For Quick Alerts
ALLOW NOTIFICATIONS  
For Daily Alerts

ಈ ಅಂಶಗಳನ್ನು ಹೊಂದಿರುವವರಿಗೆ ಕೊರೋನಾ ಹೆಚ್ಚು ಅಪಾಯ ಮಾಡಬಹುದು!

|

ಕೊರೋನಾ ಮಹಾಮಾರಿ ಯಾರನ್ನೂ ಬಿಡುವುದಿಲ್ಲ, ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದು ಉಂಟುಮಾಡುವ ರೋಗದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವು ವರ್ಗದ ಜನರಿಗೆ ಹೆಚ್ಚು ಅಪಾಯ ಉಂಟುಮಾಡಿದರೆ, ಮತ್ತಷ್ಟು ಗುಂಪಿನವರಿಗೆ ಅದರ ಅಪಾಯ ಕಡಿಮೆ. ಕಾರಣ ಇಷ್ಟೇ ಅವರಲ್ಲಿರುವ ರೋಗ ನಿರೋಧಕ ಶಕ್ತಿ.

ಅಧ್ಯಯನವೊಂದರ ಪ್ರಕಾರ, ವಯಸ್ಸಾದವರು ಮತ್ತು ಆರೋಗ್ಯ ಸಮಸ್ಯೆ ಇರುವವರು ಸಾಮಾನ್ಯವಾಗಿ ಕೊರೋನಾದ ಹೆಚ್ಚಿನ ಅಪಾಯ ಹೊಂದಿದ್ದಾರೆ. ಅವುಗಳ ಜೊತೆಗೆ ಇನ್ನೂ ಕೆಲ ಅಂಶಗಳನ್ನು ಹೊಂದಿರುವ ಜನರು ಹೆಚ್ಚಿನ ಅಪಾಯ ಹೊಂದಿದ್ದಾರೆ. ಆ ಅಪಾಯಕಾರಿ ಅಂಶಗಳಾವುವು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೊರೋನಾದ ಅಪಾಯವನ್ನು ಹೆಚ್ಚಿಸುವಂತಹ ಅಂಶಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಅಧಿಕ ತೂಕ:

ಅಧಿಕ ತೂಕ:

ದಿ ಲ್ಯಾನ್ಸೆಟ್ ಡಯಾಬಿಟಿಸ್ & ಎಂಡೋಕ್ರೈನಾಲಜಿ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಅಧಿಕ ತೂಕವಿರುವವರು ಕೋವಿಡ್ ನಿಂದ ಐಸಿಯು ಸೇರುವ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಲೇಖಕರ ಪ್ರಕಾರ, ಬೊಜ್ಜು ಹೊಂದಿರುವವರು ಅಥವಾ ಬಿಎಮ್ ಯಲ್ಲಿ ನಿರ್ಧಾರವಾದ ದೇಹದ ತೂಕಕ್ಕಿಂತ ಹೆಚ್ಚಿದ್ದರೆ ಅವರು ಆಸ್ಪತ್ರೆ ಸೇರುವುದರ ಜೊತೆಗೆ ಐಸಿಯು ಸೇರುವ ಅಪಾಯವು ಹೆಚ್ಚಿದೆ ಎಂದು ಹೇಳುತ್ತಾರೆ. ಆದ್ದರಿಂದ ಅಧಿಕ ತೂಕ ಹೊಂದಿರುವವರು ಹೆಚ್ಚು ಜಾಗರೂಕರಾಗಿ ಇರುವುದು ಸೂಕ್ತ.

ಕಡಿಮೆ ತೂಕ :

ಕಡಿಮೆ ತೂಕ :

ಹೆಚ್ಚಿನ ತೂಕ ಹೊಂದಿರುವಂತೆ, ಕಡಿಮೆ ತೂಕ ಹೊಂದಿರುವ ಜನರು (ಬಿಎಂಐ 18.5 ಕ್ಕಿಂತ ಕಡಿಮೆ) ಸಹ ಕೊರೋನಾದ ತೀವ್ರ ಸ್ವರೂಪವನ್ನು ಎದುರಿಸುವ ಅಪಾಯ ಹೆಚ್ಚಾಗಿ ಹೊಂದಿರುತ್ತಾರೆ ಎಂದು ಅದೇ ಅಧ್ಯಯನ ತಿಳಿಸಿದೆ. ಹಿಂದಿನ ಅಧ್ಯಯನಗಳು ಕಡಿಮೆ ತೂಕ ಹೊಂದಿರುವವರು ಆಸ್ಪತ್ರೆಗೆ ದಾಖಲು ಮತ್ತು ಹೆಚ್ಚು ಸಾವಿನೊಂದಿಗೆ ಸಂಬಂಧ ಹೊಂದಿವೆ. ಕಳೆದ ತಿಂಗಳು ಪ್ರಕಟವಾದ ಅಧ್ಯಯನವೊಂದರಲ್ಲಿ, ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಯ ಸಂಶೋಧಕರು ಕೊರೋನಾದ ತೀವ್ರತೆ ಹೆಚ್ಚಾಗಲು ರೋಗಿಗಳು ಕಡಿಮೆ ತೂಕ ಹೊಂದಿರುವುದೇ ಮುಖ್ಯ ಅಂಶ ಎಂದು ವಿವರಿಸಿದ್ದಾರೆ.

ಮಧುಮೇಹ :

ಮಧುಮೇಹ :

ಹಲವಾರು ಅಧ್ಯಯನಗಳು ಮಧುಮೇಹ ಹೊಂದಿರುವ ಜನರು ಕೋವಿಡ್ ಗೆ ತುತ್ತಾದಾಗ, ಹೆಚ್ಚಿನ ಪ್ರಮಾಣದ ಲಕ್ಷಣಗಳು ಮತ್ತು ಅಪಾಯವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಸೂಚಿಸಿದ್ದಾರೆ. ಮಧುಮೇಹದಲ್ಲಿರುವ ಹೃದ್ರೋಗ ಅಥವಾ ಇತರ ಆರೋಗ್ಯ ಪರಿಸ್ಥಿತಿಗಳು ಕೋವಿಡ್ -19 ರ ತೀವ್ರತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ, ಕೊರೋನಾದಿಂದ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡಿ.

ಗರ್ಭಧಾರಣೆ:

ಗರ್ಭಧಾರಣೆ:

ಗರ್ಭಧಾರಣೆಯು ಸಹ ಕೊರೋನಾದ ತೀವ್ರತೆಯನ್ನು ಅಪಾಯಕಾರಿ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. ಕೊರೋನಾದ ತೀವ್ರ ರೋಗಲಕ್ಷಣಗಳನ್ನು ಅನುಭವಿಸಿದ ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ, ಪ್ರಸವಾನಂತರದ ರಕ್ತಸ್ರಾವ, ಗರ್ಭಧಾರಣೆಯ ಅಧಿಕ ರಕ್ತದೊತ್ತಡದ ಕಾಯಿಲೆಗಳು ಮತ್ತು ಅವಧಿಪೂರ್ವ ಜನನದ ಹೆಚ್ಚಿನ ಅಪಾಯವಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಾಥಮಿಕ ಸಂಶೋಧನೆಗಳು ಸೂಚಿಸಿವೆ.

ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು:

ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು:

ಇಬಿಯೊಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುವ ಮಕ್ಕಳು ಮತ್ತು ಯುವಕರು ದೀರ್ಘಕಾಲದ ಕೊರೋನಾ ಸೋಂಕನ್ನು ಅನುಭವಿಸುವ ಸಾಧ್ಯತೆಯಿದೆ. ಅವರಲ್ಲಿರುವ ರೋಗನಿರೋಧಕ ವ್ಯವಸ್ಥೆಯ ಕೊರತಯಿಂದಾಗಿ ತಿಂಗಳವರೆಗೆ ಪಾಸಿಟಿವ್ ವರದಿಯನ್ನು ಪಡೆಯುತ್ತಾರೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟವಾದ ಅಧ್ಯಯನವು ಇತರ ರೋಗಿಗಳಿಗೆ ಹೋಲಿಸಿದರೆ ಹೆಚ್ಚು ತೀವ್ರವಾದ ಕೋವಿಡ್ -19 ಸೋಂಕು ಮತ್ತು ಸಾವಿನಪ್ರಮಾಣ ಕ್ಯಾನ್ಸರ್ ರೋಗಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

English summary

Risk Factors for Developing Severe Covid-19 Complications in Kannada

Here we talking about Risk Factors for Developing Severe Covid-19 Complications in Kannada, read on
Story first published: Monday, May 3, 2021, 13:30 [IST]
X