For Quick Alerts
ALLOW NOTIFICATIONS  
For Daily Alerts

Food Tips: ಸೀಸನ್‌ಗೆ ತಕ್ಕಂತೆ ಆಹಾರಕ್ರಮ ಈ ರೀತಿ ಇದ್ದರೆ ಚೆನ್ನ!

|

ಭಾರತದಲ್ಲಿ ಹವಾಮಾನವು ವರ್ಷವಿಡೀ ಒಂದೇ ರೀತಿಯಾಗಿರುವುದಿಲ್ಲ. ಅದು ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಅದೇ ರೀತಿ ಭಾರತವು ಬೇಸಿಗೆ, ಮಳೆಗಾಲ, ಚಳಿಗಾಲ, ಶರತ್ಕಾಲ ಅಥವಾ ವಸಂತ ಕಾಲ ಎಂಬ ನಾಲ್ಕು ಋತುಮಾನಗಳನ್ನು ಹೊಂದಿದೆ.

123

ಋತುಗಳು ಬದಲಾದಂತೆ ನಮ್ಮ ದೇಹದ ಚಯಾಪಚಯ ಕ್ರಿಯೆಗಳೂ ಅದಕ್ಕೆ ತಕ್ಕಂತೆ ಬದಲಾಗುತ್ತವೆ. ಅದೇ ಕಾರಣಕ್ಕೆ ಹವಾಮಾನ ಬದಲಾದಂತೆ, ನಮ್ಮ ಆರೋಗ್ಯದಲ್ಲಿ ಏರುಪೇರುಗಳಾಗುವುದು. ಏಕೆಂದರೆ, ನಮ್ಮ ದೇಹವು ವಾತಾವರಣದಲ್ಲಿನ ಬದಲಾವಣೆಗೆ ತಕ್ಷಣ ಹೊಂದಿಕೊಳ್ಳುವುದು ಅಸಾಧ್ಯ. ಆದ್ದರಿಂದ ಈ ಕಾಲಗಳಲ್ಲಿ ನಮ್ಮ ಆಹಾರಕ್ರಮ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಹಾಗಾಗಿ ಇಲ್ಲಿ ನಾವು ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮ ಹೇಗಿರಬೇಕು ಎಂಬುದನ್ನು ಹೇಳಿದ್ದೇವೆ.

ಋತುಮಾನಕ್ಕೆ ತಕ್ಕಂತೆ ಆಹಾರಕ್ರಮ ಹೇಗಿರಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಬೇಸಿಗೆ ಕಾಲ

ಬೇಸಿಗೆ ಕಾಲ

ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ಈ ನಾಲ್ಕು ತಿಂಗಳುಗಳು ವಾತಾವರಣದಲ್ಲಿನ ಗಾಳಿಯು ಬೆಚ್ಚಗಿರುತ್ತದೆ. ಆದ್ದರಿಂದ ಈ ಋತುವನ್ನು ಬೇಸಿಗೆ ಕಾಲ ಎಂದು ಕರೆಯಲಾಗುತ್ತದೆ. ಈ ತಿಂಗಳುಗಳಲ್ಲಿ, ಭಾರತದಲ್ಲಿ ಸೌರ ಅಂದರೆ ಸೂರ್ಯನ ಕಿರಣಗಳು ಸಮಾನಾಂತರವಾಗಿರುತ್ತವೆ. ಆದ್ದರಿಂದ ನಮ್ಮ ದೇಶವು ಈ ಬಿಸಿ ವಾತಾವರಣವನ್ನು ಅನುಭವಿಸುವುದು.

ಅಂದಹಾಗೇ ಈ ಬೇಸಿಗೆಯಲ್ಲಿ ಅನುಸರಿಸಬೇಕಾದ ಆಹಾರಕ್ರಮದ ಬಗ್ಗೆ ಹೇಳುವುದಾದರೆ, ಈ ಸಮಯದಲ್ಲಿ ನಾವು ಸಾಕಷ್ಟು ನೀರು ಕುಡಿಯಬೇಕು. ನೀರು ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

ಜೊತೆಗೆ ಈ ಋತುವಿನಲ್ಲಿ ನಾವು ಕಬ್ಬಿನ ರಸ ಮತ್ತು ನಿಂಬೆ ರಸವನ್ನು ಕುಡಿಯಬೇಕು. ಹಗಲಿನಲ್ಲಿ ಮನೆಯಿಂದ ಹೊರಗೆ ಹೋಗುವ ಮುನ್ನ ಮಜ್ಜಿಗೆ ಕುಡಿದರೆ ಉತ್ತಮ. ಮಾವು, ಹಲಸು, ಕಲ್ಲಂಗಡಿಯಂತಹ ಕೆಲವು ಹಣ್ಣುಗಳು ಬೇಸಿಗೆಯಲ್ಲಿ ಕಂಡುಬರುವ ಋತುಮಾನದ ಹಣ್ಣುಗಳಾಗಿವೆ. ಬೇಸಿಗೆಯ ದಿನಗಳಲ್ಲಿ ಇದನ್ನೆಲ್ಲ ತಿನ್ನುವುದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಸಹಕಾರಿ.

ಮಳೆಗಾಲ

ಮಳೆಗಾಲ

ನಮ್ಮಲ್ಲಿ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಈ ನಾಲ್ಕು ತಿಂಗಳು ಮಳೆಯಾಗುತ್ತದೆ. ಹಾಗಾಗಿ ಈ ಕಾಲವನ್ನು ಮಳೆಗಾಲ ಎಂದು ಕರೆಯುತ್ತಾರೆ. ಈ ತಿಂಗಳುಗಳಲ್ಲಿ, ಗಾಳಿಯು ದಕ್ಷಿಣ ಗೋಳಾರ್ಧದಿಂದ ಭಾರತದ ಕಡೆಗೆ ಬೀಸುತ್ತದೆ. ಈ ಮಾರುತಗಳನ್ನು 'ನೈಋತ್ಯ ಮಾನ್ಸೂನ್ ಮಾರುತಗಳು' ಎಂದು ಕರೆಯಲಾಗುತ್ತದೆ. ಆದ್ದರಿಂದ ಮಳೆಗಾಲವನ್ನು 'ಮುಂಗಾರು ಕಾಲ' ಎಂದೂ ಕರೆಯುತ್ತಾರೆ.

ಈ ಋತುವಿನಲ್ಲಿ ಹೆಚ್ಚಿನ ಆರ್ದ್ರತೆ ಅಥವಾ ತೇವಾಂಶದಿಂದಾಗಿ ಸೂಕ್ಷ್ಮ ಜೀವಿಗಳು ಈ ಋತುವಿನ ಉದ್ದಕ್ಕೂ ಸಕ್ರಿಯವಾಗಿರುತ್ತವೆ. ಆದ್ದರಿಂದ ಮಳೆಗಾಲದಲ್ಲಿ ತಾಜಾ ಮತ್ತು ಬಿಸಿಯಾದ ಆಹಾರವನ್ನು ಸೇವಿಸಬೇಕು. ಜೊತೆಗೆ ಲಘು ಮತ್ತು ಮಿತವಾದ ಆಹಾರವನ್ನು ಸೇವಿಸಬೇಕು. ಈ ಋತುವಿನಲ್ಲಿ ನಾರಿನಂಶವಿರುವ ತರಕಾರಿಗಳು, ಸೋರೆಕಾಯಿ, ಹಾಗಲಕಾಯಿ ಮುಂತಾದ ಲಘು ಮತ್ತು ಸಂಕೋಚಕ ಆಹಾರವನ್ನು ಸೇವಿಸಬೇಕು ಏಕೆಂದರೆ ಅಂತಹ ಆಹಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗುತ್ತವೆ.

ಚಳಿಗಾಲ

ಚಳಿಗಾಲ

ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ವಾತಾವರಣದಲ್ಲಿನ ಗಾಳಿಯು ತಂಪಾಗಿರುತ್ತದೆ. ಅದಕ್ಕಾಗಿಯೇ ಈ ಋತುವನ್ನು ಚಳಿಗಾಲ ಎಂದು ಕರೆಯುವುದು. ಚಳಿಗಾಲದಲ್ಲಿ ಗಾಳಿಯು ತಂಪಾಗಿದ್ದು, ಶುಷ್ಕವಾಗಿರುತ್ತದೆ. ಆದ್ದರಿಂದ ಈ ಋತುವಿನಲ್ಲಿ ಸೂಕ್ಷ್ಮ ಜೀವಿಗಳು ಹುಟ್ಟಿಕೊಳ್ಳವುದು ಕಡಿಮೆ. ಈ ಋತುವಿನಲ್ಲಿ, ಜನರು ಸಾಮಾನ್ಯವಾಗಿ ಶೀತ ಮತ್ತು ಜ್ವರದಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ.

ಆದ್ದರಿಂದ ಈ ಋತುವಿನಲ್ಲಿ, ದೇಹಕ್ಕೆ ಶಾಖ ಮತ್ತು ಶಕ್ತಿಯನ್ನು ನೀಡುವ ಆಹಾರದ ಅಗತ್ಯವಿದೆ. ಅದಕ್ಕಾಗಿಯೇ ನಾವು ಸಿಹಿತಿಂಡಿಗಳು, ಡ್ರೈ ಫ್ರೂಟ್ಸ್ ಮೊದಲಾದ ಆಹಾರಗಳನ್ನು ಸೇವಿಸಬೇಕು. ಇವು ದೇಹಕ್ಕೆ ಶಕ್ತಿಯನ್ನು ತುಂಬುತ್ತವೆ. ಜೊತೆಗೆ ಈ ದಿನಗಳಲ್ಲಿ ಕ್ಯಾರೆಟ್, ಬದನೆ, ಬೆಂಡೆ, ಖರ್ಜೂರ, ಬಾದಾಮಿ, ಎಳ್ಳು ಮತ್ತು ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ವಸಂತ ಕಾಲ ಮತ್ತು ಶರತ್ಕಾಲ

ವಸಂತ ಕಾಲ ಮತ್ತು ಶರತ್ಕಾಲ

ಈ ಎರಡು ಸಹ ಋತುಗಳ ಬದಲಾವಣೆಯನ್ನು ಸೂಚಿಸುತ್ತವೆ. ಈ ಸಮಯದಲ್ಲಿ ಜನರು ಹೆಚ್ಚಾಗಿ ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಈ ಸಮಯದಲ್ಲಿ ನಾವು ನಮ್ಮ ಆಹಾರದಲ್ಲಿ ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು. ಭಾರತದಲ್ಲಿ ಜನರು ಇದನ್ನು ಆಹಾರ ಪದಾರ್ಥಗಳಲ್ಲಿ ಸಿಹಿಕಾರಕವಾಗಿ ಬಳಸುತ್ತಾರೆ. ಆದರೆ, ನೇರವಾಗಿ ತಿನ್ನಬಹುದು. ಈ ಋತುವಿನಲ್ಲಿ ರಾಗಿ, ಬೀನ್ಸ್‌ನಂತಹ ಆಹಾರವನ್ನು ಸೇವಿಸುವುದೂ ಉತ್ತಮ. ಇವು ದೇಹದಿಂದ ತೇವಾಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

English summary

Seasonal Diet : Eat according to season to stay healthy in kannada

Here we talking about Seasonal Diet : Eat according to season to stay healthy in kannada, read on
X
Desktop Bottom Promotion