For Quick Alerts
ALLOW NOTIFICATIONS  
For Daily Alerts

ಅತಿಯಾದರೆ ನಿಂಬೆಯೂ ಮಾರಕ

|

ನಿಂಬೆಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾದ ಹಣ್ಣೆಂದು ಎಲ್ಲರಿಗೂ ಗೊತ್ತು. ಇದನ್ನು ಅನೇಕ ಮನೆಮದ್ದುಗಳ ತಯಾರಿಕೆಯಲ್ಲಿ ಬಳಸಿ ಸಣ್ಣ ಪುಟ್ಟ ಕಾಯಿಲೆ ವಾಸಿ ಮಾಡಬಹುದು. ಇನ್ನು ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯುವುದರಿಂದ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್‌ ತಡೆಗಟ್ಟಬಹುದೆಂದು ಅಧ್ಯಯನಗಳೂ ಹೇಳಿವೆ.

ಇಷ್ಟೆಲ್ಲಾ ಗುಣವಿರುವ ನಿಂಬೆಹಣ್ಣಿನ ರಸವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ತಿಳಿಯದೇ ಹೋದರೆ ಅಪಾಯ ತಪ್ಪಿದ್ದಲ್ಲ, ಅತಿಯಾದರೆ ಅಮೃತವೂ ವಿಷ ಅಂತಾರಲ್ಲ ಹಾಗೆ! ಇಲ್ಲಿ ನಾವು ನಿಂಬೆಹಣ್ಣು ಅತಿಯಾಗಿ ಸೇವಿಸಿದರೆ ಅರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ಹೇಳಿದ್ದೇವೆ ನೋಡಿ.

side effects of lemon water

ನಿಂಬೆ ಹಣ್ಣಿನಲ್ಲಿ ಆಮ್ಲೀಯ ಗುಣವಿದೆ. ಕೆಲವು ವರದಿಗಳ ಪ್ರಕಾರ ಅತಿಯಾದ ನಿಂಬೆ ರಸ ಸೇವನೆ ನಮ್ಮ ದಂತಗಳು ಸವೆಯಲು ಕಾರಣವಾಗಬಹುದು! ನಿಂಬೆರಸ ಪ್ರಯೋಜನಕಾರಿಯಾಗಿದ್ದರೂ ಕೆಲವು ಅಡ್ಡ ಪರಿಣಾಮಗಳನ್ನೂ ಹೊಂದಿದೆ. ಹಾಗಾದರೆ ನಿಂಬೆ ರಸ ಕುಡಿಯುವುದು ನಮಗೆ ಹಾನಿಯೇ? ನಿಮಗೆ ಈ ಅನುಮಾನವಿದ್ದರೆ, ಈ ಲೇಖನದ ಮೂಲಕ ಸಂಶೋಧನೆಗಳು ಹೇಳುವ ನಿಂಬೆರಸದ ಅಡ್ಡ ಪರಿಣಾಮಗಳು ಹಾಗೂ ಅದರಿಂದ ನೀವು ಹೇಗೆ ಸುರಕ್ಷಿತವಾಗಿರಬಹುದು ಎಂಬುದನ್ನು ಹೇಳುತ್ತೇವೆ ಓದಿ.

ಅತಿಯಾದ ನಿಂಬೆರಸ ಸೇವನೆಯಿಂದ ಉಂಟಾಗುವ ಅಡ್ದಪರಿಣಾಮಗಳು ಯಾವವು?

ಅತಿಯಾದ ನಿಂಬೆರಸ ಸೇವನೆಯಿಂದ ಉಂಟಾಗುವ ಅಡ್ದಪರಿಣಾಮಗಳು ಯಾವವು?

1. ಹಲ್ಲು, ದಂತಕವಚಗಳ ಸವೆಯುವಿಕೆ

ಒಂದು ಅಧ್ಯಯನದಲ್ಲಿ ಸ್ತ್ರೀ ರೋಗಿ (ಧೂಮಪಾನ ವ್ಯಸನಿ) ಯೊಬ್ಬರು ಆಗಾಗ್ಗೆ ನಿಂಬೆರಸವನ್ನು ಸೇವಿಸುತ್ತಿದ್ದುದರ ಪರಿಣಾಮ ಅವರ ದಂತದಲ್ಲಿ ಅತಿಯಾದ ಸಂವೇದನೆ ಉಂಟಾಗಿರುವ ಬಗ್ಗೆ ಚರ್ಚಿಸಲಾಗಿದೆ. ಅತಿಯಾದ ನಿಂಬೆರಸ ಸೇವನೆಯಿಂದ ಅದರಲ್ಲಿರುವ ಆಮ್ಲೀಯ ಗುಣ ಹಲ್ಲಿನ ಮೆರುಗನ್ನು ನಾಶಗೊಳಿಸಬಹುದು.

ನಿಂಬೆ ರಸವೂ ಸಹ ಇತರ ತಂಪು ಪಾನೀಯಗಳಂತೆ ಹಲ್ಲಿನ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ. ಏಕೆಂದರೆ ಇವೆರಡರಲ್ಲಿಯೂ ಆಮ್ಲೀಯ ಗುಣ ಸಾಮಾನ್ಯವಾಗಿದೆ. ನಿಂಬೆ ರಸ ಸೇವನೆಯ ನಂತರ ಹಲ್ಲುಜ್ಜುವುದರಿಂದ ಹಲ್ಲಿನ ಸವೆತವನ್ನು ತಡೆಗಟ್ಟಬಹುದು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮತ್ತು ಹಲ್ಲನ್ನು ಸ್ವಚ್ಛಗೊಳಿಸುವುದು ಇನ್ನೂ ಉತ್ತಮ ಫಲಿತಾಂಶವನ್ನು ನೀಡಬಲ್ಲದು.

2. ಸನ್ ಬರ್ನ್ (ಬಿಸಿಲಿಗೆ ಸುಡುವುದು) ಗೆ ಕಾರಣ

2. ಸನ್ ಬರ್ನ್ (ಬಿಸಿಲಿಗೆ ಸುಡುವುದು) ಗೆ ಕಾರಣ

ಚರ್ಮದ ಮೇಲೆ ನಿಂಬೆರಸವನ್ನು ಹಚ್ಚಿ ಬಿಸಿಲಿಗೆ ಹೋಗುವುದು ನಿಮ್ಮ ಚರ್ಮದ ಮೇಲೆ ಗುಳ್ಳೆಗಳು ಮತ್ತು ಕಪ್ಪು ಕಲೆಗಳಿಗೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಬಿಸಿಲಿನಿಂದ ಉಂಟಾಗುವ ಈ ಸ್ಥಿತಿಯನ್ನು ಫೈಟೊಫೋಟೋ ಡರ್ಮಟೈಟಿಸ್ ಎಂದು ಕರೆಯಲಾಗುತ್ತದೆ. ನಿಂಬೆ ರಸದಲ್ಲಿರುವ ಪೊಸೊರಾಲೆನ್ಸ್ ಎಂದು ಕರೆಯಲಾಗುವ ರಾಸಾಯನಿಕಗಳು ಸೂರ್ಯನ ಬೆಳಕಿನೊಂದಿಗೆ ಸಂವಹಿಸುತ್ತವೆ ಮತ್ತು ಇದು ಸುಡುವಿಕೆಗೆ ಕಾರಣವಾಗುತ್ತದೆ.

ಮತ್ತೊಂದು ಅಧ್ಯಯನದ ಪ್ರಕಾರ, ಸಿಟ್ರಸ್ ಸೇವನೆಯು ಮೆಲನೋಮ (ಚರ್ಮದ ಕ್ಯಾನ್ಸರ್) ದಂತಹ ಅಪಾಯವನ್ನು ತಂದೊಡ್ಡಬಹುದು! ಹೆಚ್ಚಿನ ಸಿಟ್ರಸ್ ಹಣ್ಣುಗಳಲ್ಲಿ ಪೊಸೊರಾಲೆನ್ಸ್ ಇರುವುದೇ ಈ ಪರಿಣಾಮಕ್ಕೆ ಕಾರಣ. ಆದಾಗ್ಯೂ, ಚರ್ಮದ ಆರೋಗ್ಯದ ಮೇಲೆ ಸಿಟ್ರಸ್ ಹಣ್ಣು / ರಸದ ಪರಿಣಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ಅಗತ್ಯ.

3. ಕ್ಯಾಂಕರ್ ಹುಣ್ಣನ್ನು ಉಲ್ಬಣಗೊಳಿಸಬಹುದು

3. ಕ್ಯಾಂಕರ್ ಹುಣ್ಣನ್ನು ಉಲ್ಬಣಗೊಳಿಸಬಹುದು

ಕ್ಯಾಂಕರ್ ಹುಣ್ಣುಗಳು ಬಾಯಿ ಹುಣ್ಣುಗಳ ಒಂದು ರೂಪ. ಇವು ಬಾಯಿಯೊಳಗೆ ಉಂಟಾಗುವ ಹುಣ್ಣುಗಳು (ಅಥವಾ ಒಸಡುಗಳ ಬುಡದಲ್ಲಿ ಉಂಟಾಗಬಹುದು) ಮತ್ತು ಇವು ಹೆಚ್ಚು ನೋವಿನಿಂದ ಕೂಡಿರುತ್ತವೆ. ಸಿಟ್ರಿಕ್ ಆಮ್ಲವು ಬಾಯಿಯ ಹುಣ್ಣುಗಳನ್ನು ಇನ್ನಷ್ಟು ಪ್ರಚೋದಿಸುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಆದರೆ ಸಿಟ್ರಿಕ್ ಆಮ್ಲ ಇದಕ್ಕೆ ಹೇಗೆ ಕಾರಣವಾಗಬಹುದು ಎಂಬುದು ಇದುವರೆಗೂ ಅರ್ಥವಾಗದ ವಿಷಯ!

ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ನಿಮ್ಮ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ನಿಮಗೆ ಬಾಯಿ ಹುಣ್ಣು ಆಗಿದ್ದರೆ ನಿಂಬೆಹಣ್ಣುಗಳನ್ನು (ಅಥವಾ ಯಾವುದೇ ಸಿಟ್ರಸ್ ಹಣ್ಣನ್ನು) ಸೇವಿಸದೇ ಇರುವುದು ಒಳಿತು. ನೀವು ಸಂಪೂರ್ಣ ಗುಣಮುಖವಾದ ನಂತರವಷ್ಟೇ ನಿಂಬುರಸವನ್ನು ಸೇವಿಸಿ.

4. ಎದೆಯುರಿ ಹೆಚ್ಚಾಗಬಹುದು

4. ಎದೆಯುರಿ ಹೆಚ್ಚಾಗಬಹುದು

ಕೆಲವು ಸಂಶೋಧನೆಗಳು ಸಿಟ್ರಸ್ ಹಣ್ಣುಗಳು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದೆಂದು ಹೇಳುತ್ತವೆ. ಅಧ್ಯಯನಗಳ ಪ್ರಕಾರ, ಇದೇ ರೀತಿಯ ಜಠರಗರುಳಿನ ರೋಗಲಕ್ಷಣಗಳ ಬಗ್ಗೆ ವೈದ್ಯರನ್ನು ಭೇಟಿ ಮಾಡಿದ ಅನೇಕ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲೀಯ ಗುಣಗಳುಳ್ಳ ಹಣ್ಣುಗಳು ಮತ್ತು ರಸವನ್ನು ಸೇವಿಸುತ್ತಿರುವುದು ಕಂಡುಬಂದಿದೆ.

ಆದರೆ ಇದು ಮಿಶ್ರ ಅಭಿಪ್ರಾಯವನ್ನು ಒಳಗೊಂಡಿದೆ. ನಿಂಬೆ ರಸ ಎದೆಯುರಿಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಲೂ ಬಹುದು ಎಂದು ಸೂಚಿಸಲಾಗುತ್ತದೆ. ಹಾಗಾಗಿ ನಿಮಗೆ ಎದೆಯುರಿಯ ಸಮಸ್ಯೆ ಇದ್ದರೆ ನಿಂಬೆ ರಸವನ್ನು (ಅಥವಾ ಯಾವುದೇ ಸಿಟ್ರಿಕ್ ಆಹಾರದ ಸೇವನೆ) ಸೇವಿಸುವ ಮೊದಲು ಒಮ್ಮೆ ವೈದ್ಯರನ್ನು ಭೇಟಿಮಾಡುವುದು ಸೂಕ್ತ.

* ಹೊಟ್ಟೆಯ ಕಿಣ್ವವಾಗಿರುವ ಪೆಪ್ಸಿನ್ ಅನ್ನು ನಿಂಬು ಸಕ್ರಿಯಗೊಳಿಸಬಹುದು. ಇದು ಪ್ರೋಟಿನ್ ಗಳ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

* ನಿಂಬೆರಸ ಅನ್ನನಾಳದ ಕೆಳಭಾಗದ ಸ್ಪಿಂಕ್ಟರ್ ಸ್ನಾಯುವಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಜೊತೆಗೆ ಅನ್ನನಾಳದಲ್ಲಿರುವ ಆಮ್ಲೀಯ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಇದರಿಂದ ಜಠರದ ಹುಣ್ಣನ್ನು ಇನ್ನಷ್ಟು ಉಲ್ಬಣಗೊಳಿಸಬಹುದು!

* ನಿಂಬೆರಸವು ಜಿ ಈ ಆರ್ ಡಿ (ಜಠರ ಸಂಬಂಧಿ ಸಮಸ್ಯೆ) ರೋಗಲಕ್ಷಣಗಳಿಗೆ ಕಾರಣವಾಗಬಹುದು.

* ಖಾಲಿ ಹೊಟ್ಟೆಯಲ್ಲಿ ನಿಂಬೆರಸವನ್ನು ಸೇವಿಸುವುದು ಜಿ ಈ ಆರ್ ಡಿ ಸಮಸ್ಯೆಗೆ ಕಾರಣವಾಗಬಹುದು ಎಂದು ಊಹಿಸಲಾಗಿದೆ.

ಆದರೆ ಇವುಗಳನ್ನು ಇನ್ನಷ್ಟು ದೃಢೀಕರಿಸಲು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ.

5. ಮೈಗ್ರೇನ್ ಅನ್ನು ಹೆಚ್ಚಿಸಬಹುದು

5. ಮೈಗ್ರೇನ್ ಅನ್ನು ಹೆಚ್ಚಿಸಬಹುದು

ಸಿಟ್ರಸ್ ಹಣ್ಣುಗಳು ಮೈಗ್ರೇನ್ ಅನ್ನು ಹೆಚ್ಚು ಪ್ರಚೋದಿಸಬಹುದು ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಈ ಹಣ್ಣುಗಳು ಅಲರ್ಜಿ ಉಂಟುಮಾಡುವುದರ ಮೂಲಕ ಮೈಗ್ರೇನ್ (ತಲೆನೋವು) ಗೆ ಕಾರಣವಾಗಬಹುದು. ಅಲ್ಲದೇ ಸಿಟ್ರಸ್ ಹಣ್ಣುಗಳಲ್ಲಿರುವ ನಿರ್ದಿಷ್ಟ ವಸ್ತುವಾದ ಟೈರಮೈನ್, ಮೈಗ್ರೇನ್ ಗೆ ಪ್ರಮುಖ ಕಾರಣ ಎನ್ನಲಾಗಿದೆ.

6. ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು

6. ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು

ಅಧಿಕ ನಿಂಬೆರಸ ಸೇವನೆ ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು, ಆದರೆ ಇದನ್ನು ಸಾಬೀತುಪಡಿಸುವ ಯಾವುದೇ ಸಂಶೋಧನೆಗಳಂತೂ ಇನ್ನೂ ಲಭ್ಯವಿಲ್ಲ.

ನಿಂಬೆ ರಸ ವಿಶೇಷವಾಗಿ ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ಇವು ಮೂತ್ರವರ್ಧಕದಂತೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಮೂತ್ರದ ಉತ್ಪತ್ತಿಯನ್ನು ಹೆಚ್ಚಿಸುವುದಲ್ಲದೇ ಇದು ಅತಿರೇಕಕ್ಕೆ ಹೋದರೆ, ನಿಮ್ಮಲ್ಲಿ ಡೀ-ಹೈಡ್ರೇಶನ್ (ನಿರ್ಜಲೀಕರಣ) ಉಂಟಾಗಬಹುದು. ಏಕೆಂದರೆ ನಿಂಬೆರಸವು ನಿಮ್ಮ ದೇಹದಲ್ಲಿನ ಹೆಚ್ಚುವರಿ ನೀರನ್ನು ಹೊರಹಾಕುತ್ತದೆ. ಆದಾಗ್ಯೂ ಈ ಬಗ್ಗೆ ಸಂಶೋಧನೆಗಳಲ್ಲಿ ಸಾಕಷ್ಟು ಕೊರತೆಗಳಿವೆ.

* ನಿಂಬೆರಸ ರಕ್ತದಲ್ಲಿ ಹೆಚ್ಚುವರಿ ಕಬ್ಬಿಣದ ಅಂಶವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ನಿಂಬೆರಸದಲ್ಲಿರುವ ವಿಟಮಿನ್ ಸಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಬಹುದು, ಆದರೆ ಇದು ಕಬ್ಬಿಣದ ಕೊರತೆಯ ರಕ್ತಹೀನತೆಗೆ ಸಹಾಯ ಮಾಡಲು ಮಾತ್ರ ಉಪಯೋಗಿಸಿದ್ದಾಗಿ ಕಂಡುಬಂದಿದೆ.

* ನಿಂಬೆ ರಸ ವಾಕರಿಕೆ ಅಥವಾ ವಾಂತಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ಇದಕ್ಕೆ ಕಾರಣ.

ಹಾಗಾದರೆ ಎಷ್ಟು ಪ್ರಮಾಣದಲ್ಲಿ ನಿಂಬೆ ರಸ ಸೇವನೆ ಮಾಡಬೇಕು?

ಹಾಗಾದರೆ ಎಷ್ಟು ಪ್ರಮಾಣದಲ್ಲಿ ನಿಂಬೆ ರಸ ಸೇವನೆ ಮಾಡಬೇಕು?

ನಿಂಬೆರಸ ಎಷ್ಟು ಸೇವಿಸಬೇಕು ಎಂಬುದು ವ್ಯಕ್ತಿಯ ವಯಸ್ಸು, ಆರೋಗ್ಯ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ನಿಂಬೆರಸವನ್ನು ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕು ಎಂದು ನಿರ್ಧರಿಸಲು ಸಾಕಷ್ಟು ವೈಜ್ಞಾನಿಕ ಮಾಹಿತಿಗಳಿಲ್ಲ. ಆದರೆ ಉಪಾಖ್ಯಾನದ ಪ್ರಕಾರ ಹೇಳುವುದಾದರೆ ದಿನಕ್ಕೆ ಒಂದು ಲೋಟ ಅಥವಾ ಎರಡು ಲೋಟ ನಿಂಬೆರಸ (ಸುಮಾರು 120 ಮಿಲಿ) ಸುರಕ್ಷಿತವೆಂದು ಸೂಚಿಸಲಾಗಿದೆ.

English summary

Serious Side Effects Of Drinking Too Much Lemon Water

Here we are discussing about serious side effects of drinking too much lemon water. llemon water is acidic, and some reports suggest that excess intake may erode the tooth enamel. Though it does have benefits, most of them are anecdotal. Does this mean drinking lemon water only can cause harm? In this post, we will look at what research says about the side effects of lemon water, and if you can prevent them in any way.
Story first published: Tuesday, January 28, 2020, 16:47 [IST]
X
Desktop Bottom Promotion