For Quick Alerts
ALLOW NOTIFICATIONS  
For Daily Alerts

ಈ ಆರೋಗ್ಯ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಲವಂಗದ ಎಲೆಯನ್ನು ತಿನ್ನಲೇಬಾರದು

|

ರೈಸ್‌ ಬಾತ್‌ನಿಂದ ಹಿಡಿದು ನಾನ್‌ವೆಜ್‌ ಅಡುಗೆಯವರೆಗೂ ಲವಂಗದ ಎಲೆ ಹಾಕದೆ ಯಾರು ಇರಲಾರರು. ಅಡುಗೆಯ ಘಮ ಹೆಚ್ಚಿಸುವ ಲವಂಗದ ಎಲೆಯನ್ನು ಕೆಲವರು ಪುಲಾವ್‌ ಎಲೆ ಎಂದೂ ಕರೆಯುತ್ತಾರೆ. ಈ ಎಲೆ ಪರಿಮಳಯುಕ್ತವಾಗಿದ್ದರೂ, ಎಲೆಯ ರುಚಿ ಮಾತ್ರ ಕಹಿ. ಹಾಗಾಗಿ ಹೆಚ್ಚಿನವರು ಇದನ್ನು ತಟ್ಟೆಯಲ್ಲಿ ಪಕ್ಕಕ್ಕಿಡುವುದೇ ಹೆಚ್ಚು.

ಈ ಎಲೆ ಅಡುಗೆಗೆ ಮಾತ್ರವಲ್ಲ, ಅಕ್ಕಿ, ಹಿಟ್ಟುಗಳಿಗೆ ಹುಳ ಬರಬಾರದೆಂದೂ ಇದನ್ನು ಅಕ್ಕಿ, ಬೇಳೆ ಕಾಳುಗಳ ಡಬ್ಬದಲ್ಲಿ ಹಾಕಿಡುತ್ತಾರೆ. ಇಷ್ಟು ಮಾತ್ರವಲ್ಲ ಲವಂಗದ ಎಲೆ ಆರೋಗ್ಯಕರ ಪ್ರಯೋಜನದಲ್ಲೂ ಎತ್ತಿದ ಕೈ. ಈ ಎಲೆಗಳನ್ನು ವಿವಿಧ ಚಿಕಿತ್ಸೆಯಲ್ಲಿ ಮತ್ತು ರೋಗಗಳನ್ನು ತಡೆಗಟ್ಟಲೂ ಕೂಡಾ ಬಳಸಲಾಗುತ್ತೆ. ಆದರೆ ಕೆಲವರು ಮಾತ್ರ ಈ ಲವಂಗದ ಎಲೆಯನ್ನು ಸೇವಿಸಲೇಬಾರದು. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಔಷಧೀಯ ಗುಣವಿರುವ ಲವಂಗದ ಎಲೆ

ಔಷಧೀಯ ಗುಣವಿರುವ ಲವಂಗದ ಎಲೆ

ಪ್ರತಿಯೊಂದು ಮಸಾಲೆ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿಯೇ ನಮ್ಮ ಪೂರ್ವಜರ ಕಾಲದಿಂದಲೂ ಈ ಲವಂಗದ ಎಲೆಯನ್ನು ಅಡುಗೆಯಲ್ಲಿ ಬಳಸುತ್ತಾ ಬಂದಿದ್ದಾರೆ. ಇದರಲ್ಲಿ ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್, ವಿಟಮಿನ್-ಸಿ, ಎ, ಬಿ6, ರೈಬೋಫ್ಲಾವಿನ್, ಸತು, ಫೈಬರ್, ಪ್ರೋಟೀನ್ ಮುಂತಾದ ಅಂಶಗಳು ಕಂಡುಬರುತ್ತದೆ.

ಬೇ ಲೀಫ್‌ ಎಂದೂ ಹೇಳಲ್ಪಡುವ ಲವಂಗದೆಲೆಯ ಆರೋಗ್ಯ ಪ್ರಯೋಜನಗಳೆಂದರೆ ಅದು ಜೀರ್ಣಾಂಗವ್ಯೂಹದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಉಸಿರಾಟದ ಸಮಸ್ಯೆಗೂ ಪರಿಹಾರ ನೀಡುತ್ತದೆ ಮಾತ್ರವಲ್ಲ, ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಈ ಎಲೆಯು ಉರಿಯೂತವನ್ನು ಶಮನಗೊಳಿಸುವ ಗುಣ ಹೊಂದಿದ್ದು, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಈ ಎಲೆಯ ಸೇವನೆಯು ಕ್ಯಾನ್ಸರ್ ತಡೆಗಟ್ಟುವುದರ ಜೊತೆಗೆ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮಧುಮೇಹಿಗಳ ಶುಗರ್‌ ಲೆವೆಲ್‌ ನಿಯಂತ್ರಿಸುವಲ್ಲಿ ಇದು ಸಹಾಯ ಮಾಡುತ್ತದೆ. ಲವಂಗದ ಎಲೆಯನ್ನು ಮುಟ್ಟಿನ ಸಮಸ್ಯೆಗಳ ಚಿಕಿತ್ಸಾ ಔಷಧಿಯಲ್ಲೂ ಬಳಸಲಾಗುತ್ತೆ. ಇವಿಷ್ಟೇ ಅಲ್ಲದೇ ತಲೆಹೊಟ್ಟು, ಮತ್ತು ಕೂದಲುದುರುವಿಕೆಗೂ ಪರಿಣಾಮಕಾರಿ ಔಷಧಿಯಾಗಿದೆ. ಇಷ್ಟೆಲ್ಲಾ ಉತ್ತಮ ಆರೋಗ್ಯಕರ ಅಂಶಗಳು ಈ ಲವಂಗದ ಎಲೆಯಲ್ಲಿದ್ದರೂ ಕೆಲವರು ಮಾತ್ರ ಇದನ್ನು ಸೇವಿಸಬಾರದು. ಸೇವಿಸಿದರೆ ಅಡ್ಡಪರಿಣಾಮಗಳು ಖಚಿತ ಎನ್ನುತ್ತಾರೆ ವೈದ್ಯರು.

ಮಧುಮೇಹಿಗಳು ಲವಂಗದೆಲೆ ಸೇವಿಸುವಾಗ ಎಚ್ಚರ

ಮಧುಮೇಹಿಗಳು ಲವಂಗದೆಲೆ ಸೇವಿಸುವಾಗ ಎಚ್ಚರ

ಬೇ ಎಲೆಗಳಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಎಲೆಗಳ ಸೇವನೆಯು ಇನ್ಸುಲಿನ್ ಮತ್ತು ಗ್ಲೂಕೋಸ್ ಚಯಾಪಚಯವನ್ನು ಸುಧಾರಿಸುತ್ತದೆ. ಬೇ ಎಲೆಗಳ ಸಕ್ರಿಯ ಅಂಶವೆಂದರೆ ಪಾಲಿಫಿನಾಲ್, ಇದು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಅತಿಯಾದರೆ ಎಲ್ಲವೂ ವಿಷವಾಗುತ್ತದೆ ಎನ್ನುವ ಹಾಗೆ, ಅತಿಯಾಗಿ ತಿಂದರೆ ರಕ್ತದಲ್ಲಿ ಗ್ಲುಗೋಸ್‌ ಅಂಶ ಗಣನೀಯವಾಗಿ ಕಡಿಮೆಯಾಗುವುದು.

ಒಂದು ಅಧ್ಯಯನದಲ್ಲಿ ಕಂಡುಬಂದಂತೆ ಟೈಪ್ 2 ಡಯಾಬಿಟಿಸ್ ಹೊಂದಿರುವ, ಆರು ತಿಂಗಳಿನಿಂದ ತಮ್ಮ ಆಹಾರದಲ್ಲಿ ಲವಂಗದ ಎಲೆಯನ್ನು ಸೇವಿಸಿರುವವರಲ್ಲಿ ಗ್ಲುಗೋಸ್‌ ಪ್ರಮಾಣ ಅತ್ಯಂತ ಕಡಿಮೆಯಾಗಿರುತ್ತದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ. ಹಾಗಾಗಿ ಯಾರು ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೋ, ಅಂಥವರಲ್ಲಿ ಹೆಚ್ಚು ಲವಂಗದ ಎಲೆಯ ಸೇವನೆಯು ಸಕ್ಕರೆಯ ಮಟ್ಟ ಸಾಮಾನ್ಯಕ್ಕಿಂತ ಕಡಿಮೆಯಾಗಬಹುದು. ಇದರಿಂದ ಲೋ ಶುಗರ್‌ ಸಮಸ್ಯೆಯಾಗಬಹುದು. ಹಾಗಾಗಿ ನೀವು ಲವಂಗದ ಎಲೆಯ ಸೇವನೆಯನ್ನು ಮಿತಗೊಳಿಸುವುದು ಒಳ್ಳೆಯದು.

ಗಂಟಲಿನ ಉರಿಯೂತದ ಸಮಸ್ಯೆ ಇರುವವರು ಬೇ ಲೀಫ್‌ ಸೇವಿಸಬೇಡಿ

ಗಂಟಲಿನ ಉರಿಯೂತದ ಸಮಸ್ಯೆ ಇರುವವರು ಬೇ ಲೀಫ್‌ ಸೇವಿಸಬೇಡಿ

ಲವಂಗದ ಎಲೆಯಿಂದ ಮಾಡಿದ ಚಹಾ ಪರಿಮಳಯುಕ್ತವಾಗಿದ್ದು, ಇದು ಸೈನಸ್‌ ಮತ್ತು ಕಟ್ಟಿದ ಮೂಗಿನ ಸಮಸ್ಯೆಯಿಂದ ರಿಲೀಫ್‌ ನೀಡಿದರೂ, ಗಂಟಲು ಅಥವಾ ಟಾನ್ಸಿಲ್ ನೋವಿನಿಂದ ಬಳಲುತ್ತಿರುವವರು ಬೇ ಎಲೆಗಳನ್ನು ಆಹಾರದಲ್ಲಿ ಹಾಕಬಾರದು. ಈ ಎಲೆಗಳ ಸೇವನೆ ಗಂಟಲಿನಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಅಡುಗೆ ಮಾಡುವಾಗ ನೀವು ಅದನ್ನು ಸೇರಿಸಬಹುದು ಆದರೆ ಬಡಿಸುವ ಮೊದಲು ಅದನ್ನು ತೆಗೆಯಬೇಕು.

ಗರ್ಭಿಣಿಯರು ಲವಂಗದ ಎಲೆ ಸೇವಿಸಬೇಡಿ

ಗರ್ಭಿಣಿಯರು ಲವಂಗದ ಎಲೆ ಸೇವಿಸಬೇಡಿ

ಲವಂಗದ ಎಲೆ ಹೃದಯದ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಉತ್ತಮ. ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಗಳ ಅಸಮತೋಲನದಿಂದಾಗಿ ಭಾವನಾತ್ಮಕ ಒತ್ತಡಗಳು ಹೆಚ್ಚಾಗುತ್ತದೆ. ಲವಂಗದೆಲೆಯು ಈ ಒತ್ತಡವನ್ನು ನಿವಾರಿಸುತ್ತದೆ. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತೆ. ಉಷ್ಣಪದಾರ್ಥಗಳ ಸೇವನೆಯಿಂದ ಗರ್ಭಿಣಿಯರು ದೂರವಿರಬೇಕು ಎನ್ನುತ್ತಾರೆ. ಹಾಗಾಗಿ ಉಷ್ಣವನ್ನು ಹೆಚ್ಚಿಸುವ ಆಹಾರ ವಸ್ತುಗಳಲ್ಲಿ ಬೇ ಲೀಫ್‌ ಕೂಡಾ ಒಂದು.

ಗರ್ಭಿಣಿಯರು ಬೇ ಎಲೆಗಳನ್ನು ಆಹಾರದಲ್ಲಿ ಸೇರಿಸಬೇಡಿ. ಏಕೆಂದರೆ ಬೇ ಎಲೆಗಳ ಪರಿಣಾಮವು ಬಿಸಿಯಾಗಿರುತ್ತದೆ ಮತ್ತು ಇದು ತಾಯಿ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅಲ್ಲದೆ, ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆನೋವು, ಬೆವರುವಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಅತಿಸಾರ ಉಂಟಾಗುತ್ತದೆ.

ಗರ್ಭಾವಸ್ಥೆಯಲ್ಲಿ ಲವಂಗದ ಎಲೆಯ ಸೇವನೆ ಅಸುರಕ್ಷಿತ. ಯಾಕೆಂದರೆ ಈ ಎಲೆಯು ಜೀರ್ಣವಾಗುವುದಿಲ್ಲ. ಜೀರ್ಣಾಂಗವ್ಯೂಹದ ಒಳಪದರದ ಮೂಲಕ ಹಾಗೆಯೇ ಹಾದು ಹೋಗುತ್ತದೆ, ಹಾಗಾಗಿ ಇದು ಕರುಳಿನ ಒಳಪದರಕ್ಕೆ ಚುಚ್ಚಬಹುದು ಅಥವಾ ಸೇವಿಸುವಾಗ ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು. ಅಲ್ಲದೇ ಗರ್ಭಿಣಿಯರು ಇದನ್ನು ಗಿಡಮೂಲಿಕೆಯಾಗಿ ನೇರವಾಗಿ ಸೇವಿಸಬಾರದು. ಯಾಕೆಂದರೆ ಗರ್ಭಾವಸ್ಥೆಯಲ್ಲಿ ಈ ಎಲೆಯ ಬಳಕೆಯ ಪ್ರಯೋಜನಗಳ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದ್ದರಿಂದ ಲವಂಗದೆಲೆಯ ಸೇವನೆಯನ್ನು ತಪ್ಪಿಸುವುದು ಉತ್ತಮ.

ಉದರಸಂಬಂಧೀ ಸಮಸ್ಯೆ ಇರುವವರು ಸೇವಿಸಬಾರದು

ಉದರಸಂಬಂಧೀ ಸಮಸ್ಯೆ ಇರುವವರು ಸೇವಿಸಬಾರದು

ಬೇ ಎಲೆಗಳನ್ನು ಆಹಾರಕ್ಕೆ ಸೇರಿಸುವುದರಿಂದ ವಾಯು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಯಾಕೆಂದರೆ ಇದು ಫೈಬರ್‌ ಅಂಶವನ್ನು ಹೊಂದಿರುತ್ತದೆ. ಆದರೆ ನೀವು ಈಗಾಗಲೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಲವಂಗದ ಎಲೆಯ ಸೇವನೆಯು ಅತಿಸಾರ, ಹೊಟ್ಟೆ ನೋವು ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.

ಲವಂಗದ ಎಲೆಯ ಮಿತವಾದ ಬಳಕೆ ಸುರಕ್ಷಿತ. ಆದರೆ ಈ ಎಲೆಗಳ ಅತಿಯಾದ ಸೇವನೆಯು ಕೆಲವರಲ್ಲಿ ಕೆಲವು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಇವುಗಳು ಗರ್ಭಾವಸ್ಥೆ, ಹಾಲುಣಿಸುವ ತಾಯಂದಿರಿಗೆ ಮತ್ತು ಶಸ್ತ್ರಚಿಕಿತ್ಸೆ ಆದವರಿಗೆ ಸಮಸ್ಯೆಗಳನ್ನು ಉಂಟು ಮಾಡಬಹುದು.ಅಲ್ಲದೆ, ಬೇ ಎಲೆಯು ಕೆಲವರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಹಾಗಾಗಿ ಈ ಎಲ್ಲಾ ಸಮಸ್ಯೆ ಇರುವವರು ಅಡುಗೆಯಲ್ಲಿ ಲವಂಗದ ಎಲೆ ಸೇರಿಸುವ ಮುನ್ನ ಯೋಚಿಸಿ, ತಟ್ಟೆಯಲ್ಲಿ ಲವಂಗದ ಎಲೆ ಕಂಡರೆ ಅದನ್ನು ಎತ್ತಿ ಪಕ್ಕಕ್ಕಿಡಿ..!

English summary

Side effects of eating Bay Leaves in Kannada

Here we are discusing about Side effects of eating Bay Leaves in Kannada. Read more.
Story first published: Monday, June 13, 2022, 13:00 [IST]
X
Desktop Bottom Promotion