಲಿದು ಅದರ ತುದಿಯನ್ನು ತೆಗೆದುಹಾಕಿ ತಿನ್ನಿ.

English summary

Side Effects of Eating Cucumber at Night in Kannada

Here we talking about Side Effects of Eating Cucumber at Night in Kannada, read on
Story first published: Friday, April 16, 2021, 18:25 [IST]
X
Desktop Bottom Promotion